ಹೊಸತು
- ಜನವರಿ
೨೦೧೮
ಪ್ರಪ೦ಚ
ಕ೦ಪಿಸಿದಾಗ..
ಪಾಲಹಳ್ಳಿ
ವಿಶ್ವನಾಥ್
ಬಾಕ್ಸ್
--____________________________________________________________________
೧೭ನೆಯ
ಆಗಸ್ಟ್
೨೦೧೭
! ಈ
ತಾರೀಖಿನಲ್ಲಿ
ಸ೦ಖ್ಯೆ
೧೭
ಎರಡು
ಬಾರಿ
ಬ೦ದಿರುವುದನ್ನು
ಬಿಟ್ಟರೆ
ಮತ್ತೆ
ಏನಾದರೂ
ವಿಶೇಷ
ವಿದೆಯೇ? ಅ೦ದು
ಆಲ್ಬರ್ಟ್
ಐನ್
ಸ್ಟೈನರ
ಖ್ಯಾತ
ಸಿದ್ಧಾ೦ತವೊ೦ದಕ್ಕೆ
ಮತ್ತೊ೦ದು
ಖಚಿತ
ಪುರಾವೆ
ಸಿಕ್ಕಿತ್ತು.
ಅವರು
ಬದುಕಿದ್ದಿದ್ದರೆ
ಅ೦ದು
ಅವರ
ಮುಖದಲ್ಲಿ
ಮ೦ದಹಾಸವಿದ್ದು
' ನಾನು
ಹಿ೦ದೆಯೇ
ಹೇಳಿರಲಿಲ್ಲವೇ
" ಎನ್ನುತ್ತಿದ್ದರೋ
ಏನೊ
! ಆದರೆ
" ಅದು
ಎ೦ದಿಗೂ
ಪರೀಕ್ಷಿಸಲಾಗುವುದಿಲ್ಲ
ವೇನೋ
ಎ೦ದು
ಕೊ೦ಡಿದ್ದೆ' "
ಎ೦ದೂ
ಸೇರಿಸುತ್ತಿದ್ದಿರಬಹುದು
ಕೂಡ
! ೧೯೧೫ರಲ್ಲಿ
ಆಲ್ಬರ್ಟ್
ಐನ್
ಸ್ಟೈನರು
ಮ೦ಡಿಸಿದ
ಖ್ಯಾತ
ಸಾರ್ವತ್ರಿಕ
ಸಾಪೇಕ್ಷತಾ
ಸಿದ್ಧಾ೦ತಕ್ಕೆ
ಮೊದಲ
ಪುರಾವೆ
ಸಿಕ್ಕಿದ್ದು
೪
ವರ್ಷಗಳ
ನ೦ತರ
. ಅವರಿಗೆ
ತಮ್ಮ
ಸಿದ್ಧಾ೦ತಗಳಲ್ಲಿ
ಅಪಾರ
ಭರವಸೆ
ಇದ್ದಿತು. ಆದರೂ
ಅವರ
ಸ್ನೇಹಿತ
ಮೇರು
ವಿಜ್ಞಾನಿ
ಮ್ಯಾಕ್ಸ್
ಪ್ಲಾ೦ಕ್
ಸಿದ್ಧಾ೦ತಗಳಿಗೆ
ಪುರಾವೆ
ಸಿಗುವುದು
ಒಳ್ಳೆಯದು
ಎ೦ದಿದ್ದರು. ಈಗ
ಅದೇ
ಸಿದ್ಧಾ೦ತದ
ಮತ್ತೊ೦ದು
ಪ್ರತಿಪಾದನೆಗೂ
ಖಚಿತ
ಪುರಾವೆ
ಸಿಕ್ಕಿದೆ
: ಅವೇ
ಭೀಮ
ದುರ್ಯೋಧನರ
ಯುದ್ಧದಲ್ಲಿ
ಭೂಮಿ
ಕ೦ಪಿಸಿದ೦ತೆ
ದೈತ್ಯ
ಆಕಾಶಕಾಯಗಳ
ಘರ್ಷಣೆಯಲ್ಲಿ
ಪ್ರಪ೦ಚ
ಕ೦ಪಿಸಿದಾಗ
ಹುಟ್ಟುವ
ಗುರುತ್ವದ
ತರ೦ಗಗಳು
!
________________________________________________________________
(೧)
ವ್ಯೋಮ-ಕಾಲ
ಸೌರಮ೦ಡಲದ
ಗ್ರಹಗಳ
ಚಲನೆಯನ್ನು
ವಿವರಿಸಲು
೧೭
ನೆಯ
ಶತಮಾನದಲ್ಲಿ
ಐಸಾಕ್
ನ್ಯೂಟನ್
ದ್ರವ್ಯರಾಶಿಯ
ಮೂಲ
ಗುಣ
ಗುರುತ್ವ
ಮತ್ತು
ಎರಡು
ದ್ರವ್ಯರಾಶಿಗಳ
ಮಧ್ಯೆ
ಇರುವುದು
ಗುರುತ್ವಾಕರ್ಷಣೆ
ಎ೦ದು
ತನ್ನ
ಸಿದ್ಧಾ೦ತವನ್ನು
ಪ್ರತಿಪಾದಿಸಿದ್ದನು.
ಆದರೆ
ದೂರದ
ಸೂರ್ಯ
ಭೂಮಿಯ
ಮೇಲೆ
ಹೇಗೆ
ಪ್ರಭಾವ
ಬೀರಬಲ್ಲದು
?
ಈ
ಪ್ರಶ್ನೆಗೆ
ಉತ್ತರವಿಲ್ಲದಿರುವುದು
ತನ್ನ
ಸಿದ್ಧಾ೦ತದ
ಕೊರತೆ
ಎ೦ದು
ಅವನಿಗೆಅರಿವಿತ್ತು.
೧೯೦೫ರಲ್ಲಿ
ಐನ್ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ
ಸಿದ್ಧಾ೦ತವನ್ನು ಮ೦ಡಿಸಿದಾಗ
ವಿಜ್ಞಾನ ಜಗತ್ತಿನಲ್ಲಿ ಹೊಸ
ಗಾಳಿ ಬೀಸಲಾರ೦ಭಿಸಿತು.
ಕೆಲವೇ
ವರ್ಷಗಳ ನ೦ತರ ಅವರು ತಮ್ಮ ಯೋಜನೆಯಲ್ಲಿ
ಗುರುತ್ವವನ್ನು
ಅಳವಡಿಸಲು
ಪ್ರಾರ೦ಭಿಸಿ
,
೧೯೧೫ರ
ನವೆ೦ಬರಿನಲ್ಲಿ ಬರ್ಲಿನ್ ನಗರದಲ್ಲಿ
೪ ಉಪನ್ಯಾಸಗಳ ಮೂಲಕ ತಮ್ಮ ಹೊಸ
ಸಿದ್ಧಾ೦ತವನ್ನು ಮ೦ಡಿಸಿದರು.
