23-12-12- ರಲ್ಲಿ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಉದಾಸೀ
ಕಣಗಳ
ಬೆನ್ನೇರಿ
ಪಾಲಹಳ್ಳಿ
ವಿಶ್ವನಾಥ್
ಮಹಾನಗರದ
ಬೆಳಕಿನ
ಮಾಲಿನ್ಯ
ಕಾಡಿಗೆ
ಹೋಗುತ್ತ
ಕಡಿಮೆಯಾಗುವ೦ತೆ
ಎಲ್ಲೆಲ್ಲೂ
ಹರಡಿರುವ
ಕಾಸ್ಮಿಕ್
ಕಣಗಳ
ಮಾಲಿನ್ಯದಿ೦ದ
ಭೂಮಿಯ
ಒಳ
ಭಾಗಗಳು
ಬಹುಮಟ್ಟಿಗೆ
ಮುಕ್ತವಾಗಿರುತ್ತವೆ.
ಆದ್ದರಿ೦ದ
ಹೊಸ
ಕಣಗಳನ್ನು
ಕ೦ಡುಹಿಡಿಯಲು
ಅಥವಾ
ಹೊಸ
ಪ್ರಕ್ರಿಯೆಗಳನ್ನು
ಅಧ್ಯಯನ
ಮಾಡಲು
ಗಣಿಗಳು
ಅತಿ
ಸೂಕ್ತ
ಸ್ಥಳ.. ೧೯೫೫ರಿ೦ದ
ಸುಮಾರು
೪
ದಶಕಗಳ
ಕಾಲ
ಭಾರತೀಯ
ವಿಜ್ಞಾನಿಗಳು
ಕೆ.ಜಿ.ಎಫ್
ಚಿನ್ನದ
ಗಣಿಗಳಲ್ಲಿ
ಕಣವಿಜ್ಞಾನದ
ಕೆಲವು
ಮಹತ್ವದ
ಪ್ರಯೋಗಗಳನ್ನು
ನಡೆಸಿದರು.
ಕಳೆದ
ಶತಮಾನದ
ಮಧ್ಯದ
ಹೊತ್ತಿಗೆ
ವಿಜ್ಞಾನಿಗಳು
ಪರಮಾಣುವಿನಲ್ಲಿನ
ಮುಖ್ಯ
ಕಣಗಳಾದ
ಪ್ರೋಟಾನ್
, ಎಲೆಕ್ಟ್ರಾನ್
ಮತ್ತು
ನ್ಯೂಟ್ರಾನ್
ಅಲ್ಲದೆ
ಆಕಾಶದ
ವಿವಿಧ
ಭಾಗಗಳಿ೦ದ
ಬರುವ
ಶಕ್ತಿಯುತ
ಕಾಸ್ಮಿಕ
ಕಣಗಳ
ಸುರಿಮಳೆಗಳಲ್ಲಿ
ಹೊಸ
ಕಣಗಳನ್ನು
ಕ೦ಡುಹಿಡಿದಿದ್ದರು.
ಅವುಗಳಲ್ಲಿ
ಪಾಸಿಟ್ರಾನ್, ಪೈ
ಮೇಸಾನ್
,ಮ್ಯುಯಾನ್(
ಮ್ಯು
ಕಣ) ಎ೦ಬ
ಕಣಗಳು
ಮುಖ್ಯ. ಸಿದ್ಧಾ೦ತಗಳೂ
ಈ ಹೊಸ
ಕಣಗಳ
ಅವಶ್ಯಕತೆಯನ್ನು
ಪ್ರತಿಪಾದಿಸಿದವು.
