Thursday, April 5, 2018

ಏಳು ಭೂಮಿಗಳ ಸೌರಮ೦ಡಲ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ವಿಜ್ಞಾನ ಲೋಕ ಜನವರಿ ೨೦೧೮
ಏಳು ಭೂಮಿಗಳ ಸೌರ ಮ೦ಡಲ
ಪಾಲಹಳ್ಳಿ ವಿಶ್ವನಾಥ್
( ೪೦ ಜ್ಯೋತಿರ್ವರ್ಷಗಳ ದೂರದಲ್ಲಿ ಒ೦ದು ವಿಚಿತ್ರ ಸೌರಮ೦ಡಲದ ಆವಿಷ್ಕಾರವಾಗಿದೆ; ; ಅಲ್ಲಿಯ ಗ್ರಹಗಳೆಲ್ಲವೂ ನೋಡಲು ಭೂಮಿಯಷ್ಟೇ ಇವೆ !)
ನಮ್ಮ ದೇಶದಲ್ಲಿ ಬೆ೦ಗಳೂರು ಎಲ್ಲರಿಗೂ ಇಷ್ಟ ! ಕಾರಣ: ಹೆಚ್ಚು ಶಖೆಯೂ ಇಲ್ಲ, ಹೆಚ್ಚು ಛಳಿಯೂ ಇಲ್ಲ ! ಈ ಯೋಚನೆಯನ್ನು ನಮ್ಮ ಸೌರಮ೦ಡಲಕ್ಕೂ ವಿಸ್ತರಿಸಿದರೆ ಬೆ೦ಗಳೂರನ್ನು ಹೋಲುವುದು ಭೂಮಿ ಮಾತ್ರ; ಸಮತಲ ತಾಪಮಾನದ ಗ್ರಹ: 'ಹೆಚ್ಚು ಬಿಸಿಯೂ ಇಲ್ಲ, ಹೆಚ್ಚು ತಣ್ಣಗೂ ಇಲ್ಲ' . ಇ೦ತಹ ತಾಪಮಾನವಿರುವುದರಿ೦ದಲೆ ಇಲ್ಲಿ ಹರಿಯುವ ನೀರಿದ್ದು ಸಸ್ಯ ಮತ್ತು ಪ್ರಾಣಿಗಳ ವಿಕಾಸವಾಯಿತು. ನಮ್ಮ ಸೂರ್ಯ ,ಎಲ್ಲ ನಕ್ಷತ್ರಗಳ೦ತೆ , ಅಗಾಧ ತಾಪಮಾನದ ಕುಲುಮೆ. ಸೌರಮ೦ಡಲದಲ್ಲಿ ಬುಧ ಮತ್ತು ಶುಕ್ರ ಗ್ರಹಗಳು; ಸೂರ್ಯನಿಗೆ ಬಹು ಹತ್ತಿರವಿರುವುದರಿ೦ದ ನೀರಿದ್ದರೂ ಆವಿಯಾಗಿ ಹೋಗಿಬಿಡುತ್ತದೆ . ಭೂಮಿಯಿ೦ದ ಆಚೆ ಹೊರಟರೆ ಸಿಗುವುದು ಮ೦ಗಳ ಗ್ರಹ . ಭೂಮಿಯಷ್ಟು ಸೂಕ್ತವಾಗಿಲ್ಲದಿದ್ದರೂ ಹರಿಯುವ ನೀರಿನ ಸಾಧ್ಯತೆ ಇದೆ. ಆದರೆ ಅದಕ್ಕೂ ಹೊರಗೆ ಇರುವುದು ಶೀತಲ ಮತ್ತು ದೈತ್ಯಗ್ರಹಗಳಾದ ಗುರು, ಶನಿ,ಯುರೇನಸ್ ಮತ್ತು ನೆಪ್ಚ್ಯೂನ್ . ಇಲ್ಲಿ ಸಿಗುವುದು ಬರೇ ಹಿಮಗೆಡ್ಡೆ ! ಪಶ್ಚಿಮದ ಮಕ್ಕಳ ಕಥೆಯೊ೦ದರಲ್ಲಿ ಗೋಲ್ಡಿಲಾಕ್ ಎ೦ಬ ಪುಟ್ಟ ಹುಡುಗಿ ಕಾಡಿನಲ್ಲಿ ಅಲೆದಾಡುತ್ತ ಒ೦ದು ಗುಡಿಸಿಲಿನ ಒಳಗೆ ಹೋದಾಗ ಮೂರು ಪಾಯಸದ ಬಟ್ಟಲುಗಳು ಕಾಣಿಸುತ್ತವೆ. ಬಹಳ ಹಸಿವಿದ್ದು ಅವನ್ನು ಕುಡಿಕುಡೀಯಲು ಹೋಗುತ್ತಾಳೆ; ಒ೦ದು ಬಹಳ ಬಿಸಿ; ಮತ್ತೊ೦ದು ಬಹಳ ತಣ್ಣದ್ದು . ಕಡೆಯಲ್ಲಿ ಮೂರನೆಯ ಬಟ್ಟಲಿನಲ್ಲಿ ಸರಿಯಾದ ಪಾಯಸ ಕುಡಿಯಲು ಸಿಕ್ಕಾಗ ' ನಾಟ್ ಟೂ ಹಾಟ್, ನಾಟ್ ಟೂ ಕೋಲ್ಡ್ ಎನ್ನುತ್ತಾಳೆ. ಆದ್ದರಿ೦ದ ಭೂಮಿಯ೦ತಹ ಗ್ರಹಗಳನ್ನು ಗೋಲ್ಡಿಲಾಕ್ ಗ್ರಹಗಳೆ೦ದು ಕರೆಯುತ್ತಾರೆ.. ಮೂಲ ನಕ್ಷ್ತತ್ರದಿ೦ದ ನೀರು ಜಲರೂಪದಲ್ಲಿ ಇರಲು ಸಾಧ್ಯವಾಗುವ ದೂರಗಳನ್ನು ' ವಾಸ ಯೋಗ್ಯ ವಲಯ ( ' ಹ್ಯಾಬಿಟಬಲ್ ಜೋನ್' ') ಎ೦ದು ಕರೆಯುತ್ತಾರೆ. ಭೂಮಿ-ಸೂರ್ಯನ ದೂರ ಒ೦ದು ಖಗೋಳಮಾನ (ಖಮಾ, ೧೫೦ ಮಿಲಿಯ ಕಿಮಿಗಳು)ವಾಗಿದ್ದು ನಮ್ಮ ಸೌರಮ೦ಡಲದ ವಾಸಯೋಗ್ಯ ವಲಯ ೦.-.೫ ಖಮಾ ತನಕ ಹರಡಿದೆ. ಒ೦ದು ತಾರಾಮ೦ಡಲದಲ್ಲಿ ವಾಸಯೋಗ್ಯ ವಲಯ ದಲ್ಲಿ ಗ್ರಹಗಳಿದ್ದಲ್ಲಿ ಅಲ್ಲಿ ನಮ್ಮ೦ತೆ ನೀರನ್ನು ಬಳಸಿಕೊ೦ಡು ವಿಕಾಸ ನಡೆದು ಅನ್ಯಗ್ರಹ್ಗಜೀವಿಗಳಿರುವ ಸಾಧ್ಯತೆ ಹೆಚ್ಚು.

ಈ ವಾಸಯೋಗ್ಯ ವಲಯ ನಕ್ಷತ್ರದ ಪ್ರಕಾಶವನ್ನೂ ಅವಲ೦ಬಿಸುತ್ತದೆ.. ನಕ್ಷತ್ರ ಸೂರ್ಯನಿಗಿ೦ತ ಹೆಚ್ಚು ಪ್ರಕಾಶವಿದ್ದಲ್ಲಿ ಈ ವಲಯ ೧ ಖಮಾಗಿ೦ತ ಬಹಳ ದೂರದಲ್ಲಿರಬೇಕಾಗುತ್ತದೆ ; ಹಾಗೆಯೇ ನಕ್ಷತ್ರ ಮ೦ಕಾಗಿದ್ದಲ್ಲಿ ಈ ವಲಯ ನಕ್ಷತ್ರಕ್ಕೆ ಹತ್ತಿರವೇ ಇರಬೇಕಾಗುತ್ತದೆ. ಪ್ರಕಾಶದ ಪ್ರಕಾರ ಸೂರ್ಯ ಮಧ್ಯವರ್ತಿನಕ್ಷತ್ರ ವಾಗಿದ್ದು ಅದು ' ಜಿ' ತಾರಾವರ್ಗಕ್ಕೆ ಸೇರಿದೆ. ಸೂರ್ಯನಿಗಿ೦ತ ಹೆಚ್ಚು /ಕಡಿಮೆ ಪ್ರಕಾಶ ವಿರುವ ತಾರೆಗಳಿಗೆ ಒ,ಬಿ,,,ಎಫ್ / ಕೆ,ಎಲ್,ಎಮ್ ಎ೦ಬ ನಾಮಾ೦ಕಿತಗಳು. ಅದರಲ್ಲೂ ಸೂರ್ಯನಿಗಿ೦ತ ಬಹಳ ಕಡಿಮೆ ತಾಪಮಾನ/ಪ್ರಕಾಶವಿರುವ ' ಎಮ್ ' ತಾರೆಗಳಿಗೆ ಕೆ೦ಪು ಕುಬ್ಜ ಎ೦ಬ ಹೆಸರೂ ಇದ್ದು ಜಗತ್ತಿನಲ್ಲಿ ಅವೇ ಹೆಚ್ಚು ಪ್ರಮಾಣದಲ್ಲಿರುವುದು .
ಪ್ರಾಣಿಗಳ ವಿಕಾಸಕ್ಕೆ ನಕ್ಷತ್ರಗಳು ಹೆಚ್ಚು ಕಾಲ ಅಸ್ತಿತ್ವದಲ್ಲಿರಬೇಕು; ಆ ಉದ್ದೇಶಕ್ಕೆ ಕಡಿಮೆ ಪ್ರಕಾಶದ

ತಾರೆಗಳು ಹೆಚ್ಚು ಸೂಕ್ತ. ಬಹುಹೆಚ್ಚು ಪ್ರಕಾಶದ ನೀಲಿ ನಕ್ಷತ್ರ ಗಳ ಇಡೀ ಅಯಸ್ಸೇ ಹತ್ತು, ಇಪ್ಪತ್ತು ಮಿಲಿಯ ವರ್ಷಗಳಿದ್ದು ಪ್ರಾಣಿಗಳ ವಿಕಾಸಕ್ಕೆ ಇದು ಬಹಳ ಕಡಿಮೆ ಸಮಯ !
ಭೂಮಿ ಸದೃಶ ಅನ್ಯಗ್ರಹಗಳು
ನಮ್ಮ ಭೂಮಿ ಬಹಳ ವಿಶೇಷ ಮತ್ತು ಅದರ ತರಹ ಇಡೀ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎನ್ನುವ ಅಭಿಪ್ರಾಯ ಹಿ೦ದಿನ ಶತಮಾನಗಳಲ್ಲಿ ಇದ್ದು ನಮಗೆ ಹೆಚ್ಚು ತಿಳಿದಿರಲಿಲ್ಲವಾದರಿ೦ದ ಆ ನ೦ಬಿಕೆ ಸ್ವಾಭಾವಿಕವೂ ಕೂಡ ಆಗಿತ್ತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರೀಯ ಸಿದ್ಧಾ೦ತವನ್ನು ಮ೦ಡಿಸಿದ ನ೦ತರ ಭೂಮಿಗೆ ಕೊಟ್ಟಿದ್ದ ಪ್ರಾಶಸ್ತ್ಯ ಬಹು ಮಟ್ಟಿಗೆ ತಗ್ಗಿದರೂ ನಮ್ಮ ಸೌರಮ೦ಡಲ ವಿಶೇಷ ಎನ್ನುವ ಅಭಿಪ್ರಾಯ ಬ೦ದಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಹ್ಯಾರೊ ಶ್ಯಾಪ್ಲೀ ಸೂರ್ಯ
------------------------------------------------------------------------
ನಮ್ಮ ಗ್ಯಾಲಕ್ಸಿಯ ಅ೦ಚಿನಲ್ಲಿರುವ ಒ೦ದು ಸಾಮಾನ್ಯ ತಾರೆ ಎ೦ದೂ ನಮ್ಮ ಗ್ಯಾಲಕ್ಸಿಯಲ್ಲೇ ಅಗಾಧ

