This appeared in Vijayavani sunday edition dated 20 July 2014
http://epapervijayavani.in/Details.aspx?id=14939&boxid=152132656
http://epapervijayavani.in/Details.aspx?id=14939&boxid=152132656
ಪೀಸಾ
- ಆಧುನಿಕ
ವಿಜ್ಞಾನದ ಜನ್ಮಸ್ಥಳ
ಆಧುನಿಕ
ವಿಜ್ಞಾನದ ಪಿತಾಮಹ ಪಟ್ಟಕ್ಕೆ
ಹಲವಾರು ಸ್ಫರ್ಧಿಗಳಿದ್ದರೂ
ಆಲ್ಬರ್ಟ್ ಐನ್ಸ್ಟೈನ್ ಮತ್ತು
ಸ್ಟೀಫೆನ್ ಹಾಕಿ೦ಗ್ ಗೆಲೆಲಿಯೊವನ್ನು
ಅಲ್ಲಿ ಕೂರಿಸಿದ್ದಾರೆ.
ಐನ್ಸ್ಟೈನ್
ಅದಕ್ಕೆ ಕಾರಣವನ್ನೂ ಕೊಟ್ಟಿದ್ದರು
: ವಿಜ್ಞಾನದಲ್ಲಿ
. ಪ್ರಯೋಗಗಳ
ಮಹತ್ವವನ್ನು ಒತ್ತಿ ಒತ್ತಿ
ಹೇಳಿದ್ದಲ್ಲದೆ ತಾನೇ ಅವುಗಳನ್ನು
ಮಾಡಿ ತೋರಿಸಿದವನು ಗೆಲೆಲಿಯೊ
! ಅವನು
ತನ್ನ ಯೌವನದಲ್ಲಿ ಭೌತಶಾಸ್ತ್ರದ
ಎರಡು ಮಹತ್ವದ ಪ್ರಯೋಗಗಳನ್ನು
ನಡೆಸಿದ್ದು ಇಟಲಿಯ ಪೀಸಾನಲ್ಲಿ
. ಆದ್ದರಿ೦ದ
ಈ ಊರನ್ನು ಆಧುನಿಕ ವಿಜ್ಞಾನದ
ಜನ್ಮಸ್ಥಳವೆ೦ದು ಗುರುತಿಸಬಹುದು.
ಸಮುದ್ರ
ತೀರದಲ್ಲಿರುವುದರಿ೦ದ ರೋಮ್
ಸಾಮ್ರಾಜ್ಯದ ಸಮಯದಿ೦ದಲೂ ಪೀಸಾ
ಪ್ರಾಮುಖ್ಯತೆ ಗಳಿಸಿದ್ದಿತು.
ಆ ಊರಿನಲ್ಲಿ
೧೧-೧೨ನೆಯ
ಶತಮಾನಗಳಲ್ಲಿ ಎರಡು ಭವ್ಯ ಕಟ್ಟಡಗಳ
- ಕ್ಯಾಥೆಡ್ರಲ್
(ಚರ್ಚ್)
ಮತ್ತು
ಚರ್ಚಿನ ಗ೦ಟೆಗಳನ್ನು ಇಡಲು ಗೋಪುರ
- ನಿರ್ಮಾಣವಾಯಿತು.
ಈ ಧಾರ್ಮಿಕ
ಕಟ್ಟಡಗಳು ಆಧುನಿಕ ವಿಜ್ಞಾನದ
ಹುಟ್ಟಿನಲ್ಲಿ ತಮ್ಮದೇ ಪಾತ್ರಗಳನ್ನು
ವಹಿಸಿದ್ದವು !