ಆ
ಸಿದ್ಧಾ೦ತವೆ ಪ್ರಖ್ಯಾತ ಸಾರ್ವತ್ರಿಕ
ಸಾಪೇಕ್ಷತಾ ಸಿದ್ಧಾ೦ತ (ಜನರಲ್
ಥಿಯರಿ ಅಫ್ ರಿಲೆಟಿವಿಟಿ)
!
ಒ೦ದು
ಘಟನೆಯನ್ನು
ವಿವರಿಸಬೇಕಾದರೆ
ಅದು
ಎಲ್ಲಿ
ನಡೆಯಿತು
(೩
ಆಯಾಮಗಳು)
ಎ೦ದಲ್ಲದೆ
ಅದು
ಯಾವಾಗ
(೪ನೆಯ
ಆಯಾಮ) ನಡೆಯಿತು
ಎ೦ಬುದನ್ನೂ
ಸ್ಪಷ್ಟಪಡಿಸಬೇಕಾದ
ಅವಶ್ಯಕತೆಯನ್ನು
ಐನ್
ಸ್ಟೈನ್
ಮತ್ತು
ಮಿನ್ಕೋವ್
ಸ್ಕಿ
ಮ೦ಡಿಸಿ
೧೯೦೮ರಲ್ಲಿ
ವ್ಯೋಮ/ದೇಶ-ಕಾಲ
ಪರಿಕಲ್ಪನೆಗೆ
ಜನ್ಮಕೊಟ್ಟರು.
ಸಾರ್ವತ್ರಿಕ
ಸಾಪೇಕ್ಷತಾ
ಸಿದ್ಧಾ೦ತದ
ಪ್ರಕಾರ
ಆಕಾಶಕಾಯ
ಅಥವಾ
ಯಾವುದಾದರೂ
ದ್ರವ್ಯರಾಶಿ
ಇದ್ದಲ್ಲಿ ವ್ಯೋಮ-ಕಾಲದ
ಅಖ೦ಡತೆ
ಡೊ೦ಕು/
ವಕ್ರವಾಗುತ್ತದೆ..
ಸಾಮಾನ್ಯವಾಗಿ
ಇದಕ್ಕೆ
ಒ೦ದು
ರಬ್ಬರ್
ಹಾಳೆಯ ಮೇಲೆ
ಒ೦ದು
ಭಾರದ
ಚೆ೦ಡನ್ನು
ಇಟ್ಟಾಗ
ಅ
ಸ್ಥಳಬಗ್ಗಿ
ಕಾಣಿಸುವ
ವಕ್ರತೆಯನ್ನು
ಉದಾಹರಣೆಯಾಗಿ
ಕೊಡುತ್ತಾರೆ.
ಎರಡು
ದ್ರವ್ಯರಾಶಿಗಳು
ವ್ಯೋಮ-ಕಾಲದ
ಅಖ೦ಡತೆಯಲ್ಲಿ ಉ೦ಟುಮಾಡುವ
ಇಳಿಜಾರು
ಎರಡೂ
ರಾಶಿ
ಗಳನ್ನು
ಹತ್ತಿರ
ತರುತ್ತದೆ. ಈ
ರೀತಿ
ಸೂರ್ಯ
ಮತ್ತು
ಭೂಮಿಯ
ಮಧ್ಯೆಯ
ಗುರುತ್ವಾಕರ್ಷಣೆಯನ್ನು
ಅರ್ಥಮಾಡಿಕೊಳ್ಳಬಹುದು.
(೨)
ಗುರುತ್ವದ
ತರ೦ಗಗಳು
ದ್ರವ್ಯರಾಶಿಯ
ಚಲನೆಯಲ್ಲಿ
ವೇಗೋತ್ಕರ್ಷ
ಉ೦ಟಾದಾಗ
ಇಡೀ
ವ್ಯೋಮ-ಕಾಲ
ಜಾಲದಲ್ಲಿ
ಕ೦ಪನ
ಉ೦ಟಾಗಿ
ಅದು
ತರ೦ಗ
ರೂಪದಲ್ಲಿ
ಎಲ್ಲ
ಕಡೆಯೂ
ಹರಡುತ್ತದೆ..
ಒ೦ದು
ಕೊಳಕ್ಕೆ
ಕಲ್ಲೊ೦ದನ್ನು
ಎಸೆದರೆ
ಉ೦ಟಾಗುವ
ಅಲೆಗಳ
ತರಹವೆ
ಈ
ಅಲೆಗಳು.
ಸಾಧಾರಣ
ದ್ರವ್ಯರಾಶಿಗಳಿ೦ದ ಈ ತರ೦ಗಗಳು
ಉತ್ಪತ್ತಿಯಾದರೂ ಅವು ಕ್ಷೀಣವಾಗಿರುತ್ತವೆ;
ಅದಲ್ಲದೆ
ಅವುಗಳು ಅನೇಕ ಜ್ಯೋತಿರ್ವರ್ಷಗಳ
ದೂರದಲ್ಲಿ ಉತ್ಪಾದನೆಯಾಗಿ ಭೂಮಿಗೆ
ಬರುವಾಗ ಮತ್ತೂ ಕ್ಷೀಣವಾವಿಬಿಡುತ್ತವೆ.
ಆದ್ದರಿ೦ದ
ಅವುಗಳನ್ನು ಕ೦ಡುಹಿಡಿಯುವುದು
ಕಷ್ಟ.
ಇದರ
ಅರಿವಿದ್ದ
ಐನ್ಸ್
ಟೈನರಿಗೆ
ಅ೦ತಹ
ತರ೦ಗಗಳನ್ನು ಕ೦ಡುಹಿಡಿಯಲು
ಆಗುವುದಿಲ್ಲವೇನೋ ಎ೦ಬ ಅನುಮಾನವಿದ್ದಿತು.
.
ಭೂಮಿ
ನಡುಗಬೆಕಾದರೆ ಭೀಮ ಮತ್ತು ದುರ್ಯೋಧನರ
೦ತಹವರ ಮಧ್ಯೆ ಯುದ್ಧವಾಗಬೇಕಲ್ಲವೇ?
ಹೀಗೆಯೇ
ಅತಿ ಹೆಚ್ಚು ರಾಶಿಯ ಆಕಾಶಕಾಯಗಳು
ಪಾತ್ರ ವಹಿಸುವ ವಿದ್ಯಮಾನಗಳು
ನಡೆದಾಗ ವ್ಯೋಮ-ಕಾಲ
ಜಾಲದಲ್ಲಿ ಕ೦ಪನ ಹೆಚ್ಚಾಗಿ
ಗುರುತ್ವದ ತರ೦ಗಗಳನ್ನು
ಕ೦ಡುಹಿಡಿಯಬಹುದೆ೦ಬ ನಿರೀಕ್ಷೆ
ಹುಟ್ಟಿತು.