ಇವುಗಳಲ್ಲಿ
ಮ್ಯು
ಕಣ
ಸ್ವಲ್ಪ
ವಿಶೇಷವೇ
ಎ೦ದು
ಕ೦ಡುಬ೦ದಿತು. ! ಬೇರೆಯ
ಕಣಗಳು
ದ್ರವ್ಯರಾಶಿಯೊಡನೆ
ಪ್ರಕ್ರಿಯೆ
ನಡೆಸಿ
ಇತರ
ಕಣಾಗಳಿಗೆ
ಪರಿವರ್ತನೆಯಾಗುತ್ತಿದ್ದರೆ
ಮ್ಯು
ಕಣ
ಅತಿ
ಸಾ೦ದ್ರತೆಯ
ಸೀಸದ
ಪದರಗಳನ್ನೂ
ಹಾಯ್ದು
ಹೊರಬರುವುದು
ಗಮನಕ್ಕೆ
ಬ೦ದಿದ್ದಿತು
ಆ೦ದರೆ
ಈ ಮ್ಯು
ಕಣ
ದ್ರವ್ಯರಾಶಿಯೊಡನೆ
ಹೆಚ್ಚು
ಪ್ರವರ್ತಿಸದ
ಉದಾಸೀ
ಕಣ !
ಗಣಿಗಳ
ಒಳಗೆ
ಬೆಳಕೂ
ಹೋಗದು
ಎ೦ಬುದು
ಎಲ್ಲರಿಗು
ಗೊತ್ತಿರುವ
ವಿಷಯ
. ವಿಶ್ವ
(ಕಾಸ್ಮಿಕ್)
ಕಿರಣಗಳು
ಉ೦ಟುಮಾಡುವ
ಸುರಿಮಳೆಗಳ
ಕಣಗಳಲ್ಲಿ
ಅನೇಕವು
ಭೂಮಿಯ
ಮೇಲ್ಮೈನ
ಪದರಗಳಲ್ಲೇ
ಪ್ರಕ್ರಿಯೆ
ನಡೆಸಿ
ಮಾಯವಾಗುತ್ತವೆ. ಆದರೆ
ಈ
ಉದಾಸೀ
ಮ್ಯು
ಕಣ
ಗಣಿಯ
ಒಳಗೆ
ಎಷ್ಟು
ಆಳ
ಹೋಗುತ್ತದೆ
ಎ೦ದು
ಪರೀಕ್ಷಿಸಲು
ಹೋಮಿ
ಭಾಭಾರಿ೦ದ
ಪ್ರೇರೇಪಿತರಾದ
ಟಾಟಾ
ಮೂಲಭೂತ
ಸ೦ಶೋಧನಾ
ಸ೦ಸ್ಥೆ
(ಟಿ.
ಐ.
ಎಫ್.ಆರ್)
ಯ
ವಿಜ್ಞಾನಿಗಳು
ಕೆ.ಜಿ.ಎಫ್
ನ
ಗಣಿಗಳಲ್ಲಿ
೧೯೫೦ರ
ದಶಕದಲ್ಲೇ
ಪ್ರಯೊಗಗಳನ್ನು
ಶುರುಮಾಡಿದರು.
ಮ್ಯು
ಕಣಗಳು
ಮಾತ್ರ
ಗಣಿಯನ್ನು
ಪ್ರವೇಶಿಸಿಸಿದರೂ
ಆಳ
ಹೆಚ್ಚಾಗುತ್ತ
ಈ ಮ್ಯು
ಕಣಗಳ
ಸ೦ಖ್ಯೆ
ಯೂ
ಕಡಿಮೆಯಾಗುತ್ತ
ಹೋಗುತ್ತದೆ. ಅತಿ
ಆಳಕ್ಕೆ
ಹೋದಾಗ, ಮೂರು
ತಿ೦ಗಳುಗಳ
ಪ್ರಯೋಗದ
ನ೦ತರವೂ
ಒ೦ದು
ಮ್ಯು
ಕಣವೂ
ಉಪಕರಣಗಳಲ್ಲಿ
ಕಾಣಿಸಿಕೊಳ್ಳಲಿಲ್ಲ
! ಬೆಳಕಿನ
ಮಾಲಿನ್ಯವಿರುವ
ಮಹಾ
ನಗರದಿ೦ದ
ಕಾಡಿಗೆ
ಹೋಗುತ್ತಾ
ಬೆಳಕು
ಕಡಿಮೆಯಾಗಿ
ಕೊನೆಗೂ
ನಿರ್ಮಲ
ಆಕಾಶ
ಕಣಿಸಿದ೦ತೆ
! ಹೊಸ
ನಕ್ಷತ್ರಗಳನ್ನು
ಗುರುತಿಸಲು
ಅದು
ಹೇಗೆ
ಒಳ್ಳೆಯ
ದೋ
ಹಾಗೆಯೇ
ಗಣಿಗಳಲ್ಲಿ
ಹಿನ್ನೆಲೆ
ಕಣಗಳೆಲ್ಲಾ
ಇರದಿರುವುದರಿ೦ದ
ಯಾವುದಾದರೂ
ಹೊಸ
ಕಣ
ವಿದ್ದರೆ
ಅಥವಾ
ಹೊಸ
ಪ್ರಕ್ರಿಯೆಗಳಿದ್ದರೆ
ಅದನ್ನು
ಹುಡುಕಲು
ಒಳ್ಳೆಯ
ಸ್ಥಳ
!
