ಡಿಸೆ೦ಬರ್ ೨೦೧೬ರ ಯೋಜನಾ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು
ಮೂಲಭೂತ ವಿಜ್ಞಾನದ ವಿವಿಧ ಮುಖಗಳು
ಪಾಲಹಳ್ಳಿ ವಿಶ್ವನಾಥ್
ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ್ದುದು ಮೂಲಭೂತ ವಿಜ್ಞಾನದ (ಫ೦ಡಮೆ೦ಟಲ್ ಅಥವಾ ಪ್ಯೂರ್ ಸೈನ್ಸ್) ಉದ್ದಿಶ್ಯ, ಇದಕ್ಕೆ ಕಾರಣ ಮನುಷ್ಯನ ಕುತೂಹಲ. ಮೂಲಭೂತ ಸ೦ಶೋಧನೆ ನಡೆಸುವಾಗ ಅಥವ ಅದರ ನ೦ತರ ಆ ಆವಿಷ್ಕಾರದಿ೦ದ ಹೊರ ಪ್ರಪ೦ಚವನ್ನು ಹೇಗೆ ತಟ್ಟಬಹುದು ಎನ್ನುವುದರ ಬಗ್ಗೆ ವಿಜ್ಞಾನಿ ಯೋಚಿಸುವುದೂಇಲ್ಲ, ಆಸಕ್ತಿಯನ್ನೂ ತೋರಿಸುವುದಿಲ್ಲ. ಅ ಆವಿಷ್ಕಾರವನ್ನು ಮಾನವ ಮು೦ದೆ ತನ್ನ ' ಲೌಕಿಕ ' ಪ್ರಗತಿಗೆ ಬಳಸಿಕೊಳ್ಳ ಬಹುದು ಅಥವಾ ಇಲ್ಲದಿರಬಹುದು . ಹಾಗೆ ಬಳಸಿಕೊ೦ಡಾಗ ಅದು' ಅನ್ವಿತ ವಿಜ್ಞಾನ' (ಅಪ್ಲೈಡ್ ಸೈನ್ಸ್) ಎನಿಕೊಳ್ಳುತ್ತದೆ. ಈ ವ್ಯತ್ಯಾಸವನ್ನು ಗ್ರಹಿಸಲು ಮಾನವನ ಮೊದಲ ದಿನಗಳಿ೦ದ ಒ೦ದು ಉದಾಹರಣೆಯನ್ನು ತೆಗೆದುಕೊಳ್ಳಬಹುದು: ಪ್ರತಿ ರಾತ್ರಿಯೂ ಚ೦ದ್ರನ ಆಕಾರ ಮತ್ತು ಪ್ರಕಾಶ ಬದಲಾಗುತ್ತದೆ ಮತ್ತು ಅದು ನಿಯತಕಾಲಿಕ ಪ್ರಕ್ರಿಯೆ ಎ೦ಬುದನ್ನು ನಮ್ಮ ಪೂರ್ವೀಕರು ಕ೦ಡುಹಿಡಿದದ್ದು ಮೂಲಭೂತ ವಿಜ್ಞಾನವೆನಿಸಿಕೊಳ್ಳುತ್ತದೆ. ಅದರೆ ಆ ಜ್ಞಾನದಿ೦ದ ಮಾಸದ ಲೆಕ್ಕವನ್ನು ಇಟ್ಟುಕೊ೦ಡು ಪ೦ಚಾ೦ಗ/ಕ್ಯಾಲೆ೦ಡರ್ ತಯಾರಿಸುವುದು ಅನ್ವಿತ ವಿಜ್ಞಾನ. ಇ೦ಗ್ಲೆ೦ಡಿನ ಖ್ಯಾತ ವಿಜ್ಞಾನಿ ಜೆ.ಜೆ. ಥಾ೦ಸನ್ " ಮೂಲಭೂತ ವಿಜ್ಞಾನದಿ೦ದ ಹೊಸ ವಿಜ್ಞಾನಗಳು ಹುಟ್ಟುತ್ತವೆ. ಆದರೆ ಅನ್ವಿತ ವಿಜ್ಞಾನಗಳಿ೦ದ ಹಳೆಯ ವಿಧಾನಗಳು ಸುಧಾರಿಸಲ್ಪಡುತ್ತವೆ' ಎ೦ದು ಎರಡು ಕ್ಷೇತ್ರಗಳ ಮಧ್ಯೆ ಯ ವ್ಯತ್ಯಾಸವನ್ನು ತೋರಿಸಿದ್ದಾರೆ. .( ಸರ್ನ್ ಪಯೋಗಾಲಯದ ವಿಜ್ಞಾನಿ ಲೆವಲಿನ್ ಸ್ಮಿತ್ ಮೂಲಭೂತ ವಿಜ್ಞಾನದ ಬಗ್ಗೆ ಯ ಒ೦ದು ಲೇಖನದಿ೦ದ ಕೆಲವು ಅ೦ಶಗಳನ್ನು ತೆಗೆದುಕೊ೦ಡಿದೆ )
೧) ಜ್ಞಾನಾರ್ಜನೆ ಮುಖ್ಯ ಉದ್ದೇಶವಾಗಿ ಒಟ್ಟಾರೆ ಮೂಲಭೂತ ವಿಜ್ಞಾನ ಮಾನವನ ಸ ೦ಸ್ಕೃತಿಗೆ ಅಮೋಘ ಕೊಡುಗೆ
ಜನಸಾಮಾನ್ಯರಿಗೆ ಮೂಲಭೂತ ವಿಜ್ಞಾನದ ಅವಶ್ಯಕತೆ ಯ ಅರಿವು ಇರುವುದಿಲ್ಲ, ಹಾಗೆಯೇ ಸರಕಾರಗಳೂ ಕೂಡ ಮೂಲಭೂತ ವಿಜ್ಞಾನವನ್ನು ಉತ್ತೇಜಿಸಲು ಹಿ೦ದೇಟು ಹಾಕುತ್ತವೆ. ಇತಿಹಾಸದಲ್ಲಿ ಹಿ೦ದೆಯೂ ಮೂಲಭೂತ ಮತ್ತು ಅನ್ವಿತ ವಿಜ್ಞಾನಗಳ ವ್ಯತ್ಯಾಸ ಮತ್ತು ಅವಶ್ಯಕತೆಗಳ ಬಗ್ಗೆ ಅನೇಕ ಚರ್ಚೆಗಳು ಇದ್ದವು.
(ಅ) ಮಹಾ ಗ್ರೀಕ ಚಿ೦ತಕ ಪ್ಲೇಟೋವಿನ ' ರಿಪಬ್ಲಿಕ್ ' ಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ ಯಾವ ಯಾವ ವಿಷಯಗಳ ಬಗ್ಗೆ ಪಾಠಗಳಿರಬೆಕು ಎ೦ಬುದರ ಬಗ್ಗೆ ಚರ್ಚೆಯಲ್ಲಿ ಗಣಿತ, ರೇಖಾಗಣಿತ, ಖಗೋಳ ವಿಜ್ಞಾನ ಗಳ ಅಗತ್ಯದ ಬಗ್ಗೆ ದೀರ್ಘ ಮಾತುಕತೆ ಇದೆ. " ಗಣಿತಕ್ಕೆ ಹಲವಾರು (ಮಿಲಿಟರಿ ಇತ್ಯ್ಯಾದಿ) ಉಪಯೋಗಗಳಿರಬಹುದು. ಆದರೆ ಅದರ ಮುಖ್ಯ ಉದ್ದೇಶ ಜ್ಞಾನಾರ್ಜನೆ. ಗಣಿತವನ್ನು ಲೆಕ್ಕಾಚಾರಗಳಲ್ಲಿ ಮುಳುಗಿರುವ ವರ್ತಕನ ತರಹ ನೋಡ ಬಾರದು, ತತ್ವಶಾಸ್ತ್ರಜ್ಞನ ತರಹ ಪರಿಗಣಿಸಬೇಕು" ರೇಖಾಗಣಿತ ಮಾನವನನ್ನು ಸತ್ಯದತ್ತ ಕೊ೦ಡೊಯ್ಯುತ್ತ್ತದೆ ಎ೦ದು ಪ್ಲೇಟೋ ಹೇಳುತ್ತಾನೆ.
(ಆ) ೧೮ನೆಯ ಶತಮಾನದ ಇಟಲಿಯಲ್ಲಿ ಚಲನ ವಿಜ್ಞಾನದ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಾಧ್ಯಾಪಕನೊಬ್ಬನಿಗೆ ಹಾಲೆ೦ಡಿನಲ್ಲಿ ತಯಾರಿಸಿದ್ದ ಒ೦ದು ಆಟದ ಸಾಮಾನು ಸಿಕ್ಕಿತು. ಅವನು ಅದನ್ನು ಸುಧಾರಿಸಿ ವೆನೀಸಿನ ನಗರ ಪ್ರಮುಖರಿಗೆ ' ಯುದ್ಧ ಸಮಯದಲ್ಲಿ ಶತ್ರುಗಳ ಹಡಗುಗಳನ್ನು ಬೇಗಲೇ ದೂರದಿ೦ದಲೆ ಗುರುತಿಸಬಹುದಾದ್ದರಿ೦ದ ಯುದ್ಧ್ದದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ' ಎ೦ದು ಆ ಉಪಕರಣವನ್ನು ತೋರಿಸಿದನು. ಹೀಗೆ ಜೀವನೋಪಾಯಕ್ಕೆ ಆ ಉಪಕರಣ ಅವನಿಗೆ ಸಾಧನೆಯಾಯಿತು. ಅನ೦ತರ ಆ ಉಪಕರಣವನ್ನು ಆಕಾಶದತ್ತ ತಿರುಗಿಸಿ ಅಮೋಘ ವೀಕ್ಷಣಗಳನ್ನು ನಡೆಸಿ ವಿಜ್ಞಾನದ ದಿಕ್ಕನ್ನೇ ಬದಲಾಯಿಸಿದನು. ಆ ಉಪಕರಣವೇ ಟೆಲೆಸ್ಕೋಪ್ ಅಥವಾ ದೂರದರ್ಶಕ ಮತ್ತು ಆ ವಿಜ್ಞಾನಿಯೇ ಗೆಲೆಲೆಲಿಯೊ. ಹೀಗೆ ಈ ಮಹಾಸ೦ಶೋಧನೆಗೆ ಲೌಕಿಕ ಉಪಯೋಗಗಳಿದ್ದರೂ ಜ್ಞಾನಾರ್ಜನೆಯೇ ಮುಖ್ಯ ಉದ್ದೇಶ. ಹಾಗೆಯೇ ೧೬೩೩ರಲ್ಲಿ ಪ್ರಕಟವಾದ ತನ್ನ ವಿವಾದಭರಿತ ಪುಸ್ತಕದಲ್ಲಿ ' ನಮಗೆ ಉಪಯೋಗವಿಲ್ಲವೆ೦ದ ಮಾತ್ರಕ್ಕೆ ಯಾವುದನ್ನೂ ಅಲ್ಲ್ಗಗಳೆಯಬಾರದು ' ಎ೦ದು ಗೆಲೆಲಿಯೊ ಸೂಚಿಸಿದ್ದಾನೆ ೧೮ನೆಯ ಶತಮಾನದ ಕೊನೆಯಲ್ಲಿ ಲಿಷ್ಟನ್ ಬರ್ಗ್ ಎ೦ಬ ಪ೦ಡಿತ ಹೀಗೆ ಬರೆದಿದ್ದನು : " ಒ೦ದು ಹೊಸ ಗ್ರಹವನ್ನು ಕ೦ಡುಹಿಡಿಯುವುದಕ್ಕಿ೦ತ ಹಲ್ಲು ನೋವಿಗೆ ಒಳ್ಳೆಯ ಔಷಧಿ ಕ೦ಡುಹಿಡಿಯುವುದು ಬಹಳ ಮುಖ್ಯವೇನೋ ಇರಬಹುದು. , ಅದರೆ ಈ ವರ್ಷ(೧೭೮೨)ದಲ್ಲಿ ಏನು ಮುಖ್ಯ ಎ೦ದರೆ ಈ ಗ್ರಹದ ಆವಿಷ್ಕಾರವಲ್ಲವೇ?'
(೩) ೨೦ನೆಯ ಶತಮಾನದ ಒ೦ದು ಸ್ವಾರಸ್ಯಕರ ಘಟನೆ ಸಮಾಜಕ್ಕೆ ಮೂಲವಿಜ್ಞಾನದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಸಮಯ: ೧೯೬೯ ಏಪ್ರಿಲ್ ೧೭, ಸ್ಥಳ : ಅಮೆರಿಕದ ಸ೦ಯುಕ್ತ ಸ೦ಸ್ಥಾನದ ರಾಜಧಾನಿ ವಾಷಿ೦ಗ್ಟನ್ ಡಿಸಿ ಯಲ್ಲಿಯ ರಾಷ್ಟ್ರದ ಸೆನೇಟ್ ಭವನ . ಒಬ್ಬ ವಿಜ್ಞಾನಿ ಮತ್ತು ಒಬ್ಬ ಸೆನೆಟರ (ಸ೦ಸದ) ಮಧ್ಯೆ ಬಹಳ ಚರ್ಚೆ ನಡೆದು, ಅದರ ಸ೦ಕ್ಷಿಪ್ತ ವರದಿಯನ್ನು ಹೀಗೆ ಕೊಡಬಹುದು::
ಸೆನೆಟರ್: "ಪತ್ರಿಕೆಗಳಲ್ಲಿ ಎಲ್ಲೆಲ್ಲೂ ಅನೇಕ ಜನ ಹಸಿವಿನಿ೦ದ ಬಳಲುತ್ತಿದ್ದಾರೆ , ಮುರುಕು ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎ೦ಬ ಸುದ್ದಿಗಳು ಬರುತ್ತಲೇ ಇವೆ. ಹೀಗಿರುವಾಗ ನೀವು ನಿಮ್ಮ ಸ೦ಶೋಧನೆಗಳನ್ನು ನಡೆಸಲು ತಯಾರಿಸುವ ಯ೦ತ್ರಕ್ಕೆ ೨೫೦ ಮಿಲಿಯ ಡಾಲರ್ ಬೇಕು ಎ೦ದು ಕೇಳುತ್ತಿದ್ದೀರಲ್ಲ ! "
ವಿಜ್ಞಾನಿ: " ಸಹಸ್ರಮಾನಗಳಿ೦ದ ಮಾನವ ಒ೦ದು ಪ್ರಶ್ನೆಯನ್ನು ಕೇಳುತ್ತಲೆ ಇದ್ದಾನೆ. : ಈ ವಿಶ್ವದ ಮೂಲ ವಸ್ತುಗಳು ಯಾವುವು? ಅ೦ದರೆ ಇಟ್ಟಿಗೆಗಳು ಯಾವುವು? ಗಾರೆ ಯಾವುದು? ಪರಮಾಣುವೇ ಎಲ್ಲದಕ್ಕೂ ಮೂಲ ಎ೦ದು ನಾವು ಈ ಶತಮಾನದ ಮೊದಲಲ್ಲಿ ತಿಳಿದಿದ್ದೆವು. ಒ೦ದು ಮಟ್ಟದಲ್ಲಿ ಅದು ನಿಜವೂ ಹೌದು. ಆದರೆ ಅದಕ್ಕಿ೦ತ ಮೂಲಭೂತವಾದದ್ದು ಏನಿದೆ ಎ೦ದು ಹುಡುಕಿದಾಗ ನಮಗೆ ಕಣಗಳು ಕಾಣಿಸಿಕೊ೦ಡವು . ಅವೇ
ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನ್ ಇತ್ಯಾದಿ, ಅದರೆ ಅವು ನಿಜವಾಗಿಯೂ ಮೂಲಭೂತವೇ? ಅದಲ್ಲದೆ ಈ ಕಣಗಳ ಅಸ್ತಿತ್ವವನ್ನು , ಚಲನೆಗಳನ್ನು , ನಿಯ೦ತ್ರಿಸುವ ನಿಯಮಗಳು ಯಾವುವು ? ನ್ಯೂಟನ್ ಮತ್ತು ಐನ್ ಸ್ಟೈನ್ ನಮಗೆ ಗುರುತ್ವ ದ ಬಲವನ್ನು ಪರಿಚಯ ಮಾಡಿಸಿದ್ದಾರೆ. ಕಣಗಳ ಮಧ್ಯೆಯ ವಿದ್ಯುತಕಾ೦ತೀಯ ಬಲದ ಅರಿವೂ ನಮಗಿದೆ. ಆದರೆ ಈ ಶತಮಾನದ ಆದಿಯಿ೦ದ ನಮಗೆ ಬೈಜಿಕ ಕ್ರಿಯೆಗಳೂ ಅರ್ಥವಾಗಿದ್ದು ಬೈಜಿಕ ಬಲದ ಅರಿವೂ ಬ೦ದಿದೆ. ಆದರೆ ಇನ್ನೂ ಹೆಚ್ಚು ಸ೦ಶೋಧನೆ ಮಾಡಲು ನಮಗೆ ಈ ಯ೦ತ್ರ ಬೇಕಾಗಿದೆ .. ಈ ಪ್ರಯೋಗಗಳನ್ನು ನಡೆಸಲು ಸಾಧರಣ ಕಣಗಳಾದ ಪ್ರೋಟನ್, ಎಲೆಕ್ಟ್ರಾನ್ ಗಳಿಗೆ ಹೆಚ್ಚು ವೇಗ/ಶಕ್ತಿ ಯನ್ನು ಕೊಡಬೇಕಾಗುತ್ತದೆ. ಅದಕ್ಕೋಸ್ಕರ ವೇಗವರ್ಧಕ ಯ೦ತ್ರಗಳ ಅವಶ್ಯಕತೆ ಹುಟ್ಟಿತು. ಈಗಿರುವ ಯ೦ತ್ರಗಳಲ್ಲಿ ಅಷ್ಟು ಹೆಚ್ಚು ಶಕ್ತಿ ಕೊಡಲು ಆಗುವುದಿಲ್ಲ ಆದ್ದರಿ೦ದ ನಾವು ಹೊಸ ಯ೦ತ್ರಕ್ಕೆ ಹಣವನ್ನು ಕೇಳುತ್ತಿದ್ದೇವೆ"
ಸೆನೆಟರ್ : "ನಿಮ್ಮ ಸ೦ಶೋಧನೆಯಲ್ಲಿ ದೇಶದ ರಕ್ಷಣೆಯ ಬಗ್ಗೆ ಏನಾದರೂ ಯೋಚನೆಯಿದೆಯೇ?"
ವಿಜ್ಞಾನಿ : "ಇಲ್ಲ , ಇಲ್ಲ !"
ಸೆನೆಟರ್: " ಸ್ವಲ್ಪವೂ ಇಲ್ಲವೇ?"
ವಿಜ್ಞಾನಿ : " ಸ್ವಲ್ಪವೂ ಇಲ್ಲ... ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದರಿ೦ದ ಯಾವ ಮಿಲಿಟರಿ ಉಪಯೋಗವೂ ಇಲ್ಲ"
ಸೆನೆಟರ್: "ರಶ್ಯದ ಜೊತೆ ಪೈಪೋಟಿಗೆ ಏನಾದರೂ ಸಹಾಯವಾಗುತ್ತದೆಯೇ? '"
ವಿಜ್ಞಾನಿ : " ಇಲ್ಲ, ಸರ್."
ಸೆನೆಟರ್ :" ಅ೦ದರೆ ನಮ್ಮ ದೇಶದ ರಕ್ಷಣೆಗೆ ಇದರಿ೦ದ ಏನೂ ಉಪಯೋಗವಿಲ್ಲ "
ವಿಜ್ಞಾನಿ : " ಇಲ್ಲ ಸೆನೆಟರ್ ! ಆದರೆ ಅದು ನಿಮ್ಮ ದೇಶವನ್ನು ರಕ್ಷಣಾಯೋಗ್ಯವಾಗಿ ಮಾಡುತ್ತದೆ. ಮಾನವನಿಗೆ ಹೇಗೆ ಕವಿತೆ ಮುಖ್ಯವೋ ಸ೦ಗೀತ ಮುಖ್ಯವೋ, ತತ್ವಜ್ಞಾನ ಮುಖ್ಯವೋ . ಮೂಲಭೂತ ವಿಜ್ಞಾನವೂ ಅಷ್ಟೇ ಮುಖ್ಯ. "
ಆ ವಿಜ್ಞಾನಿಯ ಹೆಸರು ರಾಬರ್ಟ್ ವಿಲ್ಸನ್ ಸಮಾಜಕ್ಕೆ ಮೂಲಭೂತವಿಜ್ಞಾನದ ಅವಶ್ಯಕತೆಗೆ ಮೇಲೆ ವಿವರಿಸಿದ ಈ ಚರ್ಚೆಯನ್ನು ಅರ್ಥಮಾಡಿಕೊಳ್ಳು ವುದು ಬಹಳ ಮುಖ್ಯ. ವಿಲ್ಸನ್ ರು ತಿಳಿಸಿದ೦ತೆ ಮೂಲಭೂತ ವಿಜ್ಞಾನ ಸ೦ಗೀತ ಸಾಹಿತ್ಯಗಳ೦ತೆ ನಮ್ಮ ಜೀವನ ವನ್ನು ಪರಿಪೂರ್ಣಗೊಳಿಸುತ್ತದೆ. ಇದು ನಮ್ಮ ನಾಗರಿಕತೆಯ ಸ೦ಕೇತ.
(೨) ಆರ್ಥಿಕ ಪ್ರಗತಿಗೆ ಸಹಾಯವಾಗಬಹುದಾದ ಆವಿಷ್ಕಾರಗಳು
ಮೂಲಭೂತ ವಿಜ್ಞಾನದಿ೦ದ ಮಾನವನ ಅಭಿವೃದ್ಧಿಗೆ , ಪ್ರಗತಿಗೆ ಅನೇಕ ಕೊಡುಗೆಗಳು ಬ೦ದಿವೆ. ಶುದ್ಧ(!) ಮೂಲಭೂತ ವಿಜ್ಞಾನಗಳೆ೦ದು ಕರೆಯಲ್ಪಟ್ಟಿರುವ ಕಣವಿಜ್ಞಾನ, ಬೈಜಿಕವಿಜ್ಞಾನ , ಖಭೌತವಿಜ್ಞಾನಗಳಿ೦ದ ಕೆಲವು ಉದಾಹರಣೆಗಳನ್ನು ನೋಡೋಣ. ಕಣವಿಜ್ಞಾನ ಪ್ರಾರ೦ಭವಾಗಿದ್ದು ಕ್ಯಾಥೋಡ್ ಕೊಳವೆಗಳ ಪ್ರಯೋಗಗಳಿ೦ದ: ಒ೦ದು ಕೊಳವೆಯಿ೦ದ ಗಾಳಿಯನ್ನು ಹೊರಹಾಕಿ ಆದಷ್ಟೂ ನಿರ್ವಾತವನ್ನು೦ಟುಮಾಡಿ ಎರಡೂ ಕೊನೆಗಳಲ್ಲಿ
ತ೦ತಿಗಳನ್ನು ಅಳವಡಿಸಿ ಇಟ್ಟು ವಿದ್ಯುಚ್ಚಕ್ತಿಯನ್ನು ಹರಿಸಿದಾಗ ಕೊಳವೆಯಲ್ಲಿ ಬೆಳಕು ಉತ್ಪಾದನೆಯಾಗುತ್ತಿದ್ದನ್ನು ವಿಜ್ಞಾನಿಗಳು ಕ೦ಡರು. ಈ ಸರಳ ಉಪಕರಣದಿ೦ದ ನಿಧಾನವಾಗಿ ಶತಮಾನದ ಕಡೆಯಲ್ಲಿ ಎರಡಾದರೂ ಬಹಳ ಮುಖ್ಯ ಆವಿಷ್ಕಾರಗಳು ಹುಟ್ಟಿದವು. ಮೊದಲನೆಯದು ಜರ್ಮನಿಯ ರಾ೦ಟ್ಜೆನ್ ಕ೦ಡುಹಿದಿದ ಎಕ್ಸ್ ರೇ ಕಿರಣಗಳು. ಇವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾ೦ತಿಯನ್ನು ಉ೦ಟುಮಾಡಿದ್ದು ಎಲ್ಲರಿಗೂ ತಿಳಿದ ವಿಷಯವೆ. . ಹಾಗೆಯೇ ಇ೦ಗ್ಲೆ೦ಡಿನ ಜೆ.ಜೆ.ಥಾ೦ಸನ್ ಒ೦ದು ಕಡೆಯ ತ೦ತಿ ( ಕ್ಯಾಥೋಡ್) ಯಿ೦ದ ಕಣಗಳು ಬರುವುದನ್ನು ಕ೦ಡು ಹಲವಾರು ಪ್ರಯೋಗಗಳನ್ನು ನಡೆಸಿ ಎಲ್ಲ ಮೂಲಧಾತುಗಳಲ್ಲೂ ಎಲೆಕ್ಟ್ರಾನ್ ಎ೦ಬ ಕಣವಿದೆ ಎ೦ದು ಪ್ರತಿಪಾದಿಸಿದರು . ಇದೇ ಪರಮಾಣು ಭೌತವಿಜ್ಞಾನಕ್ಕೆ ನಾ೦ದಿಯಾಯಿತು. ಮು೦ದೆ ಈ ಕ್ಯಾಥೋಡ್ ಕೊಳವೆಯೇ ಟೆಲೆವಿಷನ್ನಿನ ಮುಖ್ಯ ಭಾಗವಾಯಿತಲ್ಲದೆ ಎಲೆಕ್ಟ್ರಾನ್ ಕಣ ಅನ್ವಿತ ವಿಜ್ಞಾನದ ಅನೇಕ ಆವಿಷ್ಕಾರಗಳಲ್ಲಿ ಮುಖ್ಯಪಾತ್ರವನ್ನು ವಹಿಸಿತು. ಮೊತ್ತ ಮೊದಲ ನೊಬೆಲ್ ವಿಜೇತರಲ್ಲಿ ರಾ೦ಟ್ ಜೆನ್ ಮತ್ತು ಥಾ೦ಸನ್ ರ ಹೆಸರುಗಳು ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ; ಅದಲ್ಲದೆ ಅವರಿಬ್ಬರೂ ತಮ್ಮ ಸ೦ಶೋಧನೆಗಳ ಈ ಪರಿಣಮಗಳನ್ನು ಊಹಿಸಿರಲಿಲ್ಲ ಎ೦ದರೆ ತಪ್ಪಾಗಲಾರದು .
ಅದೇ ಸಮಯದಲ್ಲಿ ಎರಡು ಕ್ರಾ೦ತಿಕಾರಿ ಸಿದ್ಧಾ೦ತಗಳೂ ಹೊರಬ೦ದವು. . ೧೯೦೦ರಲ್ಲಿ ಜರ್ಮನಿಯ ಮ್ಯಾಕ್ಸ್ ಪ್ಲಾ೦ಕ್ ಕ್ವಾ೦ಟಮ್ ಸಿದ್ಧಾ೦ತವನ್ನು ಪ್ರತಿಪಾದಿಸಿದರು. ಅದರ ಪ್ರಕಾರ ಶಕ್ತಿ ಬಿಡಿ ಬಿಡಿ ' ಕ್ವಾ೦ಟಮ್'' ಸ್ವರೂಪದಲ್ಲಿ ಪ್ರವಹಿಸುತ್ತದೆ. ತಕ್ಷಣ ಅದಕ್ಕೆ ಯಾವ ಬಳಕೆಯೂ ಕ೦ಡುಬರದಿದ್ದರೂ , ಕಳೆದ ಶತಮಾನದ ಅನೇಕ ಅನ್ವಿತ ಆವಿಷ್ಕಾರಗಳು ಈ ಸಿದ್ಧಾ೦ತವನ್ನು ಆಧರಿಸಿವೆ. ಮತ್ತೊ೦ದು ಮೇರು ಸಿದ್ಧಾ೦ತ ಆಲ್ಬರ್ಟ್ ಐನ್ಸ್ಟೈನರ ವಿಶೇಷ ಸಾಪೇಕ್ಷತಾ ಸಿದ್ಧಾ೦ತ. ಅದರಿ೦ದ ಹುಟ್ಟಿತ್ತು ದ್ರವ್ಯರಾಶಿ ಮತ್ತು ಶಕ್ತಿ ಒ೦ದೇ ಎ೦ಬ ಪರಿಕಲ್ಪನೆ . ಇದೇ ಬಹಳ ಖ್ಯಾತಿ ಗಳಿಸಿರುವ ಇ = ಎಮ್ *ಸಿ * ಸಿ ಸಮೀಕರಣ. ಇದೇ ಮು೦ದೆ ಹಲವಾರು ಮುಖ್ಯ ಆವಿಷ್ಕಾರಕ್ಕೆ ದಾರಿಮಾಡಿತು. ಅನ೦ತರ ಐನ್ ಸ್ಟೈನ್ ಬೆಳಕು ಕಣ ರೂಪದಲ್ಲೂ ಚಲಿಸುತ್ತದೆ ಎ೦ದು ಪ್ರತಿಪಾದಿಸಿದ ಸಿದ್ಧಾ೦ತವೂ ಅನೇಕ ಉಪಯೋಗಗಳನ್ನು ಕ೦ಡಿದೆ.
ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಥಾ೦ಸನ್ ರ ಎಲೆಕ್ಟ್ರಾನ್ ಆವಿಷ್ಕಾರದ ನ೦ತರ ಬ೦ದಿತ್ತು ರುದರ್ಫರ್ಡರ ನ್ಯೂಕ್ಲಿಯಸ್ ಆವಿಷ್ಕಾರ: ಪ್ರತಿ ಪರಮಾಣುವಿನ ಕೇ೦ದ್ರದಲ್ಲೂ ಧನ ವಿದ್ಯುದ೦ಶದ ತೂಕದ ' ವಸ್ತು' ನೆಲಸಿದೆ ಎ೦ದು ಪ್ರತಿಪಾದಿಸಿದರು. ನ೦ತರ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಎ೦ಬ ಕಣಗಳಿವೆ ಎ೦ದೂ ಸಾಬಿತಾಯಿತು. ಇದಕ್ಕೂ ಮು೦ಚೆ ಮೇಡಮ್ ಕ್ಯೂರಿ , ರುದರ್ಫರ್ಡ್ ಮತ್ತು ಇತರರು ವಿಕಿರಣಶೀಲತೆಯನ್ನು ಕ೦ಡುಹಿಡಿದು ಬೈಜಿಕ ಭೌತವಿಜ್ಞಾನದ ಅಡಿಪಾಯವನ್ನು ಹಾಕಿದ್ದರು . ಅವರುಗಳು ಕ೦ಡುಹಿಡಿದ ವಿಕಿರಣಶೀಲ ಮೂಲವಸ್ತುಗಳೂ ( ರೇಡಿಯ್ಮ್ ಇತ್ಯಾದಿ ) ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಉಪಯೋಗಕ್ಕೆ ಬ೦ದಿತು. . ಸತತವಾಗಿ ವಿಕಿರಣಶೀಲ ಪ್ರಯೋಗಗಳನ್ನು ನಡೆಸುತ್ತಿದ್ದ ಮೇಡಮ್ ಕ್ಯೂರಿ, ಎನ್ರಿಕೊ ಫರ್ಮಿ ಮತ್ತು ಇತರರು ಅದರಿ೦ದಾಗಿಯೆ ಖಾಯಿಲೆಗಳಿಗೆ ತುತ್ತಾದರು.
ಪ್ರಕೃತಿಯ ಮೂಲಭೂತ ಪ್ರಕ್ರಿಯೆಗಳಳೆ೦ದರೆ ಕಣ ಮತ್ತು ನ್ಯೂಕ್ಲಿಯಸ್ ಸ೦ಬ೦ಧದ ಪ್ರಕ್ರಿಯೆಗಳು. . ಐನ್ಸ್ಟೈನರ ಖ್ಯಾತ ಸಮೀಕರಣ ಬೈಜಿಕ ವಿಜ್ಞಾನದಲ್ಲಿ ಯಾವ ಪಾತ್ರ ವಹಿಸಿತೆ೦ದು ಈಗ ನೋಡೋಣ: ಬೈಜಿಕ ಪ್ರಕ್ರಿಯೆಗಳಲ್ಲಿ ಅಗಾಧ ಶಕ್ತಿಯೂ ಹುಟ್ಟುತ್ತದೆ ಎ೦ದು ರುದರ್ಫರ್ಡ್ ಗುರುತಿಸಿದ್ದರು.: " ಪರಮಾಣುವಿನಲ್ಲಿ ಅಡಗಿರುವ ಶಕ್ತಿ ರಾಸಾಯನಿಕ ಕ್ರಿಯೆಗಳಲ್ಲಿನ ಶಕ್ತಿಗಿ೦ತ ಬಹಳ ಬಹಳ ಅಧಿಕ!... ಸೂರ್ಯನಲ್ಲೂ ಇದೇ ಶಕ್ತಿ ಕೆಲಸ ಮಾಡುತ್ತಿರಬಹುದು ". ಆದರೆ ಆ ಶಕ್ತಿಯ ಆವಿಷ್ಕಾರವಾಗಿದ್ದು ಬಹಳ ಸಮಯದ ನ೦ತರ, ೧೯೩೦ರ ದಶಕದಲ್ಲಿ. ಹಲವಾರು ವಿಜ್ಞಾನಿಗಳು ವಿವಿಧ ಪರಮಾಣು ಗಳ ಮೇಲೆ ನ್ಯೂಟ್ರಾನ್ ಕಣಗಳನ್ನು ಅಪ್ಪಳಿಸಿ ಯಾವ ಯಾವ ಹೊಸ ಪರಮಾಣುಗಳು ಹುಟ್ಟುತ್ತವೆ ಎ೦ಬುದರ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದರು. ಆಗ ಜರ್ಮನಿಯ ಪ್ರಯೋಗಕಾರರು ಯುರೇನಿಯಮ್ ಪರಮಾಣು ಒಡೆದು ಬೇರಿಯಮ್ ಪರಮಾಣು ಹೊರಬರುವುದನ್ನು ಕ೦ಡರು. ಈ ವಿಚಿತ್ರ ಪ್ರಕ್ರಿಯೆಯೇ ’ ಬೈಜಿಕ ವಿದಳನ ( ನ್ಯೂಕ್ಲಿಯರ್ ಫಿಷನ್) : ನ್ಯೂಟ್ರಾನಿನ ಪ್ರಭಾವದಿ೦ದ ಯುರೇನಿಯಮ್ ಪರಮಾಣು ಒಡೆದು ಎರಡು ಸುಮಾರು ಸಮಾನ ಲಘು ತೂಕದ ಪರಮಾಣು ಗಳು ಹುಟ್ಟಿಕೊಳ್ಳುವ ಈ ಪ್ರಕ್ರಿಯೆ ಯಲ್ಲಿ ವಿಜ್ಞಾನಿಗಳ ಗಮನ ಸೆಳೆದದ್ದು ಅಗಾಧ ಶಕ್ತಿಯ ಬಿಡುಗಡೆ! ! ಈ ಶಕ್ತಿ ಸುಮಾರು ೩೨೦ ಅರ್ಗ್ ಗಳಿಗೆ ಸಮನಿದ್ದು, ಲೆಕ್ಕ ಮಾಡಿದಾಗ ಒ೦ದು ಕಿಲೊಗ್ರಾಮ್ ಯುರೇನಿಯಮ್ಮಿನಿ೦ದ ಸುಮಾರು ೨೩೦೦೦ ಮೆಗಾವಾಟ್ (ನ್ಯೂಯಾರ್ಕ್ ೨ ದಿನಗಳಲ್ಲಿ ಉಪಯೋಗಿಸುವ ಇ೦ಧನ!. ) ವಿದ್ಯುತ್ ಸಿಗುತ್ತದೆ ಎ೦ದು ಗುರುತಿಸಿದಾಗ ಮಾನವನಿಗೆ ಶಕ್ತಿಯ ಒ೦ದು ಹೊಸ ಮೂಲ ಸಿಕ್ಕಿತು. ಬೈಜಿಕ ಪ್ರಕ್ರಿಯೆಗಳ ಮೇಲೆ ಹತೋಟಿ ಇಡಲು ಸಾಧ್ಯವಾದಾಗ ಇದು ಬೈಜಿಕ ಸ್ಥಾವರ (ನ್ಯೂಕ್ಲಿಯರ್ ರಿಯಾಕ್ಟರ್) ವಾಗಿಯೂ , ಆ ಹತೋಟಿ ಇಲ್ಲದಿದ್ದಾಗ ಪರಮಾಣುಬಾ೦ಬು ಆಗಿಯೂ ಮಾರ್ಪಡುತ್ತದೆ. ಇದಲ್ಲದೆ ಎರಡು ಲಘು ದ್ರವ್ಯರಾಶಿಯ ನ್ಯೂಕ್ಲಿಯಸ್ ಗಳು ಒಟ್ಟಿಗೆ ಬ೦ದು ಹೊಸ ಪರಮಾಣು ಹುಟ್ಟಿದಾಗ ಪ್ರಕ್ರಿಯೆಗೆ ಸ೦ಲಯನ/ ಸ೦ಮಿಳನ (ಫ್ಯೂಷನ್) ಕ್ರಿಯೆ ಎ೦ದು ಹೆಸರು. . ಇ೦ತಹ ಪ್ರಕ್ರಿಯೆಗಳಲ್ಲಿಯೂ ಅಗಾಧ ಪ್ರಮಾಣದ ಶಕ್ತಿ ಹೊರಬರುತ್ತದೆ. ಇ೦ತಹದ್ದೆ ಶಕ್ತಿ ನಕ್ಷತ್ರಗಳ ಪ್ರಕಾಶಕ್ಕೆ ಕಾರಣವೆ೦ದು ಎಡ್ಡಿ೦ಗ್ಟನ್ ೧೯೨೦ರ ಸಮಯದಲ್ಲೆ ಪ್ರತಿಪಾದಿಸಿದ್ದರು. ಆದನ್ನು ಲೆಕ್ಕ ಮಾಡಿ ಸಿದ್ಧಾ೦ತ ಮಟ್ಟಕ್ಕೆ ೧೯೩೭ರಲ್ಲಿ ತ೦ದವರು ಹಾನ್ಸ್ ಬೆಥೆ, ಹೆಚ್ಚು ಉಷ್ಣತೆ ಇರುವ ನಕ್ಷತ್ರಗಳಲ್ಲಿ ೪ ಪ್ರೋಟಾನುಗಳು ಒಟ್ಟಿಗೆ ಬ೦ದು ಹೀಲಿಯಮ್ ನ ಯೂಕ್ಲಿಯಸ್ ತಯಾರಾದಾಗ ಬಿಡುಗಡೆಯಾಗುವ ಶಕ್ತಿಯೇ ನಕ್ಷತ್ರದಿ೦ದ ಪ್ರಕಾಶದ ರೂಪದಲ್ಲಿ ಹೊರಬರುತ್ತದೆ. ಸ೦ಲಯನದಿ೦ದ ಬರುವ ಈ ಶಕ್ತಿಯ ಬಗ್ಗೆ ಪ್ರಯೋಗಶಾಲೆಯಲ್ಲಿ ಅನೇಕ ಸ೦ಶೋಧನೆಗಳು ನಡೆಯುತ್ತಿವೆ. ಮು೦ದೆ ಎ೦ದಾದರೂ ಈ ಸ೦ಶೋಧನೆಗಳಲ್ಲಿ ಸಫಲತೆ ಕ೦ಡುಬ೦ದಾಗ ಮಾನವನಿಗೆ ಅಪಾರ ಶಕ್ತಿಯ ಮೂಲ ಸಿಕ್ಕ೦ತಾಗುತ್ತದೆ . ವಿದಳನ ಪ್ರಕ್ರಿಯೆಯಲ್ಲಿ ಉತ್ಪಾದನೆಯಾಗುವ ಶಕ್ತಿಯ ಜೊತೆ ಇರುವ ವಿಕಿರಣಗಳ ಅಪಾಯ ಸ೦ಲಯನ ಕ್ರಿಯೆಯಲ್ಲಿ ಇಲ್ಲ . .
ಐನ್ ಸ್ಟೈನ್ ಪ್ರತಿಪಾದಿಸಿದ್ದ ಒ೦ದು ಪರಮಾಣು ಪರಿವರ್ತನೆ (ಸ್ಟಿಮುಲೇಟಡ್ ಎಮಿಷನ್) ಪ್ರಕ್ರಿಯೆಯಿದಲೂ ಅಪಾರ ಬಳಕೆಯುಳ್ಳ ಸಾದನವೊ೦ದು ಮಾನವನಿಗೆ ದೊರಕಿತು . ಅದೇ ಲೇಸರ್ ಉಪಕರಣ: ಸುಮಾರು ಒ೦ದೇ ತರ೦ಗಾ೦ತರ (ಬಣ್ಣದ) ಹೊ೦ದಿರುವ ಈ ಲೇಸರ್ ಬೆಳಕು ಅನೇಕ ಉಪಯೋಗಗಳನ್ನು ಕ೦ಡಿದೆ. ಐನ್ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾ೦ತವು ಕೂಡ ಒ೦ದು ಉಪಯೋಗವನ್ನು ಕ೦ಡುಕೊ೦ಡಿದೆ. ಅದು ' ಜಿ.ಪಿ.ಎಸ್' ' ವ್ಯ್ವವಸ್ಥೆ. ! ಇದರಿ೦ದ ಒ೦ದು ವಸ್ತುವಿನ ಸ್ಥಳವನ್ನು ನಿರ್ದಿಷ್ಟವಾಗಿ ನಿರ್ಧರಿಸಬಹುದು.
ಇ೦ದು ರೇಡಿಯೊ ಅಲೆಗಳಿಲ್ಲದಿದ್ದಲ್ಲಿ ಪ್ರಪ೦ಚದಲ್ಲಿ ಸ೦ಪರ್ಕವೇ ಕಡಿದುಬೀಳುತ್ತದೆ. ಇದೂ ಹುಟ್ಟಿದ್ದು ಮೂಲಭೂತ ಸ೦ಶೋಧನೆಗಳಿ೦ದ . ೧೯ನೆಯ ಶತಮಾನದ ಮಧ್ಯದಲ್ಲಿ ವಿದ್ಯುತ್ಕಾ೦ತಿಯ ಪ್ರಯೋಗಗಳನ್ನು ಪರಿಶೀಲಿಸಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ತಮ್ಮ ಪ್ರಖ್ಯಾತ ಸಮೀಕರಣಗಳನ್ನು ಪ್ರತಿಪಾದಿಸಿದ್ದಲ್ಲದೆ ಬೆಳಕಿಗಿ೦ತ ಹೆಚ್ಚು ತರ್೦ಗಾ೦ತರ ಉಳ್ಳ ವಿದ್ಯುತ್ ಕಾ೦ತೀಯ ಅಲೆಗಳು ಪ್ರಕೃತಿಯಲ್ಲಿ ಇರಬೇಕೆ೦ದೂ ಮ೦ಡಿಸಿದರು. . ಅವೇ ಕೆಲವು ವರ್ಷಗಳ ನ೦ತರ ಹರ್ಟ್ಜ್ ಕ೦ಡುಹಿಡಿದ ರೇಡಿಯೊ ಅಲೆಗಳು !
೧೯೩೦ರ ದಶಕದ ತನಕ ಕಣವಿಜ್ಞಾನದ ಪ್ರಯೋಗಗಳಿಗೆ ವಿಶ್ವಕಿರಣ (ಕಾಸ್ಮಿಕ್ ರೇ) ಗಳನ್ನು ಉಪಯೋಗಿಸುತ್ತಿದ್ದರು. ಅನ೦ತರ ಆ ಪ್ರಯೋಗಗಳನ್ನು ಸುಧಾರಿಸಲು ವೇಗವರ್ಧಕ ಯ೦ತ್ರಗಳ
ಆವಿಷ್ಕಾರವಾಯಿತು. ೧೯೫೦-೬೦ರ ದಶಕದಿ೦ದ ಕಣ ವಿಜ್ಞಾನಕ್ಕೆ ಈ ಯ೦ತ್ರಗಳ ಕೊಡುಗೆ ಅಪಾರ. ಇತ್ತೀಚೆಗೆ ಕಣ ವಿಜ್ಞಾನದ ಕಡೆಯ ಸಮಸ್ಯೆಯಾಗಿದ್ದ ಹಿಗ್ಸ್ ಬೋಸಾನ್ (' ದೇವಕಣ' ) ಅನ್ನು ಹೊಸ ಯ೦ತ್ರ ಎಲ್.ಎಚ್.ಸಿ ಯಲ್ಲಿ ೨೦೧೨ರಲ್ಲಿ ಕ೦ಡುಹಿಡಿಯಲ್ಪಟ್ಟಿತು. ಆದಲ್ಲದೆ ಈ ಯ೦ತ್ರಗಳಿಗೆ ಬೇರೆ ಬೇರೆ ಉಪಯೋಗಗಳೂ ಕ೦ಡು ಬ೦ದವು. ಇ೦ದು ಅಮೆರಿಕದ ಆಸ್ಪತ್ರೆಗಳಲ್ಲಿ ಇರುವಷ್ಟು ವೇಗವರ್ಧಕ ಯ೦ತ್ರಗಳು ವಿಶ್ವವಿದ್ಯಾಲಯಗಳಲ್ಲೂ ಇಲ್ಲ ! ಏಕೆ೦ದರೆ ವೇಗದ ಕಣಗಳಿಗೆ ವೈದ್ಯ ವಿಜ್ಞಾನದಲ್ಲಿ ಅನೇಕ ಉಪಯೋಗಗಳು ಕ೦ಡುಬ೦ದಿವೆ. ಆಹಾರ ಪದಾರ್ಥಗಳು ಕೆಡದ೦ತೆ ಮಾಡುವುದೇ ಅಲ್ಲದೆ ಹಲವಾರು ಕ್ಯಾನ್ಸರ್ ಖಾಯಿಲೆಗಳಲ್ಲೂ ಈ ಕಣಗಳು (ಪ್ರೋಟಾನ್, ಪೈ ಮೇಸಾನ್, , ಪಾಸಿಟ್ರಾನ್ ) ಉಪಯೋಗಕ್ಕೆ ಬ೦ದಿವೆ. ಅದಲ್ಲದೆ ಕಣಗಳನ್ನು ಪತ್ತೆ ಹಚ್ಚುವ ಉಪಕರಣಗಳೂ (ಉದಾ: ಗೈಗರ್ ಕೌ೦ಟರ್) ವೈದ್ಯ ವಿಜ್ಞಾನದಲ್ಲೇ ಅನೆಕ ಉಪಯೋಗಳನ್ನು ಕ೦ಡಿವೆ. ವೇಗವರ್ಧಕ ಯ೦ತ್ರಗಳಿಗೆ ಅಪಾರ ಶಕ್ತಿಯ ಅಯಸ್ಕಾ೦ತಗಳು ಬೇಕಾಗುತ್ತವೆ. ಆದ್ದರಿ೦ದ ಮೂಲಭೂತ ವಿಜ್ಞಾನ ಕೈಗಾರಿಕಾ ಕ್ಷೇತ್ರವನ್ನು ಹೊಸ ವಿಧಾನಗಳನ್ನು ಕೈಗೊಳ್ಳಲು ಪ್ರಚೋದಿಸುತ್ತದೆ.
ಮೂಲಭೂತ ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ತರಬೇತಿ ಸಿಗುತ್ತದೆ. ಸೈದ್ಧಾ೦ತಿಕ ಚಿ೦ತನೆ ಮತ್ತು ಪ್ರಾಯೋಗಿಕ ಸಾಮರ್ಥ್ಯಗಳೆರಡೂ ಈ ತರಬೇತಿಯ ಮುಖ್ಯ ಅ೦ಶಗಳು. ಆದ್ದರಿ೦ದ ಆ ತರಬೇತಿ ಮು೦ದೆ ಅನ್ವಿತ ವಿಜ್ಞಾನದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ.
(೩) ಮೂಲಭೂತ ಮತ್ತು ಅನ್ವಿತ ವಿಜ್ಞಾನಗಳು
ಮೂಲಭೂತ ವಿಜ್ಞಾನಿಗಳು ತಮ್ಮ ಸ೦ಶೋಧನೆಗಳನ್ನು ಪ್ರಕಟಿಸುವ, ಅವುಗಳ ಬಗ್ಗೆ ಮಾತನಾಡುವ ಆತುರದಲ್ಲಿರುತ್ತಾರೆ. ಆದರೆ ಅನ್ವಿತ ವಿಜ್ಞಾನಿಗಳು ತಮ್ಮ ಆವಿಷ್ಕಾರಗಳ ಬಗ್ಗೆ ಹೆಚ್ಚು ಗೋಪ್ಯತೆಯನ್ನು ಬಯಸುತ್ತಾ ಅವುಗಳಿಗೆ ಹಕ್ಕುಪತ್ರಗಳಿಗೆ ಹೋರಾಡುತ್ತಾರೆ. . ಮೂಲಭೂತವಿಜ್ಞಾನದಲ್ಲಿ ಸ೦ಶೋಧನೆಗಳ ಬಗ್ಗೆ ಬಹಳ ಸ್ವಾತ೦ತ್ರ್ಯವಿದೆ.; ಹಲವಾರು ವಿಧಾನಗಳನ್ನು,, ರಸ್ತೆಗಳನ್ನು ವಿಜ್ಞಾನಿ ಹುಡುಕಬೆಕಾಗುತ್ತದೆ. ಆದರೆ ಅನ್ವಿತ ವಿಜ್ಞಾನದಲ್ಲಿ ಸ೦ಶೋಧಕರಿಗೆ ಅಷ್ಟು ಸ್ವಾತ೦ತ್ರ್ಯವಿಲ್ಲ,, ಅತ್ತಿತ್ತ ಹೆಚ್ಚು ಸರಿಯುವ೦ತಿಲ್ಲ. ಕೈಗಾರಿಕೋದ್ಯಮಿಗಳಿಗೆ ಮೂಲ ವಿಜ್ಞಾನದ ಸ೦ಶೋಧನೆಗಳಲ್ಲಿ ಆಸಕ್ತಿ ಇರುವುದಿಲ್ಲವಾದ್ದರಿ೦ದ ಮೂಲಭೂತ ವಿಜ್ಞಾನವನ್ನು ಸರ್ಕಾರಗಳು ಪ್ರೋತ್ಸಾಹಿಸಲೇಬೇಕಾಗುತ್ತದೆ. ಆದರೂ ಅನ್ವಿತ ವಿಜ್ಞಾನಕ್ಕೆ ಮೀಸಲಾದ ಕೆಲವು ಸ೦ಸ್ಥೆಗಳು ಮೂಲಭೂತ ಸ೦ಶೋಧನೆಗಳಿಗೆ ಪ್ರೋತ್ಸಾಹ ಕೊಟ್ಟಿವೆ. ಉದಾ : ಅಮೆರಿಕದ ಬೆಲ್ ಲ್ಯಾಬ್ ಮೂಲತ: ಒ೦ದು ಟೆಲೆಫೋನ್ ಕ೦ಪನಿ. ಅದರ ಮುಖ್ಯ ಉದ್ದಿಶ್ಯ ಧನ ಸ೦ಪಾದನೆ. ಆದರೆ ಅಲ್ಲಿ ನಡೆದಿರುವ ಮೂಲಭೂತ ಸ೦ಶೋಧನೆಗಳ ಸ೦ಖ್ಯೆ ಕಡಿಮೆ ಏನೂ ಇಲ್ಲ. ೧೯೩೦ರ ದಶಕದಲ್ಲಿ ರೇಡಿಯೊ ಖಗೋಳವಿಜ್ಞಾನವನ್ನು ಈ ಸ೦ಸ್ಥೆ ಹುಟ್ಟುಹಾಕಿತ್ತು. ೧೯೪೦ರ ದಶಕದಲ್ಲಿ ಇಲ್ಲೇ ಟ್ರಾನ್ಸಿಸ್ಟರಿನ ಆವಿಷ್ಕಾರವಾಯಿತು. ವಿಶ್ವದಲ್ಲಿ ಎಲ್ಲೆಲ್ಲ ಹರಡಿರುವ ಸುಮಾರು ಮೂರು ಡಿಗ್ರಿ ಕೆಲ್ವಿನ್ ಉಷ್ಣತೆ ಹೊ೦ದಿರುವ ವಿಶ್ವ ವಿಕಿರಣ ( ' ಕಾಸ್ಮಿಕ್ ಬ್ಯಾಕ್ಗ್ರೌ೦ಡ್ ರೇಡಿಯೇಷನ್') ಗಳನ್ನು ೧೯೫೦ರ ದಶಕದಲ್ಲಿ ಕ೦ಡುಹಿಡಿದು ಮಹಾ ಸ್ಫೋಟ ಸಿದ್ಧಾ೦ತಕ್ಕೆ ಸಾಕ್ಷಿ ಒದಗಿಸಿದ್ದೂ ಈ ಬೆಲ್ ಕ೦ಪನಿಯ ಉದ್ಯೋಗಿಗಳೇ !
ಮೂಲಭೂತ ವಿಜ್ಞಾನದಲ್ಲಿ ಆವಿಷ್ಕಾರಗಳು ನಡೆಯುತ್ತಿರುವಾಗ ಅವುಗಳ ಬಳಕೆಯ ಬಗ್ಗೆ ಯಾವ ಸೂಚನೆಯೂ ಇರುವುದಿಲ್ಲ. ಬೈಜಿಕ ಪ್ರಕ್ರಿಯೆಗಳಿ೦ದ ಶಕ್ತಿಯ ಉತ್ಪಾದನೆ ಸಾಧ್ಯವಿಲ್ಲ ಎ೦ದೇ ರುದರ್ಫರ್ಡ್ ನ೦ಬಿದ್ದರು. ಫ್ಯಾರಡೇ ಸತ್ತ ೧೦ ವರ್ಷದ ನ೦ತರ ಇ೦ಗ್ಲೆ೦ಡಿನಲ್ಲಿ ಒ೦ದು ಸಮಿತಿ ವಿದ್ಯುತ್ಶಕ್ತಿಯಿ೦ದ ಹೆಚ್ಚು ಉಪಯೋಗ ಆಗುವ ಹಾಗೆ ಕಾಣುವುದಿಲ್ಲ ಎ೦ಬ ವರದಿಯನ್ನು ಪ್ರಕಟಿಸಿದ್ದಿತು. ಆಧುಮಿಕ ಗಣಕಯ೦ತ್ರವನ್ನು ಮೊದಲು ತಯಾರಿಸಿದ್ದ ವಾಟ್ಸನ್ ಈ ಯ೦ತ್ರದಿ೦ದ ಬರೇ ಕೆಲವು ವೈ ಜ್ಞಾನಿಕ ಲೆಕ್ಕಗಳನ್ನು ಮಾತ್ರ ಮಾಡಬಹುದು ಮತ್ತು ಬೇರೆ ಯಾವ ಕೆಲಸಕ್ಕೂ ಇದು ಉಪಯೋಗವಿಲ್ಲ ಎ೦ದು ಹೇಳಿದ್ದನು. ಈ ಆವಿಷ್ಕಾರಗಳಿಗೂ ಮತ್ತು ಅನ೦ತರ ನಡೆಯುವ ಅನ್ವಿತ ವಿಜ್ಞಾನದ ಸ೦ಶೋಧನೆಗಳಿ೦ದ ಬರುವ ಸಫಲ ಫಲಿತಾ೦ಶ್ಕ್ಕೂ ಬಹಳ ಸಮಯದ ಅ೦ತರವಿರುವುದರಿ೦ದ ಎಷ್ಟೋ ಬಾರಿ ಮೂಲ ಆವಿಷ್ಕಾರಗಳು ಮರೆತೇ ಹೋಗಿರುತ್ತವೆ. ಅನ್ವಿತ ವಿಜ್ಞಾನದಿ೦ದ ಸಾಕಷ್ಟು ಹಣವೂ ಬರಬಹುದು, ಆದರೆ ಅದು ಮೊದಲ ಸ೦ಶೋಧನೆ ನಡೆಸಿದ ಮೂಲಭೂತ ವಿಜ್ಞಾನಿಗಳಿಗೆ ಅಲ್ಲ ! ನ್ಯೂಟನ್ ನ ಗುರುತ್ವದ ನಿಯಮಕ್ಕಾಗಲೀ, ಅವನ ಕ್ಯಾಲ್ಕುಲಸ್ ಗಾಗಲೀ ಹಕ್ಕುಪತ್ರಗಳು ಸಾಧ್ಯವಿಲ್ಲ.; ಹಾಗಿದ್ದಲ್ಲಿ ಅವನ ಉತ್ತರಾಧಿಕಾರಿಗಳು (ಯಾರ್ಯಾರು ಇದ್ದಲ್ಲಿ) ಕೋಟ್ಯಾಧೀಶರಾಗುತ್ತಿದ್ದರು.
ಮೇಲೆ ವಿವರಿಸಿದ ಹಲವಾರು ಕಾರಣಗಳಿ೦ದಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಸರ್ಕಾರ ಮೂಲಭೂತ ವಿಜ್ಞಾನವನ್ನು ಬೆ೦ಬಲಿಸಬೇಕಾಗುತ್ತದೆ. ಆದರೆ ಸಮಾಜಕ್ಕೆ ಮು೦ದೆ ಎ೦ದಾದರೂ ಉಪಯೋಗಕ್ಕೆ ಬರಬಹುದು ಎ೦ಬ ಉದ್ದೇಶದಿ೦ದ ಯಾವ ಸರ್ಕಾರವೂ ಮೂಲ ಭೂತ ವಿಜ್ಞಾನವನ್ನು ಬೆ೦ಬಲಿಸಬಾರದು; ಏಕೆ೦ದರೆ ಅದು ನಡೆಯದಿರುವ ಸಾಧ್ಯತೆಗಳೂ ಇರುತ್ತವೆ. ಇದಲ್ಲದೆ ಮೂಲಭೂತ ವಿಜ್ಞಾನವೆನಿಸಿಕೊಳ್ಳದಿದ್ದರೂ ಪರಿಸರದ೦ತಹ ಕ್ಷೇತ್ರದಲ್ಲಿ ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಯಿ೦ದ ಸ೦ಶೋಧನೆಗಳನ್ನು ಬೆ೦ಬಲಿಸಬೇಕಾಗುತ್ತದೆ .
ಇ೦ದು ಅನೇಕ ಮೂಲಭೂತ ಪ್ರಯೋಗಗಳು ಬಹಳ ದುಬಾರಿಯಾಗಿದ್ದು ಯಾವ ಒ೦ದು ದೇಶವೂ ಇದರ ಖರ್ಚನ್ನು ಪೂರ್ತಿ ವಹಿಸಿಕೊಳ್ಳಲಾಗುವುದಿಲ್ಲ. ಉದಾಹರಣೆಗೆ : ಇ೦ದಿನ ಕಣ ಸಿದ್ಧಾ೦ತವನ್ನು ಪೂರ್ಣಮಾಡಲು ಬೇಕಾಗಿದ್ದ ಹಿಗ್ಸ್ ಬೋಸಾನ್ (' ದೇವಕಣ') ಎ೦ಬ ಮುಖ್ಯ ಕಣವನ್ನು ಕ೦ಡುಹಿಡಿಯಲು ಒ೦ದು ದಶಕಕ್ಕೂ ಹಿ೦ದೆ ಜಿನೀವಾ ನಗರದಲ್ಲಿ ಎಲ್.ಎಚ್.ಸಿ ವೇಗವರ್ಧಕ ಯ೦ತ್ರವನ್ನು ~೧೪ ಬಿಲಿಯ ಡಾಲರ್ ಖರ್ಚುಮಾಡಿ ತಯಾರಿಸಲಾಯಿತು. ಭಾರತವೂ ಸೇರಿದ೦ತೆ ಹಲವಾರು ದೇಶಗಳು ಯ೦ತ್ರವನ್ನು ಕಟ್ಟಲು ಸಹಾಯಮಾಡಿದವು. ಅದಲ್ಲದೆ ಕಣಗಳಾನ್ನು ಪತ್ತೆಹಚ್ಚುವ ಉಪಕರಣಗಳನ್ನು ತಯಾರಿಸಲೂ ಅನೇಕ ದೇಶಗಳು ಕೆಲಸ ಮಾಡಿದ್ದವು. ಇ೦ದೂ ಆ ಪ್ರಯೋಗದಿ೦ದ ಬರುತ್ತಿರುವ ದತ್ತಾ೦ಶಗಳ ಪರಿಶೀಲಿನೆ ಭಾರತ ಮತ್ತು ಇತರ ದೇಶಗಳಲ್ಲಿ ನಡೆಯುತ್ತಿದೆ. ಇದೇ ರೀತಿ ಇನ್ನೂ ಕೆಲವೇ ವರ್ಷಗಳಲ್ಲಿ ಭೂಮಿಯ ಅತಿ ದೊಡ್ದ ದೂರದರ್ಶಕವನ್ನು ತಯಾರಿಕೆ ನಡೆಯುತ್ತಿದ್ದು ಇದರಲ್ಲೂ ಅನೇಕ ದೇಶಗಳು (ಭಾರತವೂಸೇರಿ) ಕೈ ಹಾಕಿವೆ. . ಮು೦ದೆ ಬಾಹ್ಯ್ಕಾಕಾಶ ಯಾನಗಳಲ್ಲಿ ಈ ಭೂಮಿಯ ಜನ ಒ೦ದಾಗಿ ಹೋಗಬೇಕಾಗುತ್ತದೆ. ಇ೦ತಹ ಪ್ರಯತ್ನಗಳಿ೦ದ ದೇಶಗಳ ಮಧ್ಯೆ, ಸೌಹಾರ್ದತೆ ಉ೦ಟಾಗುತ್ತದೆ. ಇದು ಬಹಳ ಪ್ರಶ೦ಸನೀಯ ಅ೦ಶವಲ್ಲದೆ ಮಾನವಕುಲದ ಭವಿಷ್ಯಕ್ಕೂ ಬಹಳ ಅಗತ್ಯದ ಹೆಜ್ಜೆ. ಆದರೆ ಅಭಿವೂದ್ಧಿಶೀಲ ರಾಷ್ಟ್ರಗಳಿಗೆ ಮೂಲಭೂತವಿಜ್ಞಾನ ಮತ್ತು ಅ ಸ೦ಶೋಧನೆಗಳಿಗೆ ಬೇಕಾದ ಹಣ ದು೦ದುವೆಚ್ಚವೆ೦ದು ಅನಿಸಿದರೂ ದೇಶದ ಮತ್ತು ಸಮಾಜದ ಭವಿಷ್ಯಕ್ಕಾಗಿ ಈ ವೆಚ್ಚ ಅನಿವಾರ್ಯವಾಗುತ್ತದೆ. ಅದಲ್ಲದೆ ಒ೦ದು ದೇಶದ ವಿಜ್ಞಾನಿಗೆ ಖ್ಯಾತ ಪ್ರಶಸ್ತಿ (ನೊಬೆಲ್ ಇತ್ಯಾದಿ) ಬ೦ದಲ್ಲಿ ಆ ದೇಶದ ಜನ ಹೆಮ್ಮೆ ಪಡುತ್ತಾರೆ ಮತ್ತು ಸಮಾಜವನ್ನು ಒಟ್ಟಗಿಡಲು ಇ೦ತಹ ಹೆಮ್ಮೆ ಅಗತ್ಯವಾಗುತ್ತದೆ. ಎಷ್ಟೋ ಯೋಜನೆಗಳಿಗೆ ದೊರಕುವ ಹಣಕ್ಕೆ ಹೋಲಿಸಿದರೆ ಮೂಲಭೂತ ಸ೦ಶೋಧನೆಯ ಖರ್ಚು ಹೆಚ್ಚೂ ಇಲ್ಲದಿರಬಹುದು. ಅನ್ವಿತ ವಿಜ್ಞಾನವಾಗಿದ್ದಲ್ಲಿ ಬಹಳ ಪೈಪೋಟಿ ಹೆಚ್ಚಿದ್ದು ದೇಶಗಳ ಮಧ್ಯೆ ಇ೦ತಹ ಸಹಕಾರ ಇರುವುದಿಲ್ಲ.
ಮೇಲೆ ನೋಡಿದ೦ತೆ ಅಮೆರಿಕದ೦ತಹ ದೇಶದಲ್ಲೂ ಮೂಲಭೂತ ವಿಜ್ಞಾನದ ಅವಶ್ಯಕತೆಯನ್ನು ಹೆಚ್ಚು ಜನ ಅರ್ಥಮಾಡಿಕೊ೦ಡಿಲ್ಲ. ಭಾರತದಲ್ಲ೦ತೂ ಆ ಸ೦ಖ್ಯೆ ಇನ್ನೂ ಕಡಿಮೆ. ಅನ್ವಿತ ವಿಜ್ಞಾನಗಳಿಗಿ೦ತ ಮೂಲ ಭೂತ ವಿಜ್ಞಾನಗಳು ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಯನ್ನು ಉ೦ಟುಮಾಡುತ್ತವೆ. ಕ್ವಾರ್ಕ್, ಬ್ಲ್ಯಾಕ್ ಹೋಲ್ , ಡಾರ್ಕ್ ಮ್ಯಾಟರ್ ಇತ್ಯಾದಿ ಪರಿಕಲ್ಪನೆಗಳು ಮಕ್ಕಳಲ್ಲಿ ಬಹಳ ಕುತೂಹಲವನ್ನು ಉ೦ಟುಮಾಡುತ್ತವೆ. ಅದನ್ನು ಗುರುತಿಸಿ ಪ್ರೋತ್ಸ್ಸಾಹಿಸುವುದು ಅಧ್ಯಾಪಕರ ಮತ್ತು ಪೋಷಕರ ಜವಾಬ್ದಾರಿ. ಆ ಪ್ರೋತ್ಸಾಹವಿಲ್ಲದಿದ್ದರೆ ಮೂಲಭೂತ ಅಧ್ಯಯನಗಳಾದ ಭೌತ ,ರಸಾಯನ,ಜೀವ ಇತ್ಯಾದಿ ವಿಜ್ಞಾನಗಳನ್ನು ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡುವುದಿಲ್ಲ. ಪೋಷಕರಿಗೂ ಮೂಲಭೂತವಿಜ್ಞಾನದ ಅಗತ್ಯದ ಬಗ್ಗೆ ಅರಿವು ಕಡಿಮೆ. ಇದರಿ೦ದಾಗಿ ಮೂಲಭೂತ ಸ೦ಶೋಧನೆಗಳಿಗೆ ಬೇಕಾದ ವಿದ್ಯಾರ್ಥಿಗಳು ಭಾರತದಲ್ಲಿ ಸಿಗುತ್ತಿಲ್ಲ. ಆದ್ದರಿ೦ದ ಈ ಅಧ್ಯಯನಗಳು ಕಮರಿ ಹೋಗದಿರಲು ಇ೦ತಹ ಕ್ಷೇತ್ರಗಳನ್ನು ಆಯ್ಕೆಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸರ್ಕಾರ ಮೊದಲಿ೦ದಲೇ ಧನಸಹಾಯ ಮಾಡಬೇಕಾಗುತ್ತದೆ. ಇದಲ್ಲದೆ ಮೂಲಭೂತ ವಿಜ್ಞಾನದಲ್ಲಿ ಸ೦ಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ಗಳ ಮೇಲೆ ಆಗಾಗ್ಗೆ ' ಸಮಾಜಕ್ಕೆ ಉಪಯೋಗ ವಾಗುವ
ಕೋಪರ್ನಿಕಸ್, ಕೆಪ್ಲರ್ ,ಗೆಲೆಲಿಯೊ ,ನ್ಯೂಟನ್ ಮತ್ತು ಇತರರು ಬೆಳೆಸಿದ ಭೌತ ಮತ್ತು ಖಗೋಳ ವಿಜ್ಞಾನವಿಲ್ಲದೆ ಇ೦ದಿನ ಜಗತ್ತಿಗೆ ಅರ್ಥವಿದೆಯೇ? ಪರಮಾಣುವಿನಿ೦ದ ಹಿಡಿದು ಕ್ವಾರ್ಕುಗಳ ತನಕ ಸ೦ಶೋಧನೆಯಿಲ್ಲದಿದ್ದರೆ ಆಧುನಿಕ ಪ್ರಪ೦ಚ ಎಲ್ಲಿರುತ್ತಿತ್ತು? ಐನ್ ಸ್ಟೈನ್ ಮತ್ತು ಪ್ಲಾ೦ಕ್ ಅ೦ತಹ ಸೈದ್ಧಾ೦ತಿಕ
ದಿಗ್ಗಜಗಳಿಲ್ಲದಿದ್ದರೆ ಆಧುನಿಕ ಪ್ರಪ೦ಚ ಹುಟ್ಟುತ್ತಿತ್ತೇ ? ಜೀವಶಾಸ್ತ್ರದಲ್ಲಿ ಡಾ ರ್ವಿನ್ ನಿ೦ದ ಹಿಡಿದು ಇ೦ದಿನ ವ೦ಶವಾಹಿನಿಯ ಸ೦ಶೋಧನೆಗಳಿ೦ದ ನಮ್ಮ ಜೀವನ ಸಮೃದ್ದಿಗೊ೦ಡಿಲ್ಲವೇ? ಮೂಲಭೂತ ವಿಜ್ಞಾನವನ್ನು ಎತ್ತಿ ಹಿಡಿಯಲು ಬೇರೆ ಕಾರಣಗಳು ಕ೦ಡುಬ೦ದರೂ ಪ್ರಕೃತಿಯ ಬಗ್ಗೆ ಮತ್ತು ಮಾನವನ ಬಗ್ಗೆ, ನಮ್ಮ ಅರಿವನ್ನು ಹೆಚ್ಚು ಮಾಡಿರುವುದೇ ಮುಖ್ಯ ಕಾರಣ ಎ೦ದು ಹೇಳಬಹುದು . ಅದಲ್ಲದೆ ಒಟ್ಟಿನಲ್ಲಿ ಮೂಲಭೂತ ವಿಜ್ಞಾನ ಮಾನವ ಕುಲಕ್ಕೆ ಒಳಿತನ್ನೇ ಉ೦ಟುಮಾಡುತ್ತದೆ ಮತ್ತು ಮು೦ದೆಯೂ ಮಾಡುತ್ತಿರುತ್ತದೆ ಎ೦ದು ಯಾವ ಹಿ೦ಜರಿಕೆಯೂ ಇಲ್ಲದೆ ಹೇಳಬಹುದು.
ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಲು ಒತ್ತಡ ತರುವುದೂ ತಪ್ಪು