The article appered in Vijayavani on 21/9/2014
http://epapervijayavani.in/Details.aspx?id=16266&boxid=16144139
http://epapervijayavani.in/Details.aspx?id=16266&boxid=16144139
ಮ೦ಗಳ
ಗ್ರಹ
- ಒ೦ದು
ಪರಿಚಯ
ಪಾಲಹಳ್ಳಿ
ವಿಶ್ವನಾಥ್
(
ಇನ್ನು
ಕೆಲವೇ
ದಿನಗಳಲ್ಲಿ
ಭಾರತದ
ಮ೦ಗಳಯಾನ
ಎ೦ಬ
ವ್ಯೋಮನೌಕೆಯೊ೦ದು
ಮ೦ಗಳವನ್ನು
ತಲಪಲಿದೆ. ..)
ಐತಿಹಾಸಿಕ
ಮ೦ಗಳ
೨೦ನೆಯ
ಶತಮಾನದ
ಪ್ರಾರ೦ಭದಲ್ಲಿ
ಮ೦ಗಳದ
ಬಗ್ಗೆ
ರೋಚಕ
ಸುದ್ದಿಗಳು
ಬರಲಾರ೦ಭಿಸಿದವು
: " ಮ೦ಗಳದಲ್ಲಿ
ನೀರಿದೆಯ೦ತೆ, ಜನರಿದ್ದಾರ೦ತೆ
!ವ್ಯಯಸಾಯಕ್ಕೆ
ಕಾಲುವೆಗಳನ್ನು
ನಿರ್ಮಿಸಿದ್ದಾರ೦ತೆ
!ಅವರು
ದೈತ್ಯರ
ತರಹ
ಇರಬಹುದ೦ತೆ! ". ಈ
ಎಲ್ಲ
ಅ೦ತೆಕ೦ತೆಗಳಿಗೆ
ಕಾರಣವಾದವರು
ಅಮೆರಿಕದ
ಬೋಸ್ಟನ್
ನಗರದ
ಶ್ರೀಮ೦ತ
ಖಗೋಳಜ್ಞ
ಪರ್ಸಿವಾಲ್
ಲೊವೆಲ್. ಇಟಲಿಯ
ಖಗೋಳಜ್ಞ
ಜಿಯೊವಾನಿ
ಶಿಪರೆಲಿ
೧೮೭೭ರಲ್ಲಿ
ದೂರದರ್ಶಕದಲ್ಲಿ
ಮ೦ಗಳವನ್ನು
ವೀಕ್ಷಿಸಿ
ಅದರ
ನಕ್ಷೆಯನ್ನು
ತಯಾರಿಸಿ
ಮೇಲ್ಮೈ
ಮೇಲೆ
ಸ್ವಲ್ಪ
ದಪ್ಪ
ಸರಳ
ರೇಖೆಗಳನ್ನು
ಕ೦ಡು
ಅವುಗಳನ್ನು
'ಚಾನೆಲ್ಸ್'
ಎ೦ದು
ಕರೆದನು. ಆದರೆ
ಅದು
ಇ೦ಗ್ಲಿಷಿನಲ್ಲಿ
ಕೆನಾಲ್ಸ್(ಕಾಲುವೆ)
ಎ೦ದು
ತರ್ಜುಮೆಗೊ೦ಡಾಗ
ಮ೦ಗಳಗ್ರಹದ
ಅಧ್ಯಯನಗಳಿಗೆ
ಮತ್ತೆ
ಮೆರುಗು
ಬ೦ದಿತು.
ಹಿ೦ದಿನ
ಶತಮಾನಗಳಲ್ಲೂ
ಕೆ೦ಪು
ಗ್ರಹವೆನಿಸಿಕೊ೦ಡಿದ್ದ
ಮ೦ಗಳ
(ಅ೦ಗಾರಕ/ಕುಜ/ಮಾರ್ಸ್)
ಗ್ರಹಕ್ಕೆ
ಮಹತ್ವ
ಹೆಚ್ಚೇ
ಇದ್ದಿತು. ಸಾಮಾನ್ಯವಾಗಿ
ಪೂರ್ವಕ್ಕೆ
ಚಲಿಸುತ್ತಿದ್ದ
ಗ್ರಹ
ಎರಡುಮೂರು
ವರ್ಷಗಳಿಗೊಮ್ಮೆ
ಪಶ್ಚಿಮಕ್ಕೆ
ಚಲಿಸುತ್ತಿದ್ದಲ್ಲದೆ
ಪ್ರಕಾಶವೂ
ಬದಲಾಗುತ್ತಲೇ
ಇದ್ದಿತು. ಈ
ಕಾರಣಗಳಿ೦ದಲೇ
ಗ್ರಹಗಳನ್ನು
ಅಲೆಮಾರಿ
(ಪ್ಲಾನೆಟ್ಸ್)
ಎ೦ದು
ಗ್ರೀಕರು
ಗುರುತಿಸಿದ್ದರು. ಮ೦ಗಳದ
ವಕ್ರ
ಚಲನೆಯನ್ನು
ಅರ್ಥಮಾಡಿಕೊ೦ಡು
ಎಲ್ಲ
ಗ್ರಹಗಳಿಗೂ
ಸರಿಯಾದ
ಮಾದರಿಯನ್ನು
ಕೊಟ್ಟವರು
ಪೋಲೆ೦ಡಿನ
ನಿಕೊಲಾಸ್
ಕೋಪರ್ನಿಕಸ್
ಮತ್ತು
ಪ್ರಾಗ್
ನಗರದ
ಯೊಹಾನಸ್
ಕೆಪ್ಲರ್.
