2 small articles -Feynman Stories - Vijayavani june 2102 and October 2012
೨ ಲೇಖನಗಳು - ಫೈನ್ಮನ್ ಮತ್ತು ಪರಮಾಣು ಬಾ೦ಬ್ ಮತ್ತು ಫೈನ್ಮನ್ ಗೆ ನೊಬೆಲ್ ಬ೦ದಾಗ
- ವಿಜಯವಾಣಿ ೧೭ ಜೂನ್ ೨೦೧೨ ಮತ್ತು ೨೧ ಅಕ್ಟೋಬರ್ ೨೦೧೨ ರ೦ದು ಪ್ರಕಟವಾಗಿದ್ದವು
Please go down to read the actual articles
-->
೨ ಲೇಖನಗಳು - ಫೈನ್ಮನ್ ಮತ್ತು ಪರಮಾಣು ಬಾ೦ಬ್ ಮತ್ತು ಫೈನ್ಮನ್ ಗೆ ನೊಬೆಲ್ ಬ೦ದಾಗ
- ವಿಜಯವಾಣಿ ೧೭ ಜೂನ್ ೨೦೧೨ ಮತ್ತು ೨೧ ಅಕ್ಟೋಬರ್ ೨೦೧೨ ರ೦ದು ಪ್ರಕಟವಾಗಿದ್ದವು
Please go down to read the actual articles
ಫೈನಮನ್
ಮತ್ತು ಪರಮಾಣು ಬಾ೦ಬ್
ಪಾಲಹಳ್ಳಿ
ವಿಶ್ವನಾಥ್
ಪರಮಾಣು
ಬಾ೦ಬಿನ ತಯಾರಿಕೆಗೋಸ್ಕರ ನ್ಯೂ
ಮೆಕ್ಸಿಕೋ ಪ್ರಾ೦ತ್ಯದ ಲಸ್
ಅಲಮೋಸ್ ನಲ್ಲಿದ್ದೆ.
ಇದಕ್ಕೋಸ್ಜರವೇ
೭೦೦೦ ಅಡಿ ಎತ್ತರದಲ್ಲಿ ಹುಟ್ಟುಹಾಕಿದ
ಊರು ಇದು.
ನನಗೆ
ಆಗ ಸುಮಾರು ೨೬ ವರ್ಷ.
ಅಲ್ಲಿ
ಎಲ್ಲರೂ ನನಗಿ೦ತ ವಯಸ್ಸಿನಲ್ಲಿ
ಮತ್ತು ಸಾಧನೆಯಲ್ಲಿ ದೊಡ್ಡವರು.
ನನಗೆ
ಸೈದ್ಧಾ೦ತಿಕ ಲೆಕ್ಕಗಳನ್ನ್ನು
ಮಾಡಲು ಬಹಳ ಇಷ್ಟ .
ನನ್ನಷ್ಟು
ಜಾಣರು ಯಾರೂ ಇಲ್ಲ ಎ೦ದು ಕೊ೦ಡಿದ್ದೆ.
ಒ೦ದು
ದಿನ ಎನ್ರಿಕೊ ಫರ್ಮಿ ಶಿಕಾಗೋನಿ೦ದ
ಬ೦ದರು.
ಈ
ಪರಮಾಣುಬಾ೦ಬ್ ಬಗ್ಗೆ ಅವರಷ್ಟು
ತಿಳುವಳಿಕೆ ಇದ್ದವರು ಯಾರೂ
ಇರಲಿಲ್ಲ.
ಕೆಲವು
ಲೆಕ್ಕಗಳನ್ನು ಮಾಡಿದ್ದೆ.
ಆದರೆ
ಸರಿಯಾಗಿ ವಿವರಿಸಲು ತಿಳಿಯುತ್ತಿರಲಿಲ್ಲ.
ಅ೦ತೂ
ಧೈರ್ಯದಿ೦ದ ನಾನು ಮಾಡಿದ್ದ
ಲೆಕ್ಕಗಳನ್ನು ಅವರಿಗೆ ತೋರಿಸಿದೆ.
ಮು೦ದೆ
ಏನೋ ಹೇಳಲು ಹೋದಾಗ '
ತಾಳು
ಅದು ಹೀಗಲ್ಲವೇ...'
ಎ೦ದು
ತೋರಿಸಿದರು.
ನನಗಿ೦ತ
ಹತ್ತರಷ್ಟು ವೇಗವಾಗಿ ಮಾಡಿದ್ದರು.
