Friday, November 23, 2012

ಶುಕ್ರ ಸ೦ಕ್ರಮಣ - ಪಾಲಹಳ್ಳಿ ವಿಶ್ವನಾಥ್ Palahalli Vishwanath


-->
ಈ ಲೇಖನ - ಶುಕ್ರ್ ಸ೦ಕ್ರಮಣ- ವಿಜಯವಾಣಿ  ೩ನೆ ಜೂನ್ ೨೦೧೨ ರ೦ದು ಪ್ರಕಟವಾಗಿದ್ದಿತು



ಶುಕ್ರ ಸ೦ಕ್ರಮಣ
(ಸೂರ್ಯನ ಮು೦ದೆ ಶುಕ್ರನ ' ಮಾರ್ಚ್ ಪಾಸ್ಟ್ ')
ಪಾಲಹಳ್ಳಿ (ಪಿ.ಆರ್.)ವಿಶ್ವನಾಥ್

(ನಮ್ಮ ಜೀವನದ ಮುಖ್ಯ ಘಟನೆಗಳು ಯಾವುವು ಎ೦ದಾಗ ವೈಯುಕ್ತಿಕ ವಿಷಯಗಳನ್ನು ಬಿಟ್ಟರೆ ನಮಗೆ ತಕ್ಷಣ ಹೊಳೆಯುವುದು ದೇಶಕ್ಕೆ ಒಳ್ಳೆಯದೋ, ಕೆಟ್ಟದ್ದೋ ಆದ ದಿನಗಳು. . ಆದರೆ ಅಷ್ಟೇ ಮುಖ್ಯ ಜೀವನದಲ್ಲಿ ಒಮ್ಮೆ ಮಾತ್ರ ನೋಡಲು ಸಿಗುವ ಖಗೋಳದ ವಿದ್ಯಮಾನಗಳು ಕೂಡ ! ೧೯೮೬ರಲ್ಲಿ ಹ್ಯಾಲೀ ಧೂಮಕೇತು ಬ೦ದಿದ್ದಿತು; ಮತ್ತೆ ಬರುವುದು ೨೦೬೨ರಲ್ಲಿ ! ಕೆಲವೇ ದಿನಗಳಲ್ಲಿ ಮತ್ತೊ೦ದು ಅದ್ಭುತ ಖಗೋಳ ವಿದ್ಯಮಾನ ನಡೆಯಲಿದೆ. ನಮ್ಮ ದಿನಚರಿಯಲ್ಲಿ ಬರೆದುಕೊಳ್ಳುವಷ್ಟು ಮುಖ್ಯ ! ಅದೇ ೨೦೧೨ರ ಜೂನ್ ೬ರ೦ದು ಬೆಳಗಿನ ಜಾವದಲ್ಲಿ ( -೧೦) ನಡೆಯಲಿರುವ ಶುಕ್ರ ಸ೦ಕ್ರಮಣ ! ಮು೦ದೆ ೧೨೦ ವರ್ಷಗಳ ತನಕ ಇದು ನೊಡಲು ಸಿಗುವುದಿಲ್ಲ. . ಆದರೆ ಅ೦ದು ಸೂರ್ಯನನ್ನು ಬರಿ ಕಣ್ಣುಗಳಿ೦ದ ನೊಡಬೇಡಿ; ವಿಶೇಷ ಕನ್ನಡಕಗಳನ್ನು ಉಪಯೋಗಿಸಿ ಅಥವಾ ಪರದೆಯ ಮೇಲೆ ಸೂರ್ಯನ ಬಿ೦ಬವನ್ನು ನೋಡಿ )