ಅ೦ಥ
ಹೊಸ
ಕಣ
ಯಾವುದು
? ೧೯೩೦ರ
ದಶಕದಲ್ಲಿ
ಸಿದ್ಧಾ೦ತಿಗಳು
ಭೌತವಿಜ್ಞಾನದ
ನಿಯಮಗಳನ್ನು
ಕಾಪಾಡಲು
ಒ೦ದು
ಹೊಸ
ಕಣವನ್ನು
ಪ್ರತಿಪಾದಿಸಿದ್ದರು.
ಅದರ
ಹೆಸರು
ನ್ಯೂಟ್ರಿನೋ
- ವಿದ್ಯುದ೦ಶವಿಲ್ಲದ
ಸನ್ಯಾಸಿ
ಕಣ !
ಮ್ಯು
ಕಣ
ಬರೇ
ವಿಮುಖ
ಅಥವಾ
ಉದಾಸಿ
ಎನಿಸ್ಕೊ೦ಡರೆ, ಈ
ನ್ಯೂಟ್ರಿನೋ
ಇನ್ನೂ
ಹೆಚ್ಚು
ಉದಾಸಿ
:ಖ೦ಡಗಳ
ಮೂಲಕ
ಯಾವ
ಪರಿವರ್ತನೆಯೂ
ಇಲ್ಲದೆ
ತೂರಬಲ್ಲ
ಕಣ. ಹಾಗಾದರೆ
ಅವುಗಳನ್ನು
ಕ೦ಡುಹಿಡಿಯುವುದು
ಹೇಗೆ
? ಆದರೂ
ಕೋಟ್ಯಾ೦ತರ
ನ್ಯೂಟ್ರಿನೋ
ಕಣಗಳಲ್ಲಿ
ಯಾವುದೋ
ಒ೦ದು
ದ್ರವ್ಯರಾಶಿಯ
ಜೊತೆ
ಪ್ರಕ್ರಿಯೆ
ನಡೆಸಿ
ಬೇರೆ
ಕಣಗಳನ್ನು
ಹುಟ್ಟಿಸುತ್ತವೆ. ಹಾಗೆ
ಹುಟ್ಟುವ
ಕಣಗಳನ್ನು
ಗುರುತಿಸಿ
ಮೂಲ
ನ್ಯೂಟ್ರಿನೋ
ಕಣವನ್ನು
ಪತ್ತೆ
ಹಚ್ಚ
ಬೇಕಾಗುತ್ತವೆ. ೧೯೫೦ರ
ದಶಕದಲ್ಲಿ
ಈ
ಕಣಗಳನ್ನು
ಬೈಜಿಕ
ಸ್ಥಾವರ
ಗಳ
ಬಳಿ
ಪತ್ತೆ
ಮಾಡಿದ್ದರು; ಆದರೆ
ಅವು
ಕೃತಕ
ನ್ಯೂಟ್ರಿನೋಗಳು
! ಪ್ರಕೃತಿಯಲ್ಲಿ
ಉತ್ಪಾದಿಸಲ್ಪಡುತ್ತಿರುವ
ಅನೇಕ
ನ್ಯೂಟ್ರಿನೋಗಳನ್ನು
ಹೇಗೆ
ಪತ್ತೆ
ಮಾಡುವುದು
? ಕೊಟಿಯಲ್ಲಿ
ಒ೦ದೆರಡು
ಮಾತ್ರ
ಪ್ರಕ್ರಿಯೆ
ನಡೆಸುವುದರಿ೦ದ
ಬೇರೆ
ಹಿನ್ನೆಲೆ
ಪ್ರಕ್ರಿಯೆಗಳು
(ನಾಯ್ಸ್)
ಕಡಿಮೆ
ಇರಬೇಕು. ಇ೦ಥ
ಜಾಗವೆಲ್ಲಿ
?
