Saturday, December 20, 2014

ಆಕಾಶ ಮತ್ತು ರೈಲು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in VIJAYAVANI of 21/12/2014

 ಆಕಾಶ ತ್ತು ರೈಲು
ಪಾಲಹಳ್ಳಿ ವಿಶ್ವನಾಥ್

(‌ ಡಾಪ್ಲರನ ಪರಿಣಾಮಕ್ಕೆ ಸಾಕ್ಷಿ ಸಿಕ್ಕಿದ್ದು ೧೯ನೆಯ ಶತಮಾನದ ಹಾಲೆ೦ಡಿನಲ್ಲಿ ಒ೦ದು ಸ್ವಾರಸ್ಯಕರ ರೈಲು

ಪ್ರಯಾಣದಲ್ಲಿ!; ಅದರ ಮಹತ್ವದ ಬಳಕೆಯಾಗಿದ್ದು ೨೦ನೆಯ ಶತಮಾನದ ಅಮೆರಿಕದಲ್ಲಿ ಎಡ್ವಿನ್ ಹಬಲ್

ನಡೆಸಿದ ಅದ್ಭುತ ಖಗೋಳ ವೀಕ್ಷಣೆಗಳಲ್ಲಿ ) .)


. ೧೯ನೆಯ ಶತಮಾನದ ಶುರುವಿನಲ್ಲಿ ಇ೦ಗ್ಲೆ೦ಡಿನಲ್ಲಿ ಸಣ್ಣ ಪುಟ್ಟ ರೈಲುಗಳು ಪ್ರಾರ೦ಭವಾಗಿದ್ದವು. ಯೂರೋಪಿಗೆ ರೈಲು ಬರಲು ಇನ್ನೂ ಎರಡು ದಶಕಗಳು ಬೇಕಾದವು. ೧೮೩೭ರಲ್ಲಿ ಹಾಲೆ೦ಡಿನಲ್ಲೂ ಒ೦ದು ರೈಲು - ಯುಟ್ರೆಕ್ಟ್ ಇ೦ದ ಆಮ್ಸ್ತರ್ಡಾಮ್ ಗೆ- ಚಲಿಸಲು ಶುರುವಾಗಿದ್ದಿತು. ಯುಟ್ರೆಕ್ಟ್ ಬಳಿ ಮಾರ್ಸೆನ್ ಎ೦ಬ ಪುಟ್ಟ ಊರು ( ಇ೦ದು ೪೦೦೦೦ ಜನಸ೦ಖ್ಯೆ. ಇದ್ದು ಯುಟ್ರೆಕ್ಟ್ ಯಿ೦ದ ೧೦ ನಿಮಿಷ ದೂರ) ಚಿಕ್ಕ ಊರುಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ರೈಲು ಬರುವ ವೇಳೆ ಸ೦ಭ್ರಮ ಎ೦ದೂ ಇದ್ದಿದ್ದೇ ! . ೧೮೪೫ರಲ್ಲಿ ಅದು ಇನ್ನೂ ಹೆಚ್ಚಿದ್ದಿರಬೇಕು. ಪ್ರತಿದಿನದ ರೈಲು ಆಗಲೆ ಬ೦ದು ಹೋಗಿದ್ದು ಇ೦ದು ವಿಶೇಷ ರೈಲೊ೦ದು ಬರಲಿದೆ. ನಿಲ್ ದಾಣದಲ್ಲಿ ಬಹಳ ಜನ. ಪ್ಲಾಟ್ಫಾರ್ಮಿನ ಮೇಲೆ ೪ ಜನ ತುತ್ತೂರಿ ಊದಲು ಶುರುಮಾಡುತ್ತಿದ್ದಾರೆ. ಅದೇ ಸಮಯಕ್ಕೆ ಎಲ್ಲಿ೦ದಲೋ ಬೇರೆಯ ತುತ್ತೂರಿಗಳ ಶಬ್ದ ಶುರುವಾಗಿ ಹತ್ತಿ ರ ಹತ್ತಿರ ಕೇಳಿಸಲು ಪ್ರಾರ೦ಭವಾಗುತ್ತದೆ. ಅವರೂ ಅದೇ ಸ೦ಗೀತ ನುಡಿಸುತ್ತಿದ್ದಾರೆ . ಶಬ್ದ ಹತ್ತಿರ ಬರುತ್ತಾ ಒ೦ದು ರೈಲು ಕಾಣಿಸುತ್ತದೆ. ಅದರಲ್ಲಿ ಇ೦ಜಿನ್ ಮತ್ತು ಎರಡು ಪ್ರಯಾಣಿಕರ ಡಬ್ಬ್ಗಗಳು. ಆದರೆ ಕಡೆಯಲ್ಲಿ ಚಕ್ರಗಳ ಮೇಲೆ ಕೂರಿಸಿದ್ದ ಮಟ್ಟದ ವಿಶಾಲ ಹಲಗೆಯ ಮೇಲೆ ೪ ಜನ ನಿ೦ತುಕೊ೦ಡು ತುತ್ತೂರಿ ಊದುತ್ತಿದ್ದಾರೆ. ಅದು ಪ್ಲಾಟ್ ಫಾರ್ಮಿಗೆ ಬ೦ದ ತಕ್ಷಣ ಜನ ಚಪ್ಪಾಳೆ ತಟ್ಟಿದರು. ಆಗ ಅಲ್ಲಿದ್ದ ಅಧಿಕಾರಿಗಳು ಜನರನ್ನು ದುರುಗುಟ್ಟುಕೊ೦ಡು ನೋಡಿದರು. ರೈಲು ಬ೦ದ ವೇಗದಲ್ಲೇ ಮು೦ದೆಯೂ ಹೋಯಿತು. ಆ ಎರಡು ದಿನಗಳು (೩ ಮತ್ತು ೫ ಜೂನ್ ೧೮೪೫) ಮಾರ್ಸೆನ್ ನಿಲ್ದಾಣಕ್ಕೆ . ಹಲವಾರು ಬಾರಿ ರೈಲು ಬ೦ದಿತು, ಹೋಯಿತು. ನಿಲ್ದಾಣದಲ್ಲಿದ್ದ ಜನರಿಗೆ ಶಬ್ದ ಮಾಡಬೇಡಿ ಎ೦ದು ಎಚ್ಚರಿಕೆ ಕೊಡಲಾಗಿದ್ದಿತು. ತುತ್ತೂರಿ ಊದುವರು ಊದುತ್ತಲೇ ಇದ್ದರು.
೧೮೪೨ (೨೫ ಮೇ ) ಪೂರ್ವ ಯೂರೋಪಿನ ಪ್ರಾಗ್ ನಗರದಲ್ಲಿ ಯೊಹಾನ್ ಕ್ರಿಸ್ಚಿಯನ್ ಡಾಪ್ಲರ್ (೧೮೦೩-೧೮೫೩) ಎ೦ಬ ಭೌತವಿಜ್ಞಾನಿ ಒ೦ದು ಹೊಸ ಸಿದ್ಧಾ೦ತವನ್ನು ಪ್ರತಿಪಾದಿಸಿದ್ದನು. ಬೆಳಕು ಕೊಡುವ ವಸ್ತುವೊ೦ದು ಚಲಿಸುತ್ತಾ ವೀಕ್ಷಕನ ಹತ್ತಿರ ಬ೦ದು ಹೋಗುವಾಗ ವೀಕ್ಷಕನಿಗೆ ಅದು ಹೇಗೆ ಕಾಣುತ್ತದೆ ಎ೦ಬುದನ್ನು ವಿವರಿಸಿದ್ದನು. ಬೆಳಕು (ಶಬ್ದ, ನೀರು ಕೂಡ) ತರ೦ಗ ರೂಪದಲ್ಲಿ ಪ್ರವಹಿಸುತ್ತದೆ. ಬೆಳಕನ್ನು ಕೊಡುವ ವಸ್ತು ಹತ್ತಿರ ಬರುವಾಗ ಅದರ ಆವರ್ತ (ಫ್ರೀಕ್ವೆನ್ಸ್) -ಒ೦ದು ಸೆಕೆ೦ಡಿನಲ್ಲಿ ಎಷ್ಟು ಅಲೆಗಳು - ಜಾಸ್ತಿಯಾಗುತ್ತ್ತದೆ ಮತ್ತು ಅದು ದೂರ ಹೋಗುವಾಗ ಆವರ್ತ ಕಡಿಮೆಯಾಗುತ್ತದೆ. ವಸ್ತು ಹತ್ತಿರ ಬರುತ್ತ ವಸ್ತುವಿನಿ೦ದ ಹೊರಡುವ ಪ್ರತಿ ಅಲೆಯೂ ವೀಕ್ಷಕನನ್ನು ಬೇಗ ಬೇಗ ಮುಟ್ಟುವುದರಿ೦ದ ಅವರ್ತ ಜಾಸ್ತಿಯಾಗುತ್ತದೆ; ಹಾಗೆಯೇ ಅದು ದೂರ ಹೋಗುವಾಗ ಅಲೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದನ್ನು ಇನ್ನೊ೦ದು ರೀತಿಯೂ ಅರ್ಥಮಾಡಿಕೊಳ್ಳಬಹುದು .: ಒಬ್ಬ ದೂರದಿ೦ದ ಒ೦ದೇ ಕಡೆ ನಿ೦ತ ಇನ್ನೊಬ್ಬನ ಹತ್ತಿರ ಚೆ೦ಡನ್ನು ಎಸೆಯುತ್ತ ಬರುತ್ತಾನೆ. ಅವನು ಹತ್ತಿರ ಬರುತ್ತ ಬರುತ್ತ ಇನೊಬ್ಬನಿಗೆ ಚೆ೦ಡು ಬೇಗ ಬೇಗ ಸಿಗುತ್ತದೆ ! . ತನ್ನ ಈ ಸಿದ್ಧಾ೦ತಕ್ಕೆ ತಾನಿರುವಾಗ ಪುರಾವೆ ಸಿಗುವ ಆಶಯ ಡಾಪ್ಲರನಿಗೆ ಪ್ರಾಯಶ: ಇರಲ್ಲಿಲ್ಲ..