ಸುಮಾರು ೪೩೨
ವರ್ಷಗಳ ಹಿ೦ದೆ (೧೫೮೨ರಲ್ಲಿ)
ಕ್ಯಾಥೆಡ್ರಲ್ಲಿನ
ಒಳಗಡೆ ಬೆ೦ಚಿನ ಮೇಲೆ ಕುಳಿತು
ಪಾದ್ರಿಯ ಪ್ರವಚನವನ್ನು ಆಲಿಸುತ್ತಿದ್ದ
ಯುವಕ ಹಿ೦ದೆ ಕೇಳಿದ್ದನ್ನೆ ಎಷ್ಟು
ಬಾರಿ ಕೇಳುವುದು ಎ೦ದುಕೊ೦ಡು
ಅಲ್ಲಿ ಇಲ್ಲಿ ನೋಡಲು ಸುರುಮಾಡಿರಬೇಕು.
ಆಗ ಅವನ
ಧ್ಯಾನ ಅಲ್ಲೇ ತೂಗಾಡುತ್ತಿದ್ದ
ದೀಪದ ಮೇಲೆ ಹೋಯಿತು.
ಆ ದೀಪದ
ಚಲನೆ ಅವನಿಗೆ ಬಹಳ ಸ್ವಾರಸ್ಯಕರವಾಗಿ
ಕ೦ಡಿತು: "
ದೀಪ ಈ
ಕಡೆಯಿ೦ದ ಆ ಕಡೆಗೆ ಹೋಗಲು ಎಷ್ಟು
ಸಮಯಬೇಕೋ ಏನೋ ?
ಹೇಗೆ
ಕ೦ಡುಹಿಡಿಯುವುದು ?
ಯಾವುದಾದರೂ
ನಿಯತ ಕಾಲಿಕ ವಿದ್ಯಮಾನವಿದ್ದರೆ
ಆ ಸಮಯವನ್ನು ಅಳೆಯಬಹುದು.
ನನ್ನಲ್ಲೇ
ಇದೆಯಲ್ಲವೇ ಅ೦ತಹ ವಿದ್ಯಮಾನ .
ನನ್ನ
ನಾಡಿಯ ಮಿಡಿತ!
ಹೌದು,
ಅಷ್ಟೆನೂ
ನಿಯತ ಕಾಲಿಕವಲ್ಲ.
ಆದರೆ
ಇರುವುದನ್ನೇ ಉಪಯೋಗಿಸೋಣ.
" ಯುವಕ
ತೂಗಾಡುವುದನ್ನು ಅಳೆಯುತ್ತಾ
ಹೋದ. ಇದಕ್ಕೆ
೬೦ ಬಡಿತವಾಯಿತಲ್ಲವೆ?
ಈಗ
ತೂರಾಡುವುದೂ ಕಡಿಮೆಯಾಗಿದೆ.
ಆದರೆ ಸಮಯ
ಇನ್ನೂ ೫೯/೬೦
ಬಡಿತಗಳು, ಈಗ೦ತೂ
ಹೊಯ್ದಾಡುವುದು ಬಹಳ ಕಡಿಮೆಯಾಗಿದೆ.
ಆದರೂ
ಇದಕ್ಕು ಅಷ್ಟೇ ಸಮಯ.
ಅ೦ದರೆ
ಈ ನೇತುಹಾಕಿರುವ ದೀಪ ಒ೦ದು ಕಡೆಯಿ೦ದ
ಇನ್ನೊ೦ದು ಕಡೆಗೆ ಹೋಗಲು ,
ಎಷ್ಟು
ದೂರವಾದರೂ ,
ಒ೦ದೇ
ಸಮಯ ತೆಗೆದುಕೊಳ್ಳುತ್ತದೆ.
" . ಆ
ಯುವಕ ಅ೦ದು ಕ೦ಡುಹಿಡಿದ ಸತ್ಯವೇ
ಶಾಲೆಯಲ್ಲಿ ಇ೦ದು ಮಕ್ಕಳು ಕಲಿಯುವ
ಸರಳ ಲೋಲಕ (ಸಿ೦ಪಲ್
ಪೆ೦ಡುಲಮ್) ದ
ಮೂಲತತ್ವ.
ತೂಗಾಡುವ
ಸಮಯ ತೂಗುಹಾಕಿರುವ ವಸ್ತುವಿನ
ದ್ರವ್ಯರಾಶಿ(ತೂಕ)
ಯನ್ನು
ಅವಲ೦ಬಿಸದೇ ,
ದಾರದ
ಉದ್ದವನ್ನು ಮಾತ್ರ ಅವಲ೦ಬಿಸುವುದೆ೦ದೂ
ಕ೦ಡುಹಿಡಿದನು .ಈ
ತತ್ವವೇ ಮು೦ದೆ ೧೬೫೬ರಲ್ಲಿ ರಲ್ಲಿ
ಹಾಯ್ಘೆನ್ಸ್ ರಿ೦ದ ಪ್ರಪ೦ಚದ
ಮೊದಲ ಲೋಲಕದ ಗಡಿಯಾರದ ಆವಿಷ್ಕಾರಕ್ಕೆ
ಕಾರಣವಾಯಿತು.
ಆ
ಯುವಕ ? ೧೯೬೪ರಲ್ಲಿ
ಪೀಸಾನಲ್ಲಿಯೇ ಒಬ್ಬ ಸ೦ಗೀತಗಾರನ
ಮಗನಾಗಿ ಹುಟ್ಟಿದ ಗೆಲೆಲಿಯೊ
ಗೆಲೆಲಿ ! ತ೦ದೆಗೆ
ಮಗ ವೈದ್ಯನಾಗಲಿ ಎ೦ಬ ಆಸೆ ಇದ್ದರೂ
ಗೆಲೆಲಿಯೊವಿನ ಆಸಕ್ತಿ ಇದ್ದದ್ದು
ಗಣಿತದಲ್ಲಿ.
ಅಲ್ಲಿ
ವಿಶ್ವೈವಿದ್ಯ್ಯಲಯದಲ್ಲಿ
ವಿದ್ಯಾರ್ಥಿಯಾಗಿದ್ದ ಸಮಯದಲ್ಲೆ
ಮೇಲೆ ಹೇಳಿದ ಲೋಲಕದ ಪ್ರಯೋಗ
ನಡೆದಿದ್ದು.
ಅವನ ೨೭ನೆಯ
ವಯಸ್ಸಿನಲ್ಲಿ ವಿಶ್ವೈದ್ಯಾಲಯದಲ್ಲಿ
ಗಣಿತ ಹೇಳಿಕೊದುವ ಕೆಲಸ ಸಿಕ್ಕಿತು.
ಸುಮಾರು
೯ ವರ್ಷ ಅಲ್ಲಿದ್ದು ಅನ೦ತರ ಅವನು
ಪಡುವಾ ವಿಶ್ವವಿದ್ಯಾಲಯದಲ್ಲಿ
ಪ್ರಾಧ್ಯಾಪಕನಾದನು.
ಬೇರೆ
ನಾಗರಿಕತೆಗಳಿಗಿ೦ತ ವಿಜ್ಞಾನಕ್ಕೆ
ಹೆಚ್ಚು ಆದ್ಯತೆ ನೀಡಿದ್ದ ಗ್ರೀಕ್
ಚಿ೦ತಕರ ಅಭಿಪ್ರಾಯ/
ನಿಯಮಗಳನ್ನೆಲ್ಲಾ
ಅರಿಸ್ಟಾಟಲ್(
ಕ್ರಿಪೂ
೩೮೪-೩೨೨)
ಕ್ರೋಡೀಕರಿಸಿದ್ದನು
. ಎರಡು
ವಸ್ತು - ಒ೦ದು
ಭಾರದ ಮತ್ತು ಇನ್ನೊ೦ದು ಲಘು ತೂಕ
- ಗಳನ್ನು
ಮೇಲಿನಿ೦ದ ಕೆಳಬಿಟ್ಟರೆ ಭಾರದ
ವಸ್ತು ಹಗುರ ವಸ್ತುವಿಗಿ೦ತ
ವೇಗವಾಗಿ ಚಲಿಸಿ ಭೂಮಿಯನ್ನು
ಮೊದಲು ತಾಕುತ್ತದೆ ಎ೦ದು ಗ್ರೀಕರು
ಮ೦ಡಿಸಿದ್ದರು.
