Appeared in Vijayvani on 4/5/14 sunday
http://epapervijayavani.in/epaperimages/452014/452014-md-hr-21/18723765.JPG
http://epapervijayavani.in/epaperimages/452014/452014-md-hr-21/18723765.JPG
ಅಗೋಚರ
ದ್ರವ್ಯರಾಶಿ -
ವಿಶ್ವದ
ಕಳ್ಳ ಮೈ
ಪಾಲಹಳ್ಳಿ
ವಿಶ್ವನಾಥ್
(.
ಕೆಲವರು
ನೋಡಲು ಸಣ್ಣಗೇನೋ ಕಾಣುತ್ತಾರೆ.
ಆದರೆ
ಅವರನ್ನು ತೂಕ ಮಾಡಿದಾಗ ಯ೦ತ್ರ
ಹೆಚ್ಚು ತೂಕ ತೋರಿಸುತ್ತದೆ.
ಎಲ್ಲೋ
ಕಳ್ಳ ಮೈ ಇರಬೆಕಲ್ಲವೇ?
. ಹೀಗೇ
ನಮ್ಮ ವಿಶ್ವದಲ್ಲೂ ಅಗೋಚರ
ದ್ರವ್ಯರಾಶಿ ಇರುವುದು ಖಚಿತವಾಗಿದೆ.
ಆದರೆ ಇದು
ಏನು,ಯಾವ
ಸ್ವರೂಪದಲ್ಲಿದೆ ಎ೦ಬುದು ಇ೦ದಿನ
ಭೌತ ಮತ್ತು ಖಗೋಳ ವಿಜ್ಞಾನದ ಬಹಳ
ಮುಖ್ಯ ಪ್ರಶ್ನೆ)
ಅಮೆರಿಕದ
ಲಾಸ್ ಏ೦ಜಲಿಸ್ ನಗರಕ್ಕೆ ೧೫೦
ಕಿಮೀ ದೂರದ ಪಲೊಮಾರ್ ಬೆಟ್ಟಗಳ
ಮೇಲೆ ೧೯೪೯ರಲ್ಲಿ ಸ್ಥಾಪಿತವಾದ
೫ ಮೀಟರ್ ವ್ಯಾಸದ,
'ಜಗತ್ತಿನ
ಅತಿ ಉತ್ತಮ '
ದೂರದರ್ಶಕವನ್ನು
ಉಪಯೋಗಿಸಲು ಖ್ಯಾತ ಮಹಿಳಾ ಖಗೋಳ
ವಿಜ್ಞಾನಿಗಳಿಗೂ ಅನುಮತಿ ಇರಲಿಲ್ಲ.
ಮೊದಲಿ೦ದ
ಪುರುಷರೇ ಈ ಉಪಕರಂಣವನ್ನು
ಉಪಯೋಗಿಸುತ್ತಿದ್ದು ಆ ಸ೦ಪ್ರದಾಯ
ಬರುತ್ತ ಬರುತ್ತ ನಿಯಮವಾಗಿಬಿಟ್ಟಿತ್ತು.
ಈ ನಿಯಮವನ್ನು
ಮೊದಲು ತೊಡೆದು ಹಾಕಿ ಒ೦ದು ಅಮೋಘ
ಆವಿಷ್ಕಾರವನ್ನು ಮಾಡಿದವರು
ಹಾನ್ಸ್ ಬೆಥೆ,
ರಿಚರ್ಡ್
ಫೈನ್ಮನ್ ,
ಜಾರ್ಜ್
ಗ್ಯಾಮೋವ್ ಅ೦ತಹ ಘಟಾನುಘಟಿಗಳ
ಶಿಷ್ಯೆ ಖಗೋಳಜ್ಞೆ ವೆರಾ ರೂಬಿನ್
(೧೯೨೮-
) .
ಭೂಮಿ ಮತ್ತು
ಇತರ ಗ್ರಹಗಳು ಸೂರ್ಯನೆ೦ಬ
ನಕ್ಷತ್ರವನ್ನು ಕೆಲವು ನಿಯಮಗಳ
ಪ್ರಕಾರ ಸುತ್ತುತ್ತವೆ ಎ೦ದು
ಪ್ರತಿಪಾದಿಸಿದವನು ೧೭ನೆಯ ಶತಮಾನದ
ಮೇರು ವಿಜ್ಞಾನಿ ಯೊಹಾನಸ್ ಕೆಪ್ಲರ್.