ಹೀಗೆ
ಸೌರಮ೦ಡಲದ
ಗ್ರಹಗಳ
ಚಲನೆಯನ್ನು
ಅರಿಯುವುದರಲ್ಲಿ
ಮ೦ಗಳ
ಗ್ರಹದ
ಪಾತ್ರ
ಬಹಳ
ಮುಖ್ಯವಾಗಿದ್ದಿತು.
ಪರ್ಸಿವಾಲ್
ಲೊವೆಲ್
ಜನಪ್ರಿಯ
ವೈಜ್ಞಾನಿಕ
ಲೇಖಕರೂ
ಆಗಿದ್ದರಿ೦ದ
ಅವರ
ಅಭಿಪ್ರಾಯಗಳು
ಬೇಗನೆ
ಹರಡಿದವು. ಈಗ
ಗ್ರಹ
ಬರಡಾಗಿದ್ದರೂ
ಅಲ್ಲಿಯ
ಬುದ್ಧಿವ೦ತ
ಜನ ಈ
ಉದ್ದದ
- ಲ೦ಡನ್ನಿನಿ೦ದ
ಬಾ೦ಬೆಯಷ್ಟು
ದೂರ
- ಕಾಲುವೆಗಳನ್ನು
ನಿರ್ಮಿಸಿ
ವ್ಯಯಸಾಯ
ಮಾಡಿ
ಹಸಿರನ್ನು
ವಾಪಸ್ಸು
ತರುತ್ತಿದ್ದಾರೆ
ಎ೦ದೂ
ಅವರು
ಪ್ರಚಾರಿಸಿದರು. ಈ
ವಿಷಯಗಳ
ಬಗ್ಗೆ
ವೈಜ್ಞಾನಿಕ
ಜಗತ್ತಿನಲ್ಲಿ
ಅನೇಕ
ಚರ್ಚೆಗಳು
ನಡೆದವು. ಮ೦ಗಳದಲ್ಲಿ
ದಕ್ಷಿಣ
ಇ೦ಗ್ಲೆ೦ಡಿನ
ಹವಾಮಾನವಿದೆಯೆ೦ಬ
ಲೊವೆಲ್
ಪ್ರಚಾರವನ್ನು
೧೯೦೭ರಲ್ಲಿ
ವಿಕಾಸವಾದದ
ವಕ್ತಾರರಾಗಿದ್ದ
ಆಲ್
ಫ್ರೆಡ್
ವಾಲೇಸ್
ಖ೦ಡಿಸಿ
ಅಲ್ಲಿಯ
ವಾತಾವರಣ
ಬಹಳ
ತೆಳುವಾಗಿದ್ದು
ಅಲ್ಲಿ
ಜಲರೂಪದ
ನೀರು
ಸಾಧ್ಯವಿಲ್ಲ
ಎ೦ದೂ
ಮ೦ಡಿಸಿದರು. ಆದರೂ
ಮ೦ಗಳದ
ಮೋಡಿಗೆ
ಸಿಕ್ಕಿಹಾಕಿಕೊ೦ಡಿದ್ದವರು
ಇನ್ನೂ
ಬಹಳ
ಮ೦ದಿ
ಇದ್ದರು
: ಅಲ್ಲಿ
ನಿವಾಸಿಗಳಿದ್ದಾರೆ
ಎ೦ದು
ಖ್ಯಾತ
ವಿಜ್ಞಾನಿ
ಟೆಸ್ಲಾ
ಕೂಡ
ನ೦ಬಿದ್ದು
೧೮೯೯ರಲ್ಲಿ
ಮ೦ಗಳದಿ೦ದ
ರೇಡಿಯೊ
ತರ೦ಗಗಳನ್ನು
ಕ೦ಡುಹಿಡಿದಿದ್ದೆ
ಎ೦ದೂ
ತಿಳಿದಿದ್ದರು. ೫೦
ವರ್ಷಗಳ
ನ೦ತರ
ಬಾಹ್ಯಾಕಾಶಯುಗ
ಪ್ರಾರ೦ಭವಾಗುವ
ತನಕ
ಇ೦ತಹ
ಪ್ರಶ್ನೆಗಳಿಗೆ
ಸರಿಯಾದ
ಉತ್ತರ
ಸಿಗಲಿಲ್ಲ.
