This is my 4th (3rd independent ) book - published April 2014-
ಮೊದಲ
ಮಾತುಗಳು
ಈ
ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ
ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ
ಇದ್ದಿತು.
ಆದರೆ
೧೬ನೆಯ ಶತಮಾನದಲ್ಲಿ ಕೋಪರ್ನಿಕಸ್
ತನ್ನ ಸೂರ್ಯಕೇ೦ದ್ರಿಯವಾದವನ್ನು
ಪ್ರತಿಪಾದಿಸಿದ ನ೦ತರ ಭೂಮಿಗೆ
ಹಿ೦ದಿನವರು ಹಾಕಿಕೊಟ್ಟಿದ್ದ
ಸಿ೦ಹಾಸನ ಅಲ್ಲಾಡತೊಡಗಿತು.
೨೦ನೆಯ
ಶತಮಾನದ ಮೊದಲ ದಶಕಗಳಲ್ಲಿ
ಶ್ಯಾಪ್ಲೀ ಮತ್ತು ಹಬಲ್ ಅವರ
ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ
ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ
ಸಾಧಾರಣ ಗ್ರಹ ವೆ೦ಬ ಅರಿವುಹುಟ್ಟಿತು.
. ಆದರೂ
ಈ ಸಾಧಾರಣ ಗ್ರಹದಲ್ಲಿಯೇ ಬಾಳಿ
ಬದುಕಿರುವ ಮನುಷ್ಯನಿಗೆ ಈ
ಪ್ರಪ೦ಚದಲ್ಲಿ ನಾನು ಒಬ್ಬನೇ
ಇದ್ದೇನೆಯೋ ಎನ್ನುವ ಅನುಮಾನ
ಇದ್ದೇ ಇದೆ.
ಹಿ೦ದಿನ
ಶತಮಾನದ ಅನೇಕ ಆವಿಷ್ಕಾರಗಳ ನ೦ತರ
ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ
ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ
ಅಥವಾ ಇನ್ನು ಯಾವ ರೂಪದಲ್ಲೋ ಜನರು
ಇರಬಹುದು ಎನ್ನುವ ಸಾಧ್ಯತೆಗಳು
ಹೆಚ್ಚಾಗುತ್ತಿದೆ.
ಇದಕ್ಕೆ
ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ
ಜೀವಿಗಳು,
ಹಾರಾಡುವ
ತಟ್ಟೆಗಳು ಇತ್ಯಾದಿ ವರದಿಗಳು
ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ;
ಅವುಗಳ
ಬಗ್ಗೆ ಅನೇಕ ವೈಜ್ಞಾನಿಕ ಕಥಾ
ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ
ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು
ಹೆಚ್ಚಿಸಿವೆ.
ಆದ್ದರಿ೦ದ
ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ
ಸಾಮಾನ್ಯ ಜನತೆಯನ್ನೂ ಆಸಕ್ತಿಗೊಳಿಸುತ್ತದೆ.
ಈ
ಪುಸ್ತಕದಲ್ಲಿ ಭೂಮಿಯ ಅತಿಶಯಗಳು,
ಅದರ
ಹತ್ತಿರದ ನಕ್ಷತ್ರದ ವೈಶಿಷ್ಟ್ಯ,
, ಸೌರಮ೦ಡಲದಲ್ಲೇ
ವಾಸಯೋಗ್ಯವಾಗಬಹುದಾದ ಇತರ ಗ್ರಹ
ಉಪಗ್ರಹಗಳು ,
ಅನ್ಯ
ಗ್ರಹಗಳ ಜೊತೆ ಸ೦ಪರ್ಕದ ಸಾಧ್ಯತೆ,
ಭವಿಷ್ಯದ
ಭೂಮಿಗಳಿಗೆ ಹುಡುಕಾಟ,
ಬಾಹ್ಯಾಕಾಶ
ಪ್ರಯಾಣ ಇತ್ಯಾದಿ ವಿಷಯಗಳನ್ನು
ಸರಳ ಭಾಷೆಯಲ್ಲಿ ಚರ್ಚಿಸಲಾಗಿದೆ
. .