ರಾತ್ರಿಯ ಆಕಾಶದಲ್ಲಿ ಚ೦ದ್ರನನ್ನು ಬಿಟ್ಟರೆ ಶುಕ್ರನೇ ಅತಿ ಪ್ರಕಾಶಮಾನವಾದ ಆಕಾಶಕಾಯ . ಈ ಗ್ರಹ ಕೆಲವು ಬಾರಿ ಉಷೆಯಲ್ಲಿ, ಕೆಲವು ಬಾರಿ ಸ೦ಜೆ ಯಲ್ಲಿ ಕಾಣಿಸುತ್ತದೆ.. ಆದ್ದರಿ೦ದ ಗ್ರೀಕರು ಇವುಗಳಿಗೆ ಎರಡು ಬೇರೆ ಬೇರೆ ಹೆಸರಿಟ್ಟಿದ್ದರು. ಆದರೆ ಅವರ ಮಹಾ ಗಣಿತಜ್ಞ ಪೈಥಾಗೊರಾಸ್ ಇದನ್ನು ಒ೦ದೇ ಎ೦ದು ಗುರುತಿಸಿದನ೦ತೆ. ಆದರೆ ಮಧ್ಯ ಅಮೆರಿಕದ ಮಾಯಾ ಜನಾ೦ಗ ಇದನ್ನು ಮೊದಲೇ ತಿಳಿದಿದ್ದು ಸ್ವಾರಸ್ಯಕರ ವಿಷಯ.
ಭೂಮಿಗಿ೦ತ ಸ್ವಲ್ಪ ಮಾತ್ರ ಕಡಿಮೆ ದ್ರವ್ಯರಾಶಿ ಮತ್ತು ಕಡಿಮೆ ಗಾತ್ರವೂ ಇರುವ ಈ ಗ್ರಹ ದ ವಾತಾವರಣದಲ್ಲಿ ಹೆಚ್ಚು ಇ೦ಗಾಲಾಮ್ಲವಿದ್ದಿರದಿದ್ದರೆ ಇದೂ ವಾಸಯೋಗ್ಯವಾಗುತ್ತಿತ್ತೋ ಏನೋ !
ಗ್ರಹಗಳೆಲ್ಲವೂ ಸೂರ್ಯನನ್ನು ಸುತ್ತುತ್ತವೆ ಎ೦ದು ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ಪ್ರತಿಪಾದಿಸಿದನು. ಸೂರ್ಯನಿ೦ದ ಬುಧ ಅತಿ ಹತ್ತಿರ; ಅನ೦ತರ ಶುಕ್ರ ಮತ್ತು ಭೂಮಿ. ; ಸೂರ್ಯನ ಹತ್ತಿರವೇ ಇರುವುದರಿ೦ದ ಇವೆರಡೂ‌ ಸ೦ಜೆ ಅಥವಾ ಉಷೆಯಲ್ಲಿ ಮಾತ್ರಕಾಣಿಸಿಕೊಳ್ಳುತ್ತವೆ. . ಬುಧ ಶುಕ್ರ ಗ್ರಹಗಳ ಕಕ್ಷೆ ಭೂಮಿಯ ಕಕ್ಷೆಯೊಳಗೆ. ಆದ್ದರಿ೦ದ ಒ೦ದೊ೦ದು ಬಾರಿ ಶುಕ್ರ ಗ್ರಹ ಭೂಮಿಗೂ ಸೂರ್ಯನಿಗೂ ಮಧ್ಯೆ ಬರುತ್ತದೆ. ; ಹಾಗೆ ಸೂರ್ಯ, , ಶುಕ್ರ ಮತ್ತು ಭೂಮಿ ಒ೦ದೇ ನೇರದಲ್ಲಿ ಇರುವಾಗ ಅದು ಸ೦ಕ್ರಮಣವೆನ್ನಿಸಿಕೊಳ್ಳುತ್ತದೆ.. ಇದು ಒ೦ದು ರೀತಿಯಲ್ಲಿ ಗ್ರಹಣವೇ ! ಅದರೆ ಶುಕ್ರ ಬಹಳ ದೂರದಲ್ಲಿರುವುದರಿ೦ದ ಅದು ಸೂರ್ಯನ ಮು೦ದೆ ಒ೦ದು ಕಪ್ಪು ಚುಕ್ಕೆಯಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ.; ಅ೦ದರೆ ಚ೦ದ್ರನ೦ತೆ ಕತ್ತಲೆಯನ್ನೇನೂ ಉ೦ಟುಮಾಡುವವುದಿಲ್ಲ. .. . ಆ ಚುಕ್ಕೆ ನಿಧಾನವಾಗಿ ಸೂರ್ಯನ ಮು೦ದೆ ಹಾಯ್ದು ಹೋಗುತ್ತದೆ. ; ಸೂರ್ಯನ ಬಿ೦ಬವನ್ನು ಪೂರ್ತಿ ಹಾದು ಹೋಗಲು ಸುಮಾರು ೬ ಗ೦ಟೆಗಳನ್ನು ತೆಗೆದುಕೊಳ್ಳುತ್ತದೆ. .
ಸುಮಾರು ೧೧೦-೧೩೦ ವರ್ಷಗಳಿಗೊಮ್ಮೆ ಜೋಡಿ ಸ೦ಕ್ರಮಣಗಳು ನಡೆಯತ್ತವೆ. ಒ೦ದು ಸ೦ಕ್ರಮಣ ನಡೆದನ೦ತರ ಮತ್ತೊ೦ದು ೮ ವರ್ಷಗಳಲ್ಲೇ ಕಾಣಬರುತ್ತದೆ... ೨೦೦೪ರ ಜೂನ್ ನಲ್ಲಿ ಒ೦ದು ನಡೆದಿದ್ದಿತು. ಈಗ ಮತ್ತೆ ಈ ವರ್ಷದ ಜೂನ್ ನಲ್ಲಿ ನಡೆಯುತ್ತದೆ. ಕೆಲವು ಬಾರಿ ಈ ಸ೦ಕ್ರಮಣಗಳು ಡಿಸೆ೦ಬರಿನಲ್ಲಿಯೂ ನಡೆಯುತ್ತವೆ.. ಹಿ೦ದೆ ದಾಖಲೆಯಾದ ಸ೦ಕ್ರಮಣಗಳು ಈ ರೀತಿ ಇವೆ: ೧೬೩೧(೧೬೩೯), ೧೭೬೧ (೧೭೬೯), ೧೮೭೪(೧೮೮೨), , ೨೦೦೪(೨೦೧೨)
ಈ ಸ೦ಕ್ರಮಣವನ್ನು ೧೦೩೨ರಲ್ಲಿ ಪರ್ಶಿಯದ ಒಬ್ಬ ಖಗೋಳಜ್ಞ ವೀಕ್ಷಿಸಿದ್ದ ಎ೦ದೂ ಮತ್ತು ಅದರಿ೦ದ ಶುಕ್ರ ಸೂರ್ಯನಿಗೆ ಭೂಮಿಗಿ೦ತ ಹತ್ತಿರವಿದೆ ಎ೦ದು ತೋರಿಸಿದ ಎ೦ಬ ವರದಿಗಳಿವೆ ೧೬೨೭ರಲ್ಲಿ ಗ್ರಹಗಳ ಕಕ್ಷೆಗಳ ಬಗ್ಗೆ ತನ್ನ ನಿಯಮಗಳನ್ನು ಪ್ರತಿಪಾದಿಸಿದ ಮಹಾ ಖಗೋಳಜ್ಞ ಯೊಹಾನಸ್ ಕೆಪ್ಲರ್ ಈ ಸ೦ಕ್ರಮಣ ೧೬೩೧ರಲ್ಲಿ ಆಗುತ್ತದೆ ಎ೦ದು ಭವಿಷ್ಯ ಹೇಳಿದ್ದನು , ಯೂರೋಪಿನಲ್ಲಿ ಅದು ಹೆಚ್ಚು ಹೊತ್ತು ಕಾಣಿಸಿಕೊಳ್ಳಲಿಲ್ಲವಾದರೂ ಇಟಲಿಯ ಗಾಸೆ೦ಡಿ ಇದನ್ನು ವೀಕ್ಷಿಸಿದನು. ಮತ್ತೆ ೧೬೩೯ರಲ್ಲಿ ಇ೦ಗ್ಲೆ೦ಡಿನ ಜೇಮ್ಸ್ ಹ್ಯಾರೋಕ್ ಎ೦ಬ ಯುವಕ ತನ್ನ ಸ್ನೇಹಿತನಿಗೆ ಇದನ್ನು ತೋರಿಸಿದ ದಾಖಲೆಯೂ ಇದೆ.
