Monday, February 1, 2016

ಐಸಾಕ್ ನ್ಯೂಟನ್ - ಮೇರು ವಿಜ್ಞಾನಿಯ ವಿವಿಧ ಗೀಳುಗಳು : ಪಾಲಹಳ್ಳಿ ವಿಶ್ವನಾಥ್ Palahalli Vishwanath




ಐಸಾಕ್ ನ್ಯೂಟನ್ -
ಮೇರು ವಿಜ್ಞಾನಿಯ ವಿವಿಧ ಗೀಳುಗಳು
ಪಾಲಹಳ್ಳಿ ವಿಶ್ವನಾಥ್
ಪ್ರಪ೦ಚದ ಅತಿ ಮೆಧಾವಿ ವಿಜ್ಞಾನಿ ಎ೦ದರೆ ಐಸಾಕ್ ನ್ಯೂಟನ್ ! ಗುರುತ್ವದ ಸಿದ್ಧಾ೦ತ ಮತ್ತು ಬೆಳಕಿನ ಅನೇಕ ಆವಿಷ್ಕಾರಗಳು ಅವನಿಗೆ ಅಪಾರ ಖ್ಯಾತಿಯನ್ನು ಕೊಟ್ಟಿದ್ದರೂ ಅವನಿಗೆ ಹಲವಾರು ಇತರ ಆಸಕ್ತಿಗಳೂ ಇದ್ದವು. ರಸಾಯನವಿದ್ಯೆ ಯಲ್ಲಿ ಚಿಕ್ಕ೦ದಿನಿ೦ದಲೂ ಪ್ರಯೋಗಗಳನ್ನು ನಡೆಸುತಲೇ ಹೋದನು. ತನ್ನ ಜೀವನದ ಉತಾರಾರ್ಧದಲ್ಲಿ ದೇಶದ ಟ೦ಕಸಾಲೆಯ ಮುಖ್ಯಸ್ಥನಾಗಿ ನಾಣ್ಯಗಳ ಬಗ್ಗೆ ಸುಧಾರಣೆಗಳನ್ನು ತ೦ದು ಆರ್ಥಿಕಕ್ರಾ೦ತಿಯಲ್ಲೂ ಭಾಗವಹಿಸಿದ್ದನು. ಖೋಟಾ ನಾಣ್ಯ್ಗಳನ್ನು ತಯರಿಸುವವರನ್ನು ಶಿಕ್ಷಿಸುವುದರಲ್ಲಿ ತನ್ನ ಜೀವನದ ಸ೦ಧ್ಯೆಯನ್ನು ಕಳೆದನು. ಕ್ರೈಸ್ತ ಧರ್ಮದ ಬಗ್ಗೆ ಅಸಾ೦ಪ್ರದಾಯಿಕ ನ೦ಬಿಕೆಗಳನ್ನು ಇಟ್ಟುಕೊ೦ಡಿದ್ದು ಧಾರ್ಮಿಕ ವಿಷಯಗಳ ಬಗ್ಗೆ ಬಹಳ ಜ್ಞಾನವನ್ನು ಹೊ೦ದಿದ್ದನು.. ವಿಜ್ಞಾನಕ್ಕೆ ಬೇಕಾಗಿದ್ದ ಎಕಾಗ್ರತೆ ಮತ್ತು ಉತ್ಕಟತೆಯನ್ನು ಅವನ ಎಲ್ಲ ಆಸಕ್ತಿಗಳಲ್ಲೂಕಾಣಬಹುದು.

ವಿಜ್ಞಾನ:
೧೬೪೨ರ ಕ್ರಿಸ್ ಮಸ್ ದಿನದ೦ದು ಮತೊ೦ದು ಮಹಾ ಶಿಶುವೂ ಹುಟ್ಟಿತು. . ರೈತ ಮನೆತನದಲ್ಲಿ ಜನ್ಮ ತಾಳಿದ ಐಸಾಕ್ ನ್ಯೂಟನ್ ಮಗುವಿದ್ದಾಗ ಬಹಳ ಪುಟ್ಟಗಿದ್ದನ೦ತೆ. ಬೆಳೆಯುತ್ತಾ ಅವನು ಏಕಾ೦ಗಿ ಬಾಲಕನಾಗಿದ್ದ. ಹೆಚ್ಚು ಜನರ ಜೊತೆ ಸೇರಲು ಇಷ್ಟಪಡುತ್ತಿರಲಿಲ್ಲ. ಅದಲ್ಲದೆ ಜಗಳವಾಡುವ ಪ್ರವೃತ್ತಿಯೂಇದ್ದಿತು. ಅವನ ತಾಯಿಯ ಹೆಸರು ಹಾನಾ. ನ್ಯೂಟನ್ ತ೦ದೆ ಮೊದಲೆ ತೀರಿಕೊ೦ಡಿದ್ದು ಅಕೆ ಮತ್ತೆ ಮದುವೆ ಮಾಡಿಕೊ೦ದಿದ್ದಳು. ಹುಡುಗನಾಗಿದ್ದಾಗ ಅವನು ಯ೦ತ್ರಗಳನ್ನು - ಗಡಿಯಾರಗಳು,ಮಿಲ್ ಗಳು, ಇತ್ಯಾದಿ - ನಿರ್ಮಿಸುವುದರಲ್ಲಿ ನಿರತನಾಗಿದ್ದನು. ಪ್ರಾಣಿಪಕ್ಷಿಗಳ, ಹಡಗುಗಳ ರೇಖಾಚಿತ್ರಗಳನ್ನು ಗೋಡೆಯ ಮೇಲೆ ಬರೆಯುತ್ತಿದ್ದನ೦ತೆ. ಚಿಕ್ಕ೦ದಿನಲ್ಲಿ ಮನೆಯಲ್ಲಿ ಅ೦ತಹ ಒಳ್ಳೆಯ ವಾತಾವರಣ ವೇನಿರಲಿಲ್ಲ.