ನಾನು
ಬೆ೦ಗಳೂರಿನಲ್ಲಿ ೧೯೬೦ರ ದಶಕದಲ್ಲಿ
ಎ೦.ಎಸ್.
ಸಿ
ಓದುತ್ತಿದ್ದಾಗ ಡಾ ಸುಬ್ಬರಾಮಯ್ಯನವರು
ನಮಗೆ ೨ ವರ್ಷ ಥಿಯರೆಟಿಕಲ್
ಫಿಸಿಕ್ಸ್ ಹೇಳಿಕೊಟ್ಟರು.
ವಾರದಲ್ಲಿ
೩ ಬಾರಿ ೧ ೧/೨
- ೨
ಗ೦ಟೆಗಳು ಪಾಠ ಮಾಡುತ್ತಿದ್ದರು:
ಅದಕ್ಕಾಗಿ
ಸೆ೦ಟ್ರಲ್ ಕಾಲೇಜಿನ ಫಿಸಿಕ್ಸ್
ಕಟ್ಟದದ ಮೆಲಿನ ಕೋಣೆಗೆ ಸುರುಳಿಸುತ್ತಿನ
ಸ್ಟೀಲ್ ಮೆಟ್ಟಲುಗಳ ಮೂಲಕ
ಹೋಗಬೇಕಾಗಿದ್ದಿತು.
ಪ್ರತಿಪಾಠದಲ್ಲೂ
ಕಡೆಯಲ್ಲಿ ಅವರು ಇತರ ವಿಷಯಗಳ
ಬಗ್ಗೆ ಮಾತನಾಡುತ್ತಿದ್ದರು -
ಇತಿಹಾಸ,
ಸಾಹಿತ್ಯ,
ಅಧ್ಯಾತ್ಮ
ಇತ್ಯಾದಿ.
ಇ೦ತಹ
ವರ್ಣರ೦ಜಿತ ಪಾಠಗಳಿಗೆ ಮತ್ತೊ೦ದು
ಉದಾಹರಣೆ ಸಿಕ್ಕಿದ್ದು ಅಮೆರಿಕದಲ್ಲಿ.
ನಾನು
ಮಿಶಿಗನ್ ವಿದ್ಯಾಲಯದಲ್ಲಿ
ಓದುತ್ತಿದ್ದಾಗ ಖ್ಯಾತ ಕ್ವಾ೦ಟಮ್
ವಿಜ್ಞಾನಿ ಸೋಮರ್ ಫೆಲ್ಡ್ ಅವರ
ಶಿಷ್ಯ ಆಟ್ಟೊ ಲಪೋರ್ಟ್ ರ
ಪಾಠಗಳಲ್ಲಿ ಇದ್ದಕ್ಕಿದ ಹಾಗೆ
ಇಮ್ಯಾನ್ಯುಯಲ್ ಕಾ೦ತ್ ಮತ್ತು
ಇತರ ತತ್ವಶಾಸ್ತ್ರಜ್ಞರು
ಬ೦ದುಹೋಗುತ್ತಿದ್ದರು.
ಈ
ಪುಸ್ತಕದ ಪ್ರತಿ ಅಧ್ಯಾಯದಲ್ಲೂ
ಮೊದಲು ವೈಜ್ಞಾನಿಕ ವಿಷಯಗಳ ಲಘು
ಚರ್ಚೆಯಿದ್ದು ಕೊನೆಯಲ್ಲಿ
ಬೇಕಾದ್ದು ಮತ್ತು ಬೇಡದ್ದು
ವಿಷಯಗಳ ಬಗ್ಗೆ ಹರಟೆಗಳಿವೆ.
ಈ
ಮಾತುಕತೆಯ ಮಾದರಿ ಹೊಸದೇನಲ್ಲ;
ಇದು
ಪುರಾತನ ಭಾರತ ಮತ್ತು ಗ್ರೀಸಿನಿ೦ದ
ಇಟಲಿಯ ಮೂಲಕ ಹರಿದು ಬ೦ದಿರುವ
ನಿರೂಪಣಾ ಶೈಲಿ.
---------------------------------------------------------------
ಹಿ೦ದಿನ
ಪುಟ
ಅನ್ಯ
ಗ್ರಹ ಜೀವಿ (
ಏಲಿಯನ್ಸ್)ಗಳ
ಬಗ್ಗೆ ಕುತೂಹಲವಿರುವ ನಕ್ಷತ್ರಿಕ
ಮತ್ತು ನಿಹಾರಿಕಾ ಎ೦ಬ ಇಬ್ಬರು
ವಿದ್ಯಾರ್ಥಿಗಳು ತಮ್ಮ ಟೀಚರ್
ಬಳಿ ಬ೦ದು ಇದರ ಬಗ್ಗೆ ವಿಚಾರಿಸುತ್ತಾರೆ.
ಅವುಗಳ
ಬಗ್ಗೆ ಬೇಗ ತಿಳಿದುಕೊ೦ಡು ಹೋಗುವ
ಆತುರ ಈ ವಿದ್ಯಾರ್ಥಿಗಳಿಗೆ.
ಆದರೆ
ಅಧ್ಯಾಪಕರು "ಅದಕ್ಕೆ
ಉತ್ತರ ಕೊಡುವ ಮೊದಲು ಬಹಳ ವಿಷಯಗಳನ್ನು
ತಿಳಿದುಕೊಳ್ಳಬೇಕಾಗುತ್ತದೆ "
ಎ೦ದು
ಅವರನ್ನು ೧೨ ದಿವಸಗಳು ಉಳಿಸಿಕೊಳ್ಳುತಾರೆ.
ಈ
ಮೂವರ ಮಾತುಕತೆಗಳಲ್ಲಿ "
ಜೀವಿಗಳಿರಬೇಕಾದರೆ
ಗ್ರಹ ಯಾವ ತರಹ ಇರಬೇಕು ?
ನಮ್ಮ
ಭೂಮಿಯ ಅತಿಶಯವೇನು?
ಭೂಮಿ
ನೀರನ್ನು ಮತ್ತು ವಾತಾವರಣವನ್ನು
ಹೇಗೆ ಗಳಿಸಿತು?
ಯಾವ
ಗುಣಗಳುಳ್ಳ ನಕ್ಷತ್ರದ ಬಳಿ ಇ೦ಥ
ಗ್ರಹಗಳಿಗೆ ಸ್ಥಾನವಿದೆ?
ನಮ್ಮ
ಸೌರಮ೦ಡಲದಲ್ಲೇ ಮ೦ಗಳ ಮತ್ತು
ಇತರ ಗ್ರಹ ಉಪಗ್ರಹಗಳು ವಾಸಯೋಗ್ಯವೇ
? ನಮ್ಮ
ಗೆಲಕ್ಸಿಯಲ್ಲೇ ಭೂಮಿಯ೦ತಹ ಇತರ
ಗ್ರಹಗಳಿವೆಯೇ ?
ಹೊರಗಿನವರನ್ನು
ನಾವು ಸ೦ಪರ್ಕಿಸಲು ಪ್ರಯತ್ನಿಸಿದ್ದೇವೆಯೇ?
ಭವಿಷ್ಯದ
ಭೂಮಿಗಳಿಗೆ ಹುಡುಕಾಟ ಯಾವಾಗ
ಶುರುವಾಯಿತು?
ಬಾಹ್ಯಾಕಾಶ
ಯಾನ ಹೇಗೆ ಮತ್ತು ಯಾವಾಗ ಶುರುವಾಯಿತು?
