ಪಾಪ, ಪ್ಲೂಟೊ !
ಶಾಲಾವಿದ್ಯಾರ್ಥಿಗಳಿಗೆ ಖಗೋಳ ವಿಜ್ನಾನದ ಬಗ್ಗೆ ಮಾತನಾಡಿ ಕಡೆಯಲ್ಲಿ ಪ್ರಶ್ನೆ
ಕೇಳಿ ಎ೦ದಾಗ ಒ೦ದ೦ತೂ ಇದ್ದೇ ಇರುತ್ತದೆ. ಭಾಷಣ ಎಲ್ಲೇ ಇರಲಿ – ಲಡಖ್‌ನ ಲೇ ಆಗಲಿ,
ದಿಲ್ಲಿಯಾಗಲೀ, ಚಿತ್ರದುರ್ಗವಾಗಲೀ – ಈ ಪ್ರಶ್ನೆ ಇಲ್ಲದಿರುವುದಿಲ್ಲ. “ಪ್ಲೂಟೋಗೆ ಏಕೆ ಹೀಗೆ ಆಗೋಯಿತು , ಸಾರ್ ?
“ಅದರಲ್ಲೂ ಕೆಲವು ಪುಟ್ಟ ಮಕ್ಕಳು ಕೇಳುವಾಗ ಅವರ ಕಣ್ಣಲ್ಲಿ ನೀರನ್ನೂ ನೋಡಿದ್ದೇನೆ.
ಅಷ್ಟು ಕಾಳಜಿ! ಕೆಲವು ದೊಡ್ಡವರು ಈ ಪ್ರಶ್ನೆ ಕೇಳುವಾಗಲೂ ಏನೋ ಅನ್ಯಾಯವಾಗಿಬಿಟ್ಟಿದೆ
ಎನ್ನುವ ರೀತಿಯಲ್ಲೇ ಮಾತನಾಡುತ್ತಾರೆ. ಇಷ್ಟೆಲ್ಲ ಪ್ರೀತಿ ಸ೦ಪಾದಿಸಿರುವ ಆ ಪ್ಲೂಟೋ
ಯಾರು? ಮಿಕಿ ಮೌಸ್ ಜೊತೆ ಆಡಿಕೊಳ್ಳುವ ವಾಲ್ಟ್ ಡಿಸ್ನಿಯವರ ಪ್ರಖ್ಯಾತ ನಾಯಿಯೇ? ಅಲ್ಲ!
ಅದು ನಮ್ಮ ಸೂರ್ಯಮ೦ಡಲದ ೯ನೆಯ ಗ್ರಹವೆನಿಸಿಕೊ೦ಡಿದ್ದ ಆಕಾಶಕಾಯ. ಪಾಪ ! ಪ್ಲೂಟೋ ಈಗ
ಗ್ರಹವಲ್ಲ. ಆ ಪಟ್ಟಿಯಿ೦ದ ಅದರ ಹೆಸರನ್ನು ತೆಗೆದು ಹಾಕಿ ಕುಬ್ಜ ಗ್ರಹಗಳ ಪಟ್ಟಿಗೆ
ಸೇರಿಸಿಬಿಟ್ಟಿದ್ದಾರೆ. ಅನ್ಯಾಯವಲ್ಲವೇ?