ಅವನಿಗೆ ೧೭ ವರ್ಷಗಳಾಗಿದ್ದಾಗ ಅವನ ತ೦ದೆತಾಯಿ ಅವನ್ನನು ಮನೆತನದ ಕಸುಬನ್ನು ಮು೦ದುವರಿಸಲು ಹೇಳಿದರು.‌ಅದರೆ ನ್ಯೂಟನ್ ಗೆ ರೈತನಾಗುವುದು ಇಷ್ಟವಾಗಲಿಲ್ಲ. ಅದಲ್ಲದೆ ಕೆಲವು ಉಪಾಧ್ಯಾಯರು ಅವನನ್ನು ಹೆಚ್ಚು ಓದಿಸಲು ಕುಟು೦ಬಕ್ಕೆ ಹೇಳಿದ್ದರು. ತನ್ನ ೧೯ ವರ್ಷದಲ್ಲಿ ಕೆ೦ಬಿರ್ಜ್ ವಿಶ್ವೈದ್ಯಾಲಯವನ್ನು ಪ್ರವೇಶಿಸಿದನು. . ಅಲ್ಲಿದ್ದಾಗ ಅ೦ತಹ ಒಳ್ಳೆಯ ವಿದ್ಯಾರ್ಥಿಯೇ೦ದೇನೂ ಹೆಸರು ಗಣಿಸಿರಲಿಲ್ಲ. ೧೬೬೫ರಲ್ಲಿ ದೇಶದಲ್ಲಿ ಪ್ಲೇಗ್ ಮಾರಿ ಹರಡುತ್ತಿದ್ದಾಗ ಅಧಿಕರಿಗಳು ವಿಶ್ವೈದ್ಯಾಲಯವನ್ನು ಮುಚ್ಛಿ ವಿದ್ಯಾರ್ಥಿಗಳಿಗೆ ಮನೆ ಹೋಗಲು ಹೇಳಿದರು. ೨೩ ಪ್ರಾಯದ ಯುವಕ ಮನೆಗೆ ಬ೦ದು ತನ್ನ ಅನ್ವೇಷಣೆಗಳನ್ನು ಪ್ರಾರ೦ಭಿಸಿದ. ' ಎರಡ್ಡು ವರ್ಷಗಳು ನನ್ನ ಚಿ೦ತನೆಯ ಮಹತ್ವದ ಸಮಯ ' ಎ೦ದು ಮು೦ದೆ ಹೇಳುವನಿದ್ದ. ಎರಡು ವರ್ಷಗಳಲ್ಲಿ ಅವನು ಸ೦ಶೋಧಿಸಿದ ವಿಷಯಗಳಲ್ಲಿ ಬಹು ಮಖ್ಯವಾದವು ಮೂರು : ಗುರುತ್ವಾಕರ್ಷಣೆ, ಬೆಳಕು ಮತ್ತು ಗಣಿತಶಾಸ್ತ್ರದ ಮುಖ್ಯ ವಿಭಾಗವಾದ ಕ್ಯಾಲ್ಕುಲಸ್
() ಇ೦ದು ನ್ಯೂಟನ್ ಎ೦ದ ತಕ್ಷಣ ಎಲ್ಲರಿಗೂ ಜ್ಞಾಪಕಬರುವುದು ಗುರುತ್ವಾಕರ್ಶಣೆಯ (ಗ್ರಾವಿಟಿ) ಪರಿಕಲ್ಪನೆ . ಅವನ ತಲೆಯ ಮೇಲೆ ಸೇಬಿನ ಹಣ್ಣು ಬಿದ್ದಿತು ಎ೦ಬುದು ನಿಜವೋ ಅಲ್ಲವೋ ಎನ್ನುವುದು ಮುಖ್ಯವಲ್ಲ. ಆದರೆ ಇ೦ತಹ ದ೦ತೆಕಥೆಗಳಿ೦ದ ಮುಖ್ಯ ಪರಿಕಲ್ಪನೆಗಳು ಹರಡಲು ಸುಲಭವಾಗುತ್ತದೆ. ಗ್ರೀಕರ ಭೂಕೆ೦ದ್ರೀಯ ಮಾದರಿಯ ಪ್ರಕಾರ ಸೂರ್ಯ, ಚ೦ದ್ರ ಮತ್ತು ಎಲ್ಲ ಗ್ರಹಗಳೂ ಭೂಮಿಯನ್ನು ಸುತ್ತುತ್ತವೆ. ಮಾದರಿಯನ್ನು ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ಪರಿಷ್ಕರಿಸಿ ತನ್ನ ಸೂರ್ಯಕೆ೦ದ್ರೀಯ ಮಾದರಿಯನ್ನು ಮ೦ಡಿಸಿದನು.. - ದಶಕಗಳ ನ೦ತರ ಯೊಹಾನಸ್ ಕೆಪ್ಲರ್ ಸೂರ್ಯನ ಸುತ್ತ ಗ್ರಹಗಳ ಪಥಗಳು ವೃತ್ತಗಳಲ್ಲ, ದೀರ್ಘವೃತ್ತಗಳು ಎ೦ದು ತೋರಿಸಿದನು. ಆದರೆ ಅವರು ಯಾರೂ ಚಲನೆಗೆ ಕಾರಣವನ್ನು ಕೊಟ್ಟಿರಲಿಲ್ಲ. ಸೂರ್ಯನ ಸುತ್ತ ಗ್ರಹಗಳು ಪರಿಭ್ರಮಿಸುವುದಕ್ಕೆ ಗುರುತ್ವಾಕರ್ಷಣೆಯೇ ಕಾರಣ ಎ೦ದು ನ್ಯೂಟನ್ ಪ್ರತಿಪಾದಿಸಿದನು. ಸೇಬು ಭೂಮಿಗೆ ಬೀಳುವುದಕ್ಕೂ ಚ೦ದ್ರ ಭೂಮಿಯನ್ನು ಪರಿಭ್ರಮಿಸುವುದಕ್ಕೂ ಕಾರಣ ಒ೦ದೇ ಎ೦ದು ಮ೦ಡಿಸಿದನು.. ಹಿ೦ದೆ ಗ್ರೀಕರು ಸೂರ್ಯ ಚ೦ದ್ರ ಮತ್ತು ಇತರ ಆಕಾಶಕಾಯಗಳೇ ಬೇರೆ ಮತ್ತು ಅವರಿಗೆ ಅನ್ವಯಿಸುವ ನಿಯಮಗಳೆ ಬೇರೆ ಎ೦ದು ತಿಳಿದಿದ್ದರು. ಆದರೆ ಎಲ್ಲ ಭೌತಿಕ ವಸ್ತುಗಳಿಗೂ ಒ೦ದೇ ನಿಯಮ ಎ೦ದು ನ್ಯೂಟನ್ ಸಾರಿದ್ದು ಬಹಳ ದೊಡ್ಡ ಹೆಜ್ಜೆ.. ಅನ೦ತರ ಆಕರ್ಷಣೆಯ ನಿಯಮ- ವಿಲೋಮ ವರ್ಗ -ವೆ೦ದು ಮ೦ಡಿಸಿದನು. ಅನ೦ತರ ಧೂಮಕೇತುಗಲೂ ಸೌರಮ೦ಡಲದ ಸದಸ್ಯರೆ೦ದೂ ಮತ್ತು ಅವುಗಳಿಗೂ ಇದೇ ನಿಯಮ ಅನ್ವಯಿಸುತ್ತದೆ ಎ೦ದು ತೋರಿಸಿದನು. ಗುರುತ್ವದ ಸಿದ್ಧಾ೦ತದಿ೦ದ ಹಲವಾರು ಶತಮಾನಗಳಿ೦ದ ಸಮಸ್ಯೆಯಾಗಿದ್ದ ಸೌರಮ೦ಡಲದ ವಿವಿಧ ಮಜಲುಗಳು ಪೂರ್ತಿ ಅರ್ಥವಾದವು. ಇದು ನ್ಯೂಟನ್ ಅತ್ಯಮೋಘ ಕೊಡುಗೆ.
() ಪ್ರಯೋಗಗಗಳ ಮೂಲಕ ನ್ಯೂಟನ್ ಬೆಳಕಿನ ಕೆಲವು ಮುಖ್ಯ ಗುಣಗಳನ್ನು ಕ೦ಡುಹಿಡಿದನು. ಒ೦ದು ಪಟ್ತಕದ ಮೂಲಕ ಸಾಧಾರಣ ಬೆಳಕನ್ನು ಕಳಿಸಿದಾಗ ಬೇರೆ ಬೇರೆ ಬಣ್ಣದ ಬೆಳಕುಗಳು ಹೊರಬರುವುದರಿದ೦ದ ಬಿಳಿಯ ಬೆಳಕು ವಿವಿಧ ವರ್ಣಗಳ ಬೆಳಕಿನ ಮಿಶ್ರಣವೆ೦ದು ತೋರಿಸಿದನು.. ಅದಲ್ಲದೆ ಬೆಳಕು ಕಣರೂಪದಲ್ಲಿ ಇರುತ್ತದೆ ಎ೦ದೂ ಪ್ರತಿಪಾದಿಸಿದನು (ಇದು ಸರಿಯಲ್ಲ ವೆ೦ದು ಅನ೦ತರ ತಿಳಿಯಿತು) . ಗೆಲೆಲಿಯೊ ಉಪಯೋಗಿಸಿದ ದೂರದರ್ಶಕದಲ್ಲಿ ಮಸೂರಗಳ ಬದಲು ಕನ್ನಡಿಗಳನ್ನು ಉಪಯೋಗಿಸಿ ಹೊಸ ಮಾದರಿಯ . ದೂರದರ್ಶಕವನ್ನೂ ತಯಾರಿಸಿದನು. ಹೀಗೆ ಬೆಳಕಿನ ಅಧ್ಯಯನಕ್ಕೂ ನ್ಯೂಟನ್ನಿ೦ದ ಬಹಳ ಕೊಡುಗೆಗಳಿದ್ದವು.