ಅ೦ತಹ
ಆಕಾಶಕಾಯಗಳು ಯಾವುವು ಎ೦ದು
ಯೋಚಿಸಿದರೆ ಸಿಗುವುದು ಎರಡು
ಮುಖ್ಯ ಉದಾಹರಣೆಗಳು.
: ನ್ಯೂಟ್ರಾನ್
ನಕ್ಷತ್ರಗಳು ಮತ್ತು ಕಪ್ಪು
ಕುಳಿಗಳು.
! ಇವೆರಡೂ
ಹುಟ್ಟುವುದು ಹೆಚ್ಚು ದ್ರವ್ಯರಾಶಿಯ
ತಾರೆಗಳ ಜೀವನದ ಅ೦ತ್ಯದಲ್ಲಿ.
(೧)
ನ್ಯೂಟ್ರಾನ್
ನಕ್ಷತ್ರ ೨-೩
ಸೌರ ರಾಶಿಯನ್ನು ಅತಿ ಚಿಕ್ಕ (
~ ೨೦-೩೦
ಕಿಮೀ ಅಗಲದ,
ಅ೦ದರೆ
ಒ೦ದು ಮಹಾನಗರದಷ್ಟು ಜಾಗ)
ಸ್ಥಳದಲ್ಲಿ
ಅಳವಡಿಸಿಕೊ೦ಡಿರುವ ಆಕಾಶಕಾಯ;
ಬಹಳ
ಕಾಲ ಬರೇ ಕಲ್ಪನೆಯಾಗಿದ್ದ ಈ
ನಕ್ಷತ್ರವನ್ನು ೧೯೬೭ರಲ್ಲಿ
ಬೆಳಕು/ರೇಡಿಯೊ
ಕಿರಣಗಳನ್ನು ನಿಯತಕಾಲಿಕವಾಗಿ
ಕಳಿಸುವ '
ಪಲ್ಸಾರ್'
' ಎ೦ಬ
ಕಾಯದ ರೂಪದಲ್ಲಿ ಕ೦ಡುಹಿಡಿಯಲಾಗಿದ್ದು
ಇ೦ದು ೨೦೦೦ಕ್ಕೂ ಹೆಚ್ಚು ಅ೦ತಹ
ನಕ್ಷತ್ರಗಳನ್ನು ಗುರುತಿಸಲಾಗಿದೆ.;
ಅವುಗಳ
ಸ೦ಖ್ಯೆ ನಮ್ಮ ಗ್ಯಾಲಕ್ಸಿಯಲ್ಲೇ
ಒ೦ದು ಬಿಲಿಯ ಇರಬಹುದು.
(೨)
ಮತ್ತೂ
ಹೆಚ್ಚು ದ್ರವ್ಯರಾಶಿಯನ್ನು
ಇನ್ನೂ*
ಚಿಕ್ಕ
ಸ್ಥಳದಲ್ಲಿ ಹೊ೦ದಿರುವ ಆಕಾಶಕಾಯದಲ್ಲಿ
ಅಗಾಧ ಸಾ೦ದ್ರ್ತತೆಯಿ೦ದಾಗಿ
ಬೆಳಕೂ ಹೊರಬರಲು ಸಾಧ್ಯವಿಲ್ಲವಾದ್ದರಿ೦ದ
ಇವಕ್ಕೆ ಕಪ್ಪು ಕುಳಿ (ಬ್ಲ್ಯಾಕ್
ಹೋಲ್)
ಗಳೆ೦ದು
ಕರೆಯಲಾಯಿತು;
ಇವುಗಳನ್ನು
ನೇರವಾಗಿಯಲ್ಲವಾದರೂ ಪರೋಕ್ಷವಾಗಿ
ಇವುಗಳ ಪ್ರಭಾವದಿ೦ದ ಕ೦ಡುಹಿಡಿಯಲಾಗಿದೆ
ಗುರುತ್ವದ
ತರ೦ಗಗಳಿಗೆ ಮೊದಲ ಪುರಾವೆ
ಸಿಕ್ಕಿದ್ದು ೧೯೭೪ರಲ್ಲಿ.
ಒ೦ದು
ಅವಳಿ-ಜವಳಿ
ನ್ಯೂಟ್ರಾನ್ ನಕ್ಷ್ತತ್ರಗಳ
ವ್ಯವಸ್ಥೆಯಿದ್ದಾಗ ಅವು ಹತ್ತಿರ
ಹತ್ತಿರ ಬರುತ್ತ ಗುರುತ್ವದ ಅಲೆಗಳು
ಹುಟ್ಟುತ್ತವೆ;
ಅ೦ತಹ
ಎರಡು ನಕ್ಷತ್ರಗಳ ಮಧ್ಯೆಯ ದೂರ
ಕಡಿಮೆಯಾಗುತ್ತ ಹೋಗುವುದನ್ನು
ಕ೦ಡುಹಿಡಿದ ಈ ಆವಿಷ್ಕಾರಕ್ಕೆ
ನೊಬೆಲ್ ಪ್ರಶಸ್ತಿಯೂ ಬ೦ದಿತು..
ಆದರೆ
ಇದು ಪರೋಕ್ಷ ಆವಿಷ್ಕಾರವಾಗಿದ್ದಿತು.
ನೇರವಾಗಿ
ಕ೦ಡುಹಿಡಿದರೆ ಮಹತ್ವ ಹೆಚ್ಚಲ್ಲವೆ?
೧೯೮೦ರಲ್ಲಿಯೆ
ವಿಜ್ಞಾನಿಗಳು ಗುರುತ್ವದ ಅಲೆಗಳನ್ನು
ನೇರವಾಗಿ ಕ೦ದುಹಿಡಿಯುವ ವಿಧಾನವನ್ನು
ಮ೦ಡಿಸಿದ್ದರು .
ಗುರುತ್ವದ
ತರ೦ಗಳು ಹರಡುತ್ತಾ ಹೋಗಿ ಭೂಮಿಯ
ಬಳಿ ಬ೦ದಾಗ ಅದರ ಪ್ರಭಾವದಿ೦ದ
ಎರಡು ವಸ್ತುಗಳ ಮಧ್ಯೆಯ ದೂರ
ನಿಯತಕಾಲಿಕವಾಗಿ ಹೆಚ್ಚು
ಕಡಿಮೆಯಾಗುತ್ತದೆ ;
ಈ
ಬದಲಾವಣೆಯ ಅವಧಿ ಗುರುತ್ವದ ತರ೦ಗಗಳ
ಆವೃತ್ತಿಯೆ ಆಗಿರುತ್ತದೆ.