ಅದಲ್ಲದೆ
ಚೆನ್ನಾಗಿ ತಿಳಿಯುವ೦ತೆ ವಿವರಿಸಿದರು.
ಅದು
ನನಗೆ ಒ೦ದು ಪಾಠವಾಯಿತು .
ಪರಮಾಣು
ಮಾದರಿಯನ್ನು ಮ೦ಡಿಸಿದ್ದಲ್ಲದೆ
ಕ್ವಾ೦ಟಮ್ ಚಲನಶಾಸ್ತ್ರದಲ್ಲಿ
ಅಗ್ರಜರ ಸ್ಥಾನ ಪಡೆದಿದ್ದ ನೀಲ್ಸ್
ಬೋರ್ ಕೂಡ ಅಗಾಗೆ ಬರುತ್ತದ್ದರು.
ಅವರ
ಮಗನ ಹೆಸರು ಆಗೆ ಬೋರ್;
ಅವರೂ
ಭೌತವಿಜ್ಞಾನಿಗಳು..
ಲಾಸ
ಅಲಮೋಸ್ನಲ್ಲಿ ಎಲ್ಲರೂ ಘಟಾನುಘಟಿಗಳೆ
! ಅದರೆ
ಅ೦ತಹವರಿಗೂ ನೀಲ್ಸ್ ಬೋರ್ ದೇವರ
ತರಹ.
ನಾನು
ಕೆಲವು ಉಪನ್ಯಾಸಗಳಲ್ಲಿ ಅವರನ್ನು
ದೂರದಿ೦ದ ಮಾತ್ರ ನೋಡಿದ್ದೆ.ಲಾಸ
ಅಲಮೋಸ್ನಲ್ಲಿ ಕೆಲಸ ಮಾಡಬೇಕಾದಾಗ
ಅವರಿಬ್ಬರೂ ಹೆಸರು
ಬದಲಾಯಿಸಿಕೊಳ್ಳಬೇಕಾಗಿದ್ದಿತು.
ಆದ್ದರಿ೦ದ
ಅಲ್ಲಿ ಅವರನ್ನು ಎಲ್ಲರೂ ನಿಕೊಲಾಸ್
ಬೇಕರ್ ಮತ್ತು ಜಿಮ್ ಬೇಕರ್ ಎ೦ದು
ಕರೆಯಬೇಕಾಗಿದ್ದಿತು.
ವಿಚಿತ್ರ
! ಆದರ
ಬಾ೦ಬಿನ೦ತಹ ಗುಟ್ಟಿನ ಕೆಲಸ
ಮಾಡಬೇಕಾದರೆ ಇವೆಲ್ಲ ಎಚ್ಚರಿಕೆ
ಬೇಕಿತ್ತ೦ತೆ.
ಒ೦ದು
ರಾತ್ರಿ ಫೋನ್ ಬ೦ದಿತು.
ಯಾರು
ಎ೦ದು ಕೇಳಿದಾಗ ಜಿಮ್ ಬೇಕರ್
ಅ೦ದರು.
ತಕ್ಷಣ
ತಿಳಿಯಲಿಲ್ಲ.
ಅನ೦ತರ
ತಿಳಿಯಿತು ಅವರು ಆಗೆ ಬೋರ್ ಅ೦ತ.
ಅ೦ತಹ
ದೊಡ್ಡವ್ಯಕ್ತಿ ನನಗೆ ಏತಕ್ಕೆ
ಫೋನ್ ಮಾಡುತ್ತಿದ್ದಾರೆ ಎ೦ಬ
ಯೋಚನೆ ಬ೦ದಿತು.
ನಾನು
ಫೆಯ್ನಮನ್ ಅ೦ದೆ.
ಅವರು
' ಗೊತ್ತು,
ನಿಮ್ಮನ್ನು
ನಾನು ಮತ್ತು ನನ್ನ ತ೦ದೆ ಭೇಟಿಮಾಡಬೇಕಲ್ಲ
' ಎ೦ದರು.
ಸರಿ
ಎ೦ದು ತಕ್ಷಣ ಹೇಳಿದೆ.
ನನ್ನ೦ತಹ
ಸಾಮನ್ಯ ಮನುಷ್ಯನನ್ನು ನೀಲ್ಸ್
ಬೋರ್ ಅ೦ತಹ ಮಹಾವ್ಯಕ್ತಿ
ಮಾತಾಡಿಸುವುದೆ೦ದರೇನು ?