ಎಡ್ಮ೦ಡ್ ಹ್ಯಾಲೀ ಭೂಮಿಯ ಬೇರೆ ಬೇರೆ ಸ್ಥಳಗಳಿ೦ದ ಈ ಸ೦ಕ್ರಮಣವನ್ನು ವೀಕ್ಷಿಸಿದರೆ ಭೂಮಿ ಮತ್ತು ಸೂರ್ಯರ ದೂರವನ್ನು ಅಳೆಯಬಹುದು ಎ೦ದು ೧೭೧೬ರಲ್ಲಿ ಲೆಕ್ಕ ಮಾಡಿದ್ದನು ; ೧೭೬೧ ಮತ್ತು ೧೭೬೯ರಲ್ಲಿ ಈ ಸ೦ಕ್ರಮಣಗಳು ನಡೆಯುತ್ತವೆ ಎ೦ಬ ಅರಿವೂ ಅವನಿಗೆ ಇದ್ದಿತು. ತಾನೇ ಬದುಕಿರದಿದ್ದರೂ ಬೇರೆ ಯಾರಾದರೂ ಈ ಪ್ರಯೋಗವನ್ನು ನಡೆಸಬೇಕೆ೦ದು ಅವನು ಇಷ್ಟಪಟ್ಟಿದ್ದನು.
ಈಗ ಮ೦ಗಳಕ್ಕೆ ರಾಕೆಟ್ಗಳು ಹೋಗುವ೦ತೆ, ೧೮ನೆಯ ಶತಮಾನದಲ್ಲಿ ತಿ೦ಗಳುಗಟ್ಟಲೆ ಸಮುದ್ರ ಪ್ರಯಾಣಮಾಡಿ ಈ ಸ೦ಕ್ರಮಣವನ್ನು ವೀಕ್ಷಿಸುವ ಪ್ರಯತ್ನಗಳು ಪ್ರಾರ೦ಭವಾದವು. . ೧೭೬೧ ಮತ್ತು ೧೭೬೯ರಲ್ಲಿ ಭಾರತದಲ್ಲಿ ಇದು ಚೆನ್ನಾಗಿ ಕಾಣಿಸುತ್ತದೆ ಎ೦ದು ಜೆ೦ಟಿಲ್ ಎ೦ಬ ಫ್ರಾನ್ಸಿನ ಸ೦ಶೋಧಕನೊಬ್ಬ ಇಲ್ಲಿಗೆ ಬ೦ದಿದ್ದ. ಮತ್ತೂ ಪ್ರಖ್ಯಾತವಾದಾದ್ದು ಜೇಮ್ಸ್ ಕುಕ್ ನ ಪ್ರಯಾಣ . ನ್ಯೂಜಿಲ್ಯಾ೦ಡ್ ಅನ್ನು ಕ೦ಡುಹಿಡಿದ ಈತ ತಾಹಿತಿ ದ್ವೀಪದಲ್ಲಿ ಈ ಸ೦ಕ್ರಮಣ ಚೆನ್ನಾಗಿ ಕಾಣಿಸುತ್ತದೆ೦ದು ೧೭೬೮ರಲ್ಲಿ ಇ೦ಗ್ಲೆ೦ಡಿನ ಸರ್ಕಾರದ ಯೋಜನೆಯ೦ತೆ ಒ೦ದು ಹಡಗಿನಲ್ಲಿ ಹೊರಟ. ಎ೦ಟು ತಿ೦ಗಳ ಪ್ರಯಾಸದ ಪ್ರಯಾನದ ನ೦ತರ ತಾಹಿತಿ ದ್ವೀಪವನ್ನು ಸೇರಿ ಸ೦ಕ್ರಮಣವನ್ನು ವೀಕ್ಷಿಸಿ ದಾಖಲೆಗಳನ್ನು ತಯಾರಿಸಿದ.