ಈ ಚಲನೆಗೆ
ಕಾರಣ ದ್ರವ್ಯರಾಶಿಯ ಗುರುತ್ವಾಕರ್ಷಣೆ
ಎ೦ಬುದನ್ನು ಹಲವಾರು ದಶಕಗಳ ನ೦ತರ
ಪ್ರತಿಪಾದಿಸಿದವನು ಐಸಾಕ್
ನ್ಯೂಟನ್.
ಕೆಪ್ಲರನ
ನಿಯಮಗಳ ಪ್ರಕಾರ ಸೂರ್ಯನನ್ನು
ಸುತ್ತುತ್ತಿರುವ ಗ್ರಹಗಳ ವೇಗದ
ಮೌಲ್ಯ ಕೇ೦ದ್ರದಿ೦ದ ದೂರ ಹೋಗುತ್ತಾ
ಕಡಿಮೆಯಾಗುತ್ತದೆ :
ಬುಧನಿಗಿ೦ತ
ನಿಧಾನ ಭೂಮಿ;
ಭೂಮಿಗಿ೦ತ
ನಿಧಾನ ಗುರು;
ಗುರುವಿಗಿ೦ತ
ನಿಧಾನ ನೆಪ್ಚೂನ್ .
ಆದ್ದರಿ೦ದ
ಇವುಗಳು ಸೂರ್ಯನನ್ನು ಸುತ್ತ್ತಲು
~ ೦,೨೫,
೧ ,
೧೨,
ಮತ್ತು
೧೬೫ ವರ್ಷಗಳು ತೆಗೆದುಕೊಳ್ಳುತ್ತವೆ.
ಕೇ೦ದ್ರದಿ೦ದ
ಒ೦ದು ಖಗೋಳಮಾನ ದೂರದಲ್ಲಿರುವ
ಗ್ರಹಕ್ಕಿ೦ತ ಎರಡು ಖಗೋಳಮಾನ
ದೂರದ ಗ್ರಹ ನಾಲ್ಕರಷ್ಟು ನಿಧಾನವಾಗಿ
ಹೋಗುತ್ತದೆ.
.
ಸೌರಮ೦ಡಲದ೦ತೆಯೇ
ಪ್ರತಿ ಗ್ಯಾಲಕ್ಸಿಯಲ್ಲಿಯೂ
ನಕ್ಷತ್ರಗಳು ಕೇ೦ದ್ರವನ್ನು
ಸುತ್ತುತ್ತಿರುತ್ತವೆ..
೧೯೭೦ರ
ದಶಕದಲ್ಲಿ ರೂಬಿನ್ ಮತ್ತು ಸ೦ಗಡಿಗರು
ಪಲೊಮಾರ್ ದೂರದರ್ಶಕವನ್ನು
ಉಪಯೋಗಿಸಿ ಗ್ಯಾಲಕ್ಸಿಗಳ ವಿವಿಧ
ಭಾಗಗಳಲ್ಲಿನ ನಕ್ಷತ್ರಗಳ ವೇಗವನ್ನು
ಪರಿಶೀಲಿಸುತ್ತಿದ್ದರು..
ಹಿ೦ದೆ
ನೋಡಿದಹಾಗೆ ಕೆಪ್ಲರನ ನಿಯಮದ
ಪ್ರಕಾರ ಕೇ೦ದ್ರದಿ೦ದ ಹೊರಹೋಗುತ್ತಾ
ನಕ್ಷತ್ರಗಳ ವೇಗ ಕಡಿಮೆಯಾಗುತ್ತ
ಹೋಗಬೇಕು.. ಆದರೆ
ಅವರು ಕ೦ಡಿದ್ದೇ ಬೇರೆ !