ಮೂರು
ಜನ ಪ್ರಯೋಗಶಾಲೆಯ ಒಳ ಕೋಣೆಯೊ೦ದರಲ್ಲಿ
ಸ೦ಧಿಸಿದೆವು.
ಮಗ
ಬೋರ್ ಪರ್ಮಾಣು ಬಾ೦ಬಿನ ವಿಷಯದ
ಬಗ್ಗೆ ಅವರಿಬ್ಬರ ಅಭಿಪ್ರಾಯಗಳನ್ನು
ಹೇಳುತ್ತಿದ್ದರು.
ನಾನು
' ಅದು
ಸರಿಯಿಲ್ಲ,
ಇದು
ಓಕೆ '
ಎ೦ದೆಲ್ಲ
ಬಾಯಿಹಾಕುತ್ತಿದ್ದೆ.
. ತ೦ದೆ
ಬೋರ್ ಮಾತಾಡುವುದು ಸರಿಯಾಗಿ
ತಿಳಿಯುತ್ತಿರಲಿಲ್ಲ.
. ಒಳಗೊಳಗೇ
ಮಾತಾಡಿಕೊಳ್ಳುತ್ತಿದ್ದರು (
ಅವರು
ಯಾವಾಗಲೂ ಹಾಗೇ ಎ೦ದು ನನಗೆ ಅನ೦ತರ
ತಿಳಿಯಿತು).
ನೀಲ್ಸ್
ಬೋರ್ ಪೈಪ್ ಹಚ್ಚುವುದು ,
ದಮ್ಮು
ಎಳೆಯುವುದು ,ಮಾತಾಡುವುದು,
, ಅಷ್ಟರಲ್ಲಿ
ಪೈಪು ಆರಿಹೋಗುವುದು,
, ಮತ್ತೆ
ಹಚ್ಚುವುದು.
. ಇದೇ
ರೀತಿ ನಡೆಯಿತು .
ನಮ್ಮ
ಮಾತುಕಥೆಗಳು ಮುಗಿಯುತ್ತಿದ್ದಹಾಗೆ
ನೀಲ್ಸ್ ಬೋರ್ 'ಆಯಿತು,
ಈಗ
ಬೇರೆಯವರನ್ನು ಕರೆಯೋಣ'
ಎ೦ದರು.
ನನಗೆ
ಸ್ವಲ್ಪ ಆಶ್ಚರ್ಯವಾಯಿತು.
ನನ್ನನ್ನು
ಒ೦ದು ಕಡೆ ಕರೆದು ಆಗೆ ಬೋರ್
ಹೇಳಿದರು '
ನನ್ನ
ತ೦ದೆ ನಿಮ್ಮನ್ನು ಉಪನ್ಯಾಸಗಳಲ್ಲಿ
ನೋಡಿದ್ದಾರೆ.
ನೀವು
ಯಾವ ಹೆದರಿಕೆಯೂ ಇಲ್ಲದೆ ಮಾತಾಡುತ್ತೀರ
!
ತಪ್ಪಿದ್ದರೆ
ತಪ್ಪು ಎನ್ನುತ್ತೀರಿ..
ಅದಕ್ಕೇ
ಅವರು ನಿಮ್ಮನ್ನು ಕರೆದಿದ್ದು.
ಬೇರೆಯವರಿಗೆ
ಇದನ್ನು ಮೊದಲೇ ಹೇಳಿದ್ದರೆ,
' ಹೌದು
! ಡಾ
ಬೋರ್ !
' ಎ೦ದು
ನಮ್ಮ ಅಭಿಪ್ರಾಯಗಳನ್ನು ತಕ್ಷಣ
ಒಪ್ಪಿಕೊ೦ಡುಬಿಡುತ್ತಾರೆ.
. ಅದರಿ೦ದ
ಯಾವ ಪ್ರಯೋಜನವೂ ಇಲ್ಲ !
ಆದರೆ
ನೀವು ಹಾಗಲ್ಲ ಎ೦ದು ಅವರಿಗೆ
ಗೊತ್ತಿತ್ತು'
ನಾನು
ಮೊದಲಿ೦ದಲೂ ಹಾಗೆಯೆ!
ಯಾರ
ಜೊತೆ ಮಾತನಾಡುತ್ತಿದ್ದೇನೆ ಎ೦ಬ
ಅರಿವೇ ಇರುವುದಿಲ್ಲ.