.ಆದ್ದರಿ೦ದ
ಈ ಬದಲಾವಣೆಯನ್ನು ವ್ಯತೀಕರಣ ('
ಇ೦ಟರ್
ಫಿಯರೆನ್ಸ್)
ಮಾಪಕದಿ೦ದ
ಅಳೆದರೆ ಗುರುತ್ವದ ಅಲೆಗಳ
ಆವಿಷ್ಕಾರವಾಗುತ್ತದೆ.
ಆ
ಉಪಕರಣಾಗಳ ಹೆಸರು ಲೈಗೊ.
ಈ
ಉಪಕರಣದಲ್ಲಿ ಲೇಸರ್ ಬೆಳಕನ್ನು
ಸೀಳು ಮಾಡಿ ಎರಡು ದಿಕ್ಕುಗಳಲ್ಲಿ
ಕಳಿಸಲಾಗುತ್ತದೆ.
ಬೆಳಕಿನ
ಕಿರಣಗಳು ಎರಡು (ಒ೦ದಕ್ಕೊ೦ದು
ಲ೦ಬವಿರಬೇಕು)
ದಿಕ್ಕುಗಳಲ್ಲಿ
ಅತಿ ದೂರ (೪
ಕಿಮೀ)
ಪ್ರಯಾಣಮಾಡಿ
ವಾಪಸ್ಸು ಅದು ಹೊರಟ ಜಾಗಕ್ಕೆ
ಬರಬೇಕಾಗುತ್ತದೆ..
ಸಾಮಾನ್ಯವಾಗಿ
ಎರಡೂ ಕಡೆಗಳಿ೦ದಲೂ ಬೆಳಕು ಒ೦ದೇ
ಸಮಯಕ್ಕೆ ಮೂಲ ಸ್ಥಳಕ್ಕೆ ಬರುತ್ತದೆ.
ಆದರೆ
ಕ೦ಪನವಿದ್ದು ಗುರುತ್ವದ ಅಲೆಗಳ
ಪ್ರಭಾವದಿ೦ದಾಗಿ ,
ಭೂಮಿ
ಒ೦ದು ದಿಕ್ಕಿನಲ್ಲಿ ಹಿಗ್ಗಿದ್ದು
,ಇನ್ನೊ೦ದರಲ್ಲಿ
ಕುಗ್ಗಿರುತ್ತದೆ.
ಈ
ವ್ಯತ್ಯಾಸ ಬಹಳ ಕಡಿಮೆ ಇದ್ದು
ಪ್ರಯೋಗಗಳನ್ನು ಬಹಳ ಸೂಕ್ಷ್ಮವಾಗಿ
ನಡೆಸಬೇಕಾಗುತ್ತದೆ.
ಬೇರೆ
ಬೆರೆ ಪ್ರಕ್ರಿಯೆಗಳಿ೦ದ ಕ೦ಪನಗಳು
ಉ೦ಟಾಗಬಹುದಾದ್ದರಿ೦ದ ಒ೦ದು
ಘಟನೆಯು ನಿಜವೇ ಎ೦ದು ಖಚಿತವಾಗಿ
ಹೇಳಲು ಬಹಳ ದೂರದಲ್ಲಿರುವ ಎರಡಾದರೂ
ಉಪಕರಣ ಗಳು ಅವಶ್ಯವಾಗುತ್ತವೆ.
ಈ
ಉದ್ದೇಶದಿ೦ದ ಎರಡು ಲೈಗೊ
ಉಪಕರಣಗಳನ್ನು (
ಒ೦ದು
ಅಮೆರಿಕದ ದಕ್ಷಿಣ ಭಾಗದಲ್ಲಿ,
ಮತ್ತೊದು
ವಾಯುವ್ಯ ಭಾಗದಲ್ಲಿ -
ಇವುಗಳ
ಮಧ್ಯೆ ದೂರ ~೩೦೦೦
ಕಿಮೀಗಳು )
೨೦೧೪ರಲ್ಲಿ
ಬಳಸಲು ಪ್ರಾರ೦ಭವಾಯಿತು.
೨೦೦೨ರಲ್ಲಿಯೇ
ಮೊದಲ ಪ್ರಯೋಗಗಳು ನಡೆದರೂ ಉಪಕರಣ
ಮತ್ತು ವಿಧಾನ ಸುಧಾರಿಸುತ್ತ
ಹೋಗಿ ಸೆಪ್ಟೆ೦ಬರ್ ೨೦೧೫ನಲ್ಲಿ
ಮತ್ತೆ ಪ್ರಾ೦ಭವಾಯಿತು.
ಭೂಮಿಗೂ
ಮತ್ತು ಹತ್ತಿರದ ಅಲ್ಫ ಸೆ೦ಟೋರಿ
ನಕ್ಷತ್ರಕ್ಕೂ ಇರುವ ದೂರ (೪.೨
ಜ್ಯೋತಿರ್ವರ್ಷಗಳು-
೨೫
ಟ್ರಿಲಿಯನ್ ಕಿಮೀಗಳು))ದಲ್ಲಿ
ಒ೦ದು ಕೂದಲೆಳೆಯಷ್ಟು ಬದಲಾವಣೆಯನ್ನು
ಕೂಡ ಗುರುತಿಸುವ ಡಾಖಲಿಸುವ
ಸಾಮರ್ಥ್ಯವಿರುವ ಉಪಕರಣಗಳಿವು
! ಅಮೆರಿಕದ
ಅತ್ಯ೦ತ ದುಬಾರಿ ಮೂಲಭೂತ ವೈಜ್ಞಾನಿಕ
ಪ್ರಯೋಗಗಳಲ್ಲಿ ಇದೂ ಒ೦ದು .
ಪ್ರಯೋಗ
ಶುರುವಾದ ಕೆಲವೇ ದಿನಗಳಲ್ಲಿ -
ಸೆಪ್ಟೆ೦ಬರ್
೧೪, ೨೦೧೫
ರ೦ದು -
ಮೊದಲನೆಯ
ಗುರುತ್ವದ ತರ೦ಗಗಳ ದಾಖಲೆಯಾಯಿತು.
ದತ್ತಾ೦ಶವನ್ನು
ಪರಿಶೀಲಿಸಲು ಸ್ವಲ್ಪ ಸಮಯ ಬೇಕಾಗಿ
ಫೆಬ್ರವರಿ ೨೦೧೬ರಲ್ಲಿ ಇದರ ಬಗ್ಗೆ
ಅಧಿಕೃತ ಹೋಷಣೆ ನಡೆಯಿತು.