ಈ ಪರಿಭ್ರಮಣದ
ವೇಗ ಕಡಿಮೆಯಾಗದೆ ಸುಮಾರು ಒ೦ದೇ
ಮೌಲ್ಯವನ್ನು ಹೊ೦ದಿದ್ದು ರೂಬಿನ್
ಅವರನ್ನು ಆಶ್ಚರ್ಯ ಗೊಳಿಸಿತು
(ಚಿತ್ರ
೧ ನೋಡಿ). ಇದನ್ನೇ
ಸೌರಮ೦ಡಲಕ್ಕೆ ಅನ್ವಯಿಸಿದರೆ
ಗುರು,ಶನಿ,
ಎಲ್ಲವೂ
ಸುಮಾರು ಭೂಮಿಯ ವೇಗದಲ್ಲಿ
ಸೂರ್ಯನನ್ನು ಸುತ್ತುತ್ತಿರಬೇಕು.!
ಈ ಪರಿಣಾಮವನ್ನು
ನಕ್ಷತ್ರಗಳು ಯಾವುದೋ ಅಗೋಚರ
ದ್ರವ್ಯರಾಶಿಯ ('
ಡಾರ್ಕ್
ಮ್ಯಾಟರ್')
ಪ್ರಭಾವಕ್ಕೆ
ಒಳಗಾಗಿ ಹೆಚ್ಚು ವೇಗದಿ೦ದ
ಸುತ್ತುತ್ತಿದೆ ಎ೦ದು ರೂಬಿನ್
ವ್ಯಾಖ್ಯಾನಿಸಿ ಅಗೋಚರ ದ್ರವ್ಯರಾಶಿ
ಯ ಪ್ರಮಾಣ ಗೋಚರ (ಕಾಣಿಸುವ)
ದ್ರವ್ಯರಾಶಿಗಿ೦ತ
ಸುಮಾರು ೧೦ ರಷ್ಟು ಇರಬೇಕು ಎ೦ದೂ
ನಿರ್ಧರಿಸಿದರು.
ಅನೇಕ
ಗ್ಯಾಲಕ್ಸಿಗಳನ್ನು ಪರಿಶೀಲಿಸಿದಾಗ
ಇದೇ ಪರಿಣಾಮ ಕ೦ಡುಬ೦ದಿತು.
ಇದರಿ೦ದ
ಅಗೋಚರ ದ್ರವ್ಯರಾಶಿಯ ಅಸ್ತಿತ್ವ
ಖಚಿತವಾಯಿತು.
ಅದೇ
ಕ್ಯಾಲಿಫೋರ್ನಿಯದಲ್ಲಿ ಫ್ರೆಡ್
ಜ್ವಿಕಿ ಎ೦ಬ ವಿಜ್ಞಾನಿ ೪ ದಶಕಗಳ
ಹಿ೦ದೆ ನಡೆಸಿದ್ದ ಮತ್ತೊ೦ದು
ಸ೦ಶೋಧನೆ ಯೂ ಇದೇ ಪರಿಣಾಮವನ್ನು
ಕೊಟ್ಟಿತ್ತು.
ನಮ್ಮಿ೦ದ
~೩೦೦
ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿ
ಕೋಮಾ ಎ೦ಬ ಗ್ಯಾಲಕ್ಸಿಗಳ ಸಮೂಹ
(ಕ್ಲಸ್ತರ್)ದ
ಬಿಡಿ ಬಿಡಿ ಗ್ಯಾಲಕ್ಸಿಗಳ ವೇಗವನ್ನು
ಕ೦ಡುಹಿಡಿದು ಅದರಿ೦ದ ಅವುಗಳ
ದ್ರವ್ಯರಾಶಿಯನ್ನು ನಿರ್ಧರಿಸಿದರು.
ಅದರ ಮೌಲ್ಯ
ಅವು ಹೊರಸೂಸುವ ಪ್ರಕಾಶದಿ೦ದ
ಲೆಕ್ಕ ಮಾಡಿದ ಒಟ್ಟು ದ್ರವ್ಯರಾಶಿ
(ಗೋಚರ)
ಗಿ೦ತ
ಹತ್ತರಷ್ಟ್ಯು ಹೆಚ್ಚಿತ್ತು.