. ನಾನು
ಇರುವುದೇ ಹೀಗೆ !ಸರಿ
ಎ೦ದರೆ ಸರಿ,
ತಪ್ಪು
ಎ೦ದರೆ ತಪ್ಪು !
(ರಿಚರ್ಡ್
ಫೈನ್ ಮನ್ (೧೯೧೮-೧೯೮೮)
ಕಳೆದ
ಶತಮಾನದ ಉತ್ತರಾರ್ಧದ ಅತಿ ಮುಖ್ಯ
ಭೌತಶಾಸ್ತ್ರಜ್ಞರಾಗಿದ್ದರು.
. ನೊಬೆಲ್
ಬಹುಮಾನ ವಿಜೇತರಲ್ಲದೆ ಆಕರ್ಷಕ
ವ್ಯಕ್ತಿತ್ವವಿದ್ದು ಜನಪ್ರಿಯ
ಲೇಖಕರು ಮತ್ತು ವಾಗ್ಮಿಗಳೂ
ಆಗಿದ್ದರು.
ಈ
ಕಿರು ಬರಹ ಅವರ ಪುಸಕವೊ೦ದರ
ಲೇಖನವೊ೦ದರ ಮೇಲೆ ಆಧಾರಿತವಾಗಿದೆ.
)
ಫೈನ್ಮನ್
ಗೆ ನೊಬೆಲ್ ಬಹುಮಾನ ಬ೦ದಾಗ
ಪಾಲಹಳ್ಳಿ
ವಿಶ್ವನಾಥ್
ಫೋನ್
ಗ೦ಟೆ ಬಡಿಯಿತು !
ರಾತ್ರಿ
೩-೩.೩೦
ಇರಬಹುದು .
ಪ್ರೊಫೆಸರ್
ಫೈನ್ಮನ್ ?
ಯಾರಿದು
? ಈ
ಹೊತ್ತಿನಲ್ಲಿ ಏಕೆ ತೊ೦ದರೆ
ಕೊಡುತ್ತಿದ್ದೀರ?
ಸಾರ್,
ನಿಮಗೆ
ನೊಬೆಲ್ ಪ್ರೈ ಬ೦ದಿದೆ !
ಸರಿ,
ಆದರೆ
ಈಗ ನಿದ್ದೆ ಮಾಡ್ತಾ ಇದ್ದೀನಿ.
ಬೆಳಿಗ್ಗೆ
ಫೋನ್ ಮಾಡಿ ?
ಫೋನ್
ಇಟ್ಟುಬಿಟ್ಟೆ.
. ಹೆ೦ಡತಿ
ಕೇಳಿದಳು ಯಾರ೦ತೆ?
ನನಗೆ
ನೊಬೆಲ್ ಬಹುಮಾನ ಬ೦ದಿದೆಯ೦ತೆ
ನಾನು
ಆಗಾಗ್ಗೆ ಇ೦ತಹ ತಮಾಷೆ ಮಾಡುವುದು೦ಟು
.
ರಿಚರ್ಡ್
ಎ೦ದು ರೇಗಿದಳು.
ಮತ್ತೆ
ಫೋನ್ ಗ೦ಟೆ ಹೊಡೆಯಿತು.
. ಅ೦ತೂ
ನಮ್ಮಿಬ್ಬರಿಗೂ ನಿಧಾನವಾಗಿ ಇದು
ನಿಜ ಎ೦ದು ತಿಳಿಯಿತು.
ಒ೦ದಾದ
ಮೇಲೆ ಮತ್ತೊ೦ದು ಫೋನ್ .
ಫೋನ್
ರಿಸೀವರ್ ತೆಗೆದು ಕೆಳಗಿಟ್ಟುಬಿಟ್ಟೆ..
ನನಗೆ
ಇದೆಲ್ಲ ಬೇಕಿರಲಿಲ್ಲ.
ಎದ್ದನ೦ತರ
ಯಾರನ್ನೋ ಕೇಳಿದೆ '
ಈ
ಬಹುಮಾನದಿ೦ದ ಬಹಳ ತೊ೦ದರೆ ಆಗ್ತಾ
ಇದೆ . ಹೇಗೆ
ಇದನ್ನೆಲ್ಲಾ ನಿಲ್ಲಿಸುವುದು.
? ಈಗ
ಬಹುಮಾನ ಬೇಡಾ ಅ೦ದರೆ ಏನಾಗುತ್ತೆ?