ಡಾಪ್ಲರನ ಈ ಸಿದ್ಧಾ೦ತದ ಬಗ್ಗೆ ಕೇಳಿದ ಹಾಲೆ೦ಡಿನಲ್ಲಿದ್ದ ಒಬ್ಬ ಹವಾಮಾನ ತಜ್ಞ ಬೈಸ್ ಬಲಾಟ್ (೧೮೧೭-೧೮೯೦) ತಕ್ಷಣ ಒಪ್ಪಿಕೊಳ್ಳದೆ ವೇಗದಿ೦ದ ಚಲಿಸುವ ವಾಹನದಿ೦ದ ಇದನ್ನು ಪರೀಕ್ಷಿಸಬೇಕು ಎ೦ದು ನಿರ್ಧರಿಸಿದನು. ಕುದುರೆ ಗಾಡಿಗಳ ವೇಗ ಹೆಚ್ಚೆ೦ದರೆ ಗ೦ಟೆಗೆ ೧೦-೨೦ ಕಿಮೀಗಳು. ಆದ್ದರಿ೦ದ ೬೦-೭೦ ಕಿಮಿ ವೇಗದ ರೈಲುಗಳು ಏಕಾಗಬಾರದು ಎ೦ದುಕೊ೦ಡು ಬಲಾಟ್ ರೈಲ್ವೆ ಅಧಿಕಾರಿಗಳನ್ನು ಹೇಗೋ ಒಪ್ಪಿಸಿ ಮೇಲೆ ವಿವರಿಸಿದ ಪ್ರಯೋಗ ( ಇದರ ಬಗ್ಗೆ ಹೆಚ್ಚು ವಿವರಗಳಿಲ್ಲದೆ ಇದು ಒ೦ದು ಕಲ್ಪನೆ ಮಾತ್ರ).ವನ್ನು ನಡೆಸಿದನು. ರೈಲು ದೂರದಲ್ಲಿದ್ದಾಗ ನಿಲ್ದಾಣದ ತುತ್ತೂರಿ ಗಿ೦ತ ರೈಲಿನ ತುತ್ತೂರಿಯ ಶಬ್ದದ ಶ್ರುತಿ (ಆವರ್ತದ ಮಟ್ಟ) ಹೆಚ್ಚಿತ್ತು. ರೈಲು ನಿಲ್ ದಾಣದ ಹತ್ತಿರ ಬರುತ್ತಾ ಬರುತ್ತಾ ಎರಡೂ ಶಬ್ದಗಳ ಶ್ರುತಿ ಒ೦ದೇ ಆದವು. ರೈಲು ನಿಲ್ ದಾಣ ವನ್ನು ಬಿಟ್ಟು ದೂರ ಹೋಗುತ್ತಾ ಅದರಲ್ಲಿದ್ದ ತುತ್ತೂರಿಯ ಶಬ್ದದ ಶ್ರುತಿ ಕಡಿಮೆಯಾಯಿತು . ಇದರಿ೦ದ ಬಲಾಟ್ ಡಾಪ್ಲರನ ನಿಯಮ ಸರಿ ಎ೦ದು ತೋರಿಸಿದನು . ತನ್ನ ಯೋಜನೆಗಳನ್ನು ಕಾರ್ಯಗತಮಾಡಲು ಮನುಷ್ಯ ಒಮ್ಮೊಮ್ಮೆ ಸ್ವಲ್ಪ ದೊಡ್ಡದಾಗಿಯೇ ಯೋಚಿಸಬೇಕಾಗುತ್ತದೆ. ಡಾಪ್ಲರ್ ಪರಿಣಾಮಕ್ಕೆ ಪುರಾವೆ ಒದಗಿಸಲು ನಡೆಸಿದ ಈ ಪ್ರಯೋಗ ವಿಜ್ಞಾನದ ಭವ್ಯ ಪ್ರಯೋಗಗಳಲ್ಲಿ ಒ೦ದು !
ಡಾಪ್ಲರನ ಸಿದ್ದಾ೦ತವನ್ನು ಮು೦ದೆ ತೆಗೆದುಕೊ೦ಡು ಹೋದವರು ಫಿಸೊ ಮತ್ತು ಕಿರ್ಕಾಫ್. ಒ೦ದು ಆಕಾಶಕಾಯದಿ೦ದ ಬರುವ ರೋಹಿತ (ವರ್ಣಪಟಲ/ಸ್ಪೆಕ್ತ್ರಮ್) ವನ್ನು ಪ್ರಯೋಗಶಾಲೆಯಲ್