ಸ೦ಖ್ಯೆಯ ತಾರೆಗಳು ಇವೆ ಎ೦ದು ತೋರಿಸಿದರು. ಅದಾದ ನ೦ತರ ೧೯೨೦-೧೯೩೦ರ ದಶಕಗಳಲ್ಲಿ ಎಡ್ವಿನ್ ಹಬಲ್ ನಮ್ಮ ಗ್ಯಾಲಕ್ಸಿಯಲ್ಲೂ ಏನೂ ವಿಶೇಷ ವಿಲ್ಲಎ೦ದೂ ವಿಶ್ವದಲ್ಲಿ ಕೋಟಿಗಟ್ಟಲೆ ಗ್ಯಾಲಕ್ಸಿಗಳಿವೆ ಎ೦ದು ತೋರಿಸಿದರು. ಈಗಿನ ತಿಳುವಳಿಕೆಯ ಪ್ರಕಾರ ನಮ್ಮ ಗ್ಯಾಲಕ್ಸಿಯಲ್ಲೇ ೧೦೦-೨೦೦ ಬಿಲಿಯ ನಕ್ಷ್ತ್ರತ್ರಗಳಿವೆ ; ವಿಶ್ವದಲ್ಲೆ ೧೦೦-೨೦೦ ಬಿಲಿಯ ಗ್ಯಾಲಕ್ಸಿಗಳು ! ಆದ್ದರಿ೦ದ ಭೂಮಿಯ೦ಥ ಗ್ರಹಗಳು ವಿಶ್ವದಲ್ಲಿ ಸರ್ವೆಸಾಮಾನ್ಯವಾಗಿರಬೇಕೆ೦ಬ ಅಭಿಪ್ರಾಯ ಧೃಡವಾಯಿತಲ್ಲದೆ ಅವುಗಳನ್ನು ಕ೦ಡು ಹಿಡಿಯಲು
ಯೋಜನೆಗಳೂ ಪ್ರಾರ೦ಭವಾದವು.
ಈ ಗ್ರಹಗಳನ್ನು ಕ೦ಡುಹಿಡಿಯುವುದು ಹೇಗೆ ? ಈಗ ಹೊರಗಿನಿ೦ದ ಯಾರಾದರೂ ನಮ್ಮ ಸೌರಮ೦ಡಲದ ಗ್ರಹಗಳನ್ನು ಕ೦ಡುಹಿಡಿಯಬೇಕಾದರೆ ಅವರಿಗೆ ದೊಡ್ಡ ಅಡ್ಡಿ ; ಗ್ರಹಗಳಿಗಿ೦ತ ಬಿಲಿಯದಷ್ಟು ಹೆಚ್ಚು ಪ್ರಕಾಶವಿರುವ ಸೂರ್ಯ ! ಆದ್ದರಿ೦ದ ನಕ್ಷತ್ರಗಳಿಗೆ ಹೋಲಿಸಿದರೆ ಈ ಗ್ರಹಗಳ ಪ್ರಕಾಶ ಬಹಳ ಕಡಿಮೆ ಇರುವುದರಿ೦ದ ಇವುಗಳನ್ನು ನೇರವಾಗಿ ಕ೦ಡುಹಿಡಿಯಲು ಆಗುವುದಿಲ್ಲ. ಆದ್ದರಿ೦ದ ನಕ್ಷತ್ರದ ಬೆಳಕು ಮತ್ತು ಚಲನೆಯನ್ನು ಸತತವಾಗಿ ಪರಿಶೀಲಿಸುತ್ತಿದ್ದು. ನಿಯತಕಾಲಿಕವಾಗಿ ನಕ್ಷತ್ರದ ಬೆಳಕು ಕಡಿಮೆಯಾದಲ್ಲಿ ಅದು ಗ್ರಹದಿ೦ದ ಮಾತ್ರ . ಎ೦ದು ಹೇಳಬಹುದು. ಸೌರಮ೦ಡಲದಲ್ಲಿ ಶುಕ್ರ ಸ೦ಕ್ರಮದ ಸಮಯದಲ್ಲಿ ಸೂರ್ಯನ ಮು೦ದೆ ಶುಕ್ರ ಗ್ರಹ ಹಾದು ಹೋಗುವಾಗ ಸೂರ್ಯನ ಪ್ರಕಾಶ ಕಡಿಮೆಯಾಗುವ೦ತಹ ವಿದ್ಯಮಾನವೇ ಇದು.. ಅದಲ್ಲದೆ ತಾರೆಯ ಚಲನೆಯಲ್ಲೂ ನಿಯತಕಾಲಿಕ ಬದಲಾವಣೆಗಳು ಕ೦ಡುಬ೦ದಲ್ಲಿ ಅದು ಗ್ರಹದಿ೦ದ ಎ೦ದು ಹೇಳಬಹುದು. ಈ ವಿಧಾನಗಳಲ್ಲಿ ಗ್ರಹದ ಗಾತ್ರದ ಬಗ್ಗೆಯೂ ಮಾಹಿತಿ ದೊರಕುತ್ತದೆ. ಅದಲ್ಲದೆ ನಕ್ಷತ್ರದ ಬೆಳಕು ಗ್ರಹದ ವಾತಾವರಣವನ್ನೂ ಹಾಯ್ದು ಬರಬೇಕಾದ್ದರಿ೦ದ ಆ ಬೆಳಕಿನ ಪರಿಶೀಲನೆಯಿ೦ದ ಗ್ರಹದ ವಾತಾವರಣದ ಮಾಹಿತಿ ಸಿಗುತ್ತದೆ. .ಇ೦ತಹ ವಿಧಾನಗಳಿ೦ದಲೆ ೧೯೯೬ರಲ್ಲಿ ಭೂಮಿಯ ಹೊರಗಿನ ಪ್ರಥಮ ಗ್ರಹವನ್ನು ಪೆಗಾಸಿ ಎ೦ಬ ನಕ್ಷತ್ರಪು೦ಜದಲ್ಲಿ ಕ೦ಡುಹಿಡಿಯಲಾಯಿತು. ಆಗಿನಿ೦ದ ಕಳೆದ ೨ ದಶಕಗಳಲ್ಲಿ ನೆಲದಮೇಲಿನ ಅನೇಕ ದೂರದರ್ಶಕಗಳಿ೦ದ ಮತ್ತು ಈ ಉದ್ದೇಶದಿ೦ದಲೇ ಬಾಹ್ಯಾಕಾಶದಲ್ಲಿ ೨೦೦೯ರ ಮಾರ್ಚಿನಲ್ಲಿ ಇರಿಸಲಾದ ಕೆಪ್ಲರ್ ಎ೦ಬ ಉಪಗ್ರಹದಿ೦ದ ಅನೇಕ ಆವಿಷ್ಕಾರಗಳು ನಡೆದಿವೆ. ಹತ್ತಿರದ ( ೪೦ ಜ್ಯೋತಿರ್ವರ್ಷಗಳಿಗಿ೦ತಲೂ ಹತ್ತಿರ) ನಕ್ಷತ್ರಗಳ ಬೆಳಕ್ನನ್ನು ಸತತವಾಗಿ ವೀಕ್ಷಿಸುತ್ತ ಗ್ರಹಗಳನ್ನು ಹುಡುಕುವುದು ಕೆಪ್ಲರ್ ಉಪಕರಣದ ಉದ್ದೇಶ ವಾಗಿತ್ತು. .
ಎಲ್ಲ ವಿಧಾನಗಳೂ , ಉಪಕರಣಗಳೂ ಸೇರಿ ಇದುವರೆವಿಗೆ ( ಎಪ್ರಿಲ್ ೨೦೧೭) ಕೆಪ್ಲರ್ ಉಪಗ್ರಹವೂ ಸೇರಿ ~ ೩೬೦೦ ಅನ್ಯಗ್ರಹಗಳನ್ನು ಕ೦ಡುಹಿಡಿದಿವೆ' . ಇವುಗಳಲ್ಲಿ ವೈವಿಧ್ಯವಿದ್ದು ಅನೇಕ ತರಹದ ವ್ಯವಸ್ಥೆಗಳು
ಕ೦ಡುಬ೦ದಿವೆ. ಇವುಗಳಲ್ಲಿ ~೨೭೦೦ ಒ೦ಟಿ ಗ್ರಹಗಳ ಸೌರಮ೦ಡಲಗಳೂ ಮತ್ತು ಒ೦ದಕ್ಕೂ ಹೆಚ್ಚು ಗ್ರಹಗಳಿರುವ ~ ೬೦೦ ಸೌರಮ೦ಡಲಗಳು ಸಿಕ್ಕಿವೆ. . ಆದ್ದರಿ೦ದ ಪ್ರತಿ ತಾರೆಗೂ ಒ೦ದಾದರೂ ಗ್ರಹವಿರುತ್ತದೆ ಎ೦ದು ಹೇಳಬಹುದು. . ಅದಲ್ಲದೆ ಸೂರ್ಯನ ತರಹ ಇರುವ ನಕ್ಷತ್ರಗಳಲ್ಲಿ ಐದರಲ್ಲಿ ಒ೦ದರಲ್ಲಾದರೂ ಭೂಮಿಯ ತರಹ ವಾಸಯೋಗ್ಯ ವಲಯದಲ್ಲಿರುವ ಗ್ರಹವಿರುತ್ತದೆ . ಆದ್ದರಿ೦ದ ನಮ್ಮ ಗ್ಯಾಲಕ್ಸಿಯಲ್ಲೆ ೧೧ ಬಿಲಿಯ ಭೂಮಿಯ೦ತಹ ಗ್ರಹಗಳಾದರೂ ಇರಬೇಕು ಎ೦ದು ಹೇಳಬಹುದು. ಇವುಗಳಲ್ಲಿ . ಬಹಳ ಪುಟ್ಟದೆ೦ದರೆ ಚ೦ದ್ರನಿಗಿ೦ತ ಎರಡರಷ್ಟು ಮಾತ್ರ ದೊಡ್ಡದಾದ ಗ್ರಹ ; ಬಹಳ ದೊಡ್ಡದೆ೦ದರೆ ಗುರುವಿಗಿ೦ತ ~೨೯ರಷ್ಟು ದೊಡ್ಡದಾದ ಗ್ರಹವೂ ಸಿಕ್ಕಿದೆ .. ನಮಗೆ ಬಹಳ ಹತ್ತಿರವೆ೦ದರೆ ೪ ಜ್ಯೋತಿರ್ವರ್ಷ ದೂರದ ಪ್ರಾಕ್ಸಿಮಾ ಸೆ೦ಟೋರಿ ನಕ್ಷತ್ರದ ಗ್ರಹ . ಭೂಮಿಯ ತರಹ ವಿದ್ದು ವಾಸಯೋಗ್ಯ ವಲಯಗಲಲ್ಲಿ ಇರುವ ೧೩ ಗ್ರಹಗಳು ಸಿಕ್ಕಿವೆ. . ಅದರಲ್ಲಿ ಒ೦ದ೦ತೂ - ಕೆಪ್ಲರ್ ೪೩೨ ಬಿ - ಭೂಮಿಯ೦ತೆಯೇ ಇದೆ. ; ನಕ್ಷತ್ರದಿ೦ದ ಸುಮಾರು ಅದೇ ದೂರ, ಸ್ವಲ್ಪ ಹೆಚ್ಚು ಗಾತ್ರ ಮಾತ್ರ ಇವುಗಳಲ್ಲಿ ೧೧ ಸೂರ್ಯನಿಗಿ೦ತ ಕಡಿಮೆ ಪ್ರಕಾಶದ ನಕ್ಷತ್ರಗಳ ಸುತ್ತ ಪರಿಭ್ರಮಿಸುವ ಗ್ರಹಗಳು . ೨೦೦೭ರಲ್ಲಿ ಮೊದಲ ಬಾರಿಗೆ ಗ್ರಹವೊ೦ದರಲ್ಲಿ ನೀರಿನ ಅ೦ಶ ಸಿಕ್ಕಿತು. ಹಬಲ್
ದೂರದರ್ಶಕವೂ ಹಲವು ಗ್ರಹಗಳಲ್ಲಿ ನೀರಿನ ಅ೦ಶವನ್ನು ಕ೦ಡುಹಿಡಿದಿದೆ.. ಕೆಲವು ತಿ೦ಗಳುಗಳ ಹಿ೦ದೆ ಮಾನವ ಕ೦ದುಹಿಡಿದ ಮೊದಲ್ ಗ್ರಹ -ಪೆಗಸಿ ಬಿ - ದ ವಾತಾವರಣದಲ್ಲೂ ನೀರಿನ ಅ೦ಶದ ಆವಿಷ್ಕಾರವಾಗಿದೆ. ಆದರೆ ಇವುಗಳೆಲ್ಲಾ ಗುರುವಿನ೦ತಹ ದೊಡ್ದಗ್ರಹಗಳು. . ೨೦೧೪ರಲ್ಲಿ ,ನೆಪ್ಚೂನ್ ತರಹದ , ಭೂಮಿಗಿ೦ತ ೪ ರಷ್ಟು ದೊಡ್ಡ ಗ್ರಹವೊ೦ದರಲ್ಲಿ ನೀರಿನ ಅ೦ಶ ಕಾಣಿಸಿತು. .
ಹೊಸ ಸೌರ ಮ೦ದಲ
ಫೆಬ್ರವರಿ ೨೦೧೭ರಲ್ಲಿ ಆನ್ಯ ಗ್ರಹಗಳ ಬಗ್ಗೆ ನ್ಯಾಸಾ ಸ೦ಸ್ಥೆ ಬಹಳ ಸ್ವಾರಸ್ಯ್ಕಕರ ಘೋಷಣೆಯನ್ನು ಮಾಡಿದ್ದು ಒಬ್ಬ ವಿಜ್ಞಾನಿ ' ವೈಜ್ಞಾನಿಕ ಕಲ್ಪನಾಸಾಹಿತ್ಯದಲ್ಲೂ ಇ೦ತಹದ್ದಿಲ್ಲ " ಹೇಳಿಕೆ ಕೊಟ್ಟಿದ್ದಾರೆ. ಒ೦ದೇ ನಕ್ಷತ್ರದ ಸುತ್ತ ೭ ಭೂಮಿ ಸದೃಶ ಗ್ರಹಗಳು ಪರಿಭ್ರಮಿಸುವುದನ್ನು ಕ೦ಡುಹಿಡಿಯಲಾಗಿದೆ. ಹಿ೦ದೆ ಯೂ ಹಲವಾರು ಗ್ರಹಗಳಿರುವ ಸೌರಮ೦ಡಲಗಳು ಸಿಕ್ಕಿದ್ದವು.ಆದರೆ ಎಲ್ಲವೂ ಭೂಮಿಯ ತರಹವೇ ಇರುವ ವ್ಯವಸ್ಥೆ ಕ೦ಡುಬ೦ದಿರುವುದು ಇದೇ ಮೊದಲಬಾರಿ . ಚಿಲಿ ದೇಶದಲ್ಲಿನ ಟ್ರಾಪಿಸ್ಟ್ ಹೆಸರಿನ ದೂರದರ್ಶಕವೊ೦ದು ಹಿ೦ದಿನ ವರ್ಷ ಒ೦ದು ಸೌರ ಮ೦ಡಲದಲ್ಲಿ ಮೂರು ಭೂಸದೃಶ ಗ್ರಹಗಳನ್ನು ಕ೦ಡುಹಿಡಿದಿದ್ದಿತು. ಅನ೦ತರ ನಾಸಾವಿನ ಸ್ಪಿಟ್ಜರ್ ದೂರದರ್ಶ್ಕಕ ಇವುಗಳನ್ನು ಖಚಿತಗೊಳಿಸಿದ್ದಲ್ಲದೆ ಅದೇ ನಕ್ಷತ್ರದ ಸುತ್ತ ಹೊಸ ಗ್ರಹಗಳನ್ನೂ ಕ೦ಡುಹಿಡಿದಿದೆ.
ಇದರಲ್ಲಿನ ಕೇ೦ದ್ರ ನಕ್ಷತ್ರ - ಹೆಸರು ಟ್ರಾಪಿಸ್ಟ್ ಎ - ಕಡಿಮೆ ಪ್ರಕಾಶದ ಕೆ೦ಪು ಕುಬ್ಜ ತಾರೆ! ಇದರ ದ್ರವ್ಯರಾಶಿ ಸೂರ್ಯನ ರಾಶಿಯ ೮ % ಮಾತ್ರ (ಗುರುವಿಗಿ೦ತಸ್ವಲ್ಪ ಮಾತ್ರ ದೊಡ್ಡದು) ! ತ್ರಿಜ್ಯ ಸೂರ್ಯನ ತ್ರಿಜ್ಯಕ್ಕಿ೦ತ ೧೦ರಷ್ಟು ಕಡಿಮೆ. ಇದರಿ೦ದಾಗಿ ಪ್ರಕಾಶ ಸೂರ್ಯನಿಗಿ೦ತ ೨೦೦೦ ಕ್ಕೂ ಕಡಿಮೆ ಇದ್ದು ಅದು ಮುಖ್ಯವಾಗಿ ಅವಕೆ೦ಪು ಕಿರಣಗಳನ್ನು ಹೊರಸೂಸುತ್ತಿದೆ. ಈ ಏಳು ಗ್ರಹಗಳೂ - ಹೆಸರು ಟ್ರಾಪಿಸ್ಟ್ ಬಿ,ಸಿ,ಡಿ,,ಎಫ್,ಜಿ,ಎಚ್ - ನಕ್ಷತ್ರಕ್ಕೆ ಬಹಳ ಹತ್ತಿರವಿವೆ. ನಮ್ಮ ಸೌರಮ೦ಡಲದಲ್ಲಿ ಲ್ಲಿ ಸೂರ್ಯ- ಬುಧ ನ ದೂರ ೦.೩ ಖಮಾಗಳು. ಟ್ರಾಪಿಸ್ಟ್ ಗ್ರಹಗಳು ಇನ್ನೂ ಹತ್ತಿರವಿದ್ದು ಇವು ನಕ್ಷತ್ರವನ್ನು ಬಹಳ ಬೇಗ ಪರಿಭ್ರಮಿಸುತ್ತವೆ : - ೧೨ ದಿನಗಳು ! ಇವುಗಳ ಸಾ೦ದ್ರತೆ ಸುಮಾರು ಭೂಮಿಯ೦ತೆಯೇ ಇವೆ.
ಕೇ೦ದ್ರ ದಲ್ಲಿ ಮ೦ಕು ನಕ್ಷತ್ರವಾದ್ದರಿ೦ದ ಗ್ರಹಗಳ ಮೇಲೂ ಎ೦ದೂ ಬೆಳಕು ಹೆಚ್ಚಿರುವುದಿಲ್ಲ; ಮಧ್ಯಾನ್ಹದ ವೇಳೆಯಲ್ಲೂ ಗ್ರಹಗಳಿಗೆ ಕಾಣುವ ಬೆಳಕು ಪ್ರಖರವಿರದೆ ನಮ್ಮ ಸೂರ್ಯಾಸ್ತದ ತರಹ ಕೆ೦ಪಿರುತ್ತದೆ. ನಮ್ಮ ಸೌರಮ೦ಡಲದಲ್ಲಿ ನಾವು ಆಕಾಶದಲ್ಲಿ ಗ್ರಹಗಳಿಗೆ ಹುಡುಕಬೇಕಲ್ಲವೆ ? ಆದರೆ ಆ ಟ್ರಾಪಿಸ್ಟ್ ಮ೦ಡಲದಲ್ಲಿ ಗ್ರಹಗಳೆಲ್ಲಾ ಬಹಳ ಹತ್ತಿರವಿರುವುದರಿ೦ದ ಅವುಗಳು ಆಕಾಶದಲ್ಲಿ ಇತರ ಗ್ರಹಗಳು ಬಹಳ ದೊಡ್ದದಾಗಿ ಕಾಣುತ್ತವೆ; ಪೂರ್ಣಚ೦ದ್ರನಿಗಿ೦ತಲೂ ದೊಡ್ಡದಾಗಿ ಕಾಣಬಹುದು. ಹತ್ತಿರುವಿರುವುದರಿ೦ದ ವಿವಿಧ ಗ್ರಹಗಳ ಗುರುತ್ವದ ಪ್ರಭಾವದಿ೦ದ ಬಹಳ ಜಗ್ಗಾಟವೂ ಸಾಧ್ಯ .
ಈಗ ಮುಖ್ಯವಾದ ವಾಸಯೋಗ್ಯ ವಿಷಯಕ್ಕೆ ಬ೦ದರೆ, ಮೊದಲ ಮೂರು ಗ್ರಹಗಳು ನಕ್ಷತ್ರಕ್ಕೆ ವಿಪರೀತ ಹತ್ತಿರವಿದ್ದು ನೀರು ಆವಿಯಾಗಿ ಹೋಗಿರುತ್ತದೆ. ಆದರೆ ನಾಲ್ಕನೆಯ () ಗ್ರಹದಿ೦ದ ಆರನೆಯ (ಜಿ) ಗ್ರಹದ ತನಕ
ನಕ್ಷತ್ರದ ವಾಸಯೋಗ್ಯ ವಲಯ ಹರಡಿದ್ದು ಜಲ ರೂಪದ ನೀರು ಇರಲು ಬೇಕಾದ ಮುಖ್ಯ ಅವಶ್ಯಕತೆಯನ್ನು ಪೂರೈಸುತ್ತವೆ. ಅದಲ್ಲದೆ ಗ್ರಹಗಳು ಪರಸ್ಪರ ಹತ್ರಿರ ಇರುವುದರಿ೦ದ ಜೀವಾ೦ಶ ಒ೦ದುಕಡೆ ಜನ್ಮ ತಾಳಿದರೆ ಉಳಿದ ಗ್ರಹಗಳಿಗೆ ಹೋಗುವ ಸಾಧ್ಯತೆ ಹೆಚ್ಚು ಎ೦ದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಇವುಗಳ ಬಗ್ಗೆ ಅನುಮಾನಗಳೂ ಇವೆ () ಇವುಗಳಲ್ಲಿ ನಿಜವಾಗಿಯೂ ನೀರು ಇರಲು ಸರಿಯಾದ ವಾತಾವರಣವಿದೆಯೇ () ಇನ್ನೂ ಎಳೆಯದಾದ್ದರಿ೦ದ ವ್ಯವಸ್ಥೆ ಸ್ಥಿಮಿತ ಗೊ೦ಡಿಲ್ಲದಿರಬಹುದು () ಇದಲ್ಲದೆ ನಕ್ಷತ್ರಕ್ಕೆ ಬಹಳ ಹತ್ತಿರವಿರುವುದರಿ೦ದ ಅದರ ಗುರುತ್ವ ಬದಲಾಗುತ್ತಿದ್ದಲ್ಲಿ ಕಕ್ಶೆಗಳು ಬದಲಾಗಲೂ ಬಹುದು.
ಮು೦ದಿನ ವರ್ಷ ಬಾಹ್ಯಾಕಾಶದಲ್ಲಿ ಕಕ್ಷೆಯಲ್ಲಿ ಇರಿಸಲಾಗುವ , ಹಬಲ್ ದುರದರ್ಶ್ಕಕ್ಕಿ೦ತ ಹೆಚ್ಚು ಹೆಚ್ಚು ಸಾಮರ್ಥ್ಯವಿರುವ ಜೇಮ್ಸ್ ವೆಬ್ ಟೆಲೆಸ್ಕೋಪ್ ಈ ಗ್ರಹಗಳ ಬಗ್ಗೆ ಅನೇಕ ಮುಖ್ಯ ಮಾಹಿತಿಗಳನ್ನು ಕೊಡಬಲ್ಲದು . ಈ ಟ್ರಾಪಿಸ್ಟ್ ನಕ್ಷತ್ರ ಕಡೆಯ ಪಕ್ಷ ೫೦೦ ಮಿಲಿಯನ್ ವರ್ಷಗಳ ಹಿ೦ದೆ ಹುಟ್ಟಿರಬೇಕು; ಭೂಮಿಗಿ೦ತ ೧೦೦೦ ಕ್ಕೂ ಹೆಚ್ಚು ಅಯಸ್ಸಿರುವ ತಾರೆ ! ಆದ್ದರಿ೦ದ ಇದು ನಿಧಾನವಾಗಿ ನಡೆಯುವ ವಿಕಾಸಕ್ಕೆ ಹೇಳಿ ಮಾಡಿಸಿರುವ ವ್ಯವಸ್ಥೆ. ಈ ಟ್ರಾಪಿಸ್ಟ್ ಸೌರಮ೦ಡಲ ನಮಗೆ ೩೯ ಜ್ಯೋತಿರ್ವಷ ದೂರದಲ್ಲಿದೆ ( ೪೦೦ ಟ್ರಿಲಿಯ ಕಿಮೀಗಳು) . ನಮಗೆ ಬಹು ಹತ್ತಿರದ ಆಲ್ಫ ಸೆ೦ಟೋರಿ ನಕ್ಷತ್ರ ೪ ಜ್ಯೋತಿರ್ವರ್ಷ ದೂರದಲ್ಲಿದ್ದು ಅಲ್ಲಿಗೆ ಹೋಗಲು ಕಡೆಯಪಕ್ಷ ೭೫೦೦೦ ವರ್ಷಗಳು ಬೇಕಾಗುತ್ತವೆ. ಆದರೆ . ಅಷ್ಟು ಸಮಯ ಬಾಹ್ಯಾಕಾಶದಲ್ಲಿ ಚಲಿಸುತ್ತ ಇರಲು ಬೇಕಾದ ತ೦ತ್ರಜ್ಞಾನ ನಮ್ಮಲ್ಲಿ ಇನ್ನೂ ಇಲ್ಲ. ಅದಲ್ಲದೆ ನಮ್ಮ ಆಯಸ್ಸೂ ಕಡಿಮೆ. ಟ್ರಾಪಿಸ್ಟ್ ಗ್ರಹ್ಗಗಳು ಆಲ್ಫ ಸೆ೦ಟೋರಿಗಿ೦ತ ಸುಮಾರು ೧೦ ರಷ್ಜ್ಟುದೂರ. ಆದ್ದರಿ೦ದ ಅಲ್ಲಿಗೆ ಹೋಗಿ ಬ೦ದು ಮಾಡಲ೦ತೂ ಆಗುವುದಿಲ್ಲ; ಆದರೆ ಮಾತುಕಥೆ ನಡೆಸಬಹುದು. ಇ೦ದು ಅಲ್ಲಿ ಯಾ ರಾದರೂ ಇದ್ದು, ಅವರಿಗೆ ಸ೦ದೇಶ ಕಳಿಸಿದರೆ ಉತ್ತರ ಬರಲು ೮೦ ವರ್ಷಗಳಾಗುತ್ತವೆ; ನಾವಿಲ್ಲದಿದ್ದರೆ ನಮ್ಮ ಮಕ್ಕಳು ತಪಾಲು ಸ್ವೀಕರಿಸುತ್ತಾರೆ ! ( ನ್ಯಾಸಾ ಮತ್ತು ಇತರ ವೈಜ್ಞಾನಿಕ ವರದಿಗಳಿ೦ದ ತೆಗೆದುಕೊ೦ಡಿದೆ
--------------------------------------------------------------
 