ಪಪ೦ಚದ ಬೇರೆ ೭ ಜಗಗಳಿ೦ದಲೂ ಇದರ ಬಗ್ಗೆ ಮಾಹಿತಿಗಳು ಬ೦ದವು; . ೧೮೭೪ ಮತ್ತು ೧೮೮೨ರಲ್ಲಿ ಮತ್ತೆ ಭೂಮಿಯ ಅನೇಕ ಭಾಗಗಳಿ೦ದ ವೀಕ್ಷಣೆಗಳು ನಡೆದು ಭೂಮಿ - ಸೂರ್ಯನ ಅ೦ತರ ಕ೦ದುಹಿಡಿಯಲ್ಪಟ್ಟಿತು. ಇ೦ದು ಬೇರೆಯ ವಿಧಾನಗಳಿ೦ದ ಈ ಸ೦ಖ್ಯೆ ಅತಿ ನಿಖರವಾಗಿ ತಿಳಿದಿದೆ; ಅದರ ಮೌಲ್ಯ ೧೪೯.೬ ಮಿಲಿಯ ಕಿ,ಮೀ ಗಳು. ಸ೦ಕ್ರಮಣದಿ೦ದ ೧೮೮೪ರಲ್ಲಿ ಪಡೆದ ಮೌಲ್ಯ ಇದಕ್ಕಿ೦ತ ಸ್ವಲ್ಪ ಮಾತ್ರ (< %) ತಪ್ಪಿದ್ದಿತು.
ಭಾರತದಲ್ಲೂ ಸ೦ಕ್ರಮಣದ ವೀಕ್ಷಣೆಯಲ್ಲಿ ಅನೇಕರಿಗೆ ಆಸಕ್ತಿ ಇದ್ದಿತು. ೧೮೮೪ರಲ್ಲಿ ನರಸಿ೦ಗ್ ರಾವ್ ಎ೦ಬ ಭಾರತೀಯ ಖಗೊಳಜ್ಞರು ಆ೦ಧ್ರದಲ್ಲಿನ ತಮ್ಮದೇ ವೇಧಶಾಲೆಯಿ೦ದ ವೀಕ್ಷಿಸಿದ ದಾಖಲೆಗಳಿವೆ. ಅದಲ್ಲದೆ ಹಳೆಯ ಖಗೋಳ ಸಿದ್ಧಾ೦ತಗಳ ಅರಿವಿದ್ದ ಸಾಮ೦ತ ಚ೦ದ್ರಶೇಖರ ಎ೦ಬುವವರು ಒರಿಸ್ಸನಲ್ಲಿ ಇದನ್ನು ವೀಕ್ಷಿಸಿದರು.. ಸುಮಾರು ಅದೇ ಸಮಯದಲ್ಲಿ ಮದ್ರಾಸ್ ವೇಧಶಾಲೆಯ ರಘುನಾಥಾಚಾರಿ ಎ೦ಬುವವರು ಈ ವಿಷಯಗಳ ಬಗ್ಗೆ ೩ ಪುಸ್ತಕಗಳನ್ನು ಹೊರತ೦ದರು.
ಇ೦ದು ಹೊಸ ಗ್ರಹಗಳನ್ನು ಕ೦ಡುಹಿಡಿಯಲು ಈ ಸ೦ಕ್ರಮಣದ ವಿಧಾನವನ್ನೇಉಪಯೋಗಿಸಿಕೊಳ್ಳುತ್ತಿದ್ದಾರೆ.. ಗ್ರಹ ನಕ್ಷತ್ರದ ಮು೦ದೆ ಬ೦ದಾಗ ಅದರ ಬೆಳಕು ಸ್ವಲ್ಪವಾದರೂ ಕಡಿಮೆಯಾಗುತ್ತದೆ. .ಆದ್ದರಿ೦ದ ಒ೦ದು ನಕ್ಷತ್ರದ ಬೆಳಕನ್ನು ಸತತವಾಗಿ ಗಮನಿಸುತ್ತಿದ್ದರೆ, ಅದರ ಬೆಳಕು ನಿಯತಕಾಲಿಕವಾಗಿ ಕಡಿಮೆಯಾದರೆ ಗ್ರಹವೊ೦ದು ಅದನ್ನು ಸುತ್ತುತ್ತದೆ ಎ೦ದು ಹೇಳಬಹುದು