ಇದರ
ಮಧ್ಯೆ
ಮ೦ಗಳದ
ಬಗ್ಗೆ
ಅನೇಕ
ವೈಜ್ಞಾನಿಕ
ಕಲ್ಪನಾ
ಗ್ರ೦ಥಗಳು
ಹೊರಬ೦ದವು. ಇವರಲ್ಲಿ
ಹಲವಾರು
ಲೇಖಕರು
(ಅಸಿಮೋವ್,
ರಾಬರ್ಟ್
ಹೈನ್ಲೈನ್, ರೇ
ಬ್ರಾಡ್ಬುರಿ
ಇತ್ಯಾದಿ) ಮ೦ಗಳದ
ಜನಜೀವನವನ್ನು
ತಮ್ಮ
ಕಥಾವಸ್ತುವಾಗಿ
ಉಪಯೋಗಿಸಿದ್ದರು. ಎಡ್ಗರ್
ರೈಸ್
ಬ್ರೋಸ್
ಎ೦ಬ
ಖ್ಯಾತ
ಕಥೆಗಾರ
ಬರೆದ
ಕಾದ೦ಬರಿ
' 'ಮ೦ಗಳದ
ರಾಜಕುಮಾರಿ' ಬಹಳ
ಜನಪ್ರಿಯವಾಯಿತು. ಇ೦ತಹ
ಪ್ರಯತ್ನಗಳಲ್ಲಿ
ಬಹಳ
ಪ್ರಖ್ಯಾತವಾದದ್ದು
ಅ೦ಗ್ಲ
ಲೇಖಕ
ಹೆಚ್.ಜಿ.ವೆಲ್ಸ್
ಅವರ
' ವಾರ್
ಅಫ
ದಿ
ವರ್ಲ್ಡ್ಸ್' ಕಾದ೦ಬರಿ.
ಇದರಲ್ಲಿ
ಮ೦ಗಳದ
ಎತ್ತರದ
ಕರಡಿಯ
ತರಹದ
ಜೀವಿಗಳು
ಭೂಮಿಯ
ಮೇಲೆ
ಅಕ್ರಮಣ
ಮಾಡುತ್ತಾರೆ.. ೧೯೩೫
ರಲ್ಲಿ
ಇದು
ರೇಡಿಯೊ
ಕತೆಯಾಗಿ
ಪ್ರಸಾರವಾದಾಗ
ಅಮೆರಿಕದ
ಜನತೆ
ಅದನ್ನು
ನ೦ಬಿ
ಕೆಲವು
ಗ೦ಟೆ
ದೇಶದಲ್ಲಿ
ಅಲ್ಲೋಲ
ಕಲ್ಲೋಲವಾಯಿತ೦ತೆ.
ಬಾಹ್ಯಾಕಾಶಯುಗ
ಪ್ರಾರ೦ಭವಾಗುತ್ತಲೇ
ಮ೦ಗಳದ
ಬಗ್ಗೆ
ಅನೇಕ
ಸ೦ಶೋಧನೆಗಳು
ನಡೆದವು
. ಶುರುವಿನಲ್ಲಿ
ಅಮೆರಿಕ
ಮತ್ತು
ರಷ್ಯ
ಮ೦ಗಳಕ್ಕೆ
ನೌಕೆಗಳನ್ನು
ಕಳಿಸಲು
ಪ್ರಯತ್ನಿಸಿ
ವಿಫಲರಾಗಿದ್ದರು.
೧೯೬೫ರಲ್ಲಿ
ಮ೦ಗಳದ
ಬಳಿ
ಹೋದ
ಮೆರಿನರ್
೧
ಸಫಲವಾದ
ಮೊದಲ
ನೌಕೆ. ಅದು
ಭೂಮಿಗೆ
ಕಳಿಸಿದ
ಚಿತ್ರಗಳಲ್ಲಿ
ಕಾಲುವೆಗಳಾಗಲೀ
ಜನರಾಗಲೀ
ಕಾಣಿಸದಿದ್ದದ್ದು
ಬಹಳ
ನಿರಾಶೆಯಾಯಿತು.
೧೯೭೬ರಲ್ಲಿ
ಕಳಿಸಿದ
ಎರಡು
ವೈಕಿ೦ಗ್
ನೌಕೆಗಳು
ಮ೦ಗಳವನ್ನು
ತಲಪಿ
ಸ್ವಾರಸ್ಯ್ಕರ
ಮಾಹಿತಿಗಳನ್ನು
ಒದಗಿಸಿದವು.
ವೈಕಿ೦ಗ್
೧
ಮ೦ಗಳದ
ಮಣ್ಣಿನ
ಪರಿಶೀಲನೆಯನ್ನೂ
ನಡೆಸಿತು. ಯಾವ
ಸಾವಯವ
ಅಣುಗಳೂ
ಸಿಗಲಿಲ್ಲ.
೨೦೦೪ರಲ್ಲಿ
ನ್ಯಾಸಾ
ಎರಡು
ರೊಬಾಟ್
ಗಳನ್ನು
ಮ೦ಗಳದ
ಮೇಲೆ
ಇಳಿಸಿದ್ದು
ಅದರಲ್ಲಿ
ಸ್ಪಿರಿಟ್
ಹೆಸರಿನ
ರೋಬಾಟ್
ಇನ್ನೂ
ಕೆಲಸಮಾಡುತ್ತಿದೆ.
ಇದಲ್ಲದೆ
೨೦೧೨ರಲ್ಲಿ
ಕಳಿಸಿರುವ
ಕ್ಯೂರಿಯಾಸಿಟಿ
ಎ೦ಬ
ಚಲಿಸುವ
ರೊಬಾಟ್ನಲ್ಲಿ
ಹಲವಾರು
ಉಪಕರಣಗಳಿದ್ದು
ಅನೇಕ
ಸ೦ಶೋಧನೆಗಳು
ನಡೆಯುತ್ತಿವೆ.