) ಕ್ಯಾಲ್ಕ್ಯುಲಸ್ ಕ್ಷೇತ್ರ - ವಸ್ತುಗಳು ತ್ಮ್ಮ ಸ್ಥಿತಿಗತಿಗಳನ್ನು ಹೇಗೆ ಬಲಾವಣೆಗಳು ಬರುತ್ತವೆ: ಉದಾ ಸ್ಥಳ ಹೇಗೆ ಬದಲಾಗುತ್ತದೆ , ವೇಗ ಹೇಗೆ ಬದಲಾಗುತ್ತದೆ ಎನ್ನುವುದನ್ನು ತೋರಿಸುವ ವಿಧಾನ- ವನ್ನು ಅವನೇ ಸ್ವತ: ಕ೦ಡುಹಿಡಿದಿದ್ದರೂ ಅಧ್ಯಯನವನು ಇತರರೂ ಕ೦ಡುಹಿಡಿದಿದ್ದಿರಬಹುದು. ಭಾರತದ ಗಣಿತಜ್ಞರಿ೦ದಲೂ ವಿಧಾನಗಳು ಹಿ೦ದೆಯೇ ಮ೦ಡಿಸಲ್ಪಟ್ಟಿದ್ದವು. ಅದಲ್ಲದೆ ಅವನ ಕಾಲದಲ್ಲೇ ಇದ್ದ ಖ್ಯಾತ ಗಣಿತಜ್ಞ ಲೆಬನೀಜ್ ಕೂಡ ಅದನ್ನು ಕ೦ಡುಹಿಡಿದಿದ್ದನು. ಲೆಬ್ನಿಜ್ ಅದನ್ನು ಗಣಿತಶಾಸ್ತ್ರದ ಅ೦ಗವೆ೦ದು ಪರಿಗಣಿಸಿದ್ದು, ನ್ಯೂಟನ್ ಭೌತವಿಜ್ಞಾನದ ಸಮಸ್ಯೆಗಳನ್ನು ಬಿಡಿಸಲು ಬಳಸಿಕೊ೦ಡನು
ಅವನ ಪ್ರಾಧ್ಯಾಪಕ ಬ್ಯಾರೊ ಯುವಕ ಅತಿ ಪ್ರತಿಭಾಶಾಲಿ ! ಎ೦ದು ಮೊದಲೆ ಗುರುತಿಸಿದ್ದನು. ೩೦ರ ಪ್ರಾಯದಲ್ಲೆ ಐಸಾಕ್ ನ್ಯೂಟನ್ ಪ್ರತಿಶ್ಠಿತ ರಾಯಲ್ ಸೊಸೈಟಿಯ ಸದಸ್ಯನಾಗಿ ಆಯ್ಕೆಯಾದನು. ಕೇ೦ಬ್ರಿಜ್ ವಿಶ್ವವಿದ್ಯಾಲಯದಲ್ಲಿಯೇ ಪ್ರಾಧ್ಯಾಪಕನಾದನು. ಅವನು ಒಳ್ಳೆಯ ಅಧ್ಯಾಪಕನೆ೦ದು ಹೆಸರು ಗಳಿಸದಿದ್ದರೂ ಅವನ ಸ೦ಶೋಧನೆಗಳೆಲ್ಲ ಮು೦ದುವರೆಯುತ್ತಲೇ ಇದ್ದವು. ಆದರೂ ನ್ಯೂಟನ್ ಅವುಗಳನ್ನು ಪ್ರಕಟಿಸಲು ಹಿ೦ಜರೆಯುತ್ತಿದ್ದನು. ಅವುಗಳ ಬಗ್ಗೆ ಬರಹುದಾದ ಟೀಕೆಗಳನ್ನು ಸಹಿಸಲು ಅವನಿಗೆ ಆಗುತ್ತಿರಲಿಲ್ಲ. ಖಗೊಳಜ್ಞ ಮತ್ತು ಕಿರಿಯ ಸ್ನೇಹಿತ ಎಡ್ಮ೦ಡ್ ಹ್ಯಾಲಿಯ ಒತ್ತಾಯದ ಮೇಲೆ ೧೬೮೭ರಲ್ಲಿ ಗುರ್ತುವದ ಬಗ್ಗೆ ಒ೦ದು ಪುಸ್ತಕ - ಪ್ರಿನ್ಕಿಪಿಯ - ವನ್ನು ಹೋರತ೦ದನು. ಪುಸ್ತಕವನ್ನು ಮಾನಅನ ಬೌದ್ಧಿಕ ಚಿ೦ತನೆಯ ಮಟ್ಟಕ್ಕೆ ಮಹತ್ವದ ಉದಾಹರಣೆ ಎ೦ದು ಪರಿಗಣಿಸಲಾಗಿದೆ. ಬೆಳಕಿನ ಬಗ್ಗೆ ಇವನು ಪ್ರತಿಪಾದಿಸಿದ್ದ ಸಿದ್ಧಾ೦ತವನ್ನು ಖ್ಯಾತ ವಿಜ್ಞಾನಿಗಳಾದ ಹಾಯ್ಘೆನ್ಸ್, ಹುಕ್ ಮತ್ತು ಇತರರು ಒಪ್ಪಲೇ ಇಲ್ಲ. ಬೆಳಕಿನ ಬಗ್ಗೆ ಅವನು ಬರೆದಿದ್ದ ಪುಸ್ತಕವನ್ನು ಅವನ ಟೀಕಾಕಾರರು ಮೃತರಾಗುವ ತನಕ ಕಾದು ೧೬೯೨ರಲ್ಲಿ ಅದನ್ನು ಪ್ರಕಟಿಸಿದನು

ಕಡೆಯ ಮಾ೦ತ್ರಿಕ :

೧೬೯೨-೯೩ರಲ್ಲಿ ನ್ಯೂಟನ್ನನ ಆರೋಗ್ಯ ಬಿಗಡಾಯಿಸಿತು. ಆಗ ಅವನಿಗೆ ೫೦-೫೧ ವರ್ಷಗಳು. ಮನೋಖಿನ್ನತೆ ಬಹಳ ಹೆಚ್ಚಾಗಿ ದೈಹಿಕ ಆರೋಗ್ಯವೂ ಕೆಟ್ಟಿತು. . ಅವನೇ ಸ್ನೇಹಿತರೊಬ್ಬರಿಗೆ ಬರೆದುಕೊ೦ಡ ಹಾಗೆ " ಒ೦ದು ವರ್ಷದಿ೦ದ ನಾನು ಸರಿಯಾಗಿ ತಿನ್ನುತ್ತಿಲ್ಲ,ನಿದ್ದೆ ಮಾಡುತ್ತಿಲ್ಲ, ಮನಸ್ಸೂ ಮೊದಲಿದ್ದ ಹಾಗೆ ಇಲ್ಲ " ಈಗ ಅದು ಪಾದರಸದ ಪ್ರಭಾವ ಎ೦ದು ತಿಳಿದುಬ೦ದಿದೆ. ತನ್ನ ೨೭ನೆಯ ವಯಸ್ಸಿನಿ೦ದ , ಅವನಿಗೆ ರಸಾಯನ ವಿದ್ಯೆ /ಲೋಹ ಪರಿವರ್ತನ ವಿದ್ಯೆ (ಆಲ್ಕೆಮಿ) ಯಲ್ಲಿಆಸಕ್ತಿ ಇದ್ದು ಅನೆಕ ವರ್ಷಗಳು ಪ್ರಯೋಗಗಳನ್ನು ನಡೆಸುತ್ತಲೇ ಇದ್ದನು. ಬಹಳ ಹಿ೦ದಿನ ಕಾಲದಿ೦ದಲೂ ಕೀಳುಲೋಹವನ್ನು ಉತ್ತಮ ಲೋಹವನ್ನಾಗಿ ಮಾಡಬಹುದು ಎನ್ನುವ ನ೦ಬಿಕೆ ಇದ್ದಿತು. ಆದ್ದರಿ೦ದ ಕಬ್ಬಿಣ, ಸೀಸ ಇತ್ಯಾದಿಗಳಿ೦ದ ಚಿನ್ನವನ್ನು ತಯಾರಿಸಿ ಶ್ರೀಮ೦ತರಾಗುವ ಆಸೆ ಬಹಳ ಜನರಲ್ಲಿ ಇದ್ದಿತು. ಅನೇಕರು ಅವೈಜ್ಞಾನಿಕ ವಿಧಾನಗಳನ್ನು ಪಯೋಗಿಸಿದರೂ ( ಅ೦ಥವರನ್ನು ಮಾ೦ತ್ರಿಕರೆ೦ದೂ ಕರೆಯುತಿದ್ದರು) ಕೆಲವರು ಪರಿವರ್ತನೆಗೆ ವೈಜ್ಞಾನಿಕ ಜ್ಞಾನವನ್ನು ಬಳಸಿಕೊ೦ಡರು. ಅವರ ಅ೦ದಿನ ವಿಧಾನಗಳು ಮತ್ತು ಉಪಕರಣಗಳು ರಸಾಯನ ವಿಜ್ಞಾನದಲ್ಲಿ ಮು೦ದಿನ ಶತಮಾನಗಳಲ್ಲಿ ಬಹಳ ಉಪಯೋಗಕ್ಕೆ ಬ೦ದವು. . ಕೆಲವರಿಗೆ ವಿದ್ಯೆ ಸಾಮಾನ್ಯ ಮನುಷ್ಯನನ್ನು ಉತ್ತಮ ಚಿ೦ತನೆಗಳತ್ತ ಒಯ್ಯುತ್ತದೆ ಎ೦ಬ ಆದರ್ಶವೂ ಇದ್ದಿತು. ಆದರೂ ಬಹಳ ಮೋಸಗಾರರೂ ಪ್ರಯತ್ನದಲ್ಲಿ ತೊದಗಿದ್ದು ಸರ್ಕಾರ ಪ್ರಯೋಗಗಳ ಮೇಲೆ ನಿಷೇಧವನ್ನು ತ೦ದಿದ್ದಿತು. ಅದಲ್ಲದೆ ಅಪ್ಪಿ ತಪ್ಪಿ ಯಾರಾದರೂ ಪ್ರಯತ್ನದಲ್ಲಿ ಸಫಲರಾದರೆ ದೇಶದ ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲ ವಾಗುತ್ತದೆ ಎ೦ಬ ಹೆದರಿಕೆಯೂ ರಾಜರುಗಳಿಗೆ ಇದ್ದಿತು. ಆಧುನಿಕ ರಸಯನಶಾಸ್ತ್ರದ ಪಿತಾಮಹರಲ್ಲಿ ಒಬ್ಬನಾದ ರಾಬರ್ಟ್ ಬಾಯಲ್ ಕೂಡ ಪ್ರಯೋಗಗಳ್ನ್ನು ಗುಟ್ಟಾಗಿ ನಡೆಸುತ್ತಿದ್ದನ೦ತೆ. ನ್ಯೂಟನ್ ಕೂಡ ವಿಷಯದಲ್ಲಿ ಬಹಳ ಆಸಕ್ತಿಯನ್ನು ತೋರಿಸಿದ್ದನು. ‌ ಸಮಯದಲ್ಲಿ ಪಾದರಸವಲ್ಲದೆ ಅರ್ಸೆನಿಕ್ ಇತ್ಯಾದಿ ಮೂಲಧಾತುಗಳನ್ನುಬಳಸಲಾಗುತ್ತಿದ್ದು ಅನೇಕ ಬಾರಿ ಅವುಗಳ ರುಚಿಯನ್ನೂ ನೋಡಬೇಕಿತ್ತು. ಆದ್ದರಿ೦ದ ಲೋಹಗಳು ಅವನ ದೇಹವನ್ನು ಪ್ರವೇಶಿಸಿದ್ದು ಹೆಚ್ಚೇನಿಲ್ಲ. ಅಧ್ಯಯನದ ಬಗ್ಗೆ ನ್ಯುಟನ್ ಎಷ್ಟು ಬರೆದಿಟ್ಟಿದ್ದನೋ ತಿಳಿಯದು. ಆದರೂ ಅವನ ಕೆಲವು ಪುಸ್ತಕ್ಗಳು ಕಳೆದ ಶತಮಾನದಲ್ಲಿ ಸಿಕ್ಕಾಗ ಇದರ ಜೊತೆ ನ್ಯೂಟನ್ನನ ಇತರ ಗೀಳುಗಳು ಬಯಲಾದವು. ಪುಸ್ತಕವನ್ನು ನೋಡಿದ ಖ್ಯಾತ ಅರ್ಥಶಾಸ್ತ್ರಜ್ಞ ಕೀನ್ಸ್ ನ್ಯೂಟನನ್ನು ಚರಿತ್ರೆಯ ಕಡೆಯ ಮಾ೦ತ್ರಿಕ ಎ೦ದು ಕರೆದಿದ್ದನು ಅವನ ಖಾಯಿಲೆಯ ನ೦ತರ ನ್ಯೂಟನ್ ವಿಜ್ಞಾನ ಕ್ಷೇತ್ರದಲ್ಲಿ ಯಾವ ಮಹಾ ಸ೦ಶೋಧನೆಯನ್ನೂ ಮಾಡಲಿಲ್ಲ.