೧.೩
ಬಿಲಿಯ ಕಿಮೀ ದೂರದಲ್ಲಿ ಎರಡು
ಕಪ್ಪುಕುಳಿಗಳ (೨೯
ಮತ್ತು ೩೬ ಸೌರರಾಶಿಗಳ ಕಪ್ಪುಕುಳಿಗಳು)
ಘರ್ಷಣೆಯಿ೦ದ
ಹೊಸ ಕಪ್ಪು ಕುಳಿ ಹುಟ್ಟಿದಾಗ
ಉಳಿದ ೩ ಸೌರರಾಶಿಯಷ್ಟು ಶಕ್ತಿ
ಗುರುತ್ವ ತರ೦ಗಳಾಗಿ ಪರಿವರ್ತನೆಗೊ೦ಡು
ಎಲ್ಲೆಲ್ಲೂ ಹರಡಿದವು ಎ೦ದು
ತಿಳಿದು ಬ೦ದಿತು.
ಕೆಲವು
ವಿದ್ಯಮಾನಗಳಿ೦ದ ಬೆಳಕು ಮತ್ತು
ಇತರ ವಿದ್ಯ್ಯುತ್ಕಾ೦ತೀಯ ತರ೦ಗಗಳು
ಭೂಮಿಗೆ ಬರಲು ಅಡಚಣೆಗಳಿದ್ದರೂ
ಗುರುತ್ವದ ತರ೦ಗಗಳನ್ನು ಈ ರೀತಿ
ದಾಖಲಿಸಬಹುದಾದ್ದರಿ೦ದ ಇದನ್ನು
ಹೊಸ ಖಗೋಳ ವಿಜ್ಞಾನ ಎ೦ದೂ
ಘೋಷಿಸಲಾಯಿತು.
ಇದರ
ಆನ೦ತರ ೧೫ ಡಿಸೆ೦ಬರ್ ೨೦೧೬ ಜೂನ್
೧ ೨೦೧೭,ಆಗಸ್ಟ್
೧೪೨೦೧೭ ರಲ್ಲಿ ಲೈಗೊ ಉಪಕರಣಾಗಳು
ಮತ್ತೆ ಈ ತರ೦ಗಗಳನ್ನು ದಾಖಲಿಸಿದವು.
ಇವೂ
ಕೂಡಾ ಕಪ್ಪು ಕುಳಿಗಳ ಘರ್ಷಣೆಗಳಿ೦ದ
ಹುಟ್ಟಿದ್ದವು ಎ೦ದು ನಿರ್ಧರಿಸಲಾಯಿತು.
ಈ
ಆವಿಷ್ಕಾರಗಳಿಗೆ ೨೦೧೬ರ ನೊಬೆಲ್
ಪ್ರಶಸ್ತಿಯನ್ನು ಈ ಪ್ರಯೋಗದ
ಮೂವರು ಮುಖ್ಯಸ್ಥರಿಗೆ ಕೊಡಲಾಯಿತು.
ಇಷ್ಟೆಲ್ಲ
ಆದರೂ ಅನುಮಾನವನ್ನು ವ್ಯಕ್ತಪಡಿಸುವವರು
ಇದ್ದೇ ಇದ್ದರು.
. ಉಪಕ್ರಣಗಳಲ್ಲಿ
ಏನಾದರೂ ಒ೦ದೇ ತರಹದ ಗಲಭೆ (ನಾಯ್ಸ್)
ಇರಬಹುದೇನೋ
? ಗುರ್ತುವದ
ತರ೦ಗಗಳ ಜೊತೆ ಬೇರೆ ವಿದ್ಯುತ್ಕಾ೦ತೀಯ
ತರ೦ಗಗಳು (
ಬೆಳಕು,ಇತ್ಯಾದಿ)
ಏಕೆ
ಇಲ್ಲ ?
೨೦-೩೦
ಸೌರರಾಶಿಯ ಕಪ್ಪು ಕುಳಿಗಳು ಹೆಗೆ
ತಯಾರಾಗುತ್ತವೆ ?
ಇವೆಲ್ಲಕ್ಕೂ
ಉತ್ತರವಾಗಿ ೧೭ ಆಗಸ್ಟ್ ೨೦೧೭ರ೦ದು
ಪ್ರಕೃತಿ ಒ೦ದು ಮಹಾ ಕೊಡುಗೆಯನ್ನು
ನೀಡಿತು !
(೩)
ಪ್ರಕೃತಿಯ
ಧಾರಾಳತನ.
೧೭
ಆಗಸ್ಟ್
೨೦೧೭
ರ೦ದು
೧೨.೪೧ರ
ಸಮಯದಲ್ಲಿ
ಲಿಗೊ
ಮತ್ತು
ಹೊಸದಾಗಿ
ಪ್ರಾರ೦ಭವಾಗಿದ್ದ
ಐಟಲಿಯ
ಪೀಸಾ
ನಗರದ
ಬಳಿಯ
ಇನ್ನೊ೦ದು
ಲಿಗೊ
ಉಪಕರಣ
ಒ೦ದು
ಗುರುತ್ವದ
ತರ೦ಗದ
ಘಟನೆಯನ್ನು
ದಾಖಲಿಸಿತು.
ಈ
ಘಟನೆಗೆ
ಸುಮಾರು
ಹತ್ತಿರ
(
~೧೩೦
ಮಿಲಿಯ
ಜ್ಯೋತಿರ್ವರ್ಷ)
ದೂರದಲ್ಲಿ
ನಡೆದ
ಎರಡು
ನ್ಯೂಟ್ರಾನ್
ನಕ್ಷತ್ರಗಳ
ಘರ್ಷಣೆ
ಕಾರಣ
ಎ೦ದು
ಅಕ್ಟೋಬರ್
೧೬
ರ೦ದು
ಘೋಷಿಸಲಾಯಿತು. ಹಿ೦ದೆ
ಕ೦ಡುಹಿಡಿದಿದ್ದ
ಗುರುತ್ವದ
ಅಲೆಗಳ
ಅವಧಿ
ಹಲವಾರು
ಸೆಕೆ೦ಡುಗಳು
ಮಾತ್ರ
ಇದ್ದಿತು; ಆದರೆ
ಈ
ತರ೦ಗಗಳು
೧೦೦
ಸೆಕೆ೦ಡುಗಳಿಗೂ
ಹೆಚ್ಚು
ಹೊತ್ತು
ಇದ್ದವು. ಆದ್ದರಿ೦ದ
ಇದರ
ಖಚಿತತೆಗೆ
ಯಾವ
ಅನುಮಾನವೂ
ಇರಲಿಲ್ಲ.
ಆ
ಸಮಯದಲ್ಲಿ
ಹೊರಬ೦ದ
ಶಕ್ತಿ
ನಮ್ಮ
ಗ್ಯಾಲಕ್ಕ್ಸಿ
ಒಟ್ಟು
ಹೊರಸೂಸುವ
ಶಕ್ತಿಗಿ೦ತ
ಬಿಲಿಯದಷ್ಟು
ಆ
ಹೆಚ್ದ್ಚು
ಎ೦ದೂತಿಳಿದುಬ೦ದಿತು.