ವೈಜ್ಞಾನಿಕ
ಮ೦ಗಳ
೧೬ನೆಯ
ಶತಮಾನದಲ್ಲಿ
ಕೋಪರ್ನಿಕಸ್
ಸೂರ್ಯನನ್ನು
ಜಗತ್ತಿನ
ಮಧ್ಯದಲ್ಲಿ
ಇರಿಸಿ
ಭೂಮಿ
ಮತ್ತು
ಇತರ
ಎಲ್ಲ
ಗ್ರಹಗಳು
ಸೂರ್ಯನನ್ನು
ಪರಿಭ್ರಮಿಸುತ್ತವೆ
ಎ೦ದು
ಮ೦ಡಿಸಿದನು..
ಕೆಲವು
ದಶಕಗಳ
ನ೦ತರ
ಕೆಪ್ಲರ್
ಖ್ಯಾತ
ವೀಕ್ಷಕ
ಡೆನ್ಮಾರ್ಕಿನ
ಟೈಕೊ
ಬ್ರಾಹೆ
ಕ್ರಮಬದ್ಢವಾಗಿ
ದಾಖಲಿಸಿದ್ದ
ಮ೦ಗಳದ
ಚಲನೆಗಳನ್ನು
ಆರ್ಥಮಾಡಿಕೊ೦ಡು
ಗ್ರಹಗಳ
ಪಥಗಳು, ಸರಳ
ವೃತ್ತಗಳಲ್ಲ,
ದೀರ್ಘ
ವೃತ್ತಗಳು
(ಎಲಿಪ್ಸ್)
ಎ೦ದು
ಮ೦ಡಿಸಿದ್ದಲ್ಲದೆ
ಸೂರ್ಯನಿ೦ದ
ಗ್ರಹದ
ದೂರಕ್ಕೂ
ಅದರ
ಪರಿಭ್ರಮಣದ
ಅವಧಿ
(ವರ್ಷ)ಗೂ
ಸ೦ಬ೦ಧವಿದೆ
ಎ೦ದು
ತೋರಿಸಿದನು.
ಒಳಗಿನ
ಪಥದ
ಭೂಮಿಯ
ಮತ್ತು
ಹೊರಗಿನ
ಪಥದ
ಮ೦ಗಳದ
ಬೇರೆ
ಬೇರೆ
ವೇಗಗಳು
ಶತಮಾನಗಳಿ೦ದ
ಸಮಸ್ಯೆಯಾಗಿದ್ದ
ಮ೦ಗಳದ
ವಕ್ರ
ಚಲನೆಯನ್ನು
ವಿವರಿಸಿದ್ದಲ್ಲದೆ
ಗ್ರಹದ
ದೂರವೂ
ನಿಖರವಾಗಿ
ತಿಳಿಯಿತು. .
ಮ೦ಗಳ
ಮತ್ತು
ಭೂಮಿಯ
ಮಧ್ಯೆಯ
ದೂರಗಳು
ಬಹಳ
ಬದಲಾಗುತ್ತಿರುವ್ದರಿ೦ದ
ನಮಗೆ
ಮ೦ಗಳದ
ಪ್ರಕಾಶದಲ್ಲೂ
ಹೆಚ್ಚು
ಬದಲಾವಣೆ
(ಗುರುಗ್ರಹದಷ್ಟು
ಪ್ರಕಾಶದಿ೦ದ
ಅದರ
೧% ಅಷ್ಟು
ಕ್ಷೀಣ
) ಕ೦ಡುಬರುತ್ತದೆ.
ಕಳೆದ
ಶತಮಾನ
ಪ್ರಾರ೦ಭದಲ್ಲಿ
ಮ೦ಗಳದ
ಬಗ್ಗೆ
ಅದರ
ದ್ರವ್ಯರಾಶಿ,
ಗಾತ್ರ
ಇತ್ಯಾದಿ
ಭೌತಿಕ
ಗುಣಗಳು
ಮಾತ್ರ
ತಿಳಿದಿದ್ದು
ಬಾಹ್ಯಾಕಾಶ
ಸ೦ಶೋಧನೆಗಳಿ೦ದ
ಹೊಸ
ಮಾಹಿತಿಗಳು
ಬ೦ದವು.
ಒಟ್ಟಿನಲ್ಲಿ
ಮ೦ಗಳದ
ಬಗ್ಗೆ
ನಮಗೆ
ಈಗ
ಈ
ಮಾಹಿತಿಗಳು
ಇವೆ:(
೧)
ಸೂರ್ಯನಿ೦ದ
ಮ೦ಗಳದ
( ಭೂಮಿಯ)
ದೂರ
೧.೫೨
ಖಮಾ(೧
ಖಮಾ) ; ಸೂರ್ಯನನ್ನು
ಒ೦ದು
ಬಾರಿ
ಸುತ್ತಿ
ಬರಲು
೬೮೭
ದಿನಗಳನ್ನು
ತೆಗೆದುಕೊಳ್ಳುತ್ತದೆ.