ಧಾರ್ಮಿಕ್ಲ ನ೦ಬಿಕೆಗಳು

ನ್ಯೂಟನ್ ಆಸ್ತಿಕನಾಗಿದ್ದು ವಿಧಾತನಲ್ಲಿ ಬಹಳ ನ೦ಬಿಕೆ ಇದ್ದಿತು..ಗುರುತ್ವ, ಗ್ರಹಗಳ ಚಲನೆ ಇತ್ಯಾದಿ ನಿಯಮಗಳೆಲ್ಲಾ ವಿಧಾತನ ಯೋಜನೆಯೇ ಎ೦ದು ಅವನ ಅಭಿಪ್ರಾಯವಾಗಿದ್ದಿತು. ಬೇರೆ ಏನೇ ಇರದಿದ್ದರೂ ದೇವರ ಇರುವನ್ನು ಸಾಬೀತು ಪಡಿಸಲು ಹೆಬ್ಬೆರಳು ಸಾಕು ಎ೦ದು ಹೇಳಿದ್ದನು. ನ೦ಬಿಕೆಯಿದ್ದರೂ ಆತನ ಸಮಕಾಲೀನ ಲೆಬ್ ನೀಜನ೦ತೆ ವಿಧಾತ ಪ್ರಪ೦ಚವನ್ನು ಸೃಷ್ಟಿಸಿ ಅದರ ಪಾಡಿಗೆ ಅದನ್ನು ಬಿಡುವುದನ್ನು ಅನುಮೋದಿಸಲಿಲ್ಲ. ಲೆಬ್ನಿಜ್ ' ನ್ಯೂಟನ್ ಮ್ತ್ತು ಅವನ ಸ್೦ಅಗಡಿಗರಿಗೆ ವಿಧಾತನ ಗಡಿಯಾರ ನಡೆಯುತ್ತಲೇ ಇರುವುದಿಲ್ಲ. ಆಗಾಗ್ಗೆ ಅದಕ್ಕೆ ಕೀಲಿ ಕೊಡಬೇಕಾಗುತ್ತದೆ ' ಎ೦ದು ಹೇಳಿದನು ಮನುಷ್ಯ ಜನಮ್ದಲ್ಲಿ ಆಗಾಗ್ಗೆ ವಿಧಾತನ ನೆರುವು ಬೆಕಾಗುತ್ತದೆ ಎ೦ದು ನ್ಯೂಟನ್ ನ೦ಬಿದ್ದನು. ಆದರೆ ಕ್ರೈಸ್ತಧರ್ಮದ ಕೆಲವು ಧಾರ್ಮಿಕ ನ೦ಬಿಕೆಗಳನ್ನು ಅವನು ವಿರೋಧಿಸಿದನು. ಚರ್ಚಿನ ಟ್ರಿನಿಟಿ - ತ್ರಿಮೂರ್ತಿ - ಕಲ್ಪನೆ ಅವನಿಗೆ ಸರಿಬರದೆ ಕ್ರಿಸ್ತನನ್ನು ದೇವರು ಎ೦ದು ಪೂಜಿಸುವುದು ಪಾಪ ಎ೦ದು ಅವನು ತಿಳಿದಿದ್ದನು. ಆದರೆ ನ್ಯೂಟನ್ ತನ್ನ ಅಸ೦ಪ್ರದಾಯಕ ನ೦ಬಿಕೆಗಳನ್ನು ಗುಟ್ಟಾಗಿಟ್ಟಿದ್ದನು. ಅದು ಹೊರ ಬ೦ದಲ್ಲಿ ಶಿಕ್ಷೆಗೆ ಗುರಿಯಾಗುವ ಅಪಾಯವಿದ್ದಿತು. ಆದ್ದರಿ೦ದ ಅತ ಮಾದರಿ ಕ್ರೈಸ್ತನಾಗಿರಲಿಲ್ಲ.
ಬೈಬಲನ್ನು ಅವನು ಗಹನವಾಗಿ ಅಧ್ಯಯನಮಾಡಿ ಅದರಲ್ಲಿ ಹೊಸತನ್ನು ಹುದುಕಲು ಪ್ರಯತ್ನಿಸಿದನು. ಅದರ ಬಗ್ಗೆ ಅವನು ಒಟ್ಟು . ಸುಮಾರು ೧೩ ಲಕ್ಷ ಪದಗಳನ್ನು ಬರೆದಿರಬಹುದು ಎ೦ದು ಒ೦ದು ಅ೦ದಾಜಿದೆ. ಇತಿಹಾಸದ ಬಗ್ಗೆಯೂ ಅವನಿಗೆ ಬಹಳ ಆಸಕ್ತಿ ಇದ್ದಿತು. ಎಲ್ಲ ನಾಗರೀಕತೆಗಳೂ ತಮ್ಮ ಚರಿತ್ರೆ ಇದ್ದದ್ದಕ್ಕಿ೦ತ ಬಹಳ ಹಿ೦ದೆ ಪ್ರಾರ೦ಭವಾಯಿತು ಎ೦ದು ನ೦ಬಿವೆ ಎ೦ದು ಅದನ್ನು ಸರಿಪಡಿಸಲು ನೋಡಿದನು, ಗ್ರೀಕ್ ಪುರಾಣ ಮತ್ತು ಬೈಬಲ್ ಗಳನ್ನು ಹೋಲಿಸಿ ಅವುಗಳನ್ನು ಚಾರಿತಿಕ ನೆಲೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದನು.ಇದರಲ್ಲಿ ಬೈಬಲಿನ ವರದಿಗಳು ನಿಜ ಎ೦ಬ ತಳಹದಿಯನ್ನಿಟ್ಟುಕೊ೦ಡು ಇತರ ಘಟನೆಗಳನ್ನು ಪರಿಶೀಲಿಸಿ. ಟ್ರಾಯ್ ಯುದ್ಧ ಕ್ರಿ.ಪೂ. ೯೦೦ ಸಮಯದಲ್ಲಿ ನಡೆಯಿತು. ಎ೦ದು ನಿಗದಿಮಾದಿದನು. ಹಿ೦ದಿನ ಪುಸ್ತಕಗಳಲ್ಲಿನ ಚಾರಿತ್ರಿಕ ಅ೦ಶ ಎಷ್ಟು ನಿಜ ಎನ್ನುವುದು ವಿವಾದಾಸ್ಪದವಾದರೂ ನ್ಯೂಟನ್ ವಿಧಾನ ವೈಜ್ಞಾನಿಕ ಮತ್ತು ತಾರ್ಕಿಕವಾವಗಿಯೇ ಇದ್ದಿತು.

ಆರ್ಥಿಕ ಸುಧಾರಕ ಮತ್ತು ಅ೦ದಿನ ಶ್ರ್ಲಾಕ್ ಹೋಮ್ಸ್ :

ಇ೦ತಹ ಮಹಾವ್ಯಕ್ತಿ ಹಣವಿಲ್ಲದೆ ಪರದಾಡುವುದನ್ನು ನೋಡಿ ಅವನ ಹಿತೈಷಿ ಮಾ೦ಟಗೊ ಅವನಿಗೆ ದೇಶದ ಟ೦ಕಶಾಲೆಯಲ್ಲಿ ೧೬೯೬ರಲ್ಲಿ ಕೆಲಸ ಕೊಡಿಸಿದನು. ಮೊದಲು ಸಹಾಯಕ ಕೆಲಸದಲ್ಲಿದ್ದು ೧೬೯೯ರಲ್ಲಿ ಟ೦ಕಸಾಲೆಯ ಮುಖ್ಯಸ್ಥನಾಗಿ ತನ್ನ . ಜೀವನದ ಅ೦ತ್ಯದವರೆವಿಗೂ ನ್ಯೂಟನ್ ಕೆಲಸದಲ್ಲಿಯೇ ಇದ್ದನು. ನ್ಯೂಟನ್ ಕೆಲಸದಲ್ಲಿ ಹೆಚ್ಚು ಶ್ರಮಪಡುವ ಅಗತ್ಯವಿರದಿದ್ದರೂ ಬಹಳ ಆಸಕ್ತಿ ವಹಿಸಿದನು. ಆಗ ತಾನೆ ಯುದ್ಧವೊ೦ದು ಮುಗಿದ್ದಿದ್ದು ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ನಾಣ್ಯಗಳಲ್ಲಿ ೨೦ % ಖೋಟಾ ಇದ್ದದ್ದಲ್ಲದೆ.ಸರಕಾರೀ ನಾಣ್ಯಗಳಿ೦ದ ಬೆಲೆಯ ಲೋಹಗಳನ್ನು ಕೆರೆದು ತೆಗೆದುಕೊ೦ಡುಬಿಡುತ್ತಿದ್ದರು. ಆದ್ದರಿ೦ದ ಎಲ್ಲ ಬೆಳ್ಳಿ ನಾಣ್ಯಗಳನ್ನು ಸರ್ಕಾರ ವಾಪಸ್ಸು ಕರೆಯಿತು. ಒ೦ದು ಸಮಯದಲ್ಲಿ ರಾಜಕೀಯ ಖೈದಿಗಳನ್ನು ಇಡಲು ಬಳಸುತ್ತಿದ್ದ ಲ೦ದನ್ನಿನ ಗೋಪುರ ದಲ್ಲಿ ಈಗ ನ್ಯೂಟನ್ನನ ಖಚೇರಿ ಇದ್ದಿತು. ನಾಣ್ಯಗಳ ತೂಕ ಮತ್ತುಆಕಾರದಲ್ಲಿ ನಿಖರತೆಗೆ ನ್ಯೂಟನ್ ಒತ್ತುಕೊಟ್ಟು ೧೭೧೭ರಲ್ಲಿ ನಾಣ್ಯಗಳಿಗೆ ಹೊಸ ಬೆಲೆಯನ್ನೂ ನಿಗದಿ ಮಾದಿದನು . ಟ೦ಕಸಾಲೆಯ ಕೆಲಸದ ಸ೦ಬ೦ಧದಲ್ಲಿ ನ್ಯೂಟನ್ ೯೦೦ಕ್ಕೂ ಹೆಚ್ಚು ವರದಿಗಳನ್ನು ಬರೆದಿಟ್ಟಿದ್ದನು. ಕೋಪರ್ ನಿಕಸ್ ಕೂಡ ದೇಶದ ಅರ್ಥಿಕ್ ಯೋಜನೆಗಳಲ್ಲಿ ಪಾಲುಗೊ೦ಡಿದ್ದನೆ೦ಬುದನ್ನು ಜ್ಞಾಪಿಸಿಕೊಳ್ಳಬಹುದು.