ಕೆ.ಜಿ.ಎಫ್
ನ
ಆಳವಾದ
ಗಣಿಗಳು
ಈ
ಸ೦ಶೋಧನೆಗೆ
ಹೇಳಿ
ಮಾಡಿಸಿದ್ದು
ಎ೦ದು
ವಿಜ್ಞಾನಿಗಳಿಗೆ
ಮನೆದಟ್ಟಾಯಿತು. ಇ೦ಗ್ಲೆ೦ಡಿನ
ಮತ್ತು
ಜಪಾನಿನ
ಕೆಲವು
ವಿಜ್ಞಾನಿಗಳಿಗೂ
ಇದರಲ್ಲಿ
ಆಸಕ್ತಿ
ಇದ್ದು
ಅವರು
ಭಾರತೀಯ
ವಿಜ್ಞಾನಿಗಳ
ಜೊತೆ
ಸೇರಿ
ಈ
'' ನ್ಯೂಟ್ರಿನೋ
'' ಕಣಗಳಿಗಾಗಿ
೮೦೦೦
ಅಡಿಗಳ
ಕೆಳಗೆ
ಉಪಕರಣಗಳನ್ನಿಟ್ಟು
ಅನ್ವೇಷಣೆ
ಶುರುಮಾಡಿದರು.
ನ್ಯೂಟ್ರಿನೊ
ಕಣಗಳು
ಬ೦ದು
ಈ
ಉಪಕರಣದಲ್ಲಿ
ಪ್ರಕ್ರಿಯೆ
ನಡೆಸಿ
ಬೇರೆ
ಕಣಗಳಿಗೆ
ಪರಿವರ್ತನೆಯದದ್ದನ್ನು
೧೯೬೫ರಲ್ಲಿ
ವಿಜ್ಞಾನಿಗಳು
ಗುರುತಿಸ್ದರು. ಮು೦ದಿನ
ಕೆಲವು
ವರ್ಷಗಳ
ಅವಧಿಯಲ್ಲಿ
೧೮
'ಘಟನೆ'
(ಇವೆ೦ಟ್)
ಗಳನ್ನು
ನ್ಯೂಟ್ರಿನೋಗಳ
ಹೆಜ್ಜೆ
ಗುರುತುಗಳೆ೦ದು
ಕ೦ಡುಹಿಡಿಯಲಾಯಿತು.
ಈ
'ಪ್ರಾಕೃತಿಕ
ನ್ಯೂಟ್ರಿನೋ
ಕಣಗಳ
" ಆವಿಷ್ಕಾರಕ್ಕೆ
ಪ್ರಪ೦ಚದಲ್ಲೆಲ್ಲಾ
ಮನ್ನಣೆ
ದೊರೆಯಿತು. ಮು೦ದೆ
ಈ
ಪ್ರಯೋಗಗಳು
ದೊಡ್ಡದಾಗುತ್ತ
ಜಪಾನ್
ಮತ್ತು
ಅಮೆರಿಕದಲ್ಲಿ
ದೈತ್ಯ
ಉಪಕರಣಗಳು
ಕೆಲಸ
ಮಾಡಲು
ಶುರುವಾಗಿ
ಭಾರತ
ಹಿ೦ದಕ್ಕೆ
ಸರಿಯಿತು. ಈ
ಪ್ರಯೋಗಗಳು
ಸೂರ್ಯನಿ೦ದ
ಬರುವ
ನ್ಯೂಟ್ರಿನೋ
ಕಣಗಳನ್ನೂ
ಕ೦ಡುಹಿಡಿದವು
ಮತ್ತು
ಆಲ್ಲಿಯ
ವಿಜ್ಞಾನಿಗಳಿಗೆ
ನೊಬೆಲ್
ಪ್ರಶಸ್ತಿಯೂ
ದೊರಕಿತು.
ಎರಡು
ದಶಕಗಳ
ನ೦ತರ
ಕೆ.ಜಿ.ಎಫ್
ಗಣಿಗಳು
ಇನ್ನೊ೦ದು
ಪ್ರಯೋಗದಲ್ಲಿ
ಮತ್ತೆ
ಹೆಸರು
ಮಾಡಿತು. ಭೌತವಿಜ್ಞಾನದ
ಸಮತೋಲನ
ನಿಯಮಗಳ
ಪ್ರಕಾರ
ಕಣವಿದ್ದರೆ
ಪ್ರತಿರೋಧ
ಕಣವಿರಲೇ
ಬೇಕು
(ಬಿಳಿ,
ಕರಿ
ಇದ್ದಹಾಗೆ) ; ಹಾಗೆಯೇ
ದ್ರವ್ಯರಾಶಿ
(ಮ್ಯಾಟರ್)
ಇರುವಾಗ
ಪ್ರತಿರೋಧ
ದ್ರವ್ಯರಾಶಿಯೂ
ಇರಬೇಕು
(ಆ೦ಟಿ
ಮ್ಯಾಟರ್). ಆದರೆ
ಇ೦ದಿನ
ನಮ್ಮ
ವಿಶ್ವದಲ್ಲಿ
ಆ೦ಟಿಮ್ಯಾಟರ್
ಅ೦ಶ
ಬಹಳ
ಬಹಳ
ಕಡಿಮೆ
. ಮಹಾಸ್ಫೋಟದ
ಸಮಯದಲ್ಲಿ
ದ್ರವ್ಯರಾಶಿ
ಮತ್ತು
ಪ್ರತಿರೋಧ
ದ್ರವ್ಯರಾಶಿ
ಎರಡು
ಒ೦ದೇ
ಪ್ರಮಾಣದಲ್ಲಿ
ಹುಟ್ಟಿದರೂ
ಕೋಟಿಯಲ್ಲಿ
ಎಲ್ಲೋ
ಒ೦ದು
ಪಾಲು
ದ್ರವ್ಯರಾಶಿ
ಹೆಚ್ಚಾಗಿದೆ. ಇದು
ಏಕೆ
ಹೀಗಾಯಿತು
ಎ೦ದು
ಇ೦ದೂ
ಪೂರ್ತಿ
ತಿಳಿದಿಲ್ಲ
. ಆದರೂ
೧೯೭೦-೮೦ರ
ಆಸುಪಾಸಿನಲ್ಲಿ
ವಿಜ್ಞಾನಿಗಳು
ಮಹಾ
ಏಕೀಕರಣ
ಸಿದ್ಧಾ೦ತ
ಎ೦ಬ
ಸಿದ್ಧಾ೦ತವನ್ನು
ಹೊರತ೦ದು
ಪ್ರೋಟಾನ್
ಕಣ
ಕ್ಷಯಿಸಿದರೆ
ನಮ್ಮ
ವಿಶ್ವದಲ್ಲಿ
ಪ್ರತಿರೋಧಿ
ದ್ರವ್ಯರಾಶಿ
ಏಕಿಲ್ಲ
ಎ೦ಬುದನ್ನು
ಅರ್ಥಮಾಡಿಕೊಳ್ಳಬಹುದೇನೊ
ಎ೦ದು
ಮ೦ಡಿಸಿದರು.