ಅದಲ್ಲದೆ
ವಿಜ್ಞಾನಿಯೊಬ್ಬರು
ಹೇಳಿದ೦ತೆ
" ಒ೦ದೊ೦ದು
ಬಾರಿ
ಪ್ರಕೃತಿ
ಬಹಳ
ಧಾರಾಳವಾಗಿ
ವರ್ತಿಸುತ್ತದೆ
' ! ಅದೇನೆ೦ಬುದನ್ನು
ಮು೦ದೆ
ನೋಡೋಣ.
ಈ
ವಿದ್ಯಮಾನದ
ಅರಿವೇ
ಇಲ್ಲದ೦ತೆ
ಬಾಹ್ಯಾಕಾಶದಲ್ಲಿ
ಕಕ್ಷೆಯಲ್ಲಿರುವ
ಫರ್ಮಿ
ಗ್ಯಾಮಾ
ಕಿರಣ
ವೀಕ್ಷಣಾಲಯ
ಅದೇ
ಸ್ಥಳದಲ್ಲಿ
ಗ್ಯಾಮಾ
ಸ್ಫೋಟವೊ೦ದನ್ನು
ದಾಖಲು
ಮಾಡಿತ್ತು; ೩
ದಶಕದಿ೦ದ
ಇ೦ತಹ
ಬಹಳ
ಶಕ್ತಿಶಾಲೀ
ಆಸ್ಫೋಟಗಳನ್ನು
ಬಾಹ್ಯಾಕಾಶದ
ವಿವಿಧ
ಉಪಕ್ರಣಗಳು
ಪ್ರತಿ
ದಿನವೂ
ಕ೦ಡುಹಿಡಿಯಲಾಗಿದ್ದು
ಇವುಗಳಲ್ಲಿ
ಕೆಲವು
ನ್ಯೂಟ್ರಾನ್
ನಕ್ಷತ್ರಗಳ
ಘರ್ಷಣೆಯಲ್ಲಿ
ಹುಟ್ಟಬಹುದು
ಎ೦ಬ
ಸಿದ್ಧಾತಗಳು
ಇದ್ದವು. ಆದ್ದರಿ೦ದ
ಒ೦ದೇ
ಮೂಲದಿ೦ದ
ಗುರುತ್ವದ
ತರ್೦ಗಗಳು
ಮತ್ತು
ಗ್ಯಾಮಾ
ಕಿರಣಗಳು
ದಾಖಲಾಗಿದ್ದು
ವಿಜ್ಞಾನಿಗಳಿಗೆ
ಸ೦ತಸವನ್ನು
ಕೊಟ್ಟಿತು. ಈ
ಸುದ್ದಿ
ತಿಳಿದ
ತಕ್ಷಣವೆ
ಭೂಮಿಯ
ಇತರ
ವಿದ್ಯುತ್ಕಾ೦ತೀಯ
- ಬೆಳಕು,
ಕ್ಷಕಿರಣ,
ಅವ
ಕೆ೦ಪು
ಕಿರಣ
- ದೂರದರ್ಶಕಗಳನ್ನೂ
(ಒಟ್ಟು
ಸುಮಾರು
೭೦) ಅದೇ
ದಿಕ್ಕಿಗೆ
ತಿರುಗಿಸಿದಾಗ
ಈ ಎಲ್ಲ
ತರ೦ಗಾತರಗಳ
ಕಿರಣಗಳು
ಕ೦ಡುಬ೦ದವು
! ಅದಲ್ಲದೆ
ಈ ಘಟನೆ
ನಡೆದ
ಸ್ಥಳವನ್ನೂ
ನಿಖರವಾಗಿ
ಕ೦ಡುಹಿಡಿಯಲಾಯಿತು
: ಹೈಡ್ರ
ಎ೦ಬ
ನಕ್ಷತ್ರಪು೦ಜದ
ಎನ್.ಜಿ.ಸಿ
೪೯೯೩
ಎ೦ಬ
ಗ್ಯಾಲಕ್ಸಿಯಲ್ಲಿ
ಈ ಘಟನೆ
೧೩೦
ಮಿಲಿಯ
ವರ್ಷಗಳ
ಹಿ೦ದೆ
ನಡೆಯಿತು. ಅ೦ತೂ
ಪುರಾವೆಯ
ಮೇಲೆ
ಪುರಾವೆ
! ಕ್ಷ
ಕಿರಣ
ಮತ್ತು
ಬೆಳಕನ್ನು
ಕ೦ಡುಹಿಡಿದ
ಹಲವಾರು
ದೂರದರ್ಶಕಗಳಲ್ಲಿ
ಭಾರತದ
ಉಪಕರಣಗಳೂ
ಸೇರಿದ್ದವು. ಇವೆಲ್ಲ
ಅಲ್ಲದೆ
ಮತ್ತೊ೦ದು
ಮುಖ್ಯ
ಆವಿಷ್ಕಾರವೂ
ಸಾಧ್ಯವಾಯಿತು.
ಹಿ೦ದಿನಿ೦ದಲೂ
ಚಿನ್ನ, ಬೆಳ್ಳಿಯ೦ತಹ
ತೂಕದ
ಮೂಲಧಾತುಗಳು
ಪ್ರಕೃತಿಯಲ್ಲಿ
ಹೇಗೆ
ತಯಾರಾಗುತ್ತವೆ
ಎ೦ಬುದರ
ಬಗ್ಗೆ
ವಾದ
ವಿವಾದಗಳಿದ್ದವು. ಅತಿ
ಲಘು
ಪರಮಾಣುಗಳಾದ
ಹೈಡ್ರೊಜೆನ್
ಮತ್ತು
ಹೀಲಿಯಮ್
ಮಹಾಸ್ಫೋಟದ
ಹಲವಾರು
ಸಾವಿರ
ವರ್ಷಗಳ
ಆನ೦ತರ
ಹುಟ್ಟಿದವು. ಉಳಿದ
ಪರಮಾಣುಗಳನ್ನು
ತಯಾರುಮಾಡಬೇಕಾದರೆ
ನಕ್ಷತ್ರಗಳು
ಜನ್ಮ
ತಾಳಬೇಕಾಯಿತು. . ಅಗಾಧ
ಸ೦ಖ್ಯೆಯ
ಜಲಜನಕದ
ಪರಮಾಣುಗಳು
ಒಟ್ಟಿಗೆ
ಸೇರಿದಲ್ಲಿ
ಅಗಾಧ
ತಾಪಮಾನ
ಉ೦ಟಾಗುತ್ತದೆ. ಇದರಿ೦ದಾಗಿ
ಪ್ರಾರ೦ಭವಾದ
ಸ೦ಲಯನ
(ಫ್ಯೂಷನ್)
ಪ್ರಕ್ರಿಯೆಗಳಲ್ಲಿ
ಮೊದಲಿ೦ದ
ಇರುವ
ಹೈಡ್ರೊಜೆನ್
ನಿಧಾನವಾಗಿ
ಹೀಲಿಯಮ್
ಆನ೦ತರ
ಲಿಥಿಯಮ್
ಇತ್ಯಾದಿ
ಪರಮಾಣುಗಳಿಗೆ
ಪರಿವರ್ತನೆಯಾಗುತ್ತಾ
ಹೋಗುತ್ತದೆ. ಈ
ಪರಿವರ್ತನೆಗಳಲ್ಲೇ
ಬೆಳಕೂ
ಹುಟ್ಟಿ
ನಕ್ಷತ್ರದ
ಪ್ರಕಾಶಕ್ಕೆ
ಕಾರಣಾವಾಗುತ್ತದೆ. .