ಶುಕ್ರನ ಇತರ ಸ್ವಾರಸ್ಯಗಳು : ಮಾಯಾ ಸ೦ಖ್ಯೆ ೫೮೪ !

ಕಳೆದ ಶತಮಾನದ ಖ್ಯಾತ ಭೌತ ವಿಜ್ಞಾನಿ ಫೈನ್ಮನ್ ರು ಮೆಕ್ಸಿಕೋಗೆ ಹನಿಮೂನ್ ಗೆ ಹೋದಾಗ ಅವರನ್ನು ಒ೦ದು ಸ೦ಖ್ಯೆ ಆಶ್ಚರ್ಯಗೊಳಿಸಿತು . ಅವರ ಹೆ೦ಡತಿಗೆ ಮೆಕ್ಸಿಕೋವಿನ ಮಾಯಾ ಸ೦ಸ್ಕೃತಿಯ ಹುಚ್ಚು !ªÀiÁAiÀiÁ £ÁUÀjÃPÀvÉ «±ÀézÀ M0zÀÄ ¥ÀæªÀÄÄR ºÀ¼ÉAiÀÄ ¸À0¸ÀÌöÈw. CvÀÄå£ÀßvÀ PÀ¯É, ªÁ¸ÀÄÛ²®à«zÀÄÝ CªÀgÀÄ PÀnÖ©lÄÖºÉÆÃzÀ C£ÉÃPÀ ಪಿರಮಿಡ್ ಆಕೃತಿಯ zÉêÁ®AiÀÄUÀ¼ÀÄ E0zÀÆ d£ÀgÀ£ÀÄß DPÀ¶ð¸ÀÄwÛzÉ. ಅ೦ತೂ ಪೈನ್ ಮನ್ ಮತ್ತು ಪತ್ನಿ ಆ ಪಿರಮಿಡ್ ಹತ್ತಾಯಿತು; ಈ ಪಿರಮಿಡ್ ಇಳಿದಾಯಿತು. ಅವರನ್ನು ಹೆ೦ಡತಿ ಸಾಕಷ್ಟು ವಸ್ತುಸ೦ಗ್ರಹಾಲಯಗಳಿಗೆ ಎಳೆದುಕೊ೦ದುಹೋಗಿ ಹೋಗಿ ಸುಸ್ತುಮಾಡಿಸಿದ್ದರು. . ಮು೦ದಿನ ದಿನ ಹೆ೦ಡತಿ ಕರೆದಾಗ ಇಲ್ಲ, ನೀನು ಹೋಗಿಬಾ ಎ೦ದರ೦ತೆ.
ಕಾರಣ ? ಒ೦ದು ವಸ್ತುಸ೦ಗ್ರಹಾಲಯದಲ್ಲಿ ಫೈನ್ಮನ್ರಿಗೆ ಒ೦ದು ಹಳೆಯ ಪುಸ್ತಕದ ಪ್ರತಿ ಸಿಕ್ಕಿತ್ತು . ಅದನ್ನು ತೆಗೆದು ನೋಡಿದರೆ ಬರೇ ಚುಕ್ಕೆಗಳು ಅಥವಾ ಗೆರೆಗಳು . ಇದು ಮಾಯಾ ಜನಾ೦ಗದವರ ಚೈತ್ರಿಕ ಭಾಷೆಯಿರಬೇಕು ಎ೦ದು ತಕ್ಷಣ ಅರಿತರು. ಒಗಟುಗಳು ಎ೦ದರೆ ಅವರಿಗೆ ಮಹಾ ಇಷ್ಟ. . ನೊಬೆಲ್ ಮಹುಮಾನ ಗಳಿಸಿದ ಚುರುಕು ಬುದ್ಧಿ ಬೇರೆ ! ಒ೦ದೆರದು ದಿನಗಳಲ್ಲೇ ಅವರು ಇದರ ಒಗಟನ್ನು ಬಿಡಿಸಿದ್ದರು. ಆದರೆ ಅಲ್ಲಿ ಒ೦ದು ಸ೦ಖ್ಯೆ ಎಲ್ಲೆಲ್ಲು ತಾ೦ಡವವಾಡುತ್ತಿರುವುದನ್ನು ನೋಡಿ ಅವರಿಗೆ ವಿಸ್ಮಯವಾಯಿತು. ಅದು ೫೮೪ !ಕೆಲವು ಕಡೆ ಅದನ್ನು ೨೩೬,೯೦,೨೫೦,೮ ಎ೦ದು ವಿ೦ಗಡಣೆ ಮಾಡಿದ್ದರು. ಮತ್ತೊ೦ದು ಕಡೆ ಇನ್ನೊ೦ದು ಸ೦ಖ್ಯೆ - ೨೯೨೦ ! ಇದನ್ನು ೫ ರಿ೦ದ ಭಾಗಿಸಿದರೆ ೫೮೪ ! ಮತ್ತೊ೦ದೂ ಅವರ ಗಮನಕ್ಕೆ ಬ೦ದಿತು . ಇದನ್ನು ೮ರಿ೦ದ ಭಾಗಿಸಿದರೆ ಬರುವುದು ೩೬೫ ! ನಮ್ಮ ಸೌರಮಾನ ಪದ್ಧತಿಯಲ್ಲಿನ ವರ್ಷದಲ್ಲಿನ ದಿನಗಳ ಸ೦ಖ್ಯೆ ! ಅ೦ದರೆ ಈ ೫೮೪ ಕ್ಕೂ ಖಗೋಳವಿಜ್ಞಾನಕ್ಕೂ ಏನೋ ಸ೦ಬ೦ಧವಿದೆಯೆ೦ದು ಅರಿತರು !
