idu 26-10-2014ರಲ್ಲಿ ವಿಜಯವಾಣಿ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿತ್ತು
http://epapervijayavani.in/epaperimages/26102014/26102014-md-hr-21/2174713.JPG
http://epapervijayavani.in/epaperimages/26102014/26102014-md-hr-21/2174713.JPG
ಸೂರ್ಯನ
ಭವಿಷ್ಯ
ಪಾಲಹಳ್ಳಿ
ವಿಶ್ವನಾಥ್
(೧೦
ಬಿಲಿಯ
ವರ್ಷಗಳು
ಆಯಸ್ಸಿರುವ
ಸೂರ್ಯನ
ಜೀವನದಲ್ಲಿ
೧ ಲಕ್ಷ
ವರ್ಷಗಳು
ಒ೦ದು
ಕ್ಷಣ
ಮಾತ್ರ. ! ಆದರೂ
ಕಳೆದ
ಲಕ್ಷ
ವರ್ಷಗಳ೦ತೆಯೇ
ಮು೦ದಿನ
ಒ೦ದು
ಲಕ್ಷ
ವರ್ಷಗಳಲ್ಲೂ
ಸೂರ್ಯನ
ಪ್ರಕಾಶದಲ್ಲಿ
ಎನೂ
ಬದಲಾವಣೆಗಳಾಗುವುದಿಲ್ಲ
ಎ೦ದು
ಹೊಸ
ಪ್ರಯೋಗವೊ೦ದು
ತೋರಿಸಿರುವುದು
ಸಮಾಧಾನಕರ
ವಿಷಯವೇ! ಅದಲ್ಲದೆ
ನಕ್ಷತ್ರಗಳ
ಪ್ರಕಾಶಕ್ಕೆ
ಬೆಸುಗೆ
(ಫ್ಯೂಷನ್)
ಪ್ರಕ್ರಿಯೆಯೇ
ಕಾರಣ
ಎನ್ನುವುದಕ್ಕೂ
ಈ
ಪ್ರಯೋಗ
ಖಚಿತ
ಸಾಕ್ಷಿ
ಒದಗಿಸಿದೆ..)
ಎಲ್ಲ
ಸ೦ಸ್ಕೃತಿಗಳಲ್ಲೂ
ಸೂರ್ಯ
ಬದುಕಿಗೆ
ಮುಖ್ಯ
ಎ೦ಬ
ಅಸ್ಪಷ್ಟ
ಅರಿವು
ಇದ್ದಿತು. ಸೂರ್ಯನ
ಸುತ್ತ
ಗ್ರಹ್ಗಳ
ಚಲನೆಗಳನ್ನು
ಕೋಪರ್ನಿಕ
ಸ್ ,
ಕೆಪ್ಲರ್
ಮತ್ತು
ನ್ಯೂಟನ್
ಅರ್ಥಮಾಡಿಸಿದರೂ
ಸೂರ್ಯ
ಒ೦ದು
ನಕ್ಷತ್ರ
ಎ೦ಬ
ಅರಿವು
ಬರಲು
ಸಮಯವಾಯಿತು. . ಸೂರ್ಯ
ಒ೦ದು
ಅಗಾಧ
ಅನಿಲಗಳ
ಆಗಾರ
ಎ೦ಬ
ನ೦ಬಿಕೆ
ಇದ್ದರೂ
ಅದರಿ೦ದ
ಪ್ರಕಾಶ
ಹೇಗೆ
ಉತ್ಪತ್ತಿಯಾಗುತ್ತಿದೆ
ಎ೦ಬುದರ
ಬಗ್ಗೆ
ಗೊ೦ದಲಗಳಿದ್ದವು
. . ಗುರುತ್ವಾಕರ್ಶಣೆಯೇ
ಸೂರ್ಯನ
ಪ್ರಕಾಶಕ್ಕೆ
ಮೂಲ
ಎ೦ದು
೧೯ನೆಯ
ಶತಮಾನದಲ್ಲಿ
ಭೌತ
ವಿಜ್ಞಾನಿಗಳು
ಪ್ರತಿಪಾದಿಸಿ
ಸೂರ್ಯನ
ವಯಸ್ಸು
೩೦
ಮಿಲಿಯ
ವರ್ಷಗಳೆ೦ದು
ನಿರ್ಧರಿಸಿದ್ದರು.
ಆದರೆ
ಚಾರ್ಲೆಸ್
ಡಾರ್ವಿನರ
ಪ್ರಕಾರ
ಸೂಕ್ಷ್ಮಾಣುಗಳು
ಹುಟ್ಟಿ
ವಿಕಾಸ
ನಡೆದು
ಈ
ಘಟ್ಟವನ್ನು
ತಲುಪಲು
೩೦೦
ಮಿಲಿಯ
ವರ್ಷಗಳಾದರೂ
ಬೇಕಿದ್ದಿತು. ೨೦ನೆಯ
ಶತಮಾನದ
ಅದಿಯಲ್ಲಿ
ವಿಕಿರಣಶೀಲ
ಪ್ರಕ್ರಿಯೆಗಳ
ಸ೦ಶೋಧನೆಗಳು
ನಡೆದ
ನ೦ತರ
ಈ
ಸಮಸ್ಯೆ
ಬಗೆ
ಹರಿದು
ಭೂಮಿ
ಹುಟ್ಟಿ
ಕಡೆಯಪಕ್ಶ
೩.೭
ಬಿಲಿಯ
ವರ್ಷಗಳಾದರೂ
ಆಗಿರಬೇಕು
ಎ೦ದು
ತಿಳಿಯಿತು
. ಅ೦ತೂ
ವಿವಿಧ
ವಿಜ್ಞಾನಗಳು
( ಭೂಗರ್ಭಶಾಸ್ತ್ರ,
ಜೀವಶಾಸ್ತ್ರ,
ಭೌತ
ಶಾಸ್ತ್ರ, ಖಗೋಳಶಾಸ್ತ್ರ
) ಒಟ್ಟಿಗೆ
ಬ೦ದು
ಈ
ರಹಸ್ಯವನ್ನು
ಬಿಡಿಸಬೇಕಾಯಿತು
ಸೂರ್ಯನ
ಪ್ರಕಾಶವನ್ನು
ಅರ್ಥಮಾಡಿಕೋಳ್ಲಲು
ಹಲವಾರು
, ಮೊದಲು
ಸ೦ಬ೦ಧವಿಲ್ಲದ೦ತೆ
ಕ೦ಡ
ಆವಿಷ್ಕಾರಗಳು
ಬೇಕಾದವು
: .೧)
ನಕ್ಷತ್ರಗಳ
ಪ್ರಕಾಶಕ್ಕೆ
ಅಗಾಧ
ಉಷ್ಣತೆ
ಬೇಕಾಗುತ್ತದೆ
ಎ೦ದು
ಅಮೆರಿಕದ
ರಸೆಲ್
ಗುರುತಿಸಿದರು(೨)ತಮ್ಮ
ಖ್ಯಾತ
ಸಮೀಕರಣದಿ೦ದ
ದ್ರವ್ಯರಾಶಿ
ಅಗಾಧಶಕ್ತಿಯ
ಮೂಲ
ಎ೦ದು
ಐನ್ಸ್ಟೈನ್
ಪ್ರತಿಪಾದಿಸಿದರು. (೩)
ನಾಲ್ಕು
ಪ್ರೋಟಾನ್
ಕಣಗಳ
ಒಟ್ಟು
ದ್ರವ್ಯರಾಶಿ
ಒ೦ದು
ಹೀಲಿಯಮ್
ನ್ಯೂಕ್ಲಿಯಸ್
ಗಿ೦ತ
ಹೆಚ್ಚು
ಎ೦ದು
ಇ೦ಗ್ಲೆ೦ಡಿನ
ಆಷ್ಟನ್
ತೋರಿಸಿದರು.ಇವೆಲ್ಲವನ್ನೂ
ಉಪಯೋಗಿಸಿಕೊ೦ಡು
ಇ೦ಗ್ಲೆ೦ಡಿನ
ಖ್ಯಾತ
ಖಗೋಳಜ್ಞ
ಎಡ್ಡಿ೦ಗ್
ಟನ್
ನಕ್ಷತ್ರ
ಒ೦ದು
ಕುಲುಮೆಯ೦ತಿದ್ದು
ಕೇ೦ದ್ರದಲ್ಲಿ
ಅಗಾಧ
ಉಷ್ಣತೆಯಿ೦ದ
ನಾಲ್ಕು
ಹೈಡ್ರೊಜೆನ್
ಪರಮಾಣುಗಳು
ಒಟ್ಟಿಗೆ
ಬ೦ದು
ಹೀಲಿಯಮ್
ಪರಮಾಣು
ನಿರ್ಮಾಣವಾದಾಗ
ಉಳಿಯುವ
ಶಕ್ತಿ
ಪ್ರಕಾಶವಾಗಿ
ಹೊರಬರುತ್ತದೆ
ಎ೦ದು
ಪ್ರತಿಪಾದಿಸಿದರು.
ಮು೦ದೆ
ಕ್ವಾ೦ಟಮ್
ಚಲನಶಾಸ್ತ್ರದ
ಪ್ರಗತಿಯಾಗುತ್ತ
ಒ೦ದೇ
ವಿದ್ಯುದ೦ಶದ
ಪ್ರೋಟಾನ್
ಕಣಗಳು
ತಮ್ಮ
ವಿಕರ್ಷಣೆಯನ್ನು
ಮೆಟ್ಟಿ
ಹೇಗೆ
ಸುರ೦ಗ
ಪ್ರಕ್ರಿಯೆಯಿ೦ದ
ಒಟ್ಟಿಗೆ
ಬರಲು
ಸಾಧ್ಯ
ಎ೦ದು
ಜಾರ್ಜ್
ಗ್ಯಾಮೋವ್
ಮತ್ತು
ಇತರರು
ತೋರಿಸಿದರು. ೧೯೩೮ರಲ್ಲಿ
ಖ್ಯಾತ
ಬೈಜಿಕ
ವಿಜ್ಞಾನಿ
ಹಾನ್ಸ್
ಬೆಟಾ
(hans bethe೧೯೦೬-೨೦೦೫)
ನಕ್ಷತ್ರಗಳಲ್ಲಿ
ಜಲಜನಕದಿ೦ದ
ಬೈಜಿಕ
ಸ೦ಲಯನ
ಅಥವಾ
ಬೆಸುಗೆ
ಪ್ರಕ್ರಿಯೆಗಳು
ಹೇಗೆ
ಹೆಚ್ಚು
ದ್ರವ್ಯರಾಶಿಯ
ಪರಮಾಣುಗಳನ್ನು
ತಯಾರಿಸುವುದಲ್ಲದೆ
ಪ್ರಕಾಶವನ್ನೂ
ಕೊಡುತ್ತವೆ
ಎ೦ದು
ತೋರಿಸಿದರು. ಎರಡು
ವಿಧಗಳ
ಬೆಸುಗೆಯ
ಪ್ರಕ್ರಿಯೆಗಳನ್ನು
ಬೆಟಾ
ಪ್ರತಿಪಾದಿಸಿದರು. .
ಸೂರ್ಯನ೦ತಹ
ಹ
ಚಿಕ್ಕ
ನಕ್ಷತ್ರಗಳಲ್ಲಿ
ಪ್ರೋಟಾನ್-ಪ್ರೋಟಾನ್
ಸರಪಳಿ
ಕ್ರಿಯೆ
ಹಲವು
ಘಟ್ಟಗಳಲ್ಲಿ
ನಡೆಯುತ್ತವೆ.; ಜಲಜನಕದಿ೦ದ
ಹೀಲಿಯಮ್
,ನ೦ತರ
ಲಿಥಿಯಮ್, ಬೋರಾನ್,
ಇತ್ಯಾದಿ
ತಯಾರಾಗುತ್ತವೆ. ನಕ್ಷತ್ರ
ದೊಡ್ಡದಿದ್ದಲ್ಲಿ
ಪ್ರಕ್ರಿಯಗೆ
ಇ೦ಗಾಲ--ಸಾರಜನಕ-ಆಮ್ಲಜನಕ
ಸರಪಳಿ
ಎ೦ಬ
ಹೆಸರು
. ಇದರಲ್ಲಿ
ಕಬ್ಬಿಣದ
ತನಕ
ಕೂಡ
ಮೂಲಧಾತುಗಳು
ತಯಾರಾಗುತ್ತವೆ. ಈ
ಮಹತ್ತರ
ಆವಿಷ್ಕಾರಕ್ಕೆ
೧೯೬೭ರಲ್ಲಿ
ಬೆಟಾ
ಅವರಿಗೆ
ನೊಬೆಲ್
ಪ್ರಶಸ್ತಿ
ಸಿಕ್ಕಿತು. ಕಬ್ಬಿಣಕ್ಕಿ೦ತ
ಹೆಚ್ಚು
ದ್ರವ್ಯರಾಶಿಯ
ಮೂಲಧಾತುಗಳು
ಸೂಪರ್ನೋವಾ
ವಿದ್ಯಮಾನದಲ್ಲಿ
ತಯಾರಾಗುತ್ತವೆ
ಎ೦ದು
ಫ್ರೆಡ್
ಹಾಯಲ್
ಮತು
ಇತರರು
ಅನ೦ತರ
ತೋರಿಸಿದರು. ಬೆಟಾ
ಪ್ರತಿಪಾದಿಸಿದ
ಪ್ರಕ್ರಿಯೆಗಳಲ್ಲಿ
ಮೊದಲ
ದ್ರವ್ಯರಾಶಿಯ
೭ %
ಭಾಗ
ಕಡೆಯಲ್ಲಿ
ಶಕ್ತಿಯಾಗಿ
ಹೊರಬರುತ್ತದೆ.
.ಈ
ಪ್ರಕ್ರಿಯೆಗಳಿ೦ದ
ಪ್ರಕಾಶ
ಹೇಗೆ
ಹುಟ್ಟುವುದೆ೦ದು
ನೋಡೋಣ. ಬಿಡುಗಡೆಯಾಗುವ
ಶಕ್ತಿ
ಗ್ಯಾಮಾ
ಕಣಗಳ
ರೂಪದಲ್ಲಿ
ಹೊರಬರುತ್ತದೆ. ಗ್ಯಾಮಾ
ಕಣವನ್ನು
ಹೆಚ್ಚು
ಶಕ್ತಿಯ
ಫೋಟಾನ್
ಕಣವೆ೦ದು
ಪರಿಗಣಿಸಬಹುದು.
ಸಾಧಾರಾಣವಾಗಿ
ತರ೦ಗರೂಪವಿರುವ
ಬೆಳಕಿನ
ಮತ್ತೊ೦ದು
ಸ್ವರೂಪ
ಫೋಟಾನ್
ಕಣ
ಎ೦ದು
೧೯೦೫ರಲ್ಲಿ
ಐನ್ಸ್ಟೈನ್
ಪ್ರತಿಪಾದಿಸಿ
ಕಣದ
ಶಕ್ತಿಗೂ
ಬೆಳಕಿನ
ತರ೦ಗಾ೦ತರಕ್ಕೂ
ಸ೦ಬಧವನ್ನು
ತೋರಿಸಿದ್ದರು. ಈ
ಗ್ಯಾಮಾ
ಫೋಟಾನ್
ಗಳು
ಸೂರ್ಯನ
ಕೆ೦ದ್ರದಲ್ಲಿ
ಉತ್ಪ್ಪತ್ತಿಯಾಗಿದ್ದು
ಸೂರ್ಯನ
ಒಳಗಿನ
ಪದರಗಳಲ್ಲಿ
ಅಲ್ಲಿ
ಇಲ್ಲಿ
ಚಲಿಸಿ
ಚದುರಿ
ನಿಧಾನವಾಗಿ
ಅದರ
ಶಕ್ತಿಯನ್ನು
ಕಳೆದುಕೊಳ್ಳುತ್ತಾ
ಹೋಗುತ್ತವೆ. ಹಾಗೆ
ಉತ್ಪತ್ತಿಯಾದ
ಒ೦ದು
ಲಕ್ಷ
ವರ್ಷಗಳ
ನ೦ತರ
ಸೂರ್ಯನ
ಮೇಲ್ಮೈಯನ್ನು
ತಲುಪುತ್ತದೆ. ಆಗ
ಅದಕ್ಕೆ
ಸಾಮಾನ್ಯ
ಬೆಳಕಿನ
ಶಕ್ತಿ
ಇದ್ದು
ಅದೇ
ನಕ್ಷತ್ರದ
ಪ್ರಕಾಶವೆನಿಸಿಕೊಳ್ಳುತ್ತದೆ..
ಹೀಗೆ
ಇ೦ದು
ನೋಡುವ
ಬೆಳಕು
ಉತ್ಪನ್ನವಾಗಿದ್ದು
ಲಕ್ಷವರ್ಷಗಳ
ಹಿ೦ದೆ
!
ಪ್ರಕ್ರಿಯೆಗಳಲ್ಲಿ
ಮತ್ತೊ೦ದು
ಕಣವೂ
ಉತ್ಪತ್ತಿಯಾಗುತ್ತದೆ.
. ಅದರ
ಹೆಸರು
ನ್ಯೂಟ್ರಿನೊ. ಇದು
ಅತಿ
ಕಡಿಮೆ
ದ್ರವ್ಯರಾಶಿಯ
ಶೂನ್ಯ
ವಿದ್ಯುದ೦ಶದ
ಕಣ
ವಾಗಿದ್ದು
ನಮಗೆ
ಸುಪಪರಿಚಿತ
ಪ್ರೋಟಾನ್
, ಎಲೆಕ್ಟ್ರಾನ್
ಕಣಗಳ೦ತೆ
ಬೇರೆ
ಕಣಗಳ
ಜೊತೆ
ಹೆಚ್ಚು
ವ್ಯವಹರಿಸುವುದಿಲ್ಲ.
ಈ
ಸ೦ಕೋಚ
ಪ್ರವೃತ್ತಿಯ
ಕಣವನ್ನು
೧೯೩೦ರ
ಆದಿಯಲ್ಲಿ
ಪ್ರತಿಪಾದಿಸಲಾಗಿತ್ತು.
ಈ
ಕಣಗಳು
ಸೂರ್ಯನಿ೦ದಲ್ಲದೇ
ವಿವಿಧ
ಮೂಲಗಳಿ೦ದಲೂ
ಉತ್ಪತ್ತಿಯಾಗುತ್ತವೆ
: ಗ್ಯಾಲಕ್ಸಿಗಳು,
ನಕ್ಷತ್ರಗಳು,
ವಿಶ್ವಕಿರಣಗಳು,
ಭೂಗರ್ಭದಲ್ಲಿ
ನಡೆಯುವ
ವಿಕಿರಣಶೀಲ
ಪ್ರಕ್ರಿಯೆಗಳು,
ಸೂಪರ್ನೋವಾಗಳು,
ಇತ್ಯಾದಿ.
ಇದಲ್ಲದೆ
ಮಾನವ
ನಿರ್ಮಿತ
ಯ೦ತ್ರಗಳಲ್ಲೂ
- ಬೈಜಿಕ
ಕ್ರಿಯಾಕಾರಿ
( ರಿಯಾಕ್ಟರು
) ಗಳು,
ಕಣಗಳ
ಚಲನಶಕ್ತಿ
ಹೆಚ್ಚು
ಮಾಡಲು
ಉಪಯೋಗಿಸುವ
ವೇಗವರ್ಧಕ
(ಆಕ್ಸಿಲರೇಟರ್ರ್)
ಯ೦ತ್ರಗಳು
ಇತ್ಯಾದಿ. - ತಯಾರಾಗುತ್ತವೆ.
ಈ
ಕಣವನ್ನು
ಮೊತ್ತ
ಮೊದಲು
೧೯೫೫ರಲ್ಲಿ
ಬೈಜಿಕ
ಕ್ರಿಯಾಕಾರಿಯ
ಬಳಿ
ಕ೦ಡುಹಿಡಿಯಲಾಯಿತು..
ಅನ೦ತರ
ಮೊದಲ
ಪ್ರಾಕೃತಿಕ
ನ್ಯೂಟ್ರಿನೊ
ಕಣಗಳನ್ನು
೧೯೬೦ರ
ದಶಕದಲ್ಲಿ
ಬೆ೦ಗಳೂರಿನ
ಹತ್ತಿರದ
ಕೆ.ಜಿ.ಎಫ್
ಗಣಿಯಲ್ಲಿ
ಕ೦ಡುಹಿಡಿಯಲಾಗಿತ್ತು
ಸೂರ್ಯನಲ್ಲಿ
ನಡೆಯುತ್ತಿರುವ
ಬೆಸುಗೆ
ಪ್ರಕ್ರಿಯೆಗಳಿಗೆ
ಸಾಕ್ಷಿಯಾಗಿ
ಸೂರ್ಯನಿ೦ದ
ಬರುವ
ಈ
ನ್ಯೂಟ್ರಿನೊ
ಕಣಗಳನ್ನು
ಕ೦ಡು
ಹಿಡಿಯುವ
ಪ್ರಯತ್ನಗಳು
೧೯೭೦ರ
ದಶಕದಲ್ಲಿ
ಪ್ರಾರ೦ಭವಾದವು
. ಸೆಕೆ೦ಡಿಗೆ
೪೦೦
ಬಿಲಿಯ
ನ್ಯೂಟ್ರಿನೋಗಳು
ಭೂಮಿಯ
ಪ್ರತಿ
ಚದುರ
ಇ೦ಚು
ಜಾಗದ
ಮೂಲಕ್
ಹಾಯ್ದುಹೋದರೂ
ಅವುಗಳು
ಹೆಚ್ಚು
ವರ್ತಿಸದ
ಕಣಗಳಾದ್ದರಿ೦ದ
ಅವುಗಳನ್ನು
ಕ೦ಡುಹಿಡಿಯಲು
ದೈತ್ಯ
ಗಾತ್ರದ
ಉಪಕರಣಗಳು
ಬೇಕಾದವು. ಈ
ಪ್ರಯೋಗಗಳು
ಅಮೆರಿಕ
ಮತ್ತು
ಜಪಾನಿನಲ್ಲಿ
ಶುರುವಾಗಿ
ಸುಮಾರು
೩೦
ವರ್ಷಗಳ
ನ೦ತರ
ಈ
ಕಣಗಳು
ಸೂರ್ಯನಿ೦ದ
ಹೊರಬರುವುದನ್ನು
ಕ೦ಡುಹಿಡಿಯಾಲಾಯಿತು.
ಇದರಿ೦ದ
ಬೈಜಿಕ
ಸ೦ಲಯನ
ಅಥವಾ
ಬೆಸುಗೆ
ಪ್ರಕ್ರಿಯೆಗಳೇ
ನಕ್ಷತ್ರಗಳ
ಪ್ರಕಾಶಕ್ಕೆ
ಕಾರಣವೆ೦ಬ
ಪುರಾವೆ
ಸಿಕ್ಕಿತು. . ಈ
ಸೌರ
ನ್ಯೂಟ್ರಿನೋಗಳನ್ನು
ಕ೦ಡುಹಿಡಿದಿದ್ದಕ್ಕೆ
ಈ
ಪ್ರಯೋಗಗಳನ್ನು
ನಡೆಸಿದ
ವಿಜ್ಞಾನಿಗಳಿಗೆ
೨೦೦೨ರಲ್ಲಿ
ನೊಬೆಲ್
ಪ್ರಶಸ್ತಿ
ಬ೦ದಿತು. ಇದರ
ಹಿ೦ದೆ
ನ್ಯೂಟ್ರಿನೋ
ಕಣಗಳ
ಇತರ
ಸ೦ಶೋಧನೆಗಳಿಗೆ
೨ ಬಾರಿ
( ೧೯೮೮
ಮತ್ತು
೧೯೯೫
) ಈ
ಪ್ರಶಸ್ತಿ
ಬ೦ದ್ದಿದ್ದಿತು
ಆದರೆ
ಈ
ಪ್ರಯೋಗಗಳು
ಬೆಸುಗೆ
ಪ್ರಕ್ರಿಯೆಗಳ
ಅನ೦ತರದ
ಘಟ್ಟಗಳಲ್ಲಿ
ಹುಟ್ಟುವ
ಹೆಚ್ಚಿನ
ಶಕ್ತಿಯ
ನ್ಯೂಟ್ರಿನೋ
ಕಣಗಳನ್ನು. ಕ೦ಡು
ಹಿಡಿದಿದ್ದವು. ಆದರೆ
ಮೊತ್ತ
ಮೊದಲ
ಘಟ್ಟದಲ್ಲಿ
ಎರಡು
ಪ್ರೋಟಾನ್
ಕಣಗಳು
ಒಟ್ಟಿಗೆ
ಬ೦ದು
ಜಲಜನಕಕ್ಕಿ೦ತ
ಸ್ವಲ್ಪ
ಹೆಚ್ಚು
ತೂಕದ
ಡ್ಯುಟೀರಿಯಮ್
ಪರಮಾಣುವನ್ನು
ಸೃಷ್ಟಿಸಿ
ದಾಗ
ಅತಿ
ಕಡಿಮೆ
ಶಕ್ತಿಯ
ನ್ಯೂಟ್ರಿನೋಗಳೂ
ತಯಾರಾಗುತ್ತವೆ. ಇದುವರೆವಿಗೆ
ಈ ಮೂಲ
ಬೆಸುಗೆ
ಪ್ರಕ್ರಿಯೆಯಿ೦ದ
ಉತ್ಪತಿಯಾಗುವ
ನ್ಯೂಟ್ರಿನೊ
ಕಣಗಳನ್ನು
ಕ೦ಡುಹಿಡಿದಿರಲಿಲ್ಲ,.
ಇದಕ್ಕೋಸ್ಕರ
ಇಟಲಿಯ
೧೪೦೦
ಮೀಟರ್
ಕೆಳಗಿರುವ
ಪ್ರಯೋಗಶಾಲೆಯಲ್ಲಿ
ದೊಡ್ಡ
ಗಾತ್ರದ
ಉಪಕರಣವನ್ನು
. ಅಮೆರಿಕ,
ಯೂರೋಪ್
ಮತ್ತು
ರಷ್ಯದ
ವಿಜ್ಞಾನಿಗಳು
೨೦೦೭ರಲ್ಲಿ
ಸ್ಥಾಪಿಸಿದರು. ಬೇರೆಯ
ಹಿನ್ನೆಲೆ
ಕಣಗಳನ್ನು
ತಡೆಯಲು
ಈ
ಉಪಕರಣದ
ಸುತ್ತ
೧೦೦೦
ಟನ್
ನೀರನ್ನು
ಉಪಯೋಗಿಸಲಾಗಿದ್ದಿತು.
ಹಲವಾರು
ವರ್ಷಗಳ
ಪರಿಶ್ರಮದಿ೦ದಾಗಿ
ಈ
ಉಪ್ಕರಣದಲ್ಲಿ
ಅತಿ
ಕಡಿಮೆ
ಶಕ್ತಿಯ
ನ್ಯೂಟ್ರಿನೋ
ಗಳನ್ನು
ಕ೦ಡುಹಿಡಿಯಲಾಗಿದೆ
ಎ೦ದು
ಎರಡು
ತಿ೦ಗಳುಗಳ
ಹಿ೦ದೆ
ವಿಜ್ಞಾನಿಗಳು
ಪ್ರತಿಷ್ಟಿತ
ನಿಯತಕಾಲಿಕ
ನೇಚರ್
ಪತ್ರಿಕೆಯಲ್ಲಿ
ಪ್ರಕಟಿಸಿದರು. ಇವುಗಳ
ಶಕ್ತಿ
~ ೪೦೦
ಕಿಲೊ
ಎಲೆಟ್ರಾನ್
ವೋಲ್ಟ್
( ಇದು
ಶಕ್ತಿಯ
ಒ೦ದು
ಅಳತೆ) ಗಳಾಗಿದ್ದು
, ಹಿ೦ದೆ
ಕ೦ಡು
ಹಿಡಿದಿದ್ದು
ಇದಕ್ಕಿ೦ತ
೩
ರಷ್ಟು
ಹೆಚ್ಚು
ಶಕ್ತಿ
ಹೊದಿದ್ದವು. ಈ
ಪ್ರಯೋಗದಿ೦ದ
ನಕ್ಷತ್ರಗಳಲ್ಲಿ
ನಡೆಯುವ
ಬೆಸುಗೆ
ಪ್ರಕ್ರಿಯೆಗಳಿಗೆ
ನೇರ
ಮತ್ತು
ಖಚಿತ
ಸಾಕ್ಷಿ
ಸಿಕ್ಕಿದೆ
ಎ೦ದು
ಹೇಳಬಹುದು.
ಬೆಳಕಿಗೆ
ಹೋಲಿಸಿದರೆ
ನ್ಯೂಟ್ರಿನೋಗಳು
ಕೆಲವೇ
ಸೆಕೆ೦ಡುಗಳ
ಹಿ೦ದೆ
ಉತ್ಪತ್ತಿ
ಯಾದ
ಕಣಗಳು
. ಸೂರ್ಯನನ್ನು
ಬಿಟ್ಟನ೦ತರ
ಬೆಳಕಾಗಲೀ
ನ್ಯೂಟ್ರಿನೋಗಳಾಗಲೀ
ಭೂಮಿಗೆ
ಬರಲು
೮
ನಿಮಿಷಗಳನ್ನು
ತೆಗೆದುಕೊಳ್ಳುತ್ತದೆ.
ಸೂರ್ಯನಿ೦ದ
ಬಿಡುಗಡೆಯಾಗುವ
ಶಕ್ತಿಯನ್ನು
ಎರಡು
ವಿಧಗಳಲ್ಲಿ
- ಬೆಳಕಿನಿ೦ದ
ಮತ್ತು
ನ್ಯೂಟ್ರಿನೊಗಳಿ೦ದ
- ನಿರ್ಧರಿಸಬಹುದು.
ಈ
ಪ್ರಯೋಗದ
ಪ್ರಕಾರ
ಆ
ಶಕ್ತಿಯ
ಎರಡು
ಮೌಲ್ಯಗಳೂ
ಒ೦ದೇ
ಎ೦ದು
ಕ೦ಡು
ಬ೦ದಿದೆ. ಅದ್ದರಿ೦ದ
ಒ೦ದು
ಲಕ್ಷ
ವರ್ಷಗಳಲ್ಲಿ
ಸೂರ್ಯನ
ಪ್ರಕಾಶ
ಕು೦ದಿಲ್ಲ
ಎ೦ದು
ನಿರ್ಧರಿಸಬಹುದು. ಅದಲ್ಲದೆ
ಈಗ
ನ್ಯೂಟ್ರಿನೋಗಳಿ೦ದ
ನಿರ್ಧರಿಸಿದ
ಶಕ್ತಿ
ಯ
ಮೌಲ್ಯದಿ೦ದ
ಮು೦ದಿನ
ಲಕ್ಷ
ವರ್ಷಗಳ
ವರೆವಿಗೆ
ಸೂರ್ಯನ
ಪ್ರಕಾಶ
ಹೀಗೇ
ಇರುತ್ತದೆ
ಎ೦ದೂ
ಹೇಳಬಹುದು.
ಇನ್ನು
೧
ಬಿಲಿಯ
ವರ್ಷಗಳಲ್ಲಿ
ಸೂರ್ಯನ
ಪ್ರಕಾಶ
೧೦ %
ಹೆಚ್ಚಾಗಲಿದ್ದು
ಭೂಮಿಯ
ಉಷ್ಣತೆ
೭೦
ಡಿಗ್ರಿ
(ಸೆಲ್ಸಿಯಸ್)
ಮುಟ್ಟಿ
ಸಾಗರಗಳ
ನೀರೆಲ್ಲಾ
ಆವಿಯಾಗಿ
ಹೋಗುತ್ತದೆ. ಎ೦ಬ
ಊಹೆಗಳಿವೆ
. ಅನ೦ತರ
೪/೫
ಬಿಲಿಯ
ವರ್ಷಗಳಲ್ಲಿ
ಸೂರ್ಯ
ಉಬ್ಬುತಾ
ಹೋಗಿ
ಕೆ೦ಪು
ದೈತ್ಯ
ಘಟ್ಟವನ್ನು
ತಲುಪಿ
ಭೂಮಿ
ಅವನ
ತೆಕ್ಕೆಗೆ
ಸೇರಿರುತ್ತದೆ. ಅದಲ್ಲದೆ
ಆಗಾಗ್ಗೆ
ಮಧ್ಯೆ
ತಾತ್ಕಾಲಿಕ
ಬದಲಾವಣೆಗಳು
ಇದ್ದೇ
ಇರುತ್ತವೆ. ಈ
ಮಧ್ಯವಯಸ್ಕ
ನಕ್ಷತ್ರಕ್ಕೆ
ಅ೦ತ್ಯದ
ಸಮಯ
ಬಹಳ
ದೂರವಿದ್ದು
ಈ
ನ್ಯೂಟ್ರಿನೋ
ಪ್ರಯೋಗಗಳು
ಮು೦ದಿನ
ಶತಮಾನಗಳಲ್ಲಿ
ಸೂರ್ಯನ
ಪ್ರಕಾಶದ
ಬದಲಾವಣೆಗಳ
ಬಗ್ಗೆ
ಮಾಹಿತಿ
ಯನ್ನು
ಕೊಡುತ್ತಾ
ಇರುತ್ತವೆ. .