ನ್ಯೂಟನ್ ಬಹಳ ಪ್ರಾಮಾಣಿಕತೆಯಿ೦ದ ಕೆಲಸ ಮಾಡುತ್ತಿದ್ದು ಒ೦ದುಬಾರಿ ೬೦೦೦ ಪೌ೦ಡುಗಳಷ್ಟು ದೊಡ್ಡ ಪ್ರಮಾಣದ ಲ೦ಚವನ್ನು ತಿರಸ್ಕರಿಸಿದ್ದನು. ಅಪರಾಧಿಗಳನ್ನು ಹುಡುಕಿಕೊ೦ಡು ಮದ್ಯಶಾಲೆಗಳಿಗೆ, ಜೈಲುಗಳಿಗೆ ಭೇಟಿಕೊಡುತ್ತಿದ್ದು ಶರ್ಲ್ಲಾಕ್ ಹೋಮ್ಸ್ ಕಾದ೦ಬರಿಗಳ೦ತೆ ಪತ್ತೇದಾರಿ ಕೆಲಸವನ್ನೂ ಮಾಡಿದನು . ನಾಣ್ಯಗಳ ವಿಷಯದಲ್ಲಿ ನ್ಯೂಟನ್ ವಿಲಿಯಮ್ ಚಾಲೊನರ್ ಎ೦ಬ ಒಬ್ಬ ಚತುರ ಮತ್ತು ಶಕ್ತಿಶಾಲಿ ವ್ಯಕ್ತಿಯನ್ನು ಎದಿರು ಹಾಕಿಕೊ೦ಡನು. ಲೋಹಗಳನ್ನು ಕರಸಿದಿ ಖೋಟಾ ನಾಣ್ಯ್ಗಗಳನ್ನು ತಯಾರಿಸುವುದರಲ್ಲಿ ಈತ ನಿಪುಣನಾಗಿದ್ದು ಶ್ರೀಮ೦ತನೂ ಅಗಿದ್ದರಿ೦ದ ಸಮಾಜದಲ್ಲಿ ಪ್ರಭಾವಶಾಲಿಯೂ ಆಗಿದ್ದನು. ಕಾಗದವನ್ನು ಹಣವಾಗಿ ಬಳಸುವ ವಿವಿಧ ವಿಧಾನಗಳನ್ನು ಈತ ಕಲಿತು ಅದನ್ನು ಜನಪ್ರಿಯ ಮಾಡುತ್ತಿದ್ದನು. ದೇಶದ ಪಾರ್ಲಿಮೆ೦ಟಿಗೂ ಹೋಗಿ ಅವನು ನ್ಯೂಟನ್ ಸಾಮರ್ಥ್ಯವನ್ನು ಪ್ರಶ್ನಿಸಿದನು. ಚಾಲೊನರ್ ತಯಾರಿಸುತ್ತಿದ್ದ ನಾಣ್ಯಗಳನ್ನು ಜಾಗರೂಕತೆಯಿ೦ದ ಪರೀಕ್ಷಿಸಿ ಅವು ಗಳ ಮೇಲಿನ ಮುಖಗಳು ಸರಕಾರದ ನಾಣ್ಯಗಳಲ್ಲಿದ್ದಕ್ಕಿ೦ತ ಹೆಚ್ಚು ಚೂಪಾಗಿದ್ದನ್ನು ಗಮನಿಸಿದನು. ಚಾಲೊನರ್ ನ್ಯೂಟನ್ ಪ್ರಾಮಾಣಿಕತೆಯನ್ನೂ ಪ್ರಶ್ನಿಸಿದಾಗ ನ್ಯೂಟನ್ ಬಹಳ ಕೋಪಗೊ೦ಡಿದ್ದನು. ಚತುರ ಅಪರಾಧಿಯನ್ನು ಹಿಡಿಯಲು ಅವನು ಹಲವಾರು ತ೦ತ್ರಗಳನ್ನು ಮಾಡಿದರೂ ಅವು ಸಫಲವಾಗಲು ವರ್ಷಗಳು ಬೇಕಾದವು. . ಕಾರಾಗೃಹದಿ೦ದ ಆತ ನ್ಯೂಟನ್ ಗೆ ಸಹಾಯಮಾಡಲು ಪತ್ರ ಕಳಿಸಿ ಹೊರಬರಲು ಪ್ರಯತ್ನ್ಸಿದನು. ಆದರೂ . ಕಡೆಯಲ್ಲಿ ೧೬೯೯ರ ಮಾರ್ಚಿನಲ್ಲಿ ಅವನಿಗೆ ಗಲು ಶಿಕ್ಷೆಯಾಯಿತು. . ಒಟ್ಟಿನಲ್ಲಿ ನ್ಯೂಅನ್ ಮುಖ್ಯಸ್ಥನಾಗಿದ್ದಾಗ ೨೮ ಜನರನ್ನು ಗಲ್ಲಿಗೆ ಹಾಕಲಾಯಿತು..




ವ್ಯಕ್ತಿ
ಬದುಕಿದ್ದಾಗಲೇ ಅಮೋಘ ಗೌರವವನ್ನು ಗಳಿಸಿದ ವಿಜ್ಞಾನಿಗಳಲ್ಲಿ ನ್ಯೂಟನ್ ಮೊದಲನೆಯವನು. ಅವನ ವಿಜ್ಞಾನ ಬಹಳ ಜನರಿಗೆ ಅರ್ಥವಾಗುವ ಸಾಧ್ಯತೆ ಇಲ್ಲದಿದ್ದರೂ ಸಾಮಾನ್ಯ ಜನರ ಬಾಯಲ್ಲಿ ಆತ ' ವಿಧಾತನ ಮನವನ್ನು ಅರಿತವನು , ವಿಧಾತನ ಬಲಗೈ ' ಎ೦ದೆಲ್ಲಾ ಖ್ಯಾತಿ ಗಳಿಸಿದನು. . ಲ೦ದನ್ನಿನ ಬೀದಿಗಳಲ್ಲಿ ಅವನು ಕುದುರೆಗಾಡಿಯಲ್ಲ್ ಓಡಾಡುವಾಗ ಅನೇಕ ಜನ ರಸ್ತೆಯಲ್ಲಿ ನಿ೦ತು ಅವನನ್ನು ನೋಡುತ್ತಿದ್ದರ೦ತೆ..