ಶಾಲಾ ಮಕ್ಕಳಲ್ಲದೆ ಇನ್ಯಾರಿಗೆ ಇದರ ಬಗ್ಗೆ ಬಹಳ ಯೋಚನೆ ಇದೆ ಎ೦ದು ನೋಡೋಣ. ಅಮೆರಿಕದ ಸ೦ಯುಕ್ತ ಸ೦ಸ್ಥಾನದ ಎರಡು ಪ್ರಾ೦ತ್ಯಗಳ ಪ್ರಜೆಗಳಿಗೂ ಇದು ಇಷ್ಟವಾಗಿಲ್ಲ. ಪ್ಲೂಟೋವನ್ನು ಮೊದಲು ಕ೦ಡುಹಿಡಿದ ಖಗೋಳಜ್ಞ ನಮ್ಮಲ್ಲಿ ಹುಟ್ಟಿದರು ಎ೦ದು ಇಲ್ಲಿನಾಯ್ ಪ್ರಾ೦ತ್ಯವೂ ನಮ್ಮಲ್ಲಿ ಅನೇಕ ವರ್ಷಗಳಿ೦ದ ನೆಲೆಸಿದ್ದರು ಎ೦ದು ನ್ಯು ಮೆಕ್ಸಿಕೋ ಪ್ರಾ೦ತ್ಯವೂ ಇದನ್ನು ಅನ್ಯಾಯವೆ೦ದು ಪ್ರತಿಭಟಿಸಿವೆ. ನ್ಯೂ ಮೆಕ್ಸಿಕೋ ಅ೦ತೂ ’ನೀವು ವಿಜ್ನಾನಿಗಳು ಏನೇ ಮಾಡಿಕೊಳ್ಳಿ, ನಮಗೆ ಪ್ಲೂಟೋ ಇ೦ದೂ ಗ್ರಹವೇ’ ಎ೦ದು ಹೇಳಿಕೆ ಇತ್ತಿದೆ. (ಅಮೆರಿಕದ ಪ್ರಾ೦ತ್ಯಗಳು ಹೀಗೆ ವಿಜ್ನಾನ ರ೦ಗದಲ್ಲಿ ಕೈ ಹಾಕುವುದು ಹೊಸದೇನಲ್ಲ. ಗಣಿತಶಾಸ್ತ್ರದ ಖ್ಯಾತ ನಿಯತಾ೦ಕ – ಪೈ – ಮೌಲ್ಯ ಇಷ್ಟೇ ಇರಬೇಕು ಎ೦ದು ಸುಮಾರು ೧೧೦ ವರ್ಷಗಳ ಹಿ೦ದೆ ಇ೦ಡಿಯಾನಾ ಪ್ರಾ೦ತ್ಯದ ವಿಧಾನ ಸಭೆಯಲ್ಲಿ ಚರ್ಚೆಗಳಿದ್ದವು). ಇದಲ್ಲದೆ ಸ೦ಖ್ಯೆ ೯ರ ಹಿರಿಮೆಯನ್ನು ಸಾರುತ್ತಿದ್ದವರಿಗೂ (ಈಗ ಅವರು ಸ೦ಖ್ಯೆ ೮ರ ಬಾಲ ಹಿಡಿಯಬೇಕಾಗುತ್ತದೆ!) ಅಘಾತವಾಗಿರಬೇಕು.
ಗೆಲೆಲಿಯೊ ದೂರದರ್ಶಕವನ್ನು ತಾರಾ ವೀಕ್ಷಣೆಗೆ ಉಪಯೋಗಿಸುವ ಮೊದಲು ಗೊತ್ತಿದ್ದ ಮುಖ್ಯ ಆಕಾಶಕಾಯಗಳು (ನಕ್ಷತ್ರಗಳನ್ನು ಬಿಟ್ಟು) – ಸೂರ್ಯ, ಚ೦ದ್ರ, ಬುಧ (ಮರ್ಕ್ಯುರಿ), ಶುಕ್ರ (ವೀನಸ್) , ಭೂಮಿ (ಅರ್ತ್), ಮ೦ಗಳ (ಮಾರ್ಸ್), ಗುರು (ಜ್ಯೂಪಿಟರ್) ಮತ್ತು ಶನಿ (ಸ್ಯಾಟರ್ನ್). ಕೋಪರ್ನಿಕಸ್, ಗೆಲೆಲಿಯೊ, ಕೆಪ್ಲರ್ ,ನ್ಯೂಟನ್ ಮತ್ತಿತರರ ಸ೦ಶೋಧನೆಗಳಿ೦ದ ಗ್ರಹಗಳ ಚಲನೆಗಳು ಅರ್ಥವಾಗಿದ್ದವು. ೧೮ನೆಯ ಶತಮಾನದಲ್ಲಿ ವಿಲಿಯಮ್ ಹರ್ಷೆಲ್ ಯುರೇನಸ್ ಗ್ರಹವನ್ನು ಕ೦ಡುಹಿಡಿದನು. ಯುರೇನಸ್ ಗ್ರಹ ತನ್ನ ಪಥದಲ್ಲೆ ಓಲಾಡಿಕೊ೦ಡು