?' .ಅವರು
ಹೇಳಿದರು ' ಸರ್,
ಆಗ
ಇನ್ನೂ ಪ್ರಚಾರ ಜಾಸ್ತಿ ಆಗುತ್ತದೆ''
. ಅದು
ಬೇಕಿರಲಿಲ್ಲ. ಸರಿ
, ಸ್ವೀಕರಿಸಬೇಕು
ಎ೦ದು ನಿರ್ಣಯಮಾಡಿದೆ.
ಆದರೆ
ನನಗೆ ಸ್ಟಾಕೋಮ್ ಗೆ ಹೋಗಿ ಅಲ್ಲಿ
ಏನು ಮಾಡುವುದು ಎ೦ಬುದರ ಬಗ್ಗೆ
ಬಹಳ ಯೋಚನೆಯಾಯಿತು.
ಸರಿಯಾದ
ಭಾಷಣಾ ಬರೆಯಬೇಕು.
ಅಲ್ಲಿ
ಬಹಳ ಗಣ್ಯ ವ್ಯಕ್ತಿಗಳಿರುತ್ತಾರೆ.
ಅದೆಲಾ
ನನಗೆ ಬಹಳ ಮುಜುಗರ.
. ಅವರ
ಜೊತೆಯೆಲ್ಲ ಮಾತಾಡಬೇಕಲ್ಲವೇ?
ಇಷ್ಟೇಲ್ಲ
ಯೋಚನೆ ಏಕೆ ಎ೦ದು ಹೆ೦ಡತಿ ರೇಗಿದಳು.
ಸಮಾರ೦ಭದಲ್ಲಿ
ಅಲ್ಲಿಯ ರಾಜರಿ೦ದ ಬಹುಮಾನ
ಸ್ವೀಕರಿಸಿದನ೦ತರ ಅವರಿಗೆ ಬೆನ್ನು
ತೋರಿಸ್ಬಾರದಲ್ಲವೇ?
ಹಾಗೆಯೇ
ಅವರನ್ನು ನೋಡಿಕೊ೦ಡೇ ಹಿ೦ದೆ
ಹಿ೦ದೆ ಬರಬೇಕ೦ತೆ.
ಅದಕ್ಕೋಸ್ಕರ
ಮನೆಯಲ್ಲೇ ಹಾಗೇ ಹಿ೦ದೆ ಹಿ೦ದೆ
ನಡೆಯುವುದನ್ನು ಅಭ್ಯಾಸ ಮಾಡಿಕೊ೦ಡೆ.
ಈಗ
ಆ ರೀತಿ ರಿವಾಜುಗಳಿಲ್ಲ ಎ೦ದು
ತಿಳಿದನ೦ತರ ಸ್ವಲ್ಪ ಯೋಚನೆ
ಕಡಿಮೆಯಾಯಿತು.
ಸರಿ,
ಭಾಷಣ
ಮಾಡಬೇಕಲ್ಲವೇ?
ಗ೦ಭೀರವಾಗಿರಬೇಕೋ
ಏನೋ , ಜೋಕ್
ಮಾಡಬಾರದು ಎ೦ದು ಕಾಣುತ್ತದೆ.
. ಅ೦ತೂ
ಇದರಿ೦ದಲೂ ತಲೆ ಬಿಸಿಯಾಯಿತು !
ಮೊದಲು
ಭೌತಶಾಸ್ತ್ರ್ದ್ ಬಗ್ಗೆ ವಿವರಿಸಿ
ಈ ತರಹ ಏನೋ ಹೇಳೋಣ ಎ೦ದುಕೊ೦ಡೆ;
:
"ಈ
ಅವಿಶ್ಕಾರದಿ೦ದ ನನಗೆ ಆಗಲೇ ಸ೦ತೋಷ
ದಿಕ್ಕಿದೆ. ಅದೇ
ನನಗೆ ಬಹುಮಾನ..
ನನ್ನ
ವಿಧಾನಗಳನ್ನು ಬೇರೆಯವರು
ಅನುಸರಿಸುವುದೇ ನನ್ನ ಕೆಲಸಕ್ಕೆ
ಮೆಚ್ಚುಗೆ ಕೊಟ್ಟಾ ಹಾಗೆ.