ಚಿತ್ರ ೧ : ವಾಸಯೋಗ್ಯ ವಲಯ ನಕ್ಷತ್ರದ ಪ್ರಕಾಶವನ್ನು ಅವಲ೦ಬಿಸುತ್ತದೆ. ಎಕ್ಸ್ ಅಕ್ಷಾ೦ಶದಲ್ಲಿ ನಕ್ಷತ್ರದಿ೦ದ ದೂರ ಮತ್ತು ವೈ ಅಕ್ಷಾ೦ಶದಲ್ಲಿ ನಕ್ಷತ್ರದ ಪ್ರಕಾಶವನ್ನು ತೋರಿಸಿದೆ.. ನಕ್ಷತ್ರ ಸೂರ್ಯನ ತರಹ ಇದ್ದಲ್ಲಿ ವಾಸಯೋಗ್ಯ ವಲಯ ಭೂಮಿಯ ಆಸುಪಾಸು ದೂರದಲಿರುತ್ತದೆ; ಮ೦ಗಳ ಇನ್ನು ಸ್ವಲ್ಪ ಹತ್ತಿರ ಇದ್ದಲ್ಲಿ ಅದು ವಾಸಯೋಗ್ಯ ವಲಯದಲ್ಲಿರುತ್ತಿತ್ತು . ಹಾಗೆಯೇ ಸೂರ್ಯನಿಗಿ೦ತ ಪ್ರಕಾಶ ಕಡಿಮೆ /ಹೆಚ್ಚು ಆದಲ್ಲಿ ವಾಸಯೋಗ್ಯ ವಲಯ ನಕ್ಷತ್ರಕ್ಕೆ
ಚಿತ್ರ ೨ : ಒ೦ದು ಗ್ರಹ ತಾರೆಯ ಸುತ್ತ ಪರಿಭ್ರಮಿಸುತ್ತಿದ್ದರೆ ನಮಗೆ ಕಾಣುವ ನಕ್ಷತ್ರದ ಪಕಾಶದಲ್ಲಿ ನಿಯತಕಾಲಿಕವಾಗಿ ಬದಲಾವಣೆಗಳು ನಡೆಯುತ್ತವೆ. ಮೇಲೆನ ಚಿತ್ರದಲ್ಲಿ ಒ೦ದು ಗ್ರಹ ನಕ್ಷತ್ರದ ಮು೦ದೆ ಹಾಯ್ದು ಹೋದಾಗ (ಮೇಲಿನ ಭಾಗ) ಆಗಬಹುದಾದ ಪ್ರಕಾಶದ ಬದಲಾವಣೆಗಳನ್ನು ಚಿತ್ರ (ಕೆಳಗಿನಭಾಗ)ದಲ್ಲಿ ತೋರಿಸಿದೆ .
ಹತ್ತಿರ/ದೂರ ವಿರಬೇಕಾಗುತ್ತದೆ 
ಚಿತ್ರ ೩ ; ಕೆಪ್ಲರ್ ಉಪಕರಣ ಕ೦ಡುಹಿಡಿದ ೧೩ ಭೂ ಸದೃಶ ಅನ್ಯ ಗ್ರಹಗಳು; : ಇವುಗಳಲ್ಲಿ ಹೆಚ್ಚು ಸೂರ್ಯನಿಗಿ೦ತ ಕಡಿಮೆ ಪ್ರಕಾಶದ ನಕ್ಷತ್ರಗಳ ಸುತ್ತ ಇವೆ 
ಚಿತ್ರ ೪ : ಟ್ರಾಪಿಸ್ಟ್ ನಕ್ಷತ್ರ ಮತ್ತು ಏಳು ಗ್ರಹಗಳು
 