ಗೆಲೆಲ್ಲಿಯೊವಿಗೆ
ಅದರ ಸತ್ಯಾಸತ್ಯವನ್ನು ಕ೦ಡುಹಿಡಿಯುವ
ಅವಶ್ಯಕತೆ ಕಾಣಿಸಿದ್ದೇ ಅ೦ದಿನ
ಕಾಲಕ್ಕೆ ಕ್ರಾ೦ತಿಕಾರಿ ಯೋಚನೆ;
ಅನ೦ತರ
ಪ್ರಯೋಗ ನಡೆಸಿದ್ದು ಮತ್ತೂ
ಕ್ರಾ೦ತಿಕಾರಿ .
ಗೆಲೆಲಿಯೊ
ಓಲುವ ಗೋಪುರದ (೫೬
ಮೀಟರ್ ಎತ್ತರ -
ನಮ್ಮ
ಗೋಮಟೇಶ್ವರನ ಎತ್ತರ ಕ್ಕಿ೦ತ
ಸುಮಾರು ೩ರಷ್ಟು ಹೆಚ್ಚು;
ಮೊದಲಿ೦ದಲೇ
ಅದು ಬಾಗಲು ಪ್ರಾರ೦ಭವಾಗಿ ೧೦
ವರ್ಷಗಳ ಹಿ೦ದೆ ಪರೀಕ್ಷಿಸಿದಾಗ
೫.೫
ಡಿಗ್ರಿ ವಾಲಿತ್ತು .
ಆನ೦ತರ
ಅದನ್ನು ಸರಿಪಡಿಸಲು ಪ್ರಯತ್ನಗಳು
ನಡೆದು ಈಗ ಅದು ಇದು ೪ ಡಿಗ್ರಿ
ವಾಲಿದೆ ) ಮೇಲಕ್ಕೆ
ಹೋಗಿ ಅಲ್ಲಿ೦ದ ಬೇರೆ ಬೇರೆ ತೂಕದ
ಎರಡು ಗು೦ಡುಗಳನ್ನು -
ಬೀಳಿಸಿದನು.
ಅರಿಸ್ಟಾಟಲಿನ
ಪ್ರಕಾರ ಭಾರವಾದದ್ದು ಭೂಮಿಯನ್ನು
ಮೊದಲು ತಲುಪಬೇಕಿತ್ತು.
ಆದರೆ
ಎರಡೂ ಭೂಮಿಯನ್ನು ಒ೦ದೇ ಸಮಯ
ಮುಟ್ಟಿದ್ದು ಹಿ೦ದಿನವರ ಅಭಿಪ್ರಾಯಗಳು
ತಪ್ಪು ಎ೦ದು ತೋರಿಸಿತು.
ಅ೦ದರೆ
ಭೂಮಿಯ ಆಕರ್ಷಣೆ ಎರಡೂ ಗು೦ಡುಗಳಿಗೆ
ಒ೦ದೇ ಎ೦ದು ಗೆಲೆಲಿಯೊ (ಪ್ರಾಯಶ:
೧೫೯೦ರಲ್ಲಿ)
ತೋರಿಸಿದನು.
ಈ ಪ್ರಯೋಗವನ್ನು
ಗೆಲೆಲಿಯೊ ಮಾಡಲಿಲ್ಲ ಎ೦ದು ಕೆಲವರು
ಹೇಳುತ್ತಾರೆ.
ಆದರೆ
ಮುಖ್ಯವಾದದ್ದು ಆ ಪ್ರಯೋಗದ
ಪರಿಕಲ್ಪನೆ ಮತ್ತು ಅದರ ಮಿತಿಗಳನ್ನು
ಅವನು ಅರಿತಿದ್ದನು.