ಫೈನ್ಮನ್ ಅವರು ನೋಡಿದ ಪುಸ್ತಕ ೧೨ನೆಯ ಶತಮಾನದ ಮಾಯಾ ಸ೦ಸ್ಕೃತಿಯ ' ಡ್ರೆಸ್ಡೆನ್ ಕೊಡೆಕ್ಷ್' ಪುಸ್ತಕದ ಪ್ರತಿ .ಈ ಸ೦ಸ್ಕೃತಿ ¥ÁæAiÀıÀ : Qæ.¥ÀÇ. 2600gÀ°è ¥ÁægÀ0¨sÀªÁV E0¢£À ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ºÀgÀrPÉÆ0rzÀÄÝ ಕ್ರಿ.ಶ ೧೨-೧೩ನೆಯ ಶತಮಾನದಲ್ಲಿ ಕ್ಷೀಣಗೊ೦ಡಿತು. Ä. ಕಾಲವನ್ನು ಅಳೆಯಲು ಅನೇಕ ಜನಾ೦ಗಗಳು ಚ೦ದ್ರಸೂರ್ಯ. ರನ್ನು ಆರಿಸಿಕೊ೦ಡಿದ್ದರೆ, . ಮಾಯಾ ಸ೦ಸ್ಕೃತಿ ಶುಕ್ರನನ್ನು ಆರಿಸಿಕೊ೦ಡಿದ್ದಿತು. ೫೮೪ ದಿನಗಳಿಗೊಮ್ಮೆ ಶುಕ್ರ ಬೆಳಿಗ್ಗೆಯ ಆಕಾಶದಲ್ಲಿ ಸೂರ್ಯನ ಜೊತೆ ಹುಟ್ಟುವುದನ್ನು ಅವರು ( ಹೀಲಿಯಾಕಲ್ ರೈಸಿ೦ಗ್) ಗಮನಿಸಿ ಆ ಅವಧಿಯನ್ನು ವರ್ಷವೆ೦ದು ಕರೆದರು ! ಶುಕ್ರನ ಚಲವಲನೆಗಳ ಬಗ್ಗೆ ಮಾಯಾ ಜನ ಬಹಳ ನಿಖರವಾದ ಮಾಹಿತಿಯನ್ನು ಇಟ್ಟಿದ್ದರು. ಬಹಳ ಜಾಗರೂಕತೆಯಿ೦ದ ಮಳೆಮೋಡಗಳ ಮಧ್ಯೆಯೂ ಅನೇಕ ಪೀಳಿಗೆಗಳು ಶುಕ್ರನ ಚಲನವಲನೆಗಳನ್ನು ಬರೆದಿಟ್ಟಿ೦ದಲೇ ಅವರ ಸಾವಿರಾರು ವರ್ಷಗಳ ಶುಕ್ರನ ಪ೦ಚಾ೦ಗ ಸಾಧ್ಯವಾಯಿತು. ಶುಕ್ರ ಗ್ರಹ ೨೬೩ ದಿನಗಳು ಉಷೆಯಲ್ಲಿ ಕಾಣಿಸಿಕೊ೦ಡು, ಅನ೦ತರ ೫೦ ದಿನಗಳು ಮಾಯ ಅನ೦ತರ ಪಶ್ಚಿಮದಲ್ಲಿ ಪಸ್ಚಿಮದಲ್ಲಿ ಸೂರ್ಯಾಸ್ತವಾದ ಮೇಲೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ೨೬೩ ದಿನಗಳು ಆಕಾಶದಲ್ಲಿದ್ದು ಅನ೦ತರ ಮತ್ತೆ ೮ ದಿನ ಕಾಣೆಯಾಗುತ್ತದೆ.. ಅದರಿ೦ದ ೨೬೩+೫೦+೨೬೩+= ೫೮೪ ! ( ಡ್ರೆಸ್ಡೆನ್ ಪುಸ್ತಕದಲ್ಲಿ ಈ ಸ೦ಖ್ಯೆಗಳು ಸ್ವಲ್ಪ ಬೇರೆಯಾಗಿರುವುದಕ್ಕೆ ಕಾರಣ ಇನ್ನೂ ತಿಳಿದಿಲ್ಲ; . ಆದರೂ ಒಟ್ಟಿನಲ್ಲಿ ಅದೂ ೫೮೪ !
ಮಾಯಾ ಸ೦ಸ್ಕೃತಿ ಈ ಗ್ರಹವನ್ನು ಎಷ್ಟು ವೀಕ್ಷಿಸಿದ್ದರೂ ಇದರ ಸ೦ಕ್ರಮಣ ಅವರ ಗಮನಕ್ಕೆ ಬ೦ದಿಲ್ಲವೆ೦ದು ಕಾಣುತ್ತದೆ.; ಅಥವಾ ಯಾವುದೋ ಹೆದರಿಕೆಗಳಿ೦ದ ಅದರ ಬಗ್ಗೆ ಪ್ರಚಾರಿಸದಿರಬಹುದು !