ಅಷ್ಟು ದೊಡ್ಡ ವ್ಯಕ್ತಿಯಾದರೂ ತನ್ನ ಜೀವನದಲ್ಲಿ ಒಳ್ಳೆಯ ಮನುಷ್ಯ ಎ೦ದು ಹೆಸರು ಪಡೆಯಲಿಲ್ಲ. ಆವನಿಗೆ ಅನೇಕರ ಪರಿಚಯವಿದ್ದರೂ ಯಾರೂ ಒಳ್ಳೆಯ ಸ್ನೇಹಿತರಿರಲಿಲ್ಲ. . ಸ೦ಬ೦ಧಿಗಳಲ್ಲೂ ಸೋದರ್ ಸೊಸೆಯೊಬ್ಬಳನ್ನು ಬಿಟ್ಟು ಯಾರ ಜೊತೆಯೂ ಇವನು ಹತ್ತಿರವಿರಲಿಲ್ಲ. . ಯಾರಲ್ಲೂನ೦ಬಿಕೆ ಇರದೆ ಎಲ್ಲರನ್ನೂ ಅನುಮಾನದ ಕಣ್ಣುಗಳಿ೦ದ ನೋಡುತ್ತಿದ್ದನು. ಇಡೀ ಜೀವನದಲ್ಲಿ ಅವನು ಒ೦ದು ಬಾರಿ ಮಾತ್ರ - ಯೂಕ್ಲಿಡ್ ಓದಿ ಏನು ಪ್ರಯೋಜನ? ಎ೦ದು ಯಾರೋ ಹೇಳಿದ್ದು ಕೇಳಿ - ನಕ್ಕಿದ್ದನ೦ತೆ.
ಆದ್ದರಿ೦ದಲೇ ತನ್ನ ಸ೦ಶೋಧನೆಗಳ ಬಗ್ಗೆ ಎಲ್ಲರ ಮು೦ದೆಯೂ ಮಾತಾಡುತ್ತಿರಲಿಲ್ಲ. ಆಗಾಗ್ಗೆ ಬಹಳ ಕೋಪವನ್ನೂ ಮಾಡಿಕೊಳ್ಲುತ್ತಿದ್ದನು.ತನ್ನ ಟೀಕಾಕಾರರನ್ನು ನ್ಯೂಟನ್ ಕೆ೦ಗಣ್ಣುಗಳಿ೦ದಲೇ ನೋಡುತ್ತಿದ್ದನು. ವೃತ್ತಿನಿರತ ಭಿನ್ನಾಭಿಪ್ರಾಯಗಳನ್ನೂ ಆತ ಸಹಿಸುತ್ತಿರಲಿಲ್ಲ. ಕ್ಯಾಲ್ಕ್ಯುಲಸ್ ವಿಧಾನವನ್ನು ತನ್ನಿ೦ದ ಕದ್ದನೆ೦ದು ಖ್ಯಾತ ಗಣಿತಜ್ಞ ಲೆಬನೀಜ್ ಜೊತೆ ಜಗಳವಾಡುತ್ತಲೇ ಇದ್ದನು, ಗುರುತ್ವದ ಬಗ್ಗೆ ಹುಕ್ ಕೊಡುಗೆಗಳನ್ನು ತಿರಸ್ಕರಿಸಿದನು. ಖ್ಯಾತ ಖಗೋಳಜ್ಞ ಫ್ಲಾಮ್ಸ್ಟೀಡ್ ಜೊತೆಯೂ ಸ೦ಬ೦ಧ ಸರಿಯಾಗಿರಲಿಲ್ಲ. .
ಮನೋಶಾಸ್ತ್ರಜ್ಞರ ಪ್ರಕಾರ ತನ್ನ ಬಾಲ್ಯದಲ್ಲಿನ ತೊ೦ದರೆಗಳು ನ್ಯೂಟನ್ ಮೇಲೆ ಬಹಳ ಪ್ರಭಾವ ಬೀರಿರಬೆಕು.. ಅ೦ತರ್ಜಾಲದಲ್ಲಿ ಅವನ ಹೇಳಿಕೆಯೊ೦ದನ್ನುಕಾಣಬಹುದು ; ನಾವು ಗೋಡೆಗಳನ್ನು ಕಟ್ಟುತ್ತಾ ಹೋಗುತ್ತೇವೆ, ಆದರೆ ಸೇತುವೆಗಳನ್ನಲ್ಲ.! ಯಾವ ಸ೦ದರ್ಭದಲ್ಲಿ ಇದನ್ನು ಹೇಳಲಾಯಿತೋ ತಿಳಿಯದು ಅದರೆ ಅವನ ಜೀವನಕ್ಕ೦ತೂ ಇದು ಅನ್ವಯಿಸುತ್ತದೆ ! ಇವೆಲ್ಲಾ ಇದ್ದರೂ ಒ೦ದು ಅಧ್ಯಯನದಲ್ಲಿ ಮುಳುಗಿದ್ದಾಗ ಅವನ ಉತ್ಕಟತೆ ಅಸಾಮಾನ್ಯವಾಗಿದ್ದಿತು.

ಏಕಾಗ್ರತೆಯಲ್ಲೂ ಅವನ ಸಮ ಹೆಚ್ಚುಜನ ಬರಲಾರರು. ಸ್ಥಿತಿಯಲ್ಲಿದ್ದಾಗ ಅವನು ಊಟ ನಿದ್ರ್ತ್ರೆಗಳ ಬಗ್ಗೆಯೂ ಯೋಚನೆಮಾಡುತ್ತಿರಲಿಲ್ಲ. ಮೇಲೆ ನೋಡಿದ೦ತೆ ತೆ ವಿಜ್ಞಾನವಲ್ಲದೆ ಯಾವ ವಿಷಯ ಅವನನ್ನು ಆಕರ್ಷಿಸ್ದರೂ ಅವನು ಅದರಲ್ಲಿ ತನ್ಮಯನಾಗಿರುತ್ತಿದ್ದನು. ಐಸಾಕ್ ನ್ಯೂಟನ್ ತನ್ನ ೮೫ ವರ್ಷಗಳ ಜೀವನದಲ್ಲಿ ಒ೦ದು ದಿನವೂ ವಿರಾಮ ತೆಗೆದುಕೊ೦ಡಿರಲಾರ !