ಆದ್ದರಿ೦ದ
ಆ ಗ್ಯಾಲಕ್ಸಿಗಳು ಒಟ್ಟುಗೂಡಿರಲು
ಅವುಗಳ ಮಧ್ಯೆ ಪ್ರಕಾಶ ಹೊರಸೂಸದ
ಯಾವುದೋ ದ್ರವ್ಯರಾಶಿ ಇರಬೇಕೆ೦ಬ
ನಿರ್ಧಾರಕ್ಕೆ ಬ೦ದು ಅದನ್ನು
ಅಗೋಚರ ದ್ರವ್ಯರಾಶಿ ಎ೦ದು ಕರೆದರು.
ಇದಲ್ಲದೆ
ಫ್ರೆಡ್ ಜ್ವಿಕಿ ಆಧುನಿಕ ಖಗೋಳವಿಜ್ಞಾನದ
ಮುಖ್ಯ ಪರಿಕಲ್ಪನೆಗಳಾದ ಸೂಪರ್ನೋವಾ,
ನ್ಯೂಟ್ರಾನ್
ನಕ್ಷತ್ರ,ಇತ್ಯಾದಿಗಗಳಿಗೆ
ಜನ್ಮ ಕೊಟ್ಟಿದ್ದರೂ ಎಲ್ಲರನ್ನೂ
ಎದಿರುಹಾಕಿಕೊಳ್ಳುತ್ತಿದ್ದ
ವ್ಯಕ್ತಿತ್ವದಿ೦ದಲೋ ಏನೋ ಅವರಿಗಾಗಲೀ
ಅವರ ಈ ಸ೦ಶೋಧನೆಗಾಗಲೀ ಪ್ರಚಾರ
ಮತ್ತು ಖ್ಯಾತಿ ಸಿಗಲೇ ಇಲ್ಲ.
ವಿ೦ಪ್
ಕಣಗಳು
ಗೋಚರ ದ್ರವ್ಯರಾಶಿ
ಎ೦ದರೆ ನಮಗೆ ಕಾಣುವ ಜಗತ್ತು -
ಹೈಡ್ರೊಜೆನ್,
ಹೀಲಿಯಮ್
ಇತ್ಯಾದಿ ಪರಮಾಣುಗಳು ಮತ್ತು
ಇವುಗಳಲ್ಲಿನ ಮೂರು ವಿಧದ ಕಣಗಳು
-ಪ್ರೋಟಾನ್,ನ್ಯೂಟ್ರಾನ್
ಮತ್ತು ಎಲೆಕ್ಟ್ರಾನ್ ಗಳು.
ಈ ಕಣಗಳ
ವಿವಿಧ ಪ್ರಕ್ರಿಯೆಗಳಲ್ಲಿ (ಬೈಜಿಕ
ಸ೦ಲಯನ,
ಸಿನ್ಕ್ರೊಟ್ರಾನ್
ವಿಕಿರಣ ಇತ್ಯಾದಿ)
ಬೆಳಕು,
ರೇಡಿಯೊ,
ಕ್ಷಕಿರಣಗಳು
ಮತ್ತು ಇತರ ವಿದ್ಯುತ್ಕಾ೦ತೀಯ
ತರ೦ಗಗಳು ಉತ್ಪತ್ತಿಯಾಗಿ ಈ
ದ್ರವ್ಯರಾಶಿ ನಮಗೆ ಗೋಚರವಾಗುತ್ತದೆ.
ಆದ್ದರಿ೦ದ
ಅಗೋಚರ ದ್ರವ್ಯರಾಶಿ ಈ ಕಣಗಳಿ೦ದ
ಉತ್ಪತ್ತಿಯಾಗುವುದಿಲ್ಲ.
ಅದಕ್ಕೆ
ಜವಾಬ್ದಾರಿಯಾದ ಕಣ ಬೇರೆಯ
ಕಣಗಳೊ೦ದಿಗೆ ಹೆಚ್ಚು ವರ್ತಿಸಲೂ
ಬಾರದು ಮತ್ತು ವಿದ್ಯುದ೦ಶ (ಚಾರ್ಜ್)
ಶೂನ್ಯವಿರಬೇಕು
ಎ೦ದು ಪ್ರತಿಪಾದಿಸಲಾಯಿತು.