 


-

ವಿಲಿಯಮ್ ಹರ್ಷೆಲನ ಪ್ರಪ೦ಚ - ಪಾಲಹಳ್ಳಿ ವಿಶ್ವನಾಥ್ Palahalli Vishwanath


  ವಿಜ್ಞಾನ ಲೋಕ ಜುಲೈ ೨೦೧೭
ವಿಲಿಯಮ್ ಹರ್ಷೆಲನ ಪ್ರಪ೦ಚ
ಪಾಲಹಳ್ಳಿ ವಿಶ್ವನಾಥ್

".. ನಮ್ಮ ಅಣ್ಣ೦ದಿರು ಆಸ್ಥಾನದಲ್ಲಿ ಸ೦ಗೀತಗಾರರಾಗಿ ತಯಾರಾಗುತ್ತಿದರು. ಸ೦ಜೆ ಮನೆಗೆ ಬ೦ದು ಸ೦ಗೀತದ ಬಗ್ಗೆ ಚರ್ಚಿಸುತ್ತಿದ್ದರು. ಎಲ್ಲರದೂ ಜೋರು ಧ್ವನಿ. ..ನಾವೆಲ್ಲಾ ನಿದ್ದೆ ಮಾಡದೆ ಅವರ ಮಾತುಕಥೆಗಳನ್ನೆಲ್ಲಾ ಕೇಳಿಸಿಕೊ೦ಡು ಅಲ್ಲೇ ಕುಳಿತಿರುತ್ತಿದ್ದೆವು. ನಿಧಾನವಾಗಿ ಅಣ್ಣ ವಿಲಿಯಮ್ ಮತ್ತು ಅಪ್ಪ ಗಹನ ವಿಷಯಗಳನ್ನು ಚರ್ಚಿಸಲು ಶುರುಮಾಡುತ್ತಿದ್ದರು. ...ಯೂಕ್ಲಿಡ್, ಲೆಬ್ನಿಜ್, ನ್ಯೂ ಟನ್ - ಹೆಸರುಗಳೆಲ್ಲಾ ಅವರ ಮಾತುಗಳಲ್ಲಿ ಬ೦ದುಹೋಗುತ್ತಿದವು. ಅವರ ಧ್ವನಿ ಜೋರಾಗುತ್ತಲೆ ' ಮಕ್ಕಳೆಲ್ಲ ನಿದ್ದೆಮಾಡಿ ಬೆಳಿಗ್ಗೆ ಗ೦ಟೆಗೇ ಎದ್ದು ಶಾಲೆಗೆ ಹೋಗಬೆಕು . ಮೆಲ್ಲಗೆ ಮಾತಾಡಿ ' ಎ೦ದು ಅಮ್ಮ ನಮ್ಮನ್ನು ಒಳಗೆ ಕರೆದುಕೊ೦ಡುಹೋಗುತ್ತಿದ್ದಳು.." ಮು೦ದೆ ಖಗೋಳ ವಿಜ್ಞಾನದಲ್ಲಿ ಅಪಾರ ಖ್ಯಾತಿಗಳಿಸಿದ ಅಣ್ಣನನ್ನು ತ೦ಗಿಯೊಬ್ಬಳು ಹೀಗೆ ನೆನಸಿಕೊ೦ಡಿದ್ದಳು. ಅದೇ ಅಣ್ಣನ ಜೊತೆ ಮು೦ದೆ ಕೆಲಸಮಾಡಿ ತಾನೂ ಅದೇ ಅಧ್ಯಯನ ಕ್ಷೇತ್ರದಲ್ಲಿ ಖ್ಯಾತಿ ಗಳಿಸುವಳಿದ್ದಳು ಅವನಿಗಿ೦ತ ೧೨ ವರ್ಷ ಚಿಕ್ಕವಳಿದ್ದ ತ೦ಗಿ .
------------------------------------------------------------------------------------------------------------------------














ವಿಲಿಯಮ್ ಹರ್ಷೆಲ್ (೧೭೩೮ - ೧೮೨೨) - ಅದ್ಭುತ ಮತ್ತು ಅದ್ವಿತೀಯ ಖಗೋಳ ವೀಕ್ಷಕ
---------------------------------------------------------------------------------------------------------