ಸ್ಥಿರ
ಎ೦ದು
ನ೦ಬಿಕೊ೦ಡಿದ್ದ
ಪ್ರೋಟಾನ್
ಕಣವೂ
ಕ್ಷಯಿಸಬಹುದು
ಎ೦ಬ
ಆಲೋಚನೆ
ಬಹಳ
ಸುದ್ದಿ
ಮಾಡಿತು. ಇ೦ದು
ದೇವಕಣದ
ಪರಿಕಲ್ಪನೆಗೆ
ಎಷ್ಟು
ಪ್ರಚಾರ
ಇದೆಯೋ
ಅಷ್ಟೇ
ಮುಖ್ಯ
ವಾಗಿತ್ತು
ಆ
ಕಾಲದಲ್ಲಿ
ಈ '
ಪ್ರೋಟಾನ್
ಡಿಕೇ' ಅಧ್ಯಯನ
! ಅ೦ದರೆ
ಈ
ಕಣಗಳೇ
ತು೦ಬಿರುವ
ದ್ರವ್ಯರಾಶಿ
ನಿಧಾನವಾಗಿ
ನಶಿಸಿಹೋಗುವುದೇ
? ಅದೇನು
ನಿಮಿಷ, ಗ೦ಟೆ
, ವರ್ಷಗಳಲ್ಲಲ್ಲಾ
! ಹಾಗಿದ್ದಿದ್ದರೆ
ಪ್ರಪ೦ಚವೇ
ಎ೦ದೋ
ಕ್ಷಯಿಸಿಬಿಟ್ಟಿರಬೇಕು.
ಇಲ್ಲ.
ಇದು
ಅತಿನಿಧಾನ
ವಾಗಿ
ನಡೆಯುವ
ಪ್ರಕ್ರಿಯೆ.ಯಾಗಿದ್ದು
ಪ್ರೋಟಾನಿನ
ಆಯಸ್ಸು
ಕಡೆಯಪಕ್ಷ
೧೦**೨೬
ವರ್ಷಗಳೆ೦ದು
ತಿಳಿದಿದಿದ್ದಿತು
( ೧
ರ
ಹಿ೦ದೆ
೨೬
ಸೊನೆಗಳು) .
ಇದನ್ನು
ಪ್ರಾಯೋಗಿಕವಾಗಿ
ಹೇಗೆ
ಪರಿಶೀಲಿಸುವುದು
? ಇಲ್ಲ,
ಅಷ್ಟು
ವರ್ಷಗಳೇನೂ
ಕಾಯಬೇಕಿಲ್ಲ.. ಭೌತವಿಜ್ಞಾನದ
ಸಾಧ್ಯತೆಯ
(ಪ್ರಾಬಬಿಲಿಟಿ
) ಸರಾಸರಿ
ಲೆಕ್ಕಚಾರ
ವನ್ನು
ಉಪಯೋಗಿಸಿಕೊಳ್ಳಬೇಕಾಗುತ್ತದೆ.
ಒ೦ದೇ
ಪ್ರೋಟಾನನ್ನು
ಇಟ್ಟುಕೊ೦ಡು
ನೋಡುತ್ತಾ
ಹೋದರೆ
ಅಷ್ಟು
ವರ್ಷಗಳು
ಕಾಯಬೇಕು. ಆದರೆ
ಕೋಟ್ಯಾ೦ತರ
ಪ್ರೋಟಾನಗಳಿದ್ದರೆ
? ಅವುಗಳಲ್ಲಿ
ಕೆಲವಾದರೂ
ನಶಿಸಿಬಿದಬಹುದಲ್ಲವೇ?
ಒ೦ದು
ಕೆಜಿ
ದ್ರವ್ಯರಾಶಿಯಲ್ಲಿ
ಸುಮಾರು
೨ x
೧೦**೨೭
ಪ್ರೋಟಾನ್
ಗಳಿರುತ್ತವೆ. ಅ೦ದರೆ
೧೦೦
ಟನ್ನಿನಲ್ಲಿ
೧೦**೩೨
ಪ್ರೊಟನುಗಳಿರುತ್ತವೆ.
ಅವುಗಳಲ್ಲಿ
ಕೆಲಾದರೂ
ಕ್ಷಯಿಸಬಹುದು
ಎ೦ಬ
ವಿಜ್ಞಾನಿಗಳ
ಅ೦ದಾಜಿದ್ದಿತು.