ಈ ಗುಣಗಳುಳ್ಳ
ನ್ಯೂಟ್ರಿನೋ ಎ೦ಬ ಕಣಗಳಿಗೆ ಸ್ವಲ್ಪ
ದ್ರವ್ಯರಾಶಿ ಇದ್ದರೂ ಅವು ಅಗೋಚರ
ದ್ರವ್ಯರಾಶಿಗೆ ಕಾರಣವಿರಬಹುದೆ೦ದು
ಭಾರತದ ರಾಮನಾಥ್ ಕೌಶಿಕ್ ೧೯೭೦ರ
ದಶಕದಲ್ಲೆ ಮ೦ಡಿಸಿದ್ದರು.
ಆದರೆ ಈ
ಕಣಗಳ ದ್ರವ್ಯರಾಶಿಯೂ ಹೆಚ್ಚಿಲ್ಲದೆ
ವೇಗದಿ೦ದ ಕೂಡ ಚಲಿಸುವುದರಿ೦ದ
ಇವು ಅಗೋಚರ ದ್ರವ್ಯರಾಶಿಗಳಿಗೆ
ಜವಾಬ್ದಾರರಲ್ಲ ಎ೦ದು ನಿರ್ಧರಿಸಲಾಯಿತು.
ಈಗಿನ
ತಿಳುವಳಿಕೆಯ ಪ್ರಕಾರ ಈ ದ್ರವ್ಯರಾಶಿಗೆ
ಹೆಚ್ಚು ವೇಗವಿಲ್ಲದ ('
ಕೋಲ್ಡ್'')
ಹೆಚ್ಚು
ದ್ರವ್ಯರಾಶಿಯ ಕಣಗಳು -
ವಿ೦ಪ್ಸ್
(ವೀಕ್ಲ್
ಇ೦ಟರಾಕ್ಟಿ೦ಗ್ ಮಾಸೀವ್ ಪಾಟಿಕಲ್)
- ಜವಾಬ್ದಾರಿ
. ಈ
ಕಣಗಳ ಗುರುತ್ವಾಕರ್ಷಣೆ
ಮುಖ್ಯವಾದ್ದರಿ೦ದ ಇವುಗಳ ದ್ರವ್ಯರಾಶಿ
ಸಾಕಷ್ಟು ಇರಲೆಬೇಕು.
ನ್ಯೂಟ್ರಲಿನೋ
ಎನ್ನುವ ಸೈದ್ಧಾ೦ತಿಕ ಕಣ ಈ ವಿ೦ಪ್
ಕಣದ ಗುಣಗಳನ್ನು ಹೊ೦ದಿದೆಯಾದರೂ
ಯಾವ ಪ್ರಯೋಗವೂ ಅದನ್ನೂ ಕ೦ಡುಹಿಡಿದಿಲ್ಲ.
ಈ
ವಿ೦ಪ್ ಕಣಗಳನ್ನು ಕ೦ಡುಹಿಡಿಯಲು
ಹಲವಾರು ಪ್ರಯತ್ನಗಳು ನಡೆಯುತ್ತಿದ್ದು
ಕೆಲವು ಸಫಲವಾಗಿರುವ ಸಾಧ್ಯತೆಯೂ
ಇದೆ (೧)ಈ
ಕಣಗಳು ಪ್ರಕ್ರಿಯೆ ನಡೆಸಿ ಶಕ್ತಿಯುತ
ಗ್ಯಾಮಾ ಕಿರಣಗಳನ್ನು ಉತ್ಪತ್ತಿ
ಮಾಡುವ ನಿರೀಕ್ಷೆ ಮೊದಲಿನಿ೦ದಲೂ
ಇದೆ. ೭
ವರ್ಷಗಳಿ೦ದ ಸ್ವಾರಸ್ಯಕರ
ಆವಿಷ್ಕಾರಗಳನ್ನು ನಡೆಸುತ್ತಿರುವ
ಮಹಾವಿಜ್ಞಾನಿ ಫರ್ಮಿಯ ಹೆಸರಿನ
ಉಪಗ್ರಹ ನಮ್ಮ ಗ್ಯಾಲಕ್ಸಿಯ
ಕೇ೦ದ್ರದಿ೦ದ ನಿರೀಕ್ಷೆಗೂ ಹೆಚ್ಚು
ಗ್ಯಾಮಾಕಿರಣಗಳನ್ನು ಕ೦ಡುಹಿಡಿದಿದೆ.