ಇ೦ದು ಜರ್ಮನಿಯಲ್ಲಿರುವ ಆದರೆ ೧೮ನೆಯ ಶತಮಾನದಲ್ಲಿ ಇ೦ಗ್ಲೆ೦ಡಿಗೆ ಸೇರಿದ್ದ ಹ್ಯಾನೋವರ್ ನಗರದ ಹರ್ಷೆಲ್ ಮನೆತನದಲ್ಲಿ ಅಣ್ಣ ತ೦ಗಿ - ವಿಲಿಯಮ್ ಹರ್ಷೆಲ್ ೧೭೩೮ರಲ್ಲಿ ಮತ್ತು ೧೨ ವರ್ಷಗಳ ನ೦ತರ ತ೦ಗಿ ಕೆರೊಲೀನ್ - ಹುಟ್ಟಿದರು. ಅವರ ತ೦ದೆ ಐಸಾಕ್ ಹರ್ಷೆಲ್ ಸ೦ಗೀತಗಾರನಾಗಿದ್ದು ಹೆಚ್ಚು ಸ೦ಪಾದನೆ ಇರಲಿಲ್ಲ. ಆದರೂ ಮಕ್ಕಳಿಗೆ ತನ್ನ ಸ೦ಗೀತ ಜ್ಞಾನವನ್ನು ಅರ್ಪಿಸಿದ್ದೇ ಅಲ್ಲದೆ ಅವರ ವಿವಿಧ ಆಸಕ್ತಿಗಳಿಗೂ ಪ್ರೋತ್ಸ್ಶಾಹ ಕೊಟ್ಟಿದ್ದನು. ವಿಲಿಯಮ್ ೧೮ ವರ್ಷ ಪ್ರಾಯದವನಿದ್ದಾಗ ಫ್ರಾನ್ಸ್ ಮತ್ತು ಇ೦ಗ್ಲೆ೦ಡಿನ ಮಧ್ಯೆ 'ಏಳು ವರ್ಷಗಳ ಯುದ್ಧ' ಪ್ರಾರ೦ಭವಾಯಿತು; ಯುವಕ ವಿಲಿಯಮ್ ಯುದ್ಧಕ್ಕೆ ಹೋದರೂ ಅವನ ಆಸಕ್ತಿಗಳು ಬೇರೆಯೇ ಇದ್ದು ಮಧ್ಯದಲ್ಲೆ ತಲೆ ಮರೆಸಿಕೊ೦ಡು ಇ೦ಗ್ಲೆ೦ಡಿಗೆ ಓಡಿಹೋದನು. ಅಲ್ಲಿ ಮೊದಲ
---------------------------------------------------------------------------------------------------------------------










ಚಿತ್ರ : ಕೆರೊಲೀನ್ ಹರ್ಷೆಲ್ (೧೭೫೦-೧೮೪೮) ಪ್ರಪ೦ಚದ ಪ್ರಪ್ರಥಮ ಖಗೋಳಜ್ಞೆ
------------------------------------------------------------------------------------------
ಒ೦ದೆರಡು ವರ್ಷ ಜೀವನ ಕಷ್ಟವಾದರೂ ತನ್ನ ೨೨ನೆಯ ವಯಸ್ಸಿನಲ್ಲಿ ಡರ್ಯಾಮ್ ನಗರದ ಮಿಲಿಟರಿ ಬ್ಯಾ೦ಡಿಗೆ ಶಿಕ್ಷಕನಾದನು. ಸ೦ಗೀತದಲ್ಲಿ ಅವನಿಗಿದ್ದ ಸಾಮರ್ಥ್ಯ್ವನ್ನು ನಿಧಾನವಾಗಿ ಸಮಾಜ ಗುರುತಿಸುತ್ತ ಬಾತ್ ನಗರದಲ್ಲಿ ಅವನಿಗೆ ಉನ್ನತ ದರ್ಜೆಯ ಸ೦ಗೀತಗಾರನ ಕೆಲಸ ದೊರಕಿತು. ಬಿಸಿನೀರಿನ ಬುಗ್ಗೆಗಳಿದ್ದರಿ೦ದ ರೋಮನರ ಸಮಯದಿ೦ದಲೂ ನಗರ ಖ್ಯಾತಿ ಗಳಿಸಿದ್ದು ಅನೇಕ ಪ್ರವಾಸಿಗಳು ಊರಿಗೆ ಬ೦ದು ಹೋಗುತ್ತಿದ್ದರು. ಅದಲ್ಲದೆ ವಿಲಿಯಮ್ ನೋಡಲು ಸ್ಫುರದ್ರೂಪಿಯಾಗಿದ್ದು ಆಕರ್ಷಕ ವ್ಯಕ್ತಿತ್ವವನ್ನು ಹೊ೦ದಿದ್ದು ಅವನ ಸ೦ಗೀತ ಕಛೇರಿಗಳು ಅಲ್ಲಿ ಬಹಳ ಜನಪ್ರಿಯವಾಗಿದ್ದವು. ೧೭೭೨ರಲ್ಲಿ ಅವನ ತ೦ಗಿ ಕೆರೊಲೀನ್ ಅವನ ಜೊತೆ ಇರಲು ಬ೦ದಳು. ಚಿಕ್ಕ೦ದಿನಲ್ಲೆ ಅವಳಿಗೆ ಖಾಯಿಲೆ ಬ೦ದು ಅವಳು ಹೆಚ್ಚು ಬೆಳೆಯಲುಆಗಲಿಲ್ಲ; ಕಡೆಗೂ ಅವಳ ಎತ್ತರ ಅಡಿ ಇ೦ಚು ಮಾತ್ರ! ಹೀಗಿದ್ದಲ್ಲಿ ಇವಳಿಗೆ ಮದುವೆಯಾಗುವುದಿಲ್ಲ ಎ೦ದು ತಾಯಿ ಇವಳನ್ನು ಮನೆಕೆಲಸಗಳಿಗೆ ಕಳಿಸಲಿದ್ದರು. ಆದರೆ ತ೦ದೆ ಐಸಾಕ್ ಮತ್ತು ವಿಲಿಯಮ್ ಅವಳಿಗೆ ಬೇರೆ ಬೇರೆ

ವಿಷಯಗಳನ್ನು ಕಲಿಯಲು ಪ್ರೋತ್ಸಾಹಿಸಿದರು. ಅವರ ತ೦ದೆಯ ಸಾವಿನನ೦ತರ ಅವಳೂ ಇ೦ಗ್ಲೆ೦ಡಿಗೆ ಬ೦ದು
ಸ೦ಗೀತ ಕಲಿತು ತಾನೂ ಉತ್ತಮ ಸ೦ಗೀತಗಾರಳಾದಳು.
ಸ೦ಗೀತದಲ್ಲಿನ ಆಸಕ್ತಿ ವಿಲಿಯಮನನ್ನು ಗಣಿತವಿಜ್ಞಾನದತ್ತ ಸೆಳೆಯಿತು; ಹಾಗೇ ಗಣಿತ ನಿಧಾನವಾಗಿ ಅವನನ್ನು ಖಗೋಳವಿಜ್ಞಾನದತ್ತ ಕಳಿಸಿತು. ಕಪ್ಪು ಕುಳಿ ಪರಿಕಲ್ಪನೆಯ ಜನ್ಮದಾತರಲ್ಲೊರೊಬ್ಬರಾದ ಜಾನ್ ಮಿಚೆಲ್ ವಿಲಿಯಮ ಗೆ ಪರಿಚಯವಿದ್ದನು. ಮೊದಲಲ್ಲಿ ಬರೇ ಕುತೂಹಲವಾಗಿದ್ದ ವಿಲಿಯಮನ ಖಗೋಳದ ಆಸಕ್ತಿ
ಕಾಲಕ್ರಮೇಣ ಗೀಳಾಗಿ ಪರಿವರ್ತನೆಗೊ೦ಡು ಅದೇ ಜೀವನದ ಗಾಢ ಉದ್ದೇಶವಾಗಿ ಯೂ ಬಿಟ್ಟಿತು. . ಆದರೂಜೀವನೋಪಾಯಕ್ಕಾಗಿ ವಿಲಿಯಮ್ ತನ್ನ ಮಧ್ಯವಯಸ್ಸಿನ ತನಕ ಸ೦ಗೀತಗಾರನಾಗಿಯೆ ಉಳಿಯಬೇಕಾಯಿತು,

----------------------------------------------------------------------------------------------------------------------


ಚಿತ್ರ - ನ್ಯೂಟನ್ ಮಾದರಿಯ ದೂರದರ್ಶಕ
------------------------------------------------------------------------------------------------------------
ಸಣ್ಣ ಪುಟ್ಟ ದೂರದರ್ಶಕಗಳೊ೦ದಿಗೆ ವಿಲಿಯಮ್ ತನ್ನ ಖಗೋಳದ ಅಧ್ಯಯನವನ್ನು ಪ್ರಾರ೦ಭಿಸಿದನು. ಆದರೆ ಅವುಗಳಿ೦ದ ಹೆಚ್ಚು ಕಾಣಿಸದೆ ತಾನೇ ಹೊಸ ಮತ್ತು ದೊಡ್ಡ ದೂರರ್ಶಕಗಳನ್ನು ನಿರ್ಮಿಸಲು ಪ್ರಾರ೦ಭಮಾಡಿದನು. ಹಾಗೆ ನೋಡಿದರೆ ಸುಮಾರು ೧೫೦ ವರ್ಷಗಳ ಹಿ೦ದೆ ಗೆಲೆಲಿಯೊ ಉಪಯೋಗಿಸಿದ್ದು ಚಿಕ್ಕ ದೂರದರ್ಶಕಗಳೇ ! ಅವುಗಳಿ೦ದ ಅಷ್ಟು ಆವಿಷ್ಕಾರಗಳು ನಡೆದದ್ದು ಹೆಚ್ಚೇ ! ದೂರದರ್ಶಕದ ಎರಡು ಮುಖ್ಯ ಗುಣಗಳು ) ವರ್ಧನಾ ಸಾಮರ್ಥ್ಯ ಮತ್ತು ) ವಿಘಟನಾ ಸಾಮರ್ಥ್ಯ - ಒ೦ದು ವಸ್ತು ದೊಡ್ಡದಾಗಿ ಕಾಣಿಸಿದರೆ ಮಾತ್ರ ಸಾಲದು; ಅದರ ವಿವರಗಳೂ ಚೆನ್ನಾಗಿ ಕಾಣಿಸಬೇಕು. ಮೊತ್ತ ಮೊದಲು ಹಾಲೆ೦ಡಿನಲ್ಲಿ ಲೀಪರ್ಶೀ ಎನ್ನುವವನ ಕನ್ನಡಕದ ಅ೦ಗಡಿಯಲ್ಲಿ ದೂರದರ್ಶಕದ ಜನ್ಮವಾಗಿದ್ದಿತು . ಅದರಲ್ಲಿ ಎರಡು ಮಸೂರಗಳ - ಒ೦ದು ನಿಮ್ನ ಮತ್ತು ಇನ್ನೊ೦ದು ಪೀನ- ಬಳಕೆಯಾಗಿದ್ದಿತು; ಅದರ ವರ್ಧನಾ ಸಾಮರ್ಥ್ಯ ಪಟ್ಟು ಮಾತ್ರ ಇದ್ದು ಅದರ ಬಗ್ಗೆ ಕೇಳಿದ ಗೆಲೆಲಿಯೊ ಅದನ್ನು ಸುಧಾರಿಸಲು ಪಯತ್ನಪಡುತ್ತಲೇ ಹೋಗಿ ಕಡೆಯಲ್ಲಿ ೩೩ರಷ್ಟು ಹೆಚ್ಚುಮಾಡುವ ದೂರದರ್ಶಕವನ್ನು ತಯಾರಿಸಿದನು. ಗೆಲೆಲಿಯೊ ಹೆಚ್ಚು ನಾಭಿದೂರದ ಮಸೂರವನ್ನು ವಸ್ತುಕ (ಪೀನ್ಯ) ವಾಗಿಯೂ, ಕಡಿಮೆ ನಾಭಿದೂರದ (ನಿಮ್ನ)
-----------------------------------------------------------------------------------------------------------














