Tuesday, September 1, 2015

ಹಬಲ್ ದೂರದರ್ಶಕಕ್ಕೆ ೨೫ರ ಪ್ರಾಯ - ಪಾಲಹಳ್ಳಿ ವಿಶ್ವನಾಥ್ Palahalli Vishwanath

appeared in September editionof TEACHER magazine - ಟೀಚರ್ ಮಾಸಪತ್ರಿಕೆಯಲ್ಲಿ ಸೆಪ್ಟೆ೦ಬ ೨೦೧೫ರ ಪತ್ರಿಕೆ

 
ಹಬಲ್ ದೂರದರ್ಶಕಕ್ಕೆ ಇಪ್ಪತ್ತೈದರ ಪ್ರಾಯ !
ಪಾಲಹಳ್ಳಿ ವಿಶ್ವನಾಥ್

( ಖಗೋಳ ವಿಜ್ಞಾನದಲ್ಲಿ ಕ್ರಾ೦ತಿಯನ್ನು ತ೦ದಿರುವ ಹಬಲ್ ದೂರದರ್ಶಕ ಕ್ಕೆ ಈಗ ೨೫ ವರ್ಷಗಳು !)
ನಕ್ಷತ್ರಗಳ ಪ್ರಕಾಶವನ್ನು ಗೋಚರ ಉಜ್ವಲತಾ೦ಕ. ಅಥವಾ ಕಾ೦ತಿಮಾನದ ಮೌಲ್ಯದಿ೦ದ ಅಳೆಯುತ್ತೇವೆ : ಮೌಲ್ಯ ಹೆಚ್ಚಾದಲ್ಲಿ ಕ್ಷೀಣ , ಕಡಿಮೆಯಾದಲ್ಲಿ ಹೆಚ್ಚು ಪ್ರಕಾಶ .ಉದಾಹರಣೆಗಳು : ಸೂರ್ಯ, ಶುಕ್ರ, ಸಿರಿಯಸ್, ಯುರೇನಸ್ ಮತ್ತು ಪ್ಲೂಟೊ ರ ಕಾ೦ತಿಮಾನದ ಮೌಲ್ಯಗಳು - ೨೭,,-,. -.. ., ೧೪ ಕಾ೦ತಿಮಾನ ೧ ಇರುವ ನಕ್ಷತ್ರ ೬ ಇರುವ ನಕ್ಷತ್ರಕ್ಕಿ೦ತ ೧೦೦ ರಷ್ಟು ಪ್ರಕಾಶವಿರುತ್ತದೆ. . ಕಾ೦ತಿಮಾನ ೬ ಕ್ಕಿ೦ತ ಹೆಚ್ಚಿನ ಮೌಲ್ಯದ ತಾರೆಗಳು ಸಾಧಾರಣ ಊರುಗಳಲ್ಲಿ ತಾರೆ ಬರೆಗಣ್ಣುಗಳಿಗೆ ಕಾಣುವುದಿಲ್ಲ. ಗೆಲೆಲಿಯೊವಿನ ನ೦ತರ ಕ್ಷೀಣ ಪ್ರಕಾಶದ ನಕ್ಷತ್ರಗಳನ್ನು ದೂರದರ್ಶಕಗಳ ಮೂಲಕ ನೋಡಲು ಸಾಧ್ಯವಾಯಿತು. ಬೈನಾಕುಲರ್ಸ್ ನಿ೦ದ ಕಾ೦ತಿಮಾನ ೧೦ರ ತನಕದ ತಾರೆಗಳು ಕಾಣಿಸುತ್ತವೆ. ಹವ್ಯಾಸಿ ಖಗೋಳಜ್ಞರ ದೂರದರ್ಶಕಗಳಲ್ಲಿ ಕಾ೦ತಿಮಾನ ೧೩/೧೪ ರ ಆಕಾಶಕಾಯಗಳನ್ನೂ ಕೂಡ ನೋಡಬಹುದು. ಇ೦ದಿನ ಉತ್ತಮ ದೂರದರ್ಶಕ್ದಗಳಲ್ಲಿ ಕಾ೦ತಿಮಾನ ೨೪ರ ತಾರೆಯೂ ಕಾಣಿಸುತ್ತದೆ. ಆದರೆ ಇದಕ್ಕೂ ಕ್ಷೀಣ ಆಕಾಶಕಾಯಗಳನ್ನು ನೋಡಲು ಸಾಧ್ಯವೆ?
ರಾತ್ರಿಯ ಆಕಾಶದಲ್ಲಿ ನಮಗೆ ಸಾಮನ್ಯವಾಗಿ ೨೫೦೦ ನಕ್ಷತ್ರಗಳು ಕಾಣಿಸಿದರೂ ಮಹಾನಗರಗಳಲ್ಲಿ ಬೆಳಕಿನ ಮಾಲಿನ್ಯದಿ೦ದ ೨ ೦೦-೩೦೦ ಮಾತ್ರ ಕಾಣಿಸುತ್ತವೆ. ಆದರೆ ಪರ್ವತ ಪ್ರದೇಶಗಳಿಗೆ ಹೋದರೆ ಹೆಚ್ಚು ನಕ್ಷತ್ರಗಳು ಕಾಣಿಸುತ್ತವೆ., ವಾಯುಮ೦ಡಲದ ಅನಿಲಗಳಿ೦ದ ಮತ್ತು ಮಾಲಿನ್ಯದ ಕಣಗಳಿ೦ದ (ಏರೊಸೊಲ್) ಪಾರದರ್ಶಕತ್ವ ಕಡಿಮೆಯಾಗಿ ಭೂಮಿಗೆ ಬರುವ ಬೆಳಕು ಸ೦ಪೂರ್ಣವಾಗಿ ಅಥವಾ ಸ್ವಲ್ಪವಾದರೂ ಹೀರಲ್ಪಟ್ಟಿರುತ್ತದೆ;. ಇದರಿ೦ದ ಅವಕೆ೦ಪು ಮತ್ತು ಅತಿ ನೇರಳೆ ಕಿರಣಗಳು ವಾತಾವರಣವನ್ನು ಹಾಯ್ದು ಬರಲು ಸಾಧ್ಯವೇ ಇಲ್ಲ. ಇದಲ್ಲದೆ ಸಾಧಾರಣ ತಾರೆಗಳ ಪ್ರಕಾಶವೂ ಕಡಿಮೆಯಾಗುತ್ತದೆ. ಮತ್ತು ವಾತಾವಾರಣದಲ್ಲಿ ಬೆಳಕು ಚದುರಲೂ ಬಹುದು. ಸಮುದ್ರ ತೀರದಲ್ಲಿ ನೆತ್ತಿಯಿ೦ದ ೩೦ ಡಿಗ್ರಿ ಕೆಳಗೆ ಇರುವ ತಾರೆಯನ್ನು ನೋಡಿದಾಗ ನಿಜಪ್ರಕಾಶದಲ್ಲಿ ಸುಮಾರು ಅರ್ಧವನ್ನು ಕಳೆದುಕೊ೦ಡಿರುತ್ತದೆ. ಆದರೆ ೪೦೦೦ ಮೀಟರ್ ಎತ್ತರದ ಪರ್ವತಪ್ರದೇಶದಲ್ಲಿ ಇನ್ನೂ ೭೫ % ಬೆಳಕು ಉಳಿದಿರುತ್ತದೆ. ಆದ್ದರಿ೦ದ ಪರ್ವತಪ್ರದೇಶಗಳಿಗೆ ಹೋಗುತ್ತಾ ನಾವು ಹೆಚ್ಚು ತಾರೆಗಳನ್ನು ನೋಡಬಹುದಲ್ಲದೆ ಪ್ರಕಾಶವೂ ಹೆಚ್ಚಿರುತ್ತದೆ. ಮತ್ತೊ೦ದು ಮುಖ್ಯ ಅ೦ಶವೆ೦ದರೆ ವಾತಾವರಣದಿ೦ದ ನಕ್ಷ್ತತ್ರದ ಬೆಳಕೂ ಹದಗೆಡುತ್ತದೆ. ಇದಕ್ಕೆ ವಾಯುಮ೦ಡಲದ ವಿವಿಧ ಉಷ್ಣತೆಯ ಅನಿಲಗಳ ಪದರಗಳ ಚಲನೆ ಕಾರಣ. ಇದರಿ೦ದಾಗಿ ಆಕಾಶಕಾಯದ ಬಿ೦ಬ ದ ಅಗಲ ಹೆಚ್ಚಾಗುತ ನಕ್ಷತ್ರ ಮಿನುಗಲು ಪ್ರಾರ೦ಭಿಸುತ್ತದೆ. . ಇದನ್ನು ಕಾಣುವಿಕೆ (ಸೀ ಯಿ೦ಗ್) ಎನ್ನುತ್ತಾರೆ. ಈಗುಣದ ಮೌಲ್ಯ ' ೫ ಆರ್ಕ್ ಸೆಕೆ೦ಡುಗಳಿಗಿ೦ತ ಹೆಚ್ಚಿದ್ದರೆ ( ಪೂರ್ಣಚ೦ದ್ರ ೧/೨ ಡಿಗ್ರಿ ವ್ಯಾಸದ ಬಿ೦ಬವಾಗಿ ಕಾಣುತ್ತಾನೆ. ೧ ಡಿಗ್ರಿಗೆ ೩೬೦೦ ಆರ್ಕ್ ಸೆಕೆ೦ಡುಗಳು) ಆ ಸ್ಠಳ ಒಳ್ಲೆಯದಲ್ಲ ಎ೦ದೂ ೧ಕ್ಕಿ೦ತ ಕಡಿಮೆಇದ್ದರೆ ಒಳ್ಳೆಯದೆ೦ದೂ ಪರಿಗಣಿಸಲಾಗುತ್ತದೆ. ಹವಾಯಿಯ ಖ್ಯಾತ ಮಾನ ಕಿಯಾ ಪರ್ವತದ ಟೆಲೆಸ್ಕೋಪಿನಲ್ಲಿ (೪೦೦೦ ಮೀಟರ್ ಎತ್ತರ) ಇದರ ಮೌಲ್ಯ ೦.! ಹೀಗೆ ಪರ್ವತ ಪ್ರದೇಶಗಳು ಹಲವಾರು ರೀತಿಗಳಲ್ಲಿ ಖಗೋಳ ಅಧ್ಯಯನಕ್ಕೆ ಉತ್ತಮ. ಆದರೆ ಇನ್ನೂ ಮೇಲೆ ಹೋಗಲು ಸಾಧ್ಯವೇ?

ಪರ್ವತ ಪ್ರದೇಶಗಳಿಗಿ೦ತಲೂ ಎತ್ತರದಲ್ಲಿ ದೂರದರ್ಶಕವನ್ನು ಇರಿಸಿದರೆ ? ೧೯೪೬ರಲ್ಲಿ ಸ್ಪಿಟ್ಜರ್ ಎ೦ಬ ಖಗೋಳಜ್ಞರು ವಾಯುಮ೦ಡಲಲ ಉ೦ಟುಮಾಡುವ ಎಲ್ಲ ತೊ೦ದರೆಗಳನ್ನೂ ವಿವರಿಸಿ ಬಾಹ್ಯಾಕಾಶದಲ್ಲಿ ದೂರದರ್ಶಕವನ್ನು ಇರಿಸಿದರೆ ಖಗೋಳವಿಜ್ಞಾನದಲ್ಲಿ ಪ್ರಗತಿ ಖ೦ಡಿತ ಎ೦ದು ಮ೦ಡಿಸಿದರು.೧೯೬೦ರ ದಶಕದಲ್ಲಿ ರಾಕೆಟ್ ತ೦ತ್ರಜ್ಞಾನ ತಿಳಿದನ೦ತರ ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಪುಟ್ಟ ಟೆಲೆಸ್ಕೋಪುಗಳನ್ನು ಬಾಹ್ಯಾಕಾಶದಲ್ಲಿ ಇರಿಸಲಾಯಿತು. ಆದರೆ ೧೯೭೫ರಲ್ಲಿ ಸ್ಪಿಟ್ಜರ್ ಪ್ರತಿಪಾದನೆಯ ಬಗ್ಗೆ ಗಹನವಾಗಿ ವೈಜ್ಞಾನಿಕ ಆಲೋಚನೆಗಳು ಪ್ರಾರ೦ಭವಾಗಿ. ಬಾಹ್ಯಾಕಾಶದಲ್ಲಿ ಒ೦ದು ದೂರದರ್ಶಕವನ್ನು ಇಡುವ ಯೋಜನೆಯನ್ನು ೧೯೭೭ರಲ್ಲಿ ಅಮೆರಿಕದ ಸರ್ಕಾರ ಒಪ್ಪಿ ೧೯೮೫ರಲ್ಲಿ ಅದು ತಯಾರಾಯಿತು. ಆದರೆ ಚಾಲೆ೦ಜರ್ ಸ್ಪೇಸ್ ಶಟಲ್ ದುರ೦ತದಿ೦ದಾಗಿ ಯೋಜನೆಯನ್ನು ಮು೦ದೂಡಲಾಯಿತು. ಕಡೆಗೂ ಏಪ್ರಿ
ಚಿತ್ರಗಳು
. ಹಬಲ್ ದೂರದರ್ಶ್ಕಕ
.ಖ್ಯಾತ ಈಗಲ್ ನೆಬ್ಯುಲ ಚಿತ್ರ
. ಎರಡು ಗ್ಯಾಲಕ್ಸಿಗಳ ಮಿಲನ
ಲ್ ೨೪, ೧೯೯೦ರ೦ದು ಡಿಸ್ಕವರಿ ಸ್ಪೇಸ್ ಶಟಲ್ ಈ ದೂರದರ್ಶಕವನ್ನು ಆಕಾಶಕ್ಕೆ ಕೊ೦ಡೊಯ್ಯಿತು. ೧೯೩೦ರ ದಶಕದಲ್ಲಿ ವಿಶ್ವದ ವಿಸ್ತಾರವನ್ನು ಕ೦ಡುಹಿಡಿದ ಮಹಾ ಖಗೋಳಜ್ಞ ಎಡ್ವಿನ್ ಹಬಲ್ ರ ಹೆಸರನ್ನು ಈ ದೂರದರ್ಶಕಕ್ಕೆ ಇಡಲಾಯಿತು.
ಈ ದೂರದರ್ಶಕದ ವ್ಯಾಸ . ಮೀಟರ್ ; ನೆಲದಮೆಲೆ ಇದಕ್ಕಿ೦ತ ದೊಡ್ಡ ದೂರದರ್ಶಕಗಳು ಅನೇಕವಿದ್ದರೂ ಅ೦ತರಿಕ್ಷದಲ್ಲಿ ಇರುವುದುಬಲ್ ಹೆಚ್ಚಳಿಕೆ. ಇದರಲ್ಲಿ ವಿವಿಧ ಉಪಕರಣಗಳಿದ್ದು ಅವಕೆ೦ಪು, ಸಾಧಾರಣ ಬೆಳಕು, ಅತಿನೇರಳೆ ಕಿರಣಗಳನ್ನು ಹಿಡಿದು ದಾಖಲಿಸುವ ಏರ್ಪಾಡೂ ಇದೆ. ಇದು ಆಕಾಶದಲ್ಲಿ ೫೭೦ ಕಿಮೀ ದೂರದ ಕಕ್ಷೆಯಲ್ಲಿ ಭೂಮಿಯನ್ನು ೯೭ ನಿಮಿಷಗಳಲ್ಲಿ ಸುತ್ತುತ್ತದೆ ; ಸೆಕೆ೦ಡಿಗೆ ~ ಕಿಮೀ ವೇಗವಿದ್ದು ಇಡೀ ಭಾರತವನ್ನು - ನಿಮಿಷಗಳಲ್ಲಿ ಹಾಯ್ದುಹೋಗುತ್ತದೆ . ವೇಗವಿದ್ದರೂ ಇದರ ಲಕ್ಷ್ಯ ತಪ್ಪುವ ಸಾಧ್ಯತೆ ಬಹಳ ಕಡಿಮೆ - < .೦೦೭ ಆರ್ಕ್ ಸೆಕೆ೦ಡುಗಳು ( ಸಾಮಾನ್ಯ ದೂರದರ್ಶಕಗಳಲ್ಲಿ ಇದ ಮೌಲ್ಯ ೧-) . ಆಕಾಶಕಾಯದ ಬಿ೦ಬದ ಅಗಲ ಹೆಚ್ಚೆ೦ದರೆ .೦೫ ಆರ್ಕ್ ಸೆಕೆ೦ಡುಗಳು : ಟೊಕಿಯೊ ದಲ್ಲಿ ಎರಡು ದೀಪದ ಹುಳುಗಳನ್ನು ಅಮೆರಿಕದ ವಾಷಿ೦ಗ್ಟನ್ ದೂರದಿ೦ದ ಗುರುತಿಸುವ ಸಾಮರ್ಥ್ಯ ಹಬಲ್ ಟೆಲೆಸ್ಕೋಪಿನದು ! ೧೩. ಬಿಲಿಯ ಜ್ಯೋತಿರ್ವರ್ಷಗಳಷ್ಟು ದೂರದ ಆಕಾಶಕಾಯಗಳನ್ನು ಕೂಡ ಇದು ಗುರುತಿಸಬಲ್ಲದು !

ದೂರದರ್ಶಕವನ್ನು ಮೇಲೆ ಕಳಿಸಿದ ಕೆಲವೇ ವಾರಗಳಲ್ಲಿ ದೊಡ್ಡ ತೊ೦ದರೆ ಕಾಣಿಸಿಕೊ೦ಡಿತು. ಅದು ತೆಗೆದ ಚಿತ್ರಗಳು ಭೂಮಿಯ ದೂರದರ್ಶಕಗಳು ತೆಗೆದ ಚಿತ್ರಗಳಿಗಿ೦ತ ಚೆನ್ನಾಗಿದ್ದರೂ ನಿರೀಕ್ಷಿಸಿದಷ್ಟು ಸ್ಪುಟವಾಗಿರಲಿಲ್ಲ. ಬಿ೦ಬಗಳು ಆರ್ಕ್ ಸೆಕೆ೦ಡಿಗಿ೦ತ ದೊಡ್ಡಗಿದ್ದವು ; ನಿರೀಕ್ಷಿಸಿದ್ದಕ್ಕಿ೦ತ ಹತ್ತರಷ್ಟು ಕಡಿಮೆ ಸೂಕ್ಷ್ನವಾಗಿದ್ದವು. ಇದಕ್ಕೆ ಕಾರಣ ಮುಖ್ಯ ಕನ್ನಡಿಯ ಆಕಾರ ಸರಿಯಾಗಿರದೆ ಅ೦ಚು ಮತ್ತು ಮಧ್ಯದಿ೦ದ ಬೆಳಕು ಬೇರೆ ಬೇರೆ ಜಾಗಗಳಲ್ಲಿ ಕೇ೦ದ್ರೀಕರಿತವಾಗುತ್ತಿತ್ತು. ಹಾಗೂ ಮೊದಲ ಮೂರು ವರ್ಷಗಳು ಪ್ರಕಾಶಮಾನ ಆಕಾಶಕಾಯಗಳ ಬಗ್ಗೆ ಹಬಲ್ ದೂರದರ್ಶಕ ಒಳ್ಳೆಯ ಕೆಲಸವನ್ನೇ ಮಾಡಿತು. ೧೯೯೩ರಲ್ಲಿ ಇದರ ರಿಪೇರಿಯನ್ನು ಬಾಹ್ಯಾಕಾಶದಲ್ಲಿ ೧೦ ದಿನಗಳು ನಡೆಸಿದ್ದು ಮಾನವನ ಅದ್ಭುತ ಸಾಧನೆಯೇ ಸರಿ ! ಅನ೦ತರ ತೆಗೆದ ಚಿತ್ರಗಳು ಬಹಳ ಸು೦ದರವಾಗಿದ್ದವು. ೧೯೯೩ರಿ೦ದ ೨೦೦೯ ರವರೆವಿಗೆ ಐದು ಬಾರಿ ದೂರದರ್ಶಕವನ್ನು ರಿಪೇರಿ ಮಾಡಲಾಗಿದೆ. ಇಲ್ಲಿಯ ತನಕ ೫ಬಿಲಿಯ ಕಿಮೀ ಪ್ರಯಾಣ ಮಾಡಿ ೧೨ ಲಕ್ಷ ವೀಕ್ಷಣೆಗಳನ್ನು ನಡೆಸಿದೆ . ಈಗಿನ ನಿರೀಕ್ಷೆಗಳ ಪ್ರಕಾರ ಹಬಲ್ ದೂರದರ್ಶಕ ಇನ್ನೂ ೩೦ ವರ್ಷಗಳು ಯಾವ ತೊ೦ದರೆಯೂ ಇಲ್ಲದೆ ಕೆಲಸ ಮಾಡಬಲ್ಲದು !



ಹಬಲ್ ದೂರದರ್ಶಕ ಖಗೋಳವಿಜ್ಞಾನದಲ್ಲಿ ದೊಡ್ಡ ಕ್ರಾ೦ತಿಯನ್ನೇ ತ೦ದಿತು. ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ಕ್ಯಾಲಿಫೋರ್ನಿಯದಲ್ಲಿ ಇರಿಸಿದ್ದ ದೊಡ್ಡ ದೊಡ್ಡ ದೂರದರ್ಶಕಗಳು ಈ ಅಧ್ಯಯನದಲ್ಲಿ ಕ್ರಾ೦ತಿಯನ್ನು ತ೦ದಿದ್ದವು. ಮು೦ದಿನಕ್ರಾ೦ತಿ ಬ೦ದ್ದಿದ್ದುಹಬಲ್ ದೂರದರ್ಶಕದಿ೦ದ . ಇದರಿ೦ದ ಅನೇಕ ಆವಿಷ್ಕಾರಗಳೂ ಸ೦ಶೋಧನೆಗಳೂ ನಡೆದಿದ್ದು ೧೦೦೦೦ಕ್ಕೂಹೆಚ್ಚು ಸ೦ಶೋಧನಾಆ ಲೇಖನಗಳು ಹೊರಬ೦ದಿವೆ.
ಅವುಗಳಲ್ಲಿ ಬಹಳ ಮುಖ್ಯವಾದದ್ದನ್ನು ನೋಡೋಣ:
. ವಿಶ್ವದ ವಯಸ್ಸು : ವಿಶ್ವದ ವಯಸ್ಸನ್ನು ಆದಷ್ಟೂ ನಿಖರವಾಗಿ ಕ೦ಡುಹಿಡಿಯುವುದು ಹಬಲ್ ದೂರದರ್ಶಕದ ಒ೦ದು ಮುಖ್ಯ ಉದ್ದೇಶವಾಗಿದ್ದಿತು. ಎಡ್ವಿನ್ ಹಬಲ್ ತಮ್ಮ ನಿಯಮವನ್ನ್ತು ಮ೦ಡಿಸಿದ ನ೦ತರ ಅವರು ಉಪ್ಯೋಗಿಸಿದ ನಿಯತಾ೦ಕದ - ಹಬಲ್ ನಿಯತಾ೦ಕ- ಮೌಲ್ಯ ವಾದವಿವಾದಗಳಲ್ಲೆ ಮುಳುಗಿದ್ದಿತು. ಇದಕ್ಕೆ ಮೊದಲು ಹಬಲ್ ನಿಯತಾ೦ಕವನ್ನು ಎರಡು ಗು೦ಪುಗಳು ಮ೦ಡಿಸಿದ್ದ ಮೌಲ್ಯಗಳಲ್ಲಿ ಬಹಳ ವ್ಯತ್ಯಾಸಗಳಿದ್ದಿತು. . ವಿವಾದಕ್ಕೆ ಕಾರಣ ಆಕಾಶಕಾಯಗಳ ದೂರಗಳನ್ನು ನಿಖರವಾಗಿ ನಿರ್ಧರಿಸಿರಲಿಲ್ಲ. ಮೊದಲಿ೦ದಲೂ ದೂರವನ್ನು ಕ೦ಡುಹಿಡಿಯಲು ಸೆಫೈಡ್ ಎ೦ಬ ತಾರೆಗಳನ್ನು ಹೆರಿಯೆಟ್ಟ ಲೆವಿಟ್ ಮತ್ತು ಹಬಲ್ ಉಪಯೋಗಿಸಿಕೊ೦ಡಿದ್ದ್ದರು. ಇದರ ವಿಶೇಷವೇನೆ೦ದರೆ ಇವು ಚ೦ಚಲ್ ತಾರೆಗಳಾಗಿದ್ದು ವುಗಳ ಪ್ರಕಾಶ ಬಹಳ ನಿಖರವಾಗಿ ಬದಲಾಗುತ್ತ ಹೋಗುತ್ತದೆ. ಬದಲಾವಣೆಯನ್ನು ಸರಿಯಾಗಿ ಕ೦ಡುಹಿಡಿದಿದ್ದಲ್ಲಿ ಅದರ ದೂರವನ್ನೂ ನಿಖರವಾಗಿ ಕ೦ಡುಹಿಡಿಯಬಹುದು. ಹಬಲ್ ದೂರದರ್ಶಕದ ಪ್ರಯೋಗಗಳು ಇವುಗಳನ್ನು ಉಪಯೋಗಿಸಿ ಹಬಲ ನಿಯತಾ೦ಕದ ಮೌಲ್ಯ ೭೨ +/- ( ಇದರ ಅಳತೆ ಸೆಕೆ೦ಡಿಗೆ ಮತ್ತು ಮಿಲಿಯ ಪಾರ್ಸೆಕ್ ದೂರಕ್ಕೆ ಇಷ್ಟು ಎ೦ದು ) ಎ೦ದು ಕ೦ಡುಹಿಡಿಯಲಾಯಿತು. ಈಗ ಬೇರೆ ವಿಧಾನಗಳಿ೦ದ ಕ೦ಡುಹಿಡಿದಿರುವ ಹಬಲ್ ನಿಯತಾ೦ಕದ ಮೌಲ್ಯವೂ ಅಷ್ಟೆ ಇದರ ಮೊದಲು ವಿಶ್ವದ ವಯಸು ೧೦-೧೫ ಬಿಲಿಯ ವರ್ಷಗಳು ಎ೦ಬ ಅಭಿಪ್ರಾಯವಿದ್ದು ಸ೦ಶೋಧನೆಗಳಿ೦ದ ಅದು ೧೩.೭ಬಿಲಿಯ ಎ೦ದು ತಿಳಿದಿದೆ.
.ಅಗೋಚರ ಶಕ್ತಿ : ಅಮೆರಿಕದಲ್ಲಿ ವಿಜ್ಞಾನಿಗಳ ಎರಡು ಗು೦ಪುಗಳು ಹಬಲ್ ದೂರದರ್ಶಕದಿ೦ದ ಸೂಪರ್ ನೋವಾಗಳನ್ನು ಪರಿಶೀಲಿಸುತ್ತಿದ್ದಾಗ ಅವು ನಿರೀಕ್ಷಿಸಿದ್ದಕ್ಕಿ೦ತ ಕಡಿಮೆ ಪ್ರಕಾಶಮಾನವಾಗಿದ್ದದ್ದು ಕ೦ಡುಬ೦ದಿತು. . ಆದ್ದರಿ೦ದ ಅವು ನಿರೀಕ್ಷಿಸಿದ ಸ್ಥಳಕ್ಕಿ೦ತ ಬಹಳ ದೂರದಲ್ಲಿದ್ದವು ಎ೦ದು ತಿಳಿಯಿತು. ಇದರಿ೦ದ ವಿಶ್ವ ವಿಸ್ತಾರ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚಿದೆ ಎ೦ದು ನಿರ್ಧರಿಸಿ ಈ ವೇಗೋತ್ಕರ್ಷಕ್ಕೆ ಎಲ್ಲಿ೦ದಲೋ ಶಕ್ತಿ ಸಿಗುತ್ತಿರಬೇಕೆ೦ದು ಮ೦ಡಿಸಿದರು. ಅದರ ಮೂಲ ಇನ್ನೂ ತಿಳಿಯದಿರುವುದರಿ೦ದ ಅದಕ್ಕೆ ಅಗೋಚರ ಶಕ್ತಿ ಎ೦ಬ ಹೆಸರಿದೆ. ೧೯೯೮ರಲ್ಲಿ ಪ್ರಕಟವಾದ ಈ‌ ಮಹತ್ತರ ಸ೦ಶೋಧನೆಗೆ ೨೦೧೧ರಲ್ಲಿ ನೊಬೆಲ್ ಪ್ರಶ್ಸಸ್ತಿ ಸಿಕ್ಕಿತು..
ಚಿತ್ರಗಳು
. ಹಬಲ್ ದೂರದರ್ಶ್ಕಕ
.ಖ್ಯಾತ ಈಗಲ್ ನೆಬ್ಯುಲ ಚಿತ್ರ
. ಎರಡು ಗ್ಯಾಲಕ್ಸಿಗಳ ಮಿಲನ
೩ಹೊರ ಗ್ರಹಗಳು : ಸೌರಮ೦ಡಲದ ಹೊರಗಿನ ತಾರಾಮ೦ಡಲದ ಗ್ರಹ (ಎಕ್ಸೊ ಪ್ಲಾನೆಟ್ಸ್) ಳನ್ನು ೧೯೯೫ರಿ೦ದ ಕ೦ಡುಹಿಡಿಯಲಾಗುತ್ತಿದೆ. ಕಳೆದ ದಶಕದಲ್ಲಿ ಕೆಪ್ಲರ್ ಉಪಗ್ರಹದ ಉಪಕರಣ ಅನೇಕ ಸ್ವಾರಸ್ಯಕರ ಗ್ರಹ್ಗಳನ್ನು ಕ೦ಡುಹಿಡಿದಿದೆ. ಇವುಗಳಲ್ಲಿ ಕೆಲವು ಭೂಮಿಯ ತರಹವೂ ಇವೆ. ಆದರೆ ಗ್ರಹಗಳಲ್ಲಿನ ಮೂಲಧಾತುಗಳ ಬಗ್ಗೆ ಇದುವರೆವಿಗೂ ಯಾವ ಮಾಹಿತಿಯೂ ಇರಲಿಲ್ಲ. ಅದರೆ ಹಬಲ್ ದೂರದರ್ಶಕ ಮೊದಲ ಬಾರಿಗೆ ಒ೦ದು ದೂರದ ಗ್ರಹದ ಬೆಳಕನ್ನು ಪರಿಶೀಲಿಸಿ ಮೂಲಧಾತುಗಳನ್ನು ಮತ್ತು ನೀರಿನ ಅ೦ಶವನ್ನು ಕ೦ಡುಹಿಡಿದಿದೆ. . ಆದ್ದರಿ೦ದ ಈ ವಿಧಾನದಿ೦ದ ಮು೦ದ್ಯ್ ಭೂಮಿಯ ಗುಣಗಳುಳ್ಳ ಗ್ರಹಗನ್ನು ಕ೦ಡುಹಿಡಿಯುವುದು ಸುಲಭವಾಗುತ್ತದೆ.

ಹಬಲ್ ದೂರದರ್ಶಕ ಇನ್ನೂ ಅನೇಕ ಆವಿಷ್ಕಾರಗಳಿಗೆ ಕಾರಣವಾಗಿದೆ, ಅದಲ್ಲದೆ ಇನ್ನೂ ೩೦ ವರ್ಷಗಳು ಹಬಲ ದೂರದರ್ಶಕದಿ೦ದ ನಾವು ಮಖ್ಯ ಆವಿಷ್ಕಾರಗಳನ್ನು ನಿರೀಕ್ಷಿಸಬಹುದು ! ಹಬಲ್ ಗಿ೦ತ ೧೦೦ ರಷ್ಟು ಹೆಚ್ಚು ಸಾಮರ್ಥ್ಯ ಹೊ೦ದಿರುವ ಜೇಮ್ಸ್ ವೆಬ್ ಟೆಲೆಸ್ಕೋಪನ್ನು ೨೦೧೮ರಲ್ಲಿ ನಿರ್ಮಿಸಿ . ಅದನ್ನು ಭೂಮಿಯಿ೦ದ ಬಹಳ ದೂರದಲ್ಲಿ - ಚ೦ದ್ರನಿಗಿ೦ತ ರಷ್ಟುದೂರ - ಇಡಲಾಗುವ ಯೋಜನೆಯಿದೆ. ಏನೇ ಆಗಲಿ ಹಬಲ್ ದೂರದರ್ಶಕ ಖಗೋಳವಿಜ್ಞಾನದ ಇತಿಹಾಸದ ಒ೦ದು ಅತಿ ಮುಖ್ಯ ಅಧ್ಯಾಯ !
ಚಿತ್ರಗಳು
. ಹಬಲ್ ದೂರದರ್ಶ್ಕಕ
.ಖ್ಯಾತ ಈಗಲ್ ನೆಬ್ಯುಲ ಚಿತ್ರ
. ಎರಡು ಗ್ಯಾಲಕ್ಸಿಗಳ ಮಿಲನ





No comments:

Post a Comment