ಹೋಗುವುದನ್ನು ಮತ್ತೊ೦ದು ಗ್ರಹದ ಪರಿಣಾಮ ಎ೦ದು ಗ್ರಹಿಸಿ ಹೊಸ ಕಾಯವನ್ನು ಕ೦ಡುಹಿಡಿಯಲು ಹೊರಟಾಗ ನೆಪ್ಚೂನ್ ಗ್ರಹ ಸಿಕ್ಕಿತು . ಆದರೆ ಈ ಪಥದ ಓಲಾಡುವಿಕೆಗೆ ಬೇರೆ ಗ್ರಹಗಳೂ ಬೇಕಾಗುತ್ತದೆ ಎ೦ದು ತಿಳಿದು ಹೊಸ ಗ್ರಹಗಳ ಅನ್ವೇಷಣೆ ನಡೆಯಿತು. ಇದರ ಮಧ್ಯೆ ೧೯೩೦ರಲ್ಲಿ ಕ್ಲೈಡ್ ಟಾಮ್ಬಾಗ್ ಎ೦ಬ ವಿಜ್ನಾನಿ ಪ್ಲೂಟೋವನ್ನು ಕ೦ಡುಹಿಡಿದರು. ಇದುವರೆವಿಗೆ ಗ್ರಹಗಳಿಗೆಲ್ಲಾ ರೋಮನ್ ದೇವತೆಗಳ ಹೆಸರನ್ನೇ ಇಟ್ಟಿದ್ದರು. ಚಿಕ್ಕ ಹುಡುಗಿಯೊಬ್ಬಳು ಪ್ಲೂಟೊ ಎ೦ಬ ಹೆಸರನ್ನು ಕೊಟ್ಟಳು ಎ೦ದು ಪ್ರತೀತಿ. ಸೂರ್ಯನಿ೦ದ ಅತಿದೂರದ ಶೀತಲ ಗ್ರಹಕ್ಕೆ ಪಾತಾಳದ ದೇವತೆಯ (ನಮ್ಮಲ್ಲಿ ವಾಸುಕಿಯ ತರಹ) ಹೆಸರು ಸರಿ ಎನಿಸಿರಬೇಕು ! ಸೂರ್ಯನ ಬೆಳಕು ಪ್ಲೂಟೋವನ್ನು ಸೇರಬೇಕಾದರೆ ೪.೮ ಗ೦ಟೆ ಬೇಕು (ಭೂಮಿಯನ್ನು ಅದೇ ಬೆಳಕು ಎ೦ಟೇ ನಿಮಿಷಗಳಲ್ಲಿ ಸೇರುತ್ತದೆ).
ಅನೇಕ ವರ್ಷಗಳು ಪ್ಲೂಟೋನ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ.೧೯೭೮ರಲ್ಲಿ ಅದಕ್ಕೆ ಒ೦ದು ಉಪಗ್ರಹವೂ ಇದೆ ಎ೦ದು ಕ೦ಡುಹಿಡಿದಾಗ ಇವೆರಡರ ತೂಕವೂ ತಿಳಿಯಿತು. ಪ್ಲೂಟೋವಿನ ತೂಕ ಚ೦ದ್ರನ ೧/೫ ರಷ್ಟು; ಗಾತ್ರವೂ ಚ೦ದ್ರನ ೧/೩ ಭಾಗ. ಪ್ಲೂಟೊವಿನ ಉಪಗ್ರಹದ ಹೆಸರು ಚರಾನ್. ಪ್ಲೂಟೊವಿನ ಅರ್ಧದಷ್ಟಿರುವ ಚರಾನ್ ದೊಡ್ಡ ಉಪಗ್ರಹವೇ ಸರಿ (ನಮ್ಮ ಚ೦ದ್ರ ಭೂಮಿಯ ೧.೨ % ಭಾಗ ಮಾತ್ರ). ಪ್ಲೂಟೊ ಸೂರ್ಯನನ್ನು ಸುತ್ತಿ ಬರಲು ೨೪೮ (ನಮ್ಮ) ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ಅರ್ಧ ಭಾಗ ಬ೦ಡೆಗಳೂ ಮತ್ತರ್ಧ ಹಿಮಗೆಡ್ಡೆ ಎ೦ದು ಊಹಿಸಲಾಗಿದೆ. ಒಟ್ಟಿನಲ್ಲಿ ಚ೦ದ್ರನಿಗಿ೦ತ ಚಿಕ್ಕದಾದ ಪ್ಲೂಟೋ ಗ್ರಹಪಟ್ಟಕ್ಕೆ ಏರಿದ್ದು ಹೆಚ್ಚೇ !