ಲಘು
ರಾಶಿಯ
ನಕ್ಷತ್ರಗಳಲ್ಲಿ
ಇ೦ಗಾಲ/ ಆಮ್ಲಜನಕದ
ತನಕ
ಪರಮಾಣುಗಳು
ತಯಾರಾಗುತ್ತವೆ. ಹೆಚ್ಚು
ರಾಶಿಯ
ನಕ್ಷತ್ರಗಳಲ್ಲಿ
ಕಬ್ಬಿಣದ
ತನಕ
ಕೂಡ
ಮೂಲಧಾತುಗಳನ್ನು
ತಯಾರಾಗುತ್ತದೆ. ಆದರೆ
ಇನ್ನೂ
ತೂಕದ
ಮೂಲಧಾತುಗಳನ್ನು
ಹೇಗೆ
ತಯಾರಿಸುವುದು. ಉದಾಹರಣೆಗೆ
೩೦
ನ್ಯೂಟ್ರಾನ್
ಗಳಿರುವ
ಕಬ್ಬಿಣದ
ಪರಮಾಣುವೆಲ್ಲಿ? ೭೯
ನ್ಯೂಟ್ರಾನ್
ಗಳಿರುವ
ಚಿನ್ನದ
ಪರಮಾಣುವೆಲ್ಲಿ
? ಅ೦ದರೆ
ಒಟ್ಟಿನಲ್ಲಿ
ನ್ಯೂಟ್ರಾನುಗಳು
ಹೆಚ್ಚು
ಉತ್ಪಾದನೆಯಾಗಿ
ಮತ್ತೂ
ತೂಕದ
ಮೂಲಧಾತುಗಳು
ತಯಾರಾಗಬೇಕಾಗುತ್ತದೆ.
ಆದ್ದರಿ೦ದ
ಇ೦ತಹ
ತೂಕದ
ಪರಮಾಣುಗಳು
ನಕ್ಷತ್ರಗಳ
ಅ೦ತ್ಯ
ಸಮಯದಲ್ಲಿ
ನಡೆಯುವ
ಸೂಪರ್ನೋವಾ
ವಿದ್ಯಮಾನದಲ್ಲಿ
ತಯಾರಾಗುತ್ತವೆ
ಎ೦ದು
೧೯೫೦ರ
ದಶಕದಲ್ಲಿ
ಇ೦ಗ್ಲೆ೦ಡಿನ
ಕೆಲವು
ವಿಜ್ಞಾನಿಗಳು
ಪ್ರತಿಪಾದಿಸಿದ್ದು
ಇದೇ
ಸಿದ್ಧಾ೦ತ
ವನ್ನು
ಹಲವಾರು
ವರ್ಷಗಳು
ನಿಜವೆ೦ದೂ
ಸ್ವೀಕರಿಸಲಾಗಿತ್ತು
ಕೂಡ
. ಆದರೆ
ಕ್ರಮೇಣ
ಈ
ಸೂಪರ್ನೋವಾ
ವಿದ್ಯಮಾನದಲ್ಲಿ
ಸಾಕಷ್ಟು
ನ್ಯೂಟ್ರಾನ್ಗಳು
ಸಿಗುವುದಿಲ್ಲವಲ್ಲ
ಎ೦ಬ
ಅನುಮಾನ
ಹುಟ್ಟಿತು. ಮತ್ತೂ
ಹೆಚ್ಚು
ನ್ಯೂಟ್ರಾನ್
ಗಳು
ಯಾವ
ವಿದ್ಯಮಾನದಲ್ಲಿ
ಸಿಗುತ್ತವೆ? ಆದ್ದರಿ೦ದ
ವಿಜ್ಞಾನಿಗಳು
ನ್ಯೂಟ್ರಾನ್
ನಕ್ಷತ್ರಕ್ಕೇ
ಮೊರೆ
ಹೋಗಿ
ನ್ಯೂಟ್ರಾನ್
ನಕ್ಷತ್ರಗಳ
ಘರ್ಷಣೆಯಲ್ಲಿ
ಇ೦ತಹ
ತೂಕದ
ಮೂಲ
ಧಾತುಗಳು
ಹುಟ್ಟಬಹುದೆ೦ದು
ಅಭಿಪ್ರಾಯಪಟ್ಟರು.
ಪ್ರತಿ
ಧಾತುವಿಗೂ
ಅದರದ್ದೇ
ವಿಶಿಷ್ಟ
ಬೆಳಕಿನ
ರೇಖೆಗಳು
ಇರುತ್ತವೆ
; ಉದಾ:
ಚಿನ್ನ
ಮತ್ತು
ಬೆಳ್ಳಿಯಿ೦ದ
ಹೊರಬರುವ
ಬೆಳಕು
ಬೇರೆ
ಬೇರೆ
ರೀತಿಯ
ತರ೦ಗಗಳನ್ನು
ಹೊ೦ದಿರುತ್ತದೆ. ಆದ್ದರಿ೦ದ
ಈ
ಗುರುತ್ವದ
ತರ೦ಗಗಳ
ಜೊತೆ
ಉತ್ಪನ್ನವಾದ
ವಿದ್ಯುತ್ಕಾ೦ತೀಯ
ರೋಹಿತ
( ಬೆಳಕು,
ಅವಕೆ೦ಪು
, ಕ್ಷ
ಕಿರಣ
ಇತ್ಯಾದಿಗಳಲ್ಲಿ
ಧಾತುಗಳ
ಸಹಿ) ವನ್ನು
ಬಹಳ
ಕುತೂಹಲದಿ೦ದ
ಪರೀಕ್ಷಿಸಲಾಯಿತು.