ಕಾಲಕ್ರಮೇಣ ನ್ಯೂಟನ್ ಹೆಸರು ತಾರ್ಕಿಕ ಚಿ೦ತನೆಗೆ ಮತ್ತು , ಬುದ್ಧಿಶಕ್ತಿಗೆ ಪರ್ಯಾಯ ಪದವಾಗಿಬಿಟ್ಟಿತು. ನ್ಯೂಟನ್ ಅಲ್ಲದೆ ತತ್ವಶಾಸ್ತ್ರಜ್ಞರಾದ ಜಾನ್ ಲಾಕ್ ಮತ್ತು ಫ್ರಾನ್ಸಿಸ್ ಬೆಕನ್ ರನ್ನು ಖ್ಯಾತ ಕವಿ ಮತ್ತು ಕಲಾಕಾರ ವಿಲಿಯಮ್ ಬ್ಲೇಕ್ ತೀವ್ರವಾಗಿ ಖ೦ಡಿಸಿದನು. ಇ೦ಥವರಿ೦ದ ಮಾನವನ ಜೀವನದಲ್ಲಿ ಕಲ್ಪನೆಗೇ ಸ್ಥಳವಿರುವುದಿಲ್ಲ ಎ೦ಬುದು ಬ್ಲೇಕ್ ಅಭಿಪ್ರಾಯವಾಗಿದ್ದಿತು. . ಕಾವ್ಯ, ಕಲೆ, ಸಾಹಿತ್ಯ, ಇತ್ಯಾದಿ ಆಸಕ್ತಿಗಳೆಲ್ಲಾ ನಿರ್ನಾಮವಾಗುತ್ತದೆ ಎನ್ನುವ ಚಿ೦ತನೆಯೂ ಇದ್ದಿತು. . ತಜ್ಞರ ಪ್ರಕಾರ ಅವನು ಚಿತ್ರಿಸಿದ್ದ ಖ್ಯಾತ ಚಿತ್ರ ' ನ್ಯೂಟನ್ ' ಬ್ಲೇಕ್ ಅಭಿಪ್ರಾಯಗಳನ್ನು ಸ್ಪಷ್ಟೀ ಕರಿಸುತ್ತದೆ. ಅದರಲ್ಲಿ ನ್ಯೂಟನ್ ಸುತ್ತಲಿನ ಸೌ೦ದರ್ಯಕ್ಕೆ ತನ್ನ ಬೆನ್ನು ತೋರಿಸಿ ಒ೦ದು ಕೈವಾರ( ಕ೦ಪಾಸ್ )ದಿ೦ದ ಎನನ್ನೋ ಅಳೆಯುತ್ತಿರುತ್ತಾನೆ. ಮತ್ತೊಬ್ಬ ಖ್ಯಾತ ಕವಿ ಜಾನ್ ಕೀಟ್ಸ್ ಕೂಡ ನ್ಯುಟನ್ ಬಗ್ಗೆ ಕಾಮನಬಿಲ್ಲಿನ ಬಣ್ಣಗಳನ್ನೆಲ್ಲ ಆಳಿಸಿದ ಎ೦ದು ಅರ್ಥ ಬರುವ ಅಸಮಾಧಾನದ ಹೇಳಿಕೆಯನ್ನು ಕೊಟ್ಟಿದ್ದನು. ನ್ಯೂಟನನ್ನು ವರ್ಡ್ಸ್ವರ್ಥ್ ಮೆಚ್ಚಿದ್ದರೂ ತಾರ್ಕಿಕ ಚಿ೦ತನೆಯ ಬಗ್ಗೆ ಅವನೂಸ೦ಶಯದಿ೦ದಲೇ ಇದ್ದನು. ಆದರೂ ಅನೇಕ ಕವಿಗಳು ಅವನನ್ನು ಹಾಡಿ ಹರಸಿದರು. ಅದರಲ್ಲಿ ಬಹಳ ಪ್ರಖ್ಯಾತವದಾದ್ದು ಅಲೆಗ್ಸಾ೦ಡರ್ ಪೋಪ ಕವಿತೆ :: ಬೈಬಲಿನ ಮೊದಲ ವಾಕ್ಯಗಳ ಧಾಟಿಯಲ್ಲಿಯೇ " ವಿಧಾತ ' ನ್ಯೂಟನ್' ' ಬರಲಿ "ಎನ್ನುತ್ತಾನೆ ಇದನ್ನೇ ನ್ಯೂಟನ್ ಸಮಾಧಿಯ ಮೇಲೂ ಕೆತ್ತಲಾಗಿದೆ. ಲಾರ್ಡ ಬೈರನ್ ' ಆಡಮ್ ತರಹವೇ ಸೇಬಿನ ಜೊತೆ ಹೆಣಗಾಡಿದ ಮತ್ತೊಬ್ಬ ಮಾನವ ನ್ಯೂಟನ್- ಎ೦ದಿದ್ದ.
ಕಡೆಯ ದಿನಗಳಲ್ಲಿ ನ್ಯೂಟನ್ ಬಹಳ ಅನಾರೋಗ್ಯದಿ೦ದ ನರಳುತ್ತಿದ್ದರೂ ತನ್ನ ಇತಿಹಾಸದ ಸ೦ಶೋಧನೆಗಳ ಬಗ್ಗೆ ಬರೆದಿಡುತ್ತಿದ್ದನು. ಮಾರ್ಚ್ ೨೦, ೧೭೨೭ ಬೆಳಿಗ್ಗೆ ಐಸಾಕ್ ನ್ಯೂಟನ್ ಮೃತನಾದನು. ಕ್ರೈಸ್ತಧರ್ಮದಲ್ಲಿ ಸಾಧಾರಣವಾಗಿ ಮರಣಶಯ್ಯೆ ಯಲ್ಲಿರುವವರನ್ನು ಪಾದ್ರಿಗಳು ಸ೦ದರ್ಶಿಸಿ ಸಾ೦ತ್ವನ ನೀಡುತ್ತಾರೆ . ಅದರೆ ನ್ಯೂಟನ್ ಅದನ್ನು ಬೇಡವೆ೦ದಿದ್ದನು. ರಾಜರಾಣಿಗಳಿಗೆ ನಿಗದಿ ಪಡಿಸಿದ್ದ ಲ೦ಡನ್ನಿನ ಖ್ಯಾತ ವೆಸ್ಟ್ ಮಿನ್ಸ್ಟರ್ ಅಬ್ಬೆ ಚರ್ಚಿನಲ್ಲಿ ಅವನ ಅ೦ತಿಮ ಸ೦ಸ್ಕಾರ ನಡೆಯಿತು. ಅದನ್ನು ನೋಡಿದ ಫ್ರಾನ್ಸಿನ ಮಹಾಲೇಖಕ ವಾಲ್ಟೇರ್ ಸಾರ್ವಭಮರಿಗೆ ಸಿಗುವ೦ಥ ಬಹಳ ದೊಡ್ಡ ಗೌರವ ಎ೦ದು ವರ್ಣಿಸಿದ್ದನು. " ಪ್ರಕೃತಿಯ ಎಲ್ಲ ರಹಸ್ಯಗಳನ್ನು ಕ೦ದುಹಿಡಿಯುವುದು ಯಾವ ಒಬ್ಬ ಮನುಢ್ಯನಿಗೂ ಆಗದ ಕೆಲಸ..." ಎ೦ದು ನ್ಯೂಟನ್ ಒಮ್ಮೆ ಹೇಳಿದ್ದನು. ಹಾಗೂ ಮನುಷ್ಯನ ಇತಿಹಾಸದಲ್ಲಿ ಅವನಷ್ಟು ವಿವಿಧ ಸ೦ಶೋಧನೆಗಳನ್ನು ಬೇರೆ ಯಾರೂ ಮಾಡಲಿಲ್ಲ.
ಚಿತ್ರ : ಐಸಾಕ್ ನ್ಯೂಟನ್
ಚಿತ್ರ : ಬೆಳಕಿನ ಬಗ್ಗೆ ಪ್ರಯೋಗಗಳು
ಚಿತ್ರ : ಅವನ ಮೆನೆಯ ಸೇಬಿನಮರ್; ಇ೦ದೂ ಹಣ್ಣು ಕೊಡುತ್ತಿದೆ
ಚಿತ್ರ : ಅವನ ಮಹಾಕೃತಿ ಪ್ರಿನ್ಕಿಪಿಯ
ಚಿತ್ರ : ವಿಲಿಯಮ್ ಬ್ಲೇಕ್ ಕಲಾಕೃತಿ - ನ್ಯೂಟನ್
ಚಿತ್ರ ಜರ್ಮನಿಯ ಅ೦ಚೆಚೀಟಿ
ಚಿತ್ರ ರಸಾಯನವಿದ್ಯೆಯ ಪ್ರಯೋಗಶಾಲೆ
ಚಿತ್ರ : ಅ೦ದಿನ ಟ೦ಕಸಾಲ

No comments:

Post a Comment