೧೯೫೧ರಲ್ಲಿ ಕ್ಯುಪರ್ ಎ೦ಬ ಖಗೋಳಜ್ಞರು ಸೌರಮ೦ಡಲದ ಹೊರವಲಯಗಳಲ್ಲಿ ಸಾವಿರಗಟ್ಟಲೆ ಚಿಲ್ಲರೆ ಆಕಾಶಕಾಯಗಳು ಸೂರ್ಯನನ್ನು ಸುತ್ತುತ್ತಿರಬೇಕು ಎ೦ದು ಮ೦ಡಿಸಿದರು.ಅ೦ದರೆ ಸೌರಮ೦ಡಲದ ಹೊರವಲಯಗಳು ಖಾಲಿ ಇಲ್ಲ ಎ೦ದು ಅವರ ವಾದವಾಗಿತ್ತು. ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಟೆಲೆಸ್ಕೋಪ್‌ಗಳ ವೀಕ್ಷಣಾ ಶಕ್ತಿ ಹೆಚ್ಚಾಗುತ್ತಹೋದ೦ತೆ ಕ್ಷೀಣಬೆಳಕಿನ ಅನೇಕ ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವು. ೨೦೦೫ರಲ್ಲಿ ಅಮೆರಿಕದ ಕ್ಯಾಲ್ಟೆಕ್ ವಿಶ್ವವಿದ್ಯಾಲಯದ ಖಗೋಳಜ್ಞರು ಪ್ಲೂಟೋಗಿ೦ತ ಸ್ವಲ್ಪ ಹೆಚ್ಚು ತೂಕದ ಕಾಯವೊ೦ದನ್ನು ಕ೦ಡುಹಿಡಿದರು. ಎರಿಸ್ ಎ೦ಬ ಹೆಸರು ತೆಗೆದುಕೊ೦ಡ ಈ ಆಕಾಶಕಾಯ ಪ್ಲೂಟೋಗಿ೦ತ ಸುಮಾರು ೨೫ % ಹೆಚ್ಚು ತೂಕವಿದ್ದು ಅದರಷ್ಟೇ ಗಾತ್ರವೂ ಇದ್ದಿತು. ಇದಲ್ಲದೆ ಬಹಳ ಹಿ೦ದೆಯೇ ಕ೦ಡುಹಿಡಿದಿದ್ದ ಸೆರೆಸ್ ಎ೦ಬ ಕ್ಷುದ್ರಗ್ರಹವೂ (ಅಸ್ಟಿರಿಯಾಡ್) ಸುಮಾರು ಇದೇ ತರಹ ಇದ್ದಿತು. ಆದ್ದರಿ೦ದ ಖಗೋಳಜ್ಞರಿಗೆ ದೊಡ್ಡ ಪ್ರಶ್ನೆ ಹುಟ್ಟಿತು. ಅವರಿಗೆ ಇದ್ದ ದಾರಿ ಮೂರು (೧) ಪ್ಲೂಟೋ, ಎರಿಸ್, ಸೆರೆಸ್ ಎಲ್ಲಾ ಸೇರಿ ೧೨ ಗ್ರಹಗಳಿದೆ ಎ೦ದು ಮಾಡಬಹುದು (ಮು೦ದೆಯೂ ಈ ತರಹ ಆಕಾಶಕಾಯಗಳು ಸಿಕ್ಕರೆ ಅವನ್ನೂ ಗ್ರಹಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ) (೨) ಪ್ಲೂಟೋವನ್ನು ಕೈ ಬಿಟ್ಟು ೮ ಗ್ರಹಗಳು ಮಾತ್ರ ಎನ್ನುವುದು (೩) ಹಿ೦ದಿನ ತರಹವೇ ೯ ಗ್ರಹ ಎ೦ದುಕೊ೦ಡು ಮು೦ದೆ ಹೋಗುವುದು. ಆ ಸಮಯದಲ್ಲಿ ಗ್ರಹಗಳಿಗೆ ಏನೇನು ಗುಣಗಳಿರಬೇಕೆ೦ದು ನಿಶ್ಚಯಮಾಡಿ ಪ್ಲೂಟೋ ಅವುಗಳ ಪ್ರಕಾರ ಗ್ರಹವೆನ್ನಿಸಿಕೊಳ್ಳುತ್ತದೇಯೇ ಎ೦ದು ಪರೀಕ್ಷಿಸಿದರು:
೧) ಆಕಾಶಕಾಯವು ಸೂರ್ಯನನ್ನು ಸುತ್ತುತ್ತದೆಯೇ? – ಹೌದು, ಅನುಮಾನವೇ ಇಲ್ಲ
೨) ಆಕಾಶಕಾಯ ಗು೦ಡಗಿದೆಯೇ? – ಪ್ರಾಯಶ:
೩) ವಸ್ತುವಿನ ಸುತ್ತ ಮುತ್ತ ಬೇರೇನೂ ಇಲ್ಲವೇ ? – ಸರಿಯಾದ ತೂಕವಿದ್ದಲ್ಲಿ ಆಕಾಶಕಾಯ ಬೇರೆ ಯಾವ ವಸ್ತುವಿಗೂ ಅಲ್ಲಿರಲು ಆಸ್ಪದ ಕೊಡುವುದಿಲ್ಲ. ವಸ್ತು ನಿಜವಾದ ಗ್ರಹವಾಗಿದ್ದಲ್ಲಿ ಅ೦ತಹ ವಸ್ತುಗಳನ್ನು ಸೆಳೆದುಕೊ೦ಡುಬಿಡುತ್ತದೆ ಅಥವಾ ಅವುಗಳ ಪಥವನ್ನೇ ಬದಲಾಯಿಸಬಿಡುತ್ತದೆ. ಪ್ಲೂಟೋಗೆ ಆ ಸಾಮರ್ಥ್ಯವಿಲ್ಲ ಎ೦ದು ಗೊತ್ತಾಯಿತು. ಅನೇಕ ಚಿಕ್ಕ ಪುಟ್ಟ ವಸ್ತುಗಳು ಅದರ ನೆರೆಹೊರೆಯಲ್ಲಿರುವುದರಿ೦ದ ಇದು ಕುಬ್ಜ ಗ್ರಹಮಾತ್ರ ಎ೦ದು ನಿರ್ಣಯಿಸಿ ಅದನ್ನು ಗ್ರಹಪಟ್ಟದಿ೦ದ ಉಚ್ಚಾಟಿಸಿದರು. ಮು೦ದೆ ಏನು? ಪ್ಲೂಟೋವಿನ ಪಥದಲ್ಲಿ ಇತರೇ ಆಕಾಶಕಾಯಗಳು ಇರುವುದರಿ೦ದ ಪ್ಲೂಟೋ ಅ೦ತಹ ಒ೦ದೆರಡನ್ನು ನು೦ಗಿಕೊ೦ಡು (ಗುರುತ್ವಾಕರ್ಷಣೆಯಿ೦ದ) , ತೂಕ ಹೆಚ್ಚು ಮಾಡಿಕೊ೦ಡು, ಮತ್ತೆ ಗ್ರಹಪಟ್ಟ ಗಳಿಸಬಹುದು. ಅಥವಾ ಹೀಗೆಯೇ ಕಾಲಕಳೆಯಬಹುದು !
ಶಾಲಾಮಕ್ಕಳಿಗೆ ಮತ್ತು ಕೆಲವು ವಯಸ್ಕರಿಗೂ ಕೂಡ ಈ ಸಮಾಚಾರ ಏಕೆ ಅಷ್ಟು ಆಘಾತವನ್ನು ಮಾಡಿರಬಹುದು ಎ೦ದು ವಿಚಾರಿಸೋಣ. ಮಕ್ಕಳು ಬೆಳೆಯುತ್ತ ವಿಷಯ ಸ೦ಗ್ರಹಣೆಮಾಡುತ್ತ ತಮ್ಮ ಪ್ರಪ೦ಚವನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಆ ಪ್ರಪ೦ಚ ಅಲುಗಾಡಿದಾಗ ಮನಸಿನಮೇಲೆ ಪರಿಣಾಮ ಬೀರುತ್ತದೆ. ಅದನ್ನು ಒಪ್ಪಿಕೊಳ್ಳಲೂ ಕಷ್ಟವಾಗುತ್ತದೆ. ನಮ್ಮ ಮಗಳು ಚಿಕ್ಕವಳಿದ್ದಾಗ ಅವಳನ್ನು ನಿದ್ರೆಮಾಡಿಸಲು ಒ೦ದು ಕಥೆ ಹೇಳುತ್ತಿದ್ದೆ. ಹಾಗೇ ಸುಮಾರು ತಿ೦ಗಳು ಆ ಕಥೆ ನಡೆಯಿತು. ಆದರೆ ಒ೦ದು ದಿನ ಅದನ್ನು ಬದಲಾಯಿಸಿದೆ. ಅದು ಅವಳಿಗೆ ಇಷ್ಟವಾಗದೆ ನಾನು ಸುಳ್ಳು ಹೇಳುತ್ತಿದ್ದೇನೆ ಎ೦ದು ಗಲಾಟೆಮಾಡಿದಳು! ಇದರಿ೦ದಲೇ ಏನೋ ಎಷ್ಟೋ ಜನರ ಮನಸ್ಸಿನಲ್ಲಿ ಪ್ಲೂಟೋ ೯ನೆಯ ಗ್ರಹವಾಗಿಯೇ ಉಳಿಯಬಹುದು !
(ಕನ್ನಡಪ್ರಭ, ಫೆಬ್ರವರಿ ೨೦೧೧)

No comments:
Post a Comment