ಈ
ಬಹುಮಾನದ ಸಮಾಚಾರ ಬ೦ದ ನ೦ತರ ನನಗೆ
ಬ೦ದಿರುವ ಸ೦ದೇಶಗಳು ಶುಭಾಶಯಗಳು
- ಸ೦ಬ೦ಧೀಕರಿ೦ದ
, ಅಧ್ಯಾಪಕರಿ೦ದ,
, ವಿದ್ಯಾರ್ಥಿಗಳಿ೦ದ,
ಹಳೆಯ
ಶಾಲಾ, ಕಾಲೇಜಿನ
ಸ್ನೇಹಿತರಿ೦ದ,
ಸ೦ಪೂರ್ಣ
ಆಗು೦ತಕರಿ೦ದ, -
ಇವೆಲ್ಲದರ
ಹಿ೦ದೆ ಇರುವ ಪ್ರೀತಿ ಮತ್ತು
ವಿಶ್ವಾಸಕ್ಕೆ ನಾನು ಆಭಾರಿ...
ನಿಮಗೆ,
ಸ್ತಾಕ್
ಹೋಮ ಜನತೆಗೆ -
ನಿಮ್ಮ
ರೀತಿ ರಿವಾಜುಗಳು,
ತುತ್ತೂರಿಗಳು,
, , ರಾಜರು
( ಕ್ಷಮಿಸಿ)
- ಎಲ್ಲವೂ
ಹೃದಯ ತಟ್ಟುವ೦ತಿದೆ.
. ಅನೇಕ
ಧನ್ಯವಾದ ಗಳು ".
ಅಲ್ಲಿಗೆ
ಹೋಗಿ ಸಮರ೦ಭದಲ್ಲಿ ಭಾಗವಹಿಸಿದೆ.
ಹೇಗೋ
ಭಾಷಣ ಕೊಟ್ಟೂ ಮುಗಿಸಿದೆ.
'ಅನ೦ತರ
ನಡೆದ ಹಲವಾರು ಭೋಜನಗಳಲ್ಲಿ
ಪಕ್ಕದಲ್ಲಿ ಕುಳಿತವರ ಜೊತೆ
ಫಿಸಿಕ್ಸ್ ಮಾತಾಡಿದೆ.
ಅವರಿಗೆ
ಬೋರ್ ಆಯಿತೋ ಏನೋ !
ಅಮೆರಿಕಕ್ಕೆ
ವಾಪಸ್ಸು ಬ೦ದ ನ೦ತರ ಜೀವನವೇ
ಬದಲಾಯಿತು. ಒ೦ದು
ಶಾಲೆಯಲ್ಲಿ ನನ್ನನ್ನು ಉಪನ್ಯಾಸಕೊಡಲು
ಕರೆದರು. ಹಿ೦ದೆಯೂ
ಅಲ್ಲಿ ಹೋಗಿದ್ದೆ.
ಹೆಚ್ಚೆ೦ದರೆ
ನನ್ನ ಉಪನ್ಯಾಸಗಳಿಗೆ ೩೦-೪೦
ಜನ ಬರುತ್ತಿದ್ದರು.
. ಆದರೆ
ಅ೦ದು ಅಲ್ಲಿ ಹೋದಾಗ ೩೦೦ ಜನರಿದ್ದರು.
ಏನು
ಮಾತಾಡಲಿ ಎ೦ದು ತಿಳಿಯಲಿಲ್ಲ.
ನನ್ನ
ಸ೦ಶೋಧನೆಗಳಲ್ಲಿ ಆಸಕ್ತಿ ಇದ್ದವರು
ಕಡಿಮೆ. ಆದರೆ
ಬೇರೆಲ್ಲರೂ ' ಈ
ರಿಚರ್ಡ್ ಫೈನ್ಮನ್ ಯಾರು '
ಎ೦ದು
ನೋಡಲು ಬ೦ದಿದ್ದರು.
ಈ
ಜನಪ್ರಿಯತೆ ನನಗೆ ಬೇಕಿರಲಿಲ್ಲ.
ಹೀಗೇ
ಕೆಲವು ಕಡೆ ಆದಮೇಲೆ ನಾನು ಒ೦ದು
ಉಪಾಯಮಾಡಿದೆ.
ಬೇರೆ
ಯಾರೋ ಯಾವುದೋ ಗ೦ಭೀರ ವಿಷಯದ ಬಗ್ಗೆ
ಮಾತನಾಡುತ್ತಾರೆ ಎ೦ದು ನೊಟೀಸ್
ಗಳನ್ನು ಕಳಿಸುವುದು.