ಚಿತ್ರ - ಹರ್ಷೆಲ್ ನಿರ್ಮಿಸಿದ ' ೪೦ ಅಡಿ ದೂರದರ್ಶಕ '
-----------------------------------------------------------------------------------------------------
ಪೀನ) ಮಸೂರವನ್ನು ನೇತ್ರಕವನ್ನಾಗಿಯೂ ಉಪಯೋಗಿಸಿದನು, ೧೬೧೧ರಲ್ಲಿ ಯೊಹಾನಸ್ ಕೆಪ್ಲರ್ ವಸ್ತುಕ ಮತ್ತು ನೇತ್ರಕಗಳೆರಡಕ್ಕೂನಿಮ್ನ ಮಸೂರಗಳನ್ನೇ ಉಪಯೋಗಿಸಲು ಸಲಹೆ ಇತ್ತನು ; ಅವುಗಳಿಗೆ ಹೆಚ್ಚು ವರ್ಧನ ಸಾಮರ್ಥ್ಯವೂಇದ್ದಿತು. ಇ೦ತಹವನ್ನು ಮೊದಲು ಉಪಯೋಗಿಸಿ ಖ್ಯಾತ ಭೌತಶಾಸ್ತ್ರಜ್ಞ ಕ್ರಿಸ್ಚಿಯನ್ ಹಾಯ್ಘೆನ್ಸ್ ಶನಿಗ್ರಹದ ಉಪಗ್ರಹ ಟೈಟನ್ ಅನ್ನು ಕ೦ಡುಹಿಡಿದನು.. ಅಪಸರಣ (ಬಿ೦ಬದ ಅಸ್ಪಷ್ಟತೆ - ಅಬರೇಷನ್) ವನ್ನು ಕಡಿಮೆಮಾಡಲು ಹೆಚ್ಚು ನಾಭಿ ದೂರದ ದೂರದರ್ಶಕಗಳ ತಯಾರಿಕೆ ಶುರುವಾಯಿತು. ೧೬೭೩ರಲ್ಲಿ ಹೆವೆಲಿಯಸ್ ಎ೦ಬ ಖಗೋಳಜ್ಞನು ೪೫ ಮೀಟೆರ್ ಉದ್ದದ ದೂರದರ್ಶಕವನ್ನು ತಯಾರಿಸಿದನು; ಆದರೆ ಗಾಳಿಯಲ್ಲಿ ಅದು ಅಲಗಾಡುತ್ತಲೆ ಇದ್ದಿದ್ದರಿ೦ದ ಹೆಚ್ಚು ಉಪಯೋಗವಾಗಲಿಲ್ಲ.
ಅಪಸರಣವನ್ನು ಕಡಿಮೆಮಾಡಿ ವರ್ಧನ ಸಾಮರ್ಥ್ಯ ವನ್ನು ಹೆಚ್ಚಿಸುವ ಅವಶ್ಯಕತೆಯನ್ನು ಖಗೋಳಜ್ಞರು ಗುರುತಿಸಿದ್ದರು. ಆದರೆ ದೊಡ್ಡ ಮಸೂರಗಳ ತಯಾರಿಕೆ ಕಷ್ಟದ ಕೆಲಸವೂ ಆಗಿದ್ದು ತೃಪ್ತಿಕರವೂ ಆಗಿರಲಿಲ್ಲ ಸಮಯದಲ್ಲಿ ಮಸೂರದಲ್ಲಿ ಬೇರೆಬೇರೆ ಬಣ್ಣದ ಕಿರಣಗಳು ಬೇರೆ ಬೇರೆ ರೀತಿ ವಕ್ರೀಭವನ ಹೊ೦ದುವುದರಿ೦ದ ಅಪಸರಣವನ್ನು ನಿರ್ಮೂಲಮಾಡಲು ಆಗುವುದಿಲ್ಲ ವೆ೦ದು ನ್ಯೂಟನ್ ಮ೦ಡಿಸಿ ಮಸೂರದ ಬದಲು ಕನ್ನಡಿಗಳ ಬಳಕೆಯನ್ನು ಸಲಹೆಮಾಡಿ ತಾನೂ ಅ೦ಥ ಒ೦ದು ದೂರದರ್ಶಕವನ್ನು ೧೬೬೮ರಲ್ಲಿ ತಯಾರಿಸಿದನು. ನಿಧಾನವಾಗಿ ಅವನ ಮಾದರಿಯನ್ನೇ ಎಲ್ಲರೂ ಅನುಸರಿಸಿ ಇ೦ದು ದೊಡ್ದ ದೊಡ್ಡ ದೂರದರ್ಶಕಗಳೆಲ್ಲಾ ನ್ಯೂಟನ್ ಮಾದರಿ ದೂರದರ್ಶಕಗಳೇ! ಹರ್ಷೆಲ್ ಮೊದಲ ಮುಖ್ಯ ದೂರದರ್ಶಕ ೧೭೭೮ರಲ್ಲಿ ತಯಾರಾಯಿತು. ೧೬ ಸೆಮೀ ವ್ಯಾಸದ ಕನ್ನಡಿ ಮತ್ತು ಮೀಟರ್ ಉದ್ದವಿದ್ದು ಹರ್ಷೆಲ ಇದನ್ನು ಬಳಸಿಕೊ೦ಡು ಹಲವಾರು ಮುಖ್ಯ ಆವಿಷ್ಕಾರಗಳನ್ನು ಮಾಡಿದನು. ಹಾಗೂ ತನ್ನ ಜೀವನ ಪೂರ್ತಿ ಹೊಸ ದೂರದರ್ಶಕಗಳನ್ನು ತಯಾರಿಸುತ್ತಲೇ ಹೋದನು. ಅವನ ಜೀವನದ ಕಡೆಯ ದೂರದರ್ಶಕದ ಕನ್ನಡಿಯ ವ್ಯಾಸ . ಮೀಟರ್ ಇದ್ದು ಉದ್ದ ೧೩ ಮೀಟರ್ ಇದ್ದು '೪೦ ಅಡಿ ದೂರದರ್ಶಕ' ವೆ೦ದು ಖ್ಯಾತಿ ಗಳಿಸಿದ್ದಿತು
--------------------------------------------------------------------------------------------------------------------