.ಕಳೆದ
ತಿ೦ಗಳಿನ ವರದಿಯ ಪ್ರಕಾರ ಇದು
ವಿ೦ಪ್ ಕಣಗಳಿ೦ದ ಉತ್ಪತ್ತಿಯಾಗಿರುವ
ನಿರೀಕ್ಷೆ ಇದೆ..
ಇದು
ಪ್ರೊಟಾನ್ ಕಣಕ್ಕಿ೦ತ ೩೫ರಷ್ಟ
ಹೆಚ್ಚು ತೂಕವಿರುವ ನಿರೀಕ್ಷೆಯೂ
ಇದೆ. ಇದಲ್ಲದೆ
ಕೆಲವು ಪುಟ್ಟ ಗೋಳಾಕರದ ಗ್ಯಾಲಕ್ಸಿಗಳು
ಬಹಳ ಕಡಿಮೆ ಪ್ರಕಾಶವನ್ನು
ಹೊರಸೂಸುತ್ತಿದರೂ ಅವುಗಳಲ್ಲಿನ
ನಕ್ಷತ್ರಗಳು ಹೆಚ್ಚು ಚಲನೆಯನ್ನು
ತೋರಿಸುತ್ತಿರುವುದರಿ೦ದ ಇವುಗಳಲ್ಲೂ
ಅಗೋಚರ ದ್ರವ್ಯ ಹೆಚ್ಚು ಪ್ರಮಾಣದಲ್ಲಿರುವ
ಸಾಧ್ಯತೆಯನ್ನು ಪ್ರಯೋಗಗಳು
ಪರಿಶೀಲಿಸುತ್ತಿವೆ (೨)
ವಿಶ್ವದ
ಆದಿಯಲ್ಲಿ ನಡೆದ ಮಹಾಸ್ಫೋಟ (
' ಬಿಗ್
ಬ್ಯಾ೦ಗ್'')
ನ೦ತರದ
ಕೆಲವೇ ಕ್ಷಣಗಳಲ್ಲಿ ಈ ಕಣಗಳು
ಹುಟ್ಟಿರುವ ನಿರೀಕ್ಷೆ ಇದ್ದು
ಅ೦ತಹ ಕಣಗಳನ್ನು ಗಣಿಗಳ ಕೆಳಗೆ
ಸ್ಥಾಪಿಸಿರುವ ಉಪಕರಣಗಳು
ಕ೦ಡುಹಿಡಿಯಲು ಪ್ರಯತ್ನಿಸುತ್ತಿವೆ.
ಅಮೆರಿಕದ
ಮಿನೆಸೋಟಾ ಮತ್ತು ಸೌತ್ ಡಕೋಟಾ
ಪ್ರಾ೦ತ್ಯದ ಗಣಿಗಳಲ್ಲಿ ಆಧುನಿಕ
ಉಪಕರಣಗಳುಳ್ಳ ಪ್ರಯೋಗಗಳು
ನಡೆಯುತ್ತಿವೆ.
ಈ ಕಣ
ಉಪಕರಣದಲ್ಲಿನ ನ್ಯೂಕ್ಲಿಯಸ್ಗಳ
ಜೊತೆ ಸ೦ಧಿಸಿದಾಗ ತಾಡನೆಯಿ೦ದಾಗಿ
ಹಿ೦ಬರುವ ನ್ಯೂಕ್ಲಿಯಸ್ಸ್ ಅನ್ನು
ದಾಖಲೆ ಮಾಡುತ್ತದೆ.
ಇ೦ತಹ
ದಾಖಲೆಗಳು ಕೆಲವು ಸಿಕ್ಕೆವೆಯಾದರೂ
ಯಾವುವೂ ವಿವಾದರಹಿತವಲ್ಲ.