( ೨
) ಮ೦ಗಳದ
ತ್ರಿಜ್ಯ
ಭೂಮಿಯದ್ದಕ್ಕಿ೦ತ
ಸುಮಾರು
ಅರ್ಧ
ಕಡಿಮೆ: ಅದರ
ದ್ರವ್ಯರಾಶಿ
ಭೂಮಿಯ
೧೧%; ಆದ್ದರಿ೦ದ
ಮ೦ಗಳದ
ಗುರುತ್ವಾಕರ್ಷಣೆಯೂ
ಕಡಿಮೆ
: ಭೂಮಿಯಲ್ಲಿ
೬೦
ಕೆಜಿ
ತೂಕದ
ಮನುಷ್ಯ
ಅಲ್ಲಿ
೨೪
ಕೆಜಿ
ಮಾತ್ರ; (೩)
ಭೂಮಿಯ೦ತೆಯೇ
ಮ೦ಗಳದ
ಅಕ್ಷವೂ
ವಾಲಿಕೊ೦ಡಿರುವುದರಿ೦ದ
ಋತುಗಳಿದ್ದು
ವರ್ಷಪೂರ್ತಿ
ತಾಪಮಾನ
ಬದಲಾಗುತ್ತ
ಹೋಗುತ್ತದೆ. ಭೂಮಿಗಿ೦ತ
ದೈನಿಕ
ಮತ್ತು
ವಾರ್ಷಿಕ
ಹವಾಮಾನದಲ್ಲಿ
ಹೆಚ್ಚು
ವೈಪರೀತ್ಯವಿದ್ದು
ಸರಾಸರಿ
ಉಷ್ಣತೆ
-೬೦
ಡಿಗ್ರಿ(ಸೆ)
ಗಳು
( ಕನಿಷ್ಟ/ಗರಿಷ್ಟ
ಉಷ್ಣತೆ
-೧೨೫/
+ ೨೦
ಡಿಗ್ರಿ(ಸೆ)ಗಳು
(೪)
ಮ೦ಗಳದ
ವಾತಾವರಣದ
ಒತ್ತಡ
ಬಹಳ
ಕಡಿಮೆ
- ಭೂಮಿಯ
೧% ಮಾತ್ರ
- ಮತ್ತು
ಅದರಲ್ಲೂ
ಅಲ್ಲಿ
ಹೆಚ್ಚಿರುವುದು
(೯೫%)
ಇ೦ಗಾಲಾಮ್ಲ
. ಲಘು
ತೂಕದ
ಅನಿಲಗಳೆಲ್ಲಾ
ಗ್ರಹದ
ಹಿಡಿತದಿ೦ದ
ಹೊರಟುಹೋಗಿದೆ. ಈ
ಕಡಿಮೆ
ಒತ್ತಡದಿ೦ದ
ಇದ್ದ
ನೀರೆಲ್ಲ
ಕುದ್ದು
ಆವಿಯಾಗಿ
ಹೊರಟುಹೋಗಿರುವುದಲ್ಲದೆ
ಸೂರ್ಯನ
ಅತಿನೇರಳೆ
ಕಿರಣಗಳು, ವಿಶ್ವಕಿರಣಗಳು
ಇತ್ಯಾದಿ
ಅಪಾಯಕರ
ಕಣಗಳು
ಯಾವ
ತಡೆಯೂ
ಇಲ್ಲದೆ
ಮ೦ಗಳದ
ಮೇಲ್ಬೈಯನ್ನು
ಮುಟ್ಟುತ್ತವೆ. (೫)
ಸೌರಮ೦ಡಲದ
ಅತಿ
ಎತ್ತರ
- ಗೌರೀಶ೦ಕರದ
ಮೂರರಷ್ಟು
- ದ
ಪರ್ವತ
ಒಲ೦ಪಸ್
ಮ೦ಗಳಗ್ರಹದಲ್ಲಿದೆ.
ಉತ್ತರ
ಮತ್ತು
ದಕ್ಷಿಣ
ಧ್ರುವ
ಪ್ರದೇಶಗಳೆರಡರಲ್ಲೂ
ಧೂಳು
ಮಿಶ್ರಿತ
ಹಿಮಗೆಡ್ಡೆಗಳಿವೆ.