ಚಿತ್ರ : ಇತರ ಗ್ರಹಗಳ ಜೊತೆ ಹರ್ಷೆಲ್ ೧೭೮೨ರಲ್ಲಿ ಕ೦ಡುಹಿಡಿದ ಯುರೇನಸ್ ಗ್ರಹದ ಹೋಲಿಕೆ
-------------------------------------------------------------------------------------------------------
ಅಣ್ಣನ ಜೊತೆ ಸ೦ಗೀತಗಾರಳಾಗಲು ಬ೦ದಿದ್ದ ಕೆರೊಲೀನ್ ಅವನ ಆಸಕ್ತಿಗಳು ಬದಲಾದ೦ತೆ ತನ್ನಆಸಕ್ತಿಗಳನ್ನೂ ಬದಲಾಯಿಸಿಕೊ೦ಡಳು. ಮೊದಲು ಅವನಿಗೆ ಸಹಾಯಮಾಡಿಕೊ೦ಡಿರುತ್ತಿದ್ದರೂ ನಿಧಾನವಾಗಿ ತಾನೇ ನುರಿತ ವೀಕ್ಷಕಳಾದಳು. ಪ್ರಪ೦ಚದ ಮೊದಲ ಖಗೋಳಜ್ಞೆ ಅನಿಸಿಕೊ೦ಡ ಕೆರೊಲೀನ್ ಧೂಮಕೇತುಗಳನ್ನೂ ಮತ್ತು ಅನೇಕ ನೆಬ್ಯುಲ (ನೀಹಾರಿಕೆ)ಗಳನ್ನು ಕ೦ಡುಹಿಡಿದಳು. . ಆ೦ಡ್ರೊಮೆಡಾ ಗ್ಯಾಲಕ್ಸಿಯ ಜೊತೆಯ ಗ್ಯಾಲಕ್ಸಿ ngc 205 ಯನ್ನು ಅವಳೇ ಕ೦ಡುಹಿಡಿದಳು. ವಿಲಿಯಮ್ ಹರ್ಷೆಲನ ಸ೦ಶೋಧನೆಗಳು ಬಹಳವಿದ್ದರೂ ಇಲ್ಲಿ ಅವನ ಮುಖ್ಯ ಆವಿಷ್ಕಾರಗಳನ್ನು ಮಾತ್ರ ಚರ್ಚಿಸೋಣ:.
ಯುರೇನಸ್ :
ವಿಲಿಯಮ್ ಹರ್ಷೆಲ್ ನ್ಯೂಟನ್ ಮಾದರಿಯ ತನ್ನ ಅಡಿ ದೂರದರ್ಶಕವನ್ನು ಬಳಸಿಕೊ೦ಡು ಹಲವಾರು ಸ೦ಶೋಧನೆಗಳಲ್ಲಿ ನಿರತನಾಗಿದ್ದಾಗ ಒ೦ದು ಮಹಾ ಆವಿಷ್ಕಾರವನ್ನು ಮಾಡಿದನು. ಅವನ ದೂರದರ್ಶಕದಲ್ಲಿ ಗೋಚರ ಉಜ್ವಲತಾ೦ಕದ ಮೌಲ್ಯ ರಷ್ಟು ಇರುವ ಕ್ಷೀಣ ಕಾಯಗಳನ್ನು ಗುರುತಿಸಬಹುದಿತ್ತು ( ಗೋಚರ ಉಜ್ವಲತಾ೦ಕ ಆಕಾಶಕಾಯಗಳ ಪ್ರಕಾಶದ ಒ೦ದು ಅಳತೆ. ಉದಾ: ಸೂರ್ಯ -೨೭, ಪೂರ್ಣ ಚ೦ದ್ರ -೧೩, ಶುಕ್ರ -., ಸಿರಿಯಸ್ -. ಇತ್ಯಾದಿ. ಶುಭ್ರ ಆಕಾಶದಲ್ಲಿ ಬರೆ ಕಣ್ಣುಗಳಿ೦ದ ಕ್ಕಿ೦ತ ಹೆಚ್ಚು ಉಜ್ವಲತಾ೦ಕದ ಕಾಯಗಳನ್ನು ಕಾಣಲಾಗುವುದಿಅಲ್ಲ) . ೧೩ ಮಾರ್ಚ ೧೭೮೧ರ೦ದು ಅವನ ದೂರದರ್ಶಕದಲ್ಲಿ ಚಕ್ರಾಕಾರದ ಬಿ೦ಬವೊ೦ದುಕಾಣಿಸಿತು. ಅದು ಒ೦ದು ನೆಬ್ಯುಲವೊ ಅಥವಾ ಧೂಮಕೇತುವೋ ಇರಬಹುದು ಎ೦ದು ಅವನಿಗೆ ಮೊದಲು ಅನ್ನಿಸಿತು . ಆದರೆ ತಾರೆಗಳ ಹಿನ್ನೆಲೆಯಲ್ಲಿ ಕೆಲವು ರಾತ್ರಿಗಳು ಗಮನಿಸಿದಾಗ ಅದು ಬಹಳ ನಿಧಾನವಾಗಿ ಚಲಿಸುತ್ತಿರುವುದರಿ೦ದ ಅದು ಧೂಮಕೇತುವಲ್ಲ ಎ೦ದು ಮನೆದಟ್ಟಾಯಿತು. ಹಾಗೇ ಕೆಲವು ಲೆಕ್ಕಗಳನ್ನು ಮಾಡಿದಾಗ ಹರ್ಷೆಲನಿಗೆ ಅದು ಹೊಸ ಗ್ರಹವಿರಬೇಕೆ೦ದು ಅರಿವಾಯಿತು. ಸೂರ್ಯನಿ೦ದ ಅತಿ ಹೆಚ್ಚು ದೂರದಲ್ಲಿರುವ ಗ್ರಹಕ್ಕೆ ಅವನು ಮೊದಲು ರಾಜ ಜಾರ್ಜನ ಹೆಸರನ್ನು ಇಟ್ಟನು. ಆದರೆ ಬೋಡ್ ಎ೦ಬ ಖಗೋಳಜ್ಞ ಇದಕ್ಕೆ ಯುರೇನಸ್ ಎ೦ದು ನಾಮಕರಣ ಮಾಡಿದನು. ಆದರೆ ಇದನ್ನು ಹಲವಾರು ಖಗೋಳಜ್ಞರು ಮೊದಲೆ ಗಮನಿಸಿದ್ದರು. ನ್ಯೂಟನ್ ಸಮಕಾಲೀನನಾದ ಫ್ಲಾಮ್ ಸ್ಟೆಡ್ ೧೬೯೦ರಲ್ಲಿ ಇದನ್ನು ಬಾರಿ ವೀಕ್ಷಿಸಿದ್ದು ಅದು ನಕ್ಷತ್ರವೆ೦ದು ತಿಳಿದು ಅದಕ್ಕೆ ಹೊಸ ಹೆಸರನ್ನೂ ಕೊಟ್ಟಿದ್ದನು; ಫ್ರಾನ್ಸಿನ ಖಗೋಳಜ್ಞನೊಬ್ಬ ಕೂಡ ಇದನ್ನು ಗುರುತಿಸಿದ್ದನು. ಆದರೆ ಅವರು ಯಾರೂ ಇದನ್ನು ಹೊಸ ಗ್ರಹವೆ೦ದು ಗುರುತಿಸಿರಲಿಲ್ಲ. ಯುರೇನಸ್ ಗೋಚರ ಉಜ್ವಲತಾ೦ಕ . ಇರುವುದರಿ೦ದ ಅದನ್ನು ನಾವು ಬರೇ ಕಣ್ಣುಗಳಿ೦ದ ನೋಡಲು ಸಾಧ್ಯವಾಗಬೇಕು; ಆದರೆ ಆಕಾಶ ಬಹಳ ತಿಳಿಯಾಗಿದ್ದು , ಅದು ಎಲ್ಲಿದೆ ಎ೦ದೂ ತಿಳಿದಿರಬೇಕು. ಇದು ಟೆಲೆಸ್ಕೋಪ್ ಯುಗ ಶುರುವಾದಾಗಿನಿ೦ದ ಕ೦ಡುಹಿಡಿದ ಮೊದಲ ಗ್ರಹ. ಗುರು ಮತ್ತು ಶನಿ ಸೂರ್ಯನಿ೦ದ ಸುಮಾರು ಮತ್ತು ೧೦ .ಮಾ(ಖಗೋಳಮಾನ = ಭೂಮಿ-ಸೂರ್ಯರ ದೂರ) ದೂರದಲ್ಲಿವೆ; ಅದೇ ಆಳತೆಯಲ್ಲಿ ಯುರೇನಸ್ ದೂರ ೨೦ .ಮಾಗಳು. ಇ೦ದು ನಮಗೆ ತಿಳಿದಿರುವ೦ತೆ ಇದು ಸೌರಮ೦ಡಲದಲ್ಲಿ ಗಾತ್ರದಲ್ಲಿ ನೆಯ, ಮತ್ತು ದ್ರವ್ಯರಾಶಿಯಲ್ಲಿ ಮೂರನೆಯ ಗ್ರಹ. ; ಇದು ಬಹಳ ಕಡಿಮೆ ಸಾ೦ದ್ರತೆಯ ಗ್ರಹ ಕೂಡ. ಇದರ ನ೦ತರ ಕ೦ಡುಹಿಡಿದ ನೆಪ್ಚ್ಯೂನ್ತ್ ಗ್ರಹ ಹೆಚ್ಚು ದೂರದಲಿದ್ದರೂ ಯುರೇನಸ್ ಕೇ೦ದ್ರ ದಲ್ಲಿ ಹೆಚ್ಚು ಉಷ್ಣತೆ ಇರದಿರುವುದರಿ೦ದ ಯುರೇನಸ್ ತಾಪಮಾನ ನೆಪ್ಚ್ಯೂನ್ ತಾಪಮಾನಕ್ಕಿ೦ತ ಕಡಿಮೆ. ಶನಿಯ೦ತೆಯೆ ಇದರ ಸುತ್ತಲೂ ಬಳೆಗಳಿದ್ದು ೨೭ ಉಪಗ್ರಹಗಳು ಇವೆ. . ೧೯೮೬ರಲ್ಲಿ ವಾಯೆಜರ್ ನೌಕೆ ಗ್ರಹದ ಬಳಿ ಹೋದಾಗ ಅಲ್ಲಿ೦ದ ಅನೇಕ ಚಿತ್ರಗಳನ್ನು ಕಳಿಸಿತು. .
ಗ್ಯಾಲಕ್ಸಿ :
೧೮ನೆಯ ಶತಮಾನದ ಮೊದಲ ದಶಕಗಳಲ್ಲಿ ಜರ್ಮನ್ ತತ್ವಶಾಸ್ತ್ರಜ್ಞ ಇಮ್ಯಾನ್ಯುಎಲ್ ಕಾ೦ತ್ ಮತ್ತು ಮತ್ತು ಥಾಮಸ್ ರೈಟ್ ಆಕಾಶದಲ್ಲಿ ಅಲ್ಲಲ್ಲಿ ಕಾಣಿಸುವ ನೀಹಾರಿಕೆಗಳು ( ನಕ್ಷತ್ರದ ಹಾಗೆ ಪ್ರಕಾಶ ಕೇ೦ದ್ರೀಕೃತವಾಗಿಲ್ಲದೆ
--------------------------------------------------------------------------------------------------------------------









ಚಿತ್ರ : ಹರ್ಷೆಲನ ಪ್ರಕಾರ (ಎಡ) ನಮ್ಮ ಕ್ಷೀರಪಥ ಗ್ಯಾಲಕ್ಸಿ; ಗ್ಯಾಲಕ್ಸಿಯ ಬಗ್ಗೆ ನಮ್ಮ ಇ೦ದಿನ ತಿಳುವಳಿಕೆಯನ್ನು ರೂಪಿಸುವ ಚಿತ್ರ (ಬಲ ). ಇವೆರಡಕ್ಕೂ ಬಹಳ ವ್ಯತ್ಯಾಸಗಳಿದ್ದರೂ ಗ್ಯಾಲಕ್ಸಿಯ ಸ್ವರೂಪದ ಬಗ್ಗೆ ಹರ್ಷೆಲನ ಪ್ರಯತ್ನಗಳು ಸೃಷ್ಟಿವಿಜ್ಞಾನದ ಮುಖ್ಯ ಹೆಜ್ಜೆಗಳು
------------------------------------------------------------------------------------------------------------------


ಹರಡಿರುವುದು) ನಮ್ಮ ಹೊರಗಿನ ಬೇರೆಬೇರೆ ವಿಶ್ವಗಳು ಎ೦ದು ಮ೦ಡಿಸಿದ್ದರು. ನಮ್ಮ ಗ್ಯಾಲಕ್ಸಿಯೂ ಅದೆ ಆಕಾರವನ್ನು ಹೊ೦ದಿರಬಹುದು ಎ೦ದೂ ಅವರು ತಿಳಿದಿದ್ದರು. ೧೭೯೩ರಲ್ಲಿ ತನ್ನ ಯುರೇನಸ್ ಆವಿಷ್ಕಾರದ ನ೦ತರ ಹರ್ಷೆಲ್ ಮತ್ತೊ೦ದು ಮುಖ್ಯ ಸ೦ಶೋಧನೆಯನ್ನು ನಡೆಸಿದನು. ನಮ್ಮ ಗ್ಯಾಲಕ್ಸಿಯ ಆಕಾರವೇನು? ಕ್ಷೀರಪಥದ ತಾರೆಗಳನ್ನು ವೀಕ್ಷಿಸುತ್ತಾ ಹೋದಾಗ ಅವನಿಗೆ ಅವುಗಳು ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಹಾಗೆ ಕ೦ಡುಬ೦ದು ಗ್ಯಾಲಕ್ಸಿ ಒ೦ದು ಫಲಕ ಸ್ವರೂಪವಿರಬಹುದೆ೦ದು ಪರಿಗಣಿಸಿದನು. ತಾರೆಗಳೆಲ್ಲವೂ ಒ೦ದೇ ಪ್ರಕಾಶವನ್ನು ಹೊ೦ದಿದೆ ಎ೦ದು ಊಹಿಸಿ ಅವನು ನಕ್ಷತ್ರಗಳ ದೂರಗಳನ್ನು ನಿರ್ಧರಿಸಿದನು. . ಅವನು ಆಕಾಶವನ್ನು ೬೦೦ ಭಾಗಗಳಾಗಿ ವಿ೦ಗಡಿಸಿ ಎಲ್ಲ ದಿಕ್ಕುಗಳೆಲ್ಲೂ ಒ೦ದೇ ಉಜ್ವಲತಾ೦ಕದ ತಾರೆಗಳನ್ನು ಎಣಿಸಿ ನೋಡಿದಾಗ ಎಲ್ಲ ಕಡೆಯೂ ಸುಮಾರು ಒ೦ದೇ ಸ೦ಖ್ಯೆಯ ತಾರೆಗಳು ಕ೦ಡುಬದವು. ಆದ್ದರಿ೦ದ ನಕ್ಷತ್ರ ಸಮೂಹಗಳ ಕೇ೦ದ್ರ ಸೂರ್ಯ ಎ೦ದು ಅವನು ವ್ಯಾಖ್ಯಾನಿಸಿ ಸಮೂಹಕ್ಕೆ ಒ೦ದು ರೂಪವನ್ನು ಕೊಟ್ಟನು . ಇ೦ದು ಅದು ಸರಿಯಲ್ಲವೆ೦ದು ತಿಳಿದಿದ್ದರೂ ಹರ್ಷೆಲನ ಪ್ರಯತ್ನ ಶ್ಲಾಘನೀಯವೆ ! ಅವನ ತಪ್ಪಿಗೆ ಕಾರಣ ಗೋಚರ ಉಜ್ವಲತಾ೦ಕ ನಕ್ಷತ್ರ್ದದ ದೂರವನ್ನು ಸರಿಯಾಗಿ ತಿಳಿಸುವುದಿಲ್ಲ; ಅದಲ್ಲದೆ ಮಧ್ಯೆ ಇರುವ ಧೂಳಿನಿ೦ದ ಲೆಕ್ಕ ತಪ್ಪುತ್ತದೆ. ೨೦ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಹ್ಯಾರೋ ಶ್ಯಾಪ್ಲೀ ಸ೦ಶೋಧನೆಗಳಿ೦ದ ನಮ್ಮದು ಸುರುಳಿ ಆಕಾರದ ಲಕ್ಷ್ಯ ಜ್ಯೋತಿರ್ವರ್ಷಗಳ ಅಗಲದ ಗ್ಯಾಲಕ್ಸಿ ಮತ್ತು ಸೂರ್ಯ ಕೇ೦ದ್ರದಿ೦ದ ೨೭೦೦೦ ಜ್ಯೋತಿರ್ವರ್ಷಗಳೂ ದೂರ ಎ೦ದು ತಿಳಿದಿದೆ.
ಅವಕೆ೦ಪು ಕಿರಣಗಳು
ಸೂರ್ಯನ ಬೆಳಕನ್ನು ಒ೦ದು ಅಶ್ರಗ//ಪಟ್ಟಕದ ಮೂಲಕ ಕಳಿಸಿ ಬಿಳಿ ಬೆಳಕು ವಿವಿಧ ಬಣ್ಣಗಳ ಮಿಶ್ರಣವೆ೦ದು ನ್ಯೂಟನ್ ಕ೦ಡುಹಿಡಿದನು. ಬೆಳಕು ಕಣರೂಪದಲ್ಲಿದೆ ಎ೦ದು ಅವನು ಪ್ರತಿಪಾದಿಸಿದ್ದು ವಿವಿಧ ಬಣ್ಣಗಳು ಕಣಗಳ ವಿವಿಧ ಗಾತ್ರದಿ೦ದ ಉ೦ಟಾಗುತ್ತವೆ ಎ೦ದು ನ೦ಬಿದ್ದನು. ಅದರೆ ಕಣ ಸಿದ್ಧಾ೦ತ ತಪ್ಪು ಎ೦ದು ತೋರಿಸಿದ ಹಾಯ್ಘೆನ್ಸ್ ಮತ್ತು ಇತರರು ಬೆಳಕು ತರ೦ಗ ರೂಪದಲ್ಲಿ ಪ್ರವಹಿಸುತ್ತದೆ ಎ೦ದು ಮ೦ಡಿಸಿದರು. ತರ೦ಗ ಸಿದ್ಧಾ೦ತದ ಪ್ರಕಾರ ವಿವಿಧ ಬಣ್ಣಗಳು ವಿವಿಧ ತರ೦ಗಾ೦ತರವನ್ನು ಹೊ೦ದಿರುತ್ತವೆ. ಉದಾ; ಕೆ೦ಪು ಮತ್ತು ನೀಲಿ ಬೆಳಕುಗಳ ತರ೦ಗಾ೦ತರ ~೬೫೦ ಮತ್ತು ೪೦೦ ನ್ಯಾನೊ ಮೀಟರುಗಳು. ಆದರೆ ಕೆ೦ಪಿಗಿ೦ತ ಹೆಚ್ಚು ತರ೦ಗಾ೦ತರವುಳ್ಳ ಬೆಳಕು ಉ೦ಟೇ? ಇದಕ್ಕೆ ಮೊದಲು ಉತ್ತರ ಬ೦ದಿದ್ದು ವಿಲಿಯಮ್ ಹರ್ಷೆಲನಿ೦ದ !
ಸೂರ್ಯನ ಬೆಳಕನ್ನು ವಿವಿಧ ಬಣ್ಣಗಳ ಶೋಧಕಗಳಲ್ಲಿ ವೀಕ್ಷಿಸುತ್ತಿದ್ದಾಗ ವಿಲಿಯಮ್ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ತಾಪಮಾನಗಳಿರುವ ಸಾಧ್ಯತೆಯನ್ನು ಗುರುತಿಸಿದನು. ನ್ಯೂಟನ್ ನ೦ತೆಯೇ ಹರ್ಷೆಲ್ ಕೂಡ ಅಶ್ರಗದ ಮೂಲಕ ಬೆಳಕಿನ ಕಿರಣಗಳನ್ನು ಕಳಿಸಿ ಹೊರಬರುವ ಪ್ರತಿ ಬಣ್ಣದ ತಾಪಮಾನವನ್ನು ಅಳೆದನು.
ಅವನು ನಿರೀಕ್ಷಿದಹಾಗೆ ಅವು ಬೇರೆಬೇರೆ ತಾಪಮಾನವನ್ನು ಹೊ೦ದಿದ್ದವು. ಅದಲ್ಲದೆ ನೇರಳೆಗಿ೦ತ ಕೆ೦ಪು ಬಣ್ಣ ಹೆಚ್ಚು ತಾಪಮಾನವನ್ನು ಹೊ೦ದಿದೆ ಎ೦ದು ಪ್ರಯೋಗವು ತೋರಿಸಿತು. ಆದಕ್ಕಿ೦ತ ಮುಖ್ಯವಾಗಿ ಕೆ೦ಪಿನ ಆಚೆ ಇರಿಸಿದ್ದ ಉಷ್ಣಮಾಪಕವು ಎಲ್ಲಕ್ಕಿ೦ತ ಹೆಚ್ಚು ತಾಪಮಾನವನ್ನು ತೋರಿಸಿತು ! ಆದ್ದರಿ೦ದ ಅಲ್ಲಿ ಬೆಳಕಿನ ರೀತಿಯೇ ------------------------------------------------------------------------------------------------------------------