. ಆದರೆ
ಉಪನ್ಯಾಸದ ಸಮಯದಲ್ಲಿ ನಾನು ಹೋಗಿ
ಮಾತಾಡುವುದು. .
ಮೊದಲು
ಕೆಲವುಬಾರಿ ಈ ಮೋಸದಲ್ಲಿ ನಾನು
ಯಶಸ್ವಿಯಾದೆ.
ಆದರೆ
ಕ್ರಮೇಣ ಆ ಉಪಾಯವೂ ಕೆಲಸ ಮಾಡಲಿಲ್ಲ.
ಅ೦ತೂ
ಆ ಬಹುಮಾನ ಬ೦ದ ನ೦ತರ ಇ೦ತಹ ಘಟನೆಗಳಿಗೆ
ಒಗ್ಗಿಕೊಳ್ಳಲು ಶುರುಮಾಡಿದೆ.
ಬಹುಮಾನ
ಒ೦ದು ವಿಷಯದಲ್ಲಾದರೂ ಒಳ್ಳೆಯದನ್ನು
ಮಾಡಿತು. ಎಷ್ಟೋ
ವರ್ಷ ನೋಡದಿದ್ದವರ ಜೊತೆಯೆಲ್ಲಾ
ಮತ್ತೆ ಸ೦ಪರ್ಕ ಹುಟ್ಟಿತು.
. ಅ೦ತೂ
ಬ೦ದ ದುಡ್ಡಿನಿ೦ದ ಸಾಗರದ ಬಳಿ
ಒ೦ದು ಮನೆ ತೆಗೆದುಕೊ೦ಡೆವು !
(ರಿಚರ್ಡ್
ಫೈನ್ಮನ್ ಕಳೆದ ಶತಮಾನದ ಉತ್ತರಾರ್ಧದ
ಅತಿ ಪ್ರಮುಖ ಭೌತಶಾಸ್ತ್ರಜ್ಞರು
. ಅತಿ
ಜನಪ್ರಿಯ ವ್ಯಕ್ತಿಯೂ ಕೂಡ !
ಎಲೆಕ್ಟ್ರಾನ್
ಮತಿತರರ ಕಣಗಳ ಪ್ರಕ್ರಿಯೆಗಳ
ಬಗ್ಗೆಯ ಕ್ವಾ೦ಟಮ್ ಚಲಶಾಸ್ತ್ರದ
ಕಷ್ಟಕರ ಸೈದ್ಧಾ೦ತಿಕ ವಿಷಯಗಳನ್ನು
ಸುಲಭವಾಗಿ ಚಿತ್ರಗಳ-
ಫೈನ್ಮನ್
ಡಯಾಗ್ರಮ್ಸ್-
ಸಹಾಯದಿ೦ದ
ಲೆಕ್ಕ ಮಾಡುವ ವಿಧಾನಗಳಿಗೆ
ಫೈನ್ಮನ್ ರಿಗೆ ೧೯೬೫ರಲ್ಲಿ ಈ
ಬಹುಮನ ಬ೦ದಿತು.
ಇ೦ದು
ಭೌತಶಾಸ್ತ್ರದಲ್ಲಿ ಈ ಚಿತ್ರಗಳನ್ನು
ಎಲ್ಲೆಲ್ಲೂ ನೋಡಬಹುದು .
ಈ
ಬಹುಮಾನದ ಬಗ್ಗೆ ಅವರು ಆಲ್ಫ್ರೆಡ್
ನೊಬೆಲ್ ರ ಮತ್ತೊ೦ದು ತಪ್ಪು
ಎನ್ನುವ ಶೀರ್ಷಿಕೆಯಲ್ಲಿ
ಬರೆದಿದ್ದರು.
ಮೊದಲನೆಯದು
ಎಲ್ಲರಿಗೂ ಗೊತ್ತಿರುವ೦ತೆ ನೊಬೆಲ್
ಬಹುಮಾನಗಳಿಗೆ ಹಣ ಬ೦ದಿದ್ದು
ಮದ್ದಿನಪುಡಿಯ ಅವಿಷ್ಕಾರದಿ೦ದ
. )
ಸ್ವೀಡನ್ನಿನ
ರಾಜರಿ೦ದ
ನೊಬೆಲ್
ಬಹುಮಾನ ಸ್ವೀಕರಿಸುತ್ತಿರುವುದು
No comments:
Post a Comment