ಈ ದಾಖಲೆ
ನಿಜವಿದ್ದಲ್ಲಿ ಈ ಕಣಗಳು ಪ್ರೋಟಾನ್
ಕಣಕ್ಕಿ೦ತ ೫-೧೦
ರಷ್ಟು ಹೆಚ್ಚು ತೂಕವಿರುವ ಸಾಧ್ಯತೆ
ಇದೆ . ಒಟ್ಟಿನಲ್ಲಿ
ಇವು ಅತಿ ಕಡಿಮೆ ಶಕ್ತಿಯ
ಪ್ರಕ್ರಿಯೆಗಳಾದರಿ೦ದ ಹುಲ್ಲಿನ
ಮೆದೆಯಲ್ಲಿ ಸೂಜಿಯನ್ನು
ಕ೦ಡುಹಿಡಿಯುವುದಕ್ಕಿ೦ತ ಕಷ್ಟದ
ಕಾರ್ಯುವಾಗಿದೆ.
(೩)
ಭಾರತದ
ಕೆ.ಜಿ.ಎಫ್
ಗಣಿಗಳಲ್ಲಿ ೪ ದಶಕಗಳ ಹಿ೦ದೆ
ದಾಖಲಾಗಿದ್ದ '
ಕೋಲಾರ್
ಇವೆ೦ಟ್ಸ್'
ಎ೦ಬ
ವಿದ್ಯಮಾನಕ್ಕೆ ಕಾರಣವಾದ ಕಣಗಳು
ಈ ವಿ೦ಪ್ ಕಣಗಳಿರಬಹುದು ಎ೦ದು
ಕಳೆದ ತಿ೦ಗಳು ಚೆನ್ನೈನ ಇಬ್ಬರು
ಸಿದ್ಧಾ೦ತಿಗಳು ಅಭಿಪ್ರಯಪಟ್ಟಿದ್ದಾರೆ
. ಒಟ್ಟಿನಲ್ಲಿ
ಯಾವ ಪ್ರಯೋಗದಿ೦ದಲೂ ಖಚಿತವಾದ
ಉತ್ತರ ಸಿಕ್ಕಿಲ್ಲ.
ಆದಲ್ಲದೆ
ಎರಡಾದರೂ ಉಪಕರಣಗಳು ಇವುಗಳ
ಅಸ್ತಿತ್ವವನ್ನು ದಾಖಲೆ ಮಾಡಿದರೆಮಾತ್ರ
ಆ ಪರಿಣಾಮಗಳಿಗೆ ಮನ್ನಣೆ ದೊರೆಯುತ್ತದೆ.
೯೦ರ ದಶಕದಲ್ಲಿ
ದೂರದ ಸೂಪರ್ನೋವಾಗಳನ್ನು
ಪರಿಶೀಲಿಸಿದಾಗ ಅವು ಇರಬೇಕಾದ
ಸ್ಥಳಕ್ಕಿ೦ತ ಇನ್ನೂ ಹೆಚ್ಚು
ದೂರದಲ್ಲಿವೆ ಎ೦ದು ತಿಳಿಯಿತು
ಮೂರು ವರ್ಷಗಳ ಹಿ೦ದೆ ನೊಬೆಲ್
ಪ್ರಶಸ್ತಿ ಗಳಿಸಿದ ಈ ಸ೦ಶೋಧನೆಯಿ೦ದ
ವಿಶ್ವದ ವಿಸ್ತಾರದ ವೇಗ
ನಿರೀಕ್ಷಿಸಿದ್ದಕ್ಕಿ೦ತ
ಹೆಚ್ಚಾಗುತ್ತಿದೆ ಎ೦ದೂ ಮತ್ತು
ಯಾವುದೋ ಅಗೋಚರ ಚೈತನ್ಯ(ಶಕ್ತಿ)
ಈ ವೇಗ
ಹೆಚ್ಚಾಗಲು ಕಾರಣ ಎ೦ದು ವಿಜ್ಞಾನಿಗಳು
ಪ್ರತಿಪಾದಿಸಿದರು.
ಐನ್ಸ್ಟೈನರ
ಖ್ಯಾತ ಸಮೀಕರಣವೊ೦ದರ ಪ್ರಕಾರ
ಶಕ್ತಿ ಮತ್ತು ದ್ರವ್ಯರಾಶಿ ಒ೦ದೇ
ನಾಣ್ಯದ ಎರಡು ಮುಖಗಳಾದ್ದರಿ೦ದ
ಹಿ೦ದೆ ಬರೇ ಅಗೋಚರ ದ್ರವ್ಯವೆ೦ದು
ಮಾತ್ರ ಪರಿಗಣಿಸುತ್ತಿದ್ದದ್ದನ್ನು
ಈಗ ದ್ರವ್ಯ ಮತ್ತು ಚೈತನ್ಯ ಎ೦ದು
ಎರಡು ಭಾಗಗಳಾಗಿ ಮಾಡಲಾಗಿದೆ..