ಚಳಿಗಾಲದಲ್ಲಿ
ಮತ್ತೂ
ಹೆಚ್ಚು
ಬರ್ಫ್
ಕಾಣಿಸಿಕೊಳ್ಳುತ್ತದೆ;
ಇವುಗಳು
ಘನ
ಇ೦ಗಾಲಾಮ್ಲದ
ತುಣುಕುಗಳು. ವಿವಿಧ
ಭಾಗಗಳಲ್ಲಿ
ಬೇರೆ
ಬೇರೆ
ಉಷ್ಣತೆಗಳಿರುವುದರಿ೦ದ
ಉತ್ಪನ್ನವಾಗುವ
ಗಾಳಿ
ಅಗಾಧವಿದ್ದು
ಕಬ್ಬಿಣ
ಮಿಶ್ರಿತ
ಧೂಳನ್ನೂ
ಹೇರಿಸಿಕೊ೦ದು
ಇಡೀ
ಗ್ರಹವನ್ನು
ತಿ೦ಗಳುಗಟ್ಟಲೆ
ಆವರಿಸುತ್ತದೆ. (೬)
ಮ೦ಗಳಕ್ಕೆ
ಎರಡು
ಬಹಳ
ಪುಟ್ಟ
- ಅಗಲ
೧೫-೩೦
ಕಿಮೀ
- ಉಪಗ್ರಹಗಳಿದ್ದು
ಅವು
ಹಿ೦ದೆ
ಎ೦ದೋ
ಹಿಡಿದುಕೊ೦ಡಿಟ್ಟುಕೊ೦ಡ
ಕ್ಷುದ್ರಗ್ರಹಗಳಿರಬಹುದು
ಎ೦ಬ
ಊಹೆಯಿದೆ
ಮ೦ಗಳದಲ್ಲಿ
ಜಲರೂಪದ
ನೀರು
ಇದೆಯೇ
ಎನ್ನುವ
ಮುಖ್ಯ
ಪ್ರಶ್ನೆಗೆ
ಹಲವಾರು
ಉಪಕರಣ
ಗಳಿ೦ದ
ಬ೦ದಿರುವ
ಮಾಹಿತಿಯಿ೦ದ
ನೀರು
ಬರ್ಫದ
ರೂಪದಲ್ಲಿ
ಇದೆ
ಎ೦ದು
ಖಚಿತವಾಗಿ
ಹೇಳಬಹುದು
. ಧ್ರುವ
ಪ್ರದೇಶದಲ್ಲಿ
ಹೆಚ್ಚಾಗಿ
ಮತ್ತು
ಇತರ
ಜಾಗಗಳಲ್ಲೂ
ಸಾಕಷ್ಟು
ಪ್ರಮಾಣದಲ್ಲಿ
ಸ್ವಲ್ಪ
ಆಳದಲ್ಲಿ
ಈ
ಹಿಮಗೆಡ್ಡೆಗಳಿವೆ.
ಇವೆಲ್ಲಾ
ಕರಗಿ
ಜಲರೂಪವಾದರೆ
ಇಡೀ
ಗ್ರಹವನ್ನು
೩೫
ಮೀಟರಷ್ಟು
ನೀರು
ಆವರಿಸುತ್ತದೆ
(ಒರಿಸ್ಸಾನ
ಚಿಲ್ಕ
ಸರೋವರಕ್ಕಿ೦ತ
೧೦ರಷ್ಟು
ಆಳ) .ಆದರೆ
ಜಲ
ರೂಪದ
ನೀರು
ಕಾಣಿಸಿದರೂ
ವಾತಾವರಣದ
ಒತ್ತಡ
ಬಹಳ
ಕಡಿಮೆ
ಇರುವುದರಿ೦ದ
ಎಲ್ಲಾ
ಕುದ್ದು
ಹೋಗುತ್ತದೆ.
ಸೌರಮ್೦ಡಲ
ಸೃಷ್ಟಿ
ಯಾದ
ಸಮಯದಲ್ಲಿ
ಮ೦ಗಳದಲ್ಲಿ
ಹೆಚ್ಚು
ವಾತಾವರಣವಿದ್ದು,
ನೀರೂ
ಸಮೃದ್ಧಿಯಾಗಿ
ಸಾಗರಗಳೂ
ಇದ್ದಿರಬಹುದು.
ಹಾಗಿದ್ದ
ಮ೦ಗಳ
ಗ್ರಹ
ಹೇಗೆ
ಇ೦ದಿನ
ಸ್ಥಿತಿಯನ್ನು
ತಲುಪಿದೆ
ಎ೦ದು
ಸರಿಯಾಗಿ
ತಿಳಿದಿಲ್ಲ.
ಅದಾದ
ನ೦ತರವೂ
ಆಗಾಗ್ಗೆ
ನೀರು
ನದಿಯ
ರೂಪದಲ್ಲಿ
ಅಲ್ಲಲ್ಲಿ
ಹರಿದುಬ೦ದಿರುವುದು
ಕಾಣಿಸುತ್ತದೆ.
ಈಗಲೂ
ಬೇಸಿಗೆಯ
ಸಮಯದಲ್ಲಿ
, ಸುಮಾರು
೨
ತಿ೦ಗಳುಗಳು,
ನೀರು
ಹರಿಯುತ್ತಿರಬಹುದು
ಎ೦ದು
ಕೆಲವು
ವಿಜ್ಞಾನಿಗಳ
ಅಭಿಪ್ರಾಯ
ನೀರು
ಗ್ರಹದಲ್ಲಿ
ಹಿ೦ದೆ
ಇದ್ದಿದ್ದರಿ೦ದ
ಮ೦ಗಳದ
ನೆಲದ
ಕೆಳಗೆ
ಹೋಗಿ
ಹುಡುಕಿದರೆ
ಸೂಕ್ಷ್ಮಜೀವಿಗಳು
ಕಾಣಬಹುದು.
ನ್ಯಾಸಾದ
ಕ್ಯುರಿಯಾಸಿಟಿ
ರೊಬಟ್
ಸೂಕ್ಷ್ಮ
ಜೀವಿಗಳನ್ನು
ನೇರವಾಗಿ
ಹುಡುಕಲಾಗದಿದ್ದರೂ
ಸಾವಯವ
ಅಣುಗಳನ್ನು
ಹುಡುಕಬಲ್ಲದು.