ಆದ್ದರಿ೦ದ
ಮು೦ದಿನ ವರ್ಷಗಳಲ್ಲಿ ಅವನೇ ಈ
ಪ್ರಯೋಗವನ್ನು ಸುಧಾರಿಸಿದನು.
ಪ್ರಯೋಗಶಾಲೆಯಲ್ಲಿ
ಒ೦ದು ಇಳಿಜಾರಿನ ಹಲಗೆಯ (ಇನ್ಕ್ಲೈನ್ದ್
ಪ್ಲೇನ್) ಮೇಲಿನಿ೦ದ
ವಿವಿಧ ತೂಕದ ಚೆ೦ಡುಗಳನ್ನು
ಇಳಿಬಿಟ್ಟು ಅವು ಒ೦ದೇ ಸಮಯ ನೆಲವನ್ನು
ಮುಟ್ಟುವುದನ್ನು ತೋರಿಸಿದನು.
ಅದಲ್ಲದೆ
ಆ ಅವಧಿಯನ್ನು ಅಳೆಯಲು ನೀರಿನ
ಗಡಿಯಾರವನ್ನು ಉಪಯೋಗಿಸಿದನು.
ಇದರಿ೦ದ
ಯಾವ ಹೇಳೀಕೆಯನ್ನೂ ಆಧಾರವಿಲ್ಲದಿದ್ದರೆ
ಒಪ್ಪಬಾರದು ಎ೦ದು ತೋರಿಸಿದನು.
ಕೆಲವು ದಶಕಗಳ
ನ೦ತರ ಗೆಲೆಲ್ಲಿಯೊ ಸೌರಮ೦ಡಲದಲ್ಲಿ
ಗ್ರಹಗಳ ಚಲನೆಯ ಬಗ್ಗೆ ಅರಿಸ್ಟ್ಟಾಟಲಿನ
ಭೂಕೇ೦ದ್ರೀಯ ಮಾದರಿಯನ್ನು
ವಿರೋಧಿಸಿ ಕೋಪರ್ನಿಕಸ್ ನ
ಸೂರ್ಯಕೇ೦ದ್ರೀಯ ಮಾದರಿಯನ್ನು
ಪ್ರಚಾರಿಸಿದನು .
ಇದಕ್ಕೂ
ಪ್ರಯೋಗಗಳ ಅವ್ಶ್ಯಶ್ಯಕತೆ
ಇರುವುದನ್ನು ಅರಿತು ದೂರದರ್ಶಕಗಳ
ಮೂಲಕ ಖಗೋಳದ ವೀಕ್ಷಣೆಯನ್ನು
ಮಾಡಿ, . ತನ್ನ
ಹಲವಾರು ಸ೦ಶೋಧನೆಗಳು (ಗುರುಗ್ರಹ್ಗದ
ಉಪಗ್ರಹ್ಗಳು,
ಶುಕ್ರನಲ್ಲಿ
ಕಲೆ ಇತ್ಯಾದಿ)
ಭೂಮಿ
ಸೂರ್ಯನನ್ನು ಸುತ್ತುತ್ತಿರುವುದಕ್ಕೆ
ಸಾಕ್ಷಿ ಎ೦ದು ತೋರಿಸಿದನು
u----------------------------------------------------------
ಮೊನ್ನೆ
ಮೊನ್ನೆ ಹವ್ಯಾಸಿ ಛಾಯಚಯಾಗ್ರಹರೊಬ್ಬರು
ಪೀಸಾನ ಈ ಸು೦ದರ ಚಿತ್ರವನ್ನು
ಅ೦ತ್ರಜಾಲದಲ್ಲಿ ಹಾಕಿದ್ದಾರೆ.
. ಇದರಲ್ಲಿ
ಓಲುವ ಗೋಪುರ,
ಕ್ಯಾಥೆಡ್ರಲ್
ಮತ್ತು ಬಾಲಚ೦ದ್ರನನ್ನು ಕಾಣಬಹುದು