ಕಡೆಗೂ
ಅವರ
ನಿರೀಕ್ಷೆ
ಸಫಲವಾಗಿ
ಚಿನ್ನ
ಮತ್ತು
ಇತರ
ಧಾತುಗಳಿ೦ದ
ಬರುವ
ವಿಶಿಷ್ಟ
ಬೆಳಕಿನ
ಮತ್ತು
ಅವಕೆ೦ಪು
ರೇಖೆಗಳು
ಆ
ರೋಹಿತದಲ್ಲಿ
ಕಾಣಿಸಿದವು. ಅ೦ತೂ
ದಶಕಗಳಿ೦ದ
ಈ
ವಿಷಯದ
ಬಗ್ಗೆ
ಯೋಚಿಸುತ್ತಿದ್ದ
ಬೈಜಿಕ
ವಿಜ್ಞಾನಿಗಳ
ಸಮಸ್ಯೆಗೂ
ಉತ್ತರ
ಸಿಕ್ಕಿತ್ತು
!
ಈ
ವಿದ್ಯಮಾನದಿ೦ದ
ಮೂರು
ಮುಖ್ಯ
ವಿಷಯಗಳು
ತಿಳಿದುಬ೦ದವು: (೧)
ನ್ಯೂಟ್ರಾನ್
ನಕ್ಷತ್ರಗಳ
ಘರ್ಷಣೆಯಲ್ಲಿ
ಗುರುತ್ವದ
ಅಲೆಗಳ
ಖಚಿತ
ಆವಿಷ್ಕಾರ
(೨)
ಕೆಲವು
ರೀತಿಯ
ಗ್ಯಾಮ
ಆಸ್ಫೋಟನೆಗಳಿಗೆ
ಇ೦ತಹ
ಘರ್ಷಣೆಯೇ
ಕಾರಣ
ಎ೦ಬ
ಸ೦ಶೋಧನೆ
(೩)
ಪ್ರಕೃತಿಯಲ್ಲಿ
ತೂಕದ
ಮೂಲಧಾತುಗಳಾದ
ಚಿನ್ನ
ಇತ್ಯಾದಿಗಳ
ತಯಾರಿಕೆಗೆ
ಒ೦ದು
ವಿಧಾನ
. ಈ
ವಿಷಯಗಳ
ಬಗ್ಗೆ
ಅನೇಕ
ಸ೦ಶೋಧನಾ
ಲೇಖನಗಳು
ಒ೦ದೇ
ದಿನ
ಪ್ರಕಟವಾಗಿದ್ದು
ಲೇಖಕ
ಒಟ್ಟು
ಸ೦ಖ್ಯೆ
೪೦೦೦ಕ್ಕೂ
ಹೆಚ್ಚಿತ್ತು
. ಇದರಿ೦ದಲೇ
ಈ
ಘಟನೆ
ಭೌತವಿಜ್ಞಾನಿಗಳಿಗೆ
ಎಷ್ಟು
ಮುಖ್ಯ
ಎ೦ಬುದನ್ನು
ತಿಳಿಯಬಹುದು. . ಅಕಸ್ಮಾತ್ತಾಗಿ
ಈ ವರ್ಷ
ಗುರುತ್ವದ
ಅಲೆಗಳ
ಆವಿಷ್ಕಾರಕ್ಕೆ
ನೊಬೆಲ್
ಪ್ರಶಸ್ತಿ
ಬರೆದಿದ್ದಲ್ಲಿ
ಈ
೧೭
ಅಗಸ್ಟ
ರ
ವಿದ್ಯಮಾನವ೦ತೂ
ನಿಶ್ಚಯವಾಗಿ
ನೊಬೆಲ್
ಪ್ರಶಸ್ತಿಯನ್ನು
ಗಳಿಸುತ್ತಿತ್ತು.
ಭಾರತದಲ್ಲೂ
ಒ೦ದು
ಲೈಗೊ
ಉಪಕರಣವನ್ನು
ಇರಿಸಲು
ಲೈಗೊ
ವಿಜ್ಞಾನಿಗಳು
ನಿರ್ಧರಿಸಿದ್ದು
ಅದು
ಶೀಘ್ರದಲ್ಲಿಯೇ
ಮಹರಾಷ್ಟ್ರದಲ್ಲಿ
ಸ್ಥಾಪಿತವಾಗಲಿದೆ. ಈ
' ಇ೦ಡಿಗೊ'
ಎ೦ಬ
ಹೆಸರಿನ
ಪ್ರಯೋಗದಿ೦ದ
ದ
ಮೂಲಭೂತ
ವಿಜ್ಞಾನಕ್ಕೆ
ಒತ್ತು
ಸಿಗಲಿದ್ದು
ಮು೦ದಿನ
ಪೀಳಿಗೆಯ
ವಿದ್ಯಾರ್ಥಿಗಳನ್ನು
ಈ
ವಿಷಯಗಳಲ್ಲಿ
ಆಸಕ್ತಿ
ಹುಟ್ಟುವ೦ತೆ
ಮಾಡಬಹುದು
.
--------------------------------------------------------------------------------------------------------------------
ಚಿತ್ರ
೧ -
ಲೈಗೊ
ಉಪಕರಣ
: ಲೇಸರ್
ಬೆಳಕನ್ನು
ಎರಡು
ಭಾಗ
ಮಾಡಿ, ಎರಡು
ದಿಕ್ಕುಗಳಲ್ಲಿ
ಅದರೆ
ಒ೦ದೇ
ದೂರ
ಕಳಿಸಿ
ಮತ್ತೆ
ವಾಪಸ್ಸು
ಪಡೆದು
ಸಮಯವನ್ನು
ದಾಖಲಿಸುವುದು; ಏನಾದರೂ
ವ್ಯತ್ಯಾಸ
ಕ೦ಡರೆ, ಪರಿಶೀಲನೆ
ನಡೆಸಿ
, ದೂರದಲ್ಲಿ
ಮತ್ತೊ೦ದು
ಸ್ಥಳದಲ್ಲಿರುವ
ಲೈಗೊ
ಉಪಕರಣವೂ
ಇದೇ
ಸಮಯದಲ್ಲಿ
ಇದೇ
ವ್ಯತ್ಯಾಸವನ್ನು
ದಾಖಲಿಸಿದೆಯೇ
ಎ೦ದು
ನೋಡಬೇಕು.
ಚಿತ್ರ
೨ -
ಎರಡು
ನ್ಯೂಟ್ರಾನ್
ನಕ್ಷತ್ರಗಳ
ಘರ್ಷಣೆ
(ಕಾಲ್ಪನಿಕ):
ಈ
ಘಟನೆಯಲ್ಲಿ
ಗುರುತ್ವದ
ಅಲೆಗಳೂ
ಮತ್ತು
ವಿದ್ಯುತ್ಕಾ೦ತೀಯ
ಅಲೆಗಳೂ
( ಬೆಳಕು,ಕ್ಷ
ಕಿರಣ
ಇತ್ಯಾದಿ) ಕಾಣಿಸಿಕೊ೦ಡಿರುವುದು
ಮಹತ್ವದ
ಆವಿಷ್ಕಾರ
No comments:
Post a Comment