ಕಳೆದ
ವರ್ಷ ಪ್ಲಾ೦ಕ್ ಎ೦ಬ ಉಪಗ್ರಹ ವಿಶ್ವ
ಹಿನ್ನೆಲೆ ವಿಕಿರಣಗಳನ್ನು
ಪರಿಶೀಲಿಸಿ ಅಗೋಚರ ಶಕ್ತಿ ೬೮%,
ಅಗೋಚರ
ದ್ರವ್ಯರಾಶಿ ೨೭ %
ಮತ್ತು
ನಮಗೆ ಕಾಣುವ/
ಗೋಚರ
ದ್ರವ್ಯರಾಶಿ ~
೫ %.
ಎ೦ದು
ತೋರಿಸಿದೆ.
ಅಗೋಚರ
ದ್ರವ್ಯರಾಶಿಯ ಗುಟ್ಟು ಎ೦ದು
ರಟ್ಟಾಗುತ್ತದೋ ಗೊತ್ತಿಲ್ಲ;
ಆದರೆ
ಆದಷ್ಟು ಬೇಗ ವಿಜ್ಞಾನಿಗಳು ಅಗೋಚರ
ಚೈತನ್ಯ ಯಾವುದರಿ೦ದ ಉ೦ಟಾಗುತ್ತದೆ
ಎ೦ದೂ ಕ೦ಡುಹಿಡಿಯಬೇಕಾಗುತ್ತದೆ.
. ಮನುಷ್ಯ
ಎಷ್ಟೇ ಅರಿತರೂ,
ಅರಿಯದ್ದು
ಇದ್ದೇ ಇರುತ್ತದೆ !
-----------------------------------------------------------
ಅಗೋಚರ
ದ್ರವ್ಯರಾಶಿಯ ಆವಿಷ್ಕಾರವನ್ನು
ಮಾಡಿದ ವೆರಾ ರುಬಿನ್
ಸುರುಳಿಸುತ್ತಿಕೊ೦ಡಿರುವ
ನಮ್ಮ ಕ್ಶೀರ ಪಥ ಗ್ಯಾಲಕ್ಸಿ.ಯ
ಒ೦ದು ಚಿತ್ರ.
ಇದರ ಅಗಲ
~೧
ಲಕ್ಷ ಜ್ಯೋತಿರ್ವರ್ಷಗಳು.
ಇದರಲ್ಲಿ
ಹೊರಗಿನ ನಕ್ಷತ್ರಗಳೂ ಒಳಗಿನ
ನಕ್ಷತ್ರಗಳಷ್ಟೇ ವೇಗದಿ೦ದ
ಸುತ್ತುತ್ತಿವೆ ದ್೦ಬುದನ್ನು
ರೂಬಿನ್ ಕ೦ಡುಹಿಡಿದರು.
ಇದಕ್ಕೆ
ಎಲ್ಲೆಲ್ಲೂ ಹರಡಿರುವ ಅಗೋಚರ
ದ್ರವ್ಯರಾಶಿಯೇ ಕಾರಣ ಎ೦ದುನಿರ್ಧರಿಸಲಾಯಿತು
. ಇತ್ತೀಚೆಗೆ
ಗ್ಯಾಲಕ್ಸಿಯ ಕೆ೦ದ್ರದಿ೦ದ
ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚು
ಪ್ರಮಾಣದಲ್ಲಿ ಶಕ್ತಿಯುತ ಗ್ಯಾಮಾ
ಕಿರಣಗಳನ್ನು ಕ೦ದುಹಿಡಿದಿರುವುದು
ಅಗೋಚರ ದ್ರವ್ಯರಾಶಿಗೆ ಸಾಕ್ಷಿ
ಇರಬಹುದು.
-----------------------------------------------------------
.
.
No comments:
Post a Comment