ಚಿತ್ರ ೧ : ಸೂರ್ಯೊದಯ ಸಮಯದಲ್ಲಿ ಶುಕ್ರ ಗ್ರಹ - ಉಷತಾರೆ

..ಸೂರ್ಯನ ಸುತ್ತ ಶುಕ್ರನ ಪಥ ; ಎಡದಲ್ಲಿದ್ದಾಗ ಬೆಳಗ್ಗೆಯ ತಾರೆ, ಬಲದಲ್ಲಿದ್ದಾಗ ಸ೦ಜೆಯ ತಾರೆ.; ಸೂರ್ಯ , ಭೂಮಿ ಮತ್ತು ಶುಕ್ರ ಒ೦ದೇ ನೇರದಲ್ಲಿದ್ದಾಗ ಸ೦ಕ್ರಮಣ













ಚಿತ್ರ ೩ - ಶುಕ್ರ ಸೂರ್ಯನ ಮು೦ದೆ ಬಿ೦ದು ರೂಪದಲ್ಲಿ ಹಾಯ್ದು ಹೋಗುತ್ತಿರುವುದು

















ಚಿತ್ರ ೪ : ಮಾಯಾ ಸ೦ಸ್ಕೃತಿಯಲ್ಲಿ ' ಶುಕ್ರ'



 







ಚಿತ್ರ ೩ - ಶುಕ್ರ ಸೂರ್ಯನ ಮು೦ದೆ ಬಿ೦ದು ರೂಪದಲ್ಲಿ ಹಾಯ್ದು ಹೋಗುತ್ತಿರುವುದು

















ಚಿತ್ರ ೪ : ಮಾಯಾ ಸ೦ಸ್ಕೃತಿಯಲ್ಲಿ ' ಶುಕ್ರ'


No comments:

Post a Comment