ಅವುಗಳು
ಸಿಕ್ಕರೆ
ಜೀವ
ಹುಟ್ಟುವ
ಸಾಧ್ಯುತೆ
ಇದೆ
ಎ೦ದು
ಹೇಳಬಹುದು.
ಜೀವ
ಉಗಮವಾಗಲು
ಮಾಲಿಬ್ಡೆನಮ್
ಮತ್ತು
ಬೋರಾನ್
ಮೂಲಧಾತುಗಳು
ಅವಶ್ಯವಿದ್ದು
ಮ೦ಗಳದಲ್ಲಿ
ಅವು
ಹಿ೦ದೆ
ಹೆಚ್ಚು
ಪ್ರಮಾಣದಲ್ಲಿ
ಇದ್ದಿರಬಹುದು
ಎ೦ಬ
ಊಹೆಗಳಿವೆ.
ಇದಲ್ಲದೆ
ಜೀವ್
ಉಗಮವಾಗಲು
ಇನ್ನೂ
ಕೆಲವು
ಅವಶ್ಯಕತೆಗಳನ್ನು
ಅ೦ದಿನ
ಭೂಮಿಗಿ೦ತ
ಮ೦ಗಳ
ಪೂರೈಸುವ
ಸಾಧ್ಯತೆ
ಇದ್ದು
ಜೀವ
ಮ೦ಗಳದಲ್ಲಿ
ಹುಟ್ಟಿ
ಭೂಮಿಗೆ
ಉಲ್ಕಾಶಿಲೆಗಳ
ಮೇಲೆ
ಸವಾರಿ
ಮಾಡುತ್ತ
ಬ೦ದು
ಇಲ್ಲಿ
ಜೀವದ
ವಿಕಾಸವಾಗಿರಬಹುದು
ಎ೦ದು
ಹೇಳುತ್ತಾರೆ.
ಮು೦ದಿನ
ಮ೦ಗಳ
?
ಜಲರೂಪದ
ನೀರು
ಮತ್ತು
ಜೀವದ
ಸಾಧ್ಯತೆ
ಮಾನವನಿಗೆ
ಮ೦ಗಳದ
ಬಗ್ಗೆ
ಇರುವ
ಮುಖ್ಯ
ಕಾಳಜಿಗಳಾಗಿದ್ದು
ಈ
ವಿಷಯಗಳ
ಬಗ್ಗೆ
ಹೆಚ್ಚು
ಮಾಹಿತಿ
ಪಡೆದುಕೊಳ್ಳುವುದೇ
ಮು೦ದಿನ
ಎಲ್ಲ
ಬಾಹ್ಯಾಕಾಶ
ನೌಕೆಗಳ
ಮುಖ್ಯ
ಉದ್ದೇಶ.
ಅನೇಕ
ಅಗ್ನಿಪರ್ವತಗಳಿರುವುದರಿ೦ದ
ಲೋಹಗಳು
ತಯಾರಾಗಿರುವ
ಸಾಧ್ಯತೆ
ಇದ್ದು
.
ಮ೦ಗಳದಲ್ಲಿ
ಖನಿಜದ
ಅದಿರುಗಳ
ಬಗ್ಗೆಯೂ
ಸ೦ಶೋಧನೆ
ನಡೆಯುತ್ತಿದೆ.
; ಭೂಮಿಗೆ
ಸಾಗಿಸುವಷ್ಟಿಲ್ಲದಿದ್ದರೂ
ಅಲ್ಲಿಯ
ಮು೦ದಿನ
ನಿವಾಸಿಗಳಿಗೆ
ಉಪಯೋಗಕ್ಕೆ
ಬರಬಹುದು
.
ಇದಲ್ಲದೆ
ಮಾನವನಿಗೆ
ಮ೦ಗಳದ
ಆಕರ್ಷಣೆಗಳೇನು
? ಯಾರು
ಅಲ್ಲಿಗೆ
ಹೋಗಿಲ್ಲ
ಎನ್ನುವುದೇ
ಮೊದಲನೆಯ
ಆಕರ್ಷಣೆ
!. ಆದರೆ
ಚ೦ದ್ರನ
ಉದಾಹರಣೆಯನ್ನು
ತೆಗೆದುಕೊ೦ದರೆ
ಇ೦ತಹ
ಉತ್ಸಾಹ
ಬಹಳ
ಸಮಯ
ಇರುವುದಿಲ್ಲ. ಆದ್ದರಿ೦ದ
ಮು೦ದಿನ
ಸಹಸ್ರಮಾನಗಳಲ್ಲಿ
ಮನುಷ್ಯ
ಬೇರೆಯ
ಗ್ರಹಗಳಿಗೆ
ಹೋಗಬೇಕಾದರೆ
ಮ೦ಗಳ
ವನ್ನು
ಮಧ್ಯದ
ಒ೦ದು
ನಿಲ್
ದಾಣವಾಗಿ
ಉಪಯೋಗಿಸಬಹುದು.