ಈ
ಅಗಾಧ ವಿಶ್ವದಲ್ಲಿ ನಮ್ಮ ತರಹ
ನಾಗರಿಕತೆ ಹುಟ್ಟಿ ನಾಶವಾಗಿರಬಹುದೇ
"
ಇತ್ಯಾದಿ
ವಿಷಯಗಳ ಚರ್ಚೆಗಳು ನಡೆಯುತ್ತವೆ.
ಈ
ವಿಷಯಗಳಲ್ಲದೆ ಈ ಮೂವರೂ ಪ್ರತಿ
ದಿನ ಕಡೆಯಲ್ಲಿ ಸ್ವಲ್ಪ ಹರಟೆ
ಹೊಡೆಯುತ್ತಾರೆ.
ಈ
ಹರಟೆಯಲ್ಲಿ ಇತಿಹಾಸ,
ವೈಜ್ಞಾನಿಕ
ಕಥಾ ಸಾಹಿತ್ಯ,
ಸಿನೆಮಾಗಳು,ಎಲ್ಲ
ಬ೦ದು ಹೋಗುತ್ತವೆ.
ಈ
ಕೃತಿಯನ್ನು ರಚಿಸಿರುವ ಪಾಲಹಳ್ಳಿ
ವಿಶ್ವನಾಥ್ ಅವರು ಮೈಸೂರು ಮತ್ತು
ಮಿಶಿಗನ್ ವಿಶ್ವವಿದ್ಯಾಲ್ಯಗಳಲ್ಲಿ
ಅಧ್ಯಯನಮಾಡಿ ಅನ೦ತರ ಮು೦ಬಯಿಯ
ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ
(ಟಿ.
ಐ.
ಎಫ್.ಆರ್)
ಮತ್ತು
ಬೆ೦ಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ
ಸ೦ಸ್ಥೆ (ಐ.
ಐ.
ಎ)
ಯಲ್ಲಿ
ಪ್ರಾಧ್ಯಾಪಕರಾಗಿದ್ದರು.
ಭಾರತ
ಮತ್ತು ಅಮೆರಿಕದಲ್ಲಿ ಹಲವಾರು
ಭೌತವಿಜ್ಞಾನ ಮತ್ತು ಖಗೋಳ
ವಿಜ್ಞಾನದ ಪ್ರಯೋಗಗಳಲ್ಲಿ
ಭಾಗಿಯಾಗಿದ್ದರು.
ಕಳೆದ
ಕೆಲವು ವರ್ಷಗಳಿ೦ದ ಕನ್ನಡದಲ್ಲಿ
ವಿಜ್ಞಾನ ಪ್ರಸಾರಣೆಯ ಕಾರ್ಯವನ್ನು
ಮಾಡುತ್ತಿದ್ದಾರೆ.
ಮೂರು
ಪುಸ್ತಕ (
'ಭೂಮಿಯಿ೦ದ
ಬಾನಿನತ್ತ,
ಕಣ
ಕಣ ದೇವಕಣ,
ಖಗೋಳ
ವಿಜ್ಞಾನದ ಕಥೆ (ಅನುವಾದ)')
ಗಳನ್ನು
ರಚಿಸಿದ್ದಾರೆ .
ಪತ್ರಿಕೆಗಳಲ್ಲಿ
ಲೇಖನಗಳನ್ನು ಬರೆಯುವುದು ,
ಸ್ಕೂಲು
ಕಾಲೇಜು ಮಕ್ಕಳೊ೦ದಿಗೆ ಚರ್ಚೆಗಳಲ್ಲಿ
ಮತ್ತು ವಿಜ್ಞಾನದ ಬಗ್ಗೆ ನಡೆಯುವ
ಟಿವಿ.
ಕಾರ್ಯಕ್ರಮಗಳಲ್ಲಿ
ಭಾಗವಹಿಸುತ್ತಿರುತ್ತಾರೆ.
No comments:
Post a Comment