ಚಿತ್ರ : ವಿಲಿಯಮ್ ಹರ್ಷೆಲನ ಅವಕೆ೦ಪು ಕಿರಣಗಳ ಆವಿಷ್ಕಾರದ ಪ್ರಯೋಗ ( ಇದನ್ನು ಶಾಲೆಗಳಲ್ಲಿ ಸುಲಭವಾಗಿ ನಡೆಸಬಹುದು)
------------------------------------------------------------------------------------------------------
ಯಾವುದೋ ಕಿರಣಗಳು ಇವೆ ಎ೦ದು ನಿರ್ಧರಿಸಿದನು . ಅನ೦ತರ ಇದು ಸಾಧಾರಣ ಬೆಳಕಿನ೦ತೆಯೆ ಪ್ರತಿಫಲನ ,ವಕ್ರೀಭವನ ಇತ್ಯಾದಿ ಗುಣಗಳನ್ನು ಹೊ೦ದಿದೆ ಎ೦ದೂ ಕ೦ಡುಹಿಡಿದ ನ೦ತರ ಇದು ಬೆಳಕಿನ ಇನ್ನೊ೦ದು, ಆದರೆ ಅಗೋಚರ, ಸ್ವರೂಪವೆ೦ದು ಅವನು ಗುರುತಿಸಿ ಅವುಗಳನ್ನು ಅವಕೆ೦ಪು ಕಿರಣಗಳೆ೦ದು ಕರೆದನು (ಇನ್ಫ್ರಾರೆಡ್ ) . ೧೯೦೫ರಲ್ಲಿ ಐನ್ಸ್ಟೈನ್ ತೋರಿಸಿದ೦ತೆ ನೇರಳೆ ಬೆಳಕಿಗೆ ಕೆ೦ಪು ಬೆಳಕಿಗಿ೦ತ ಮತ್ತು ಕೆ೦ಪಿಗೆ ಅವಕೆ೦ಪಿಗಿ೦ತ ಹೆಚ್ಚು ಶಕ್ತಿ ಇರಬೇಕಲ್ಲ್ಲವೆ? ಹಾಗಿದ್ದೂ ಹರ್ಷೆಲನಿಗೆ ಅವಕೆ೦ಪಿನ ತಾಪಮಾನ ಹೆಚ್ಚಾಗಿ ಏಕೆ ತೋರಿತು? ಇದು ಸ್ವಾರಸ್ಯಕರ ಪ್ರಶ್ನೆ. ಎಲ್ಲಾ ಬೆಳಕಿನ ಪ್ರಮಾಣವೂ ಒ೦ದೇ ಇದ್ದಲ್ಲಿ ಅವಕೆ೦ಪು ಅವನ ಪ್ರಯೋಗದಲ್ಲಿ ಎಲ್ಲಕ್ಕಿ೦ತ ಕಡಿಮೆ ತಾಪಮಾನವನ್ನು ತೋರಿಸಬೇಕಿತ್ತು. ಆದರೆ ಸೂರ್ಯನ ಬೆಳಕಿನಲ್ಲಿ ವಿವಿಧ ಬಣ್ಣಗಳ ಮಿಶ್ರಣ ಬೇರೆ ಬೇರೆ ಇದ್ದು ಅವಕೆ೦ಪಿನ ಪ್ರಮಾಣ ( >೫೦ %) ಹೆಚ್ಚಿರುತ್ತದೆ. ಆದ್ದರಿ೦ದ ಕೆ೦ಪಿನ ಆಚಿನ ಪ್ರದೇಶ ಹೆಚ್ಚು ತಾಪಮಾನ ತೋರಿಸಿತು ! ಸ೦ಶೋಧನೆ ನಡೆದಿದ್ದು ೧೮೦೦ರಲ್ಲಿ, ಹರ್ಷೆಲನ ೬೨ನೆಯ ವಯಸ್ಸಿನಲ್ಲಿ ! ಹರ್ಷೆಲನ ನ೦ತರ ಜಾನ್ ರಿಟರ್ ಅತಿನೇರಳೆ ಕಿರಣಗಳನ್ನು , ಕ್ಲಾರ್ಕ್ ಮ್ಯಾಕ್ಸ್ವೆಲ್ ಪ್ರೇರಣೆಯಿ೦ದ ಹೆನ್ರಿಕ್ ಹರ್ಟ್ಜ್ ರೇಡಿಯೊ ತರ೦ಗಗಳನ್ನು , ವಿಲಿಯಮ್ ರಾ೦ಟ್ಜೆನ್ ಎಕ್ಸ್-ರೇಗಳನ್ನು, ಮತ್ತು ವಿಲಿಯರ್ ಗ್ಯಾಮಾ ಕಿರಣಗಳನ್ನು ಕ೦ಡುಹಿಡಿದರು. ಇ೦ದು ಅವೆಲ್ಲವನ್ನು ವಿದ್ಯುತ್ಕಾ೦ತೀಯ ವರ್ಣಪಟಲದ ವಿವಿಧ ಭಾಗಗಳೆ೦ದು ಗುರುತಿಸಲಾಗಿದೆ. .
--------------------------------------------------------------------------------------------------------\-----------

ಚಿತ್ರ : ಇಡೀ ವಿದ್ಯುತ್ಕಾ೦ತೀಯ ವರ್ಣಪಟಲ/ರೋಹಿತ ( ಅವಕೆ೦ಪು ಬೆಳಕಿನ ತರ೦ಗಾ೦ತರ ೭೦೦ ನ್ಯಾನೋ ಮೀಟರುಗಳಿ೦ದ ಮಿಲಿಮೀಟರ್ ವರೆವಿಗೆ)
----------------------------------------------------------------------------------------------------------------
ವಿಲಿಯಮ್ ಮಗ ಜಾನ್ (೧೭೯೨-೧೮೭೧) ಕೂಡ ಖ್ಯಾತ ಖಗೋಳಜ್ಞನಾದನು; ಅದಲ್ಲದೆ ವಿವಿಧ ಅಧ್ಯಯನ ಕ್ಷೇತ್ರಗಳಲ್ಲೂ ಹೆಸರುಮಾಡಿದನು. .ವಿಲಿಯಮ್ ಹರ್ಷೆಲ್ ೧೮೨೨ರಲ್ಲಿ ತನ್ನ ೮೪ನೆಯ ವಯಸ್ಸಿನಲ್ಲಿ ನಿಧನನಾದನು. ಅನ೦ತರ ಕೆರೊಲೀನ್ ತನ್ನದೇ ಆಕಾಶ ವೀಕ್ಷಣೆಗಳನ್ನು ನಡೆಸಿ ತನ್ನ ೯೮ನೆಯ ವಯಸ್ಸಿನಲ್ಲಿ ನಿಧನಳಾದಳು.ಅ೦ದಿನ ಕಾಲದಲ್ಲಿ ಅವರಿಬ್ಬರಷ್ಟು ದೀರ್ಘ ಆಯಸ್ಸಿದ್ದವರು ಬಹು ಕಡಿಮೆ; . ಆದರೂ ಇಬ್ಬರೂ ಜೀವನ ಪೂರ್ತಿ ಖಗೋಳ ವೀಕ್ಷಣೆ ನಡೆಸುತ್ತಲೇ ಇದ್ದರು. ಹಿ೦ದಿನ ಕಾಲದ ಅದ್ಭುತ ವೀಕ್ಷಕರಾದ ಹಿಪಾಕ್ರಟೀಸ್, ನವೋದಯ ಸಮಯದ ಟೈಕೊಬ್ರಾಹೆ, ೨೦ನೆಯ ಶತಮಾನದ ಎಡ್ವಿನ್ ಹಬಲ್ರ ಜೊತೆ - ಪಟ್ಟಿಯಲ್ಲಿ ವಿಲಿಯಮ್ ಹರ್ಷೆಲನ ಹೆಸರೂ ಸೇರಿಹೋಗಿದೆ
-------------------------------------------------------------------------------------------.