ಈ
ಅ೦ದಾಜಿಟ್ಟುಕೊ೦ಡು
ಕೆ.ಜಿ.ಎಫ್
ಗಣಿಗಳಲ್ಲಿ
ಎ.ರಡುವರೆ
ಕಿಮೀ
ಗಳ
ಆಳದಲ್ಲಿ
ಸುರ೦ಗವನ್ನು
ಕೊರೆದು
ದೊಡ್ಡ
ಪ್ರಯೋಗಶಾಲೆಯನ್ನು
ಪ್ರಾರ೦ಭಿಸಿದರು.
ಇದರಲ್ಲಿ
ಭಾರತೀಯ
ಮತ್ತು
ಜಪಾನೀ
ವಿಜ್ಞಾನಿಗಳು
ಶಾಮೀಲಾಗಿದ್ದರು. ೩೪
ಕಬ್ಬಿಣದ
ದಪ್ಪ
( ಒಟ್ಟು
೧೫೦
ಟನ್) ಫಲಕಗಳನ್ನು
ಒ೦ದರ್ಮೇಲೊ೦ದು
ಇಟ್ಟು
ಅವುಗಳ
ಮಧ್ಯೆ
ಕಣಗಳನ್ನು
ಪತ್ತೆ
ಹಚ್ಚುವ
ಉಪಕರಣಗಳನ್ನು
ಅಳವಡಿಸಿದರು; ಇದರ
ಅಳತೆ
೪ x
೬
ಮಿಟರ್ಗಳು
( ಚಿತ್ರ
ನೊಡಿ) . ಆಗಿನ
ಕಾಲಕ್ಕೆ
ಬಹಳ
ದೊಡ್ಡ
ಪ್ರಯತ್ನವೇ
ಆಗಿದ್ದು
ಸುಧಾರಣೆಗಳನ್ನು
ನಡೆಸುತ್ತ
ಒಟ್ಟು
೧೦
ವರ್ಷ
ಈ
ಪ್ರಯೋಗಗಳನ್ನು
ನಡೆಸಿದರು.. ಅಲ್ಲಿ
ಒಟ್ಟಿಗೆ
ಸೇರಿಸಿದ್ದ
ಕಬ್ಬಿಣದ
ಪರಮಾಣುಗಳಲ್ಲಿನ
ಕೋಟ್ಯಾ೦ತರ
ಪ್ರೋಟಾನ್
ಕಣಗಳಲ್ಲಿ
ಯಾವುದಾದರೂ
ಕ್ಶಯಿಸಿ
ಬೇರೆ
ಕಣಗಳಿಗೆ
ಜನ್ಮ
ಕೊಟ್ಟು
ಉಪಕರಣದಲ್ಲಿ
ಅವುಗಳ
ಗುರುತನ್ನು
ಹುಡುಕುವುದು
ವಿಜ್ಞಾನಿಗಳ
ಕೆಲಸವಾಗಿದ್ದಿತು.
ಕೆಲವು
ಅನುಮಾನಾಸ್ಪದ
ಗುರುತುಗಳು
ಕ೦ಡುಬ೦ದರೂ
ಒಟ್ಟಿನಲ್ಲಿ
ಇದು
ಮತ್ತು
ಪ್ರಪ೦ಚದ
ವಿವಿಧ
ಭಾಗಗಲಲ್ಲಿ
ನ೦ತರ
ನಡೆಸಿದ
೩-೪
ಪ್ರಯೋಗಗಳು
ತಾವು
ಪರಿಶೀಲಿಸಿದ
ಮಟ್ಟಿಗೆ
ಪ್ರೋಟನ್
ಕಣ
ಕ್ಷಯಿಸುವುದಿದ್ದಲ್ಲ
ಎ೦ದು
ತೋರಿಸಿದವು. ಈ
ಪ್ರಯೋಗಗಳ
ಪರಿಣಾಮ
ಶೂನ್ಯವಾದರೂ
ಇವುಗಳಿ೦ದ
ಒ೦ದು
ಮಹತ್ವದ
ಮಾಹಿತಿ
ಹೊರಬ೦ದಿತು
; ಪ್ರೋಟಾನಿನ
ಆಯಸ್ಸು
ಕಡೆಯ
ಪಕ್ಷ
೧೦
**೩೪
ವರ್ಷಗಳಾದರೂ
ಇರಬೇಕು
!
ಕಣವಿಜ್ಞಾನದ
ಈ ಎರಡು
ಮುಖ್ಯ
ಅಧ್ಯಯನಗಳಲ್ಲಿ
ಮೊದಲ
ಹೆಜ್ಜೆ
ಇಟ್ಟಿದ್ದು
ಭಾರತ. ಈ
ಮೂಲ
ಪ್ರಾಯೋಗಿಕ
ಪರಿಕಲ್ಪನೆಯ
ನ೦ತರ
ಬೇರೆ
ಬೇರೆ
ದೇಶಗಳು
ದೈತ್ಯ
ಗಾತ್ರದ
ಉಪಕರಣಗಳನ್ನು
ನಿರ್ಮಿಸಿ
ಈ
ಅಧ್ಯಯನಗಳನ್ನು
ಮು೦ದೆ
ತೆಗೆದುಕೊ೦ಡುಹೋದವು.
ಅವುಗಳ
ಜೊತೆ
ಪೈಪೋಟಿಗೆ
ನಿಲ್ಲಲು
ಭಾರತಕ್ಕೆ
ಆಗಲಿಲ್ಲ.
ಹಾಗೂ
ಈ
ಪ್ರಯೋಗಗಳು
ಭಾರತಕ್ಕೆ
ಮತ್ತೆ
ಬರಲಿದೆ. . ನ್ಯೂಟ್ರಿನೊ
ಕಣ
ಗಳ
ಅಧ್ಯಯನಗಳನ್ನು
ಮು೦ದುವರಿಸಲು
ಬಹಳ
ದೊಡ್ಡ
ಪ್ರಯೋಗವೊ೦ದು
ಮದುರೆಯ
ಪರ್ವತವೊ೦ದರ
ಕೆಳಗೆ
ಇನ್ನೆರಡು
ವರ್ಷಗಳಲ್ಲಿ
ಶುರುವಾಗಲಿದೆ. ಭಾರತೀಯ
ನ್ಯೂಟ್ರಿನೊ
ವೇಧಶಾಲೆ
' (ಐ.ಎನ್.ಒ)
ಎ೦ಬ
ಹೆಸರಿನ
ಈ
ಪ್ರಯೋಗಶಾಲೆಯಲ್ಲಿ
ದೈತ್ಯ
ಗಾತ್ರದ
ಉಪಕರಣಗಳನ್ನು
ಅಳವಡಿಸುವ
ಯೋಜನೆ
ಇದ್ದು
ಇದು
ಭಾರತದ
ಒ೦ದು
ಅತಿ
ದೊಡ್ಡ
ಪ್ರಯೋಗವಾಗಲಿದೆ. . ಈ
ದೇಶದ
ಸ೦ಶೋಧನಾ
ಸ೦ಸ್ಥೆಗಳ
ಜೊತೆ
ವಿಶ್ವವಿದ್ಯಾಲಯಗಳ
ಅನೇಕ
ವಿಜ್ಞಾನಿಗಳು
ಈ
ಪ್ರಯೋಗವನ್ನು
ನಡೆಸಲು
ಮು೦ದೆ
ಬ೦ದಿದ್ದಾರೆ
ಎನ್ನುವುದು
ಬಹಳ
ಸ೦ತೋಷದ
ವಿಷಯ
----------------------------------------------------------------------------------------------------------------
ಚಿತ್ರ
೧ -
ಕೆ.ಜಿ.ಎಫ್
ಗಣಿಗಳಲ್ಲಿ
ಅತಿ
ಆಳವಾದ
' ಗಿಫರ್ಡ್
ಶಾಫ್ಟ್' .
ಚಿತ್ರ
೨ -
' ಪ್ರೋಟಾನ್
ಡಿಕೇ
' ಪ್ರಯೋಗದ
ಉಪಕರಣ.
No comments:
Post a Comment