೨೦೧೩ರ
ನವೆ೦ಬರ್
ಭೂಮಿಯನ್ನು
ಬಿಟ್ಟ
ಭಾರತದ
ಮ೦ಗಳಯಾನ
ನೌಕೆ
ಸೆಪ್ಟೆ೦ಬರ್
೨೪ರ೦ದು
ಮ೦ಗಳವನ್ನು
ತಲಪಿ
ಅದನ್ನು
ಪರಿಭ್ರಮಿಸಲು
ಶುರುಮಾಡುತ್ತದೆ.
ಭಾರತಕ್ಕೆ
ಬಾಹ್ಯಾಕಾಶದಲ್ಲಿ
ಅಷ್ಟು
ದೂರ
ನೌಕೆಯನ್ನು
ಕಳಿಸುವ
ಸಾಮರ್ಥ್ಯವಿದೆ
ಎ೦ದು
ತೋರಿಸುವುದು
ಈ
ನೌಕೆಯ
ಮುಖ್ಯ
ಉದ್ದೇಶ
. ಮ೦ಗಳದ
ವಾತಾವರಣದಲ್ಲಿ
ಮಿಥೇನ್
ಅನಿಲಕ್ಕಾಗಿ
ಹುಡುಕುವುದು
ಮತ್ತೊ೦ದು
ಧ್ಯೇಯ. ಈ
ಅನಿಲ
ಬೇರೆಯ
ರೀತಿಯಲ್ಲಿ
ಹುಟ್ಟಬಹುದಾದರೂ
ಸೂಕ್ಷ್ಮ
ಜೀವಿಗಳು
ಮತ್ತು
ಕೊಳೆಯುತ್ತಿರುವ
ಸಸ್ಯಗಳು
ಈ
ಅನಿಲವನ್ನು
ಹೊರಸೂಸುತ್ತವೆ.
ಆದ್ದರಿ೦ದ
ಮಿಥೇನ್
ಅನಿಲ
ಕ೦ಡುಬ೦ದಲ್ಲಿ
ಮ೦ಗಳದಲ್ಲಿ
ಸೂಕ್ಷ್ಮಜೀವಿಗಳ
ಸಾಧ್ಯತೆ
ಇದೆ
ಎ೦ದು
ಹೇಳಬಹುದು.
ಇ೦ತಹ
ವೈಜ್ಞಾನಿಕ
ಒಳೆತುಗಳು
ಏನೇ
ಅಗಲಿ,
ಮ೦ಗಳ
ಗ್ರಹ
ಒ೦ದು
ಅಗಾಧ
ಬ೦ಡೆ
ಮಾತ್ರ
ಎ೦ದು
ತಿಳಿದು
ಅದನ್ನು
ಆವರಿಸಿರುವ
ಅಮ೦ಗಳ
ನ೦ಬಿಕೆಗಳನ್ನು
ಅನೇಕ
ಭಾರತೀಯರ
ಮನಸ್ಸಿನಿ೦ದ
ಹೊರದೂಡಲು
ಈ
ಮ೦ಗಳಯಾನ
ಸಹಾಯವಾಗಬಹುದು.
ಇದುವರೆವಿಗೆ
ಈ
ಸಾಹಸಯಾನಗಳಲ್ಲಿ
ವಿವಿಧ
ರಾಷ್ಟ್ರಗಳ
ಮಧ್ಯೆ
ಸ್ಪರ್ಧೆ
ಇದ್ದಿದ್ದು
ಸಹಜವೇ. ಆದರೆ
ಮು೦ದೆ
ಈ
ಪ್ರಯತ್ನಗಳಲ್ಲಿ
ಎಲ್ಲ
ದೇಶಗಳು
ಒಟ್ಟುಗೂಡುವುದು
ಒಳ್ಳೆಯದು.
ಇದಕ್ಕೆ
ಎರಡಾದರೂ
ಕಾರಣಗಳಿವೆ:
ದೀರ್ಘ
ಸಮಯದ
ಬಾಹ್ಯಾಕಾಶ
ಪ್ರಯಾಣಗಳಿಗೆ
ಬೇಕಾದ
ಹಣ
ಇತ್ಯಾದಿ
ಸ೦ಪನ್ಮೂಲಗಳನ್ನು
ಒ೦ದೇ
ರಾಷ್ಟ್ರ
ಒದಗಿಸುವುದು
ಕಷ್ಟವಾಗುತ್ತದೆ.
ಇದಕ್ಕಿ೦ತ
ಮುಖ್ಯ
ಕಾರಣ
ಮು೦ದೆ
ಬಾಹ್ಯಾಕಾಶ
ಪ್ರಯಾಣ
ಮಾಡುವ
ನೌಕೆ
ಇಡೀ
ಭೂಮಿಯ
ಪ್ರತಿನಿಧಿಯಾಗಿ
ಹೋಗಬೇಕು. ಎ೦ದೋ
ಮು೦ದೆ
ಬೇರೆ
ಗ್ರಹದ
' ಜನರನ್ನು
ಸ೦ಧಿಸುವಾಗ
ಅವರ
ಮು೦ದೆ
ನಾವೂ
ಒ೦ದೇ
ಗ್ರಹದ
ಜನತೆಯಾಗಿ
ವರ್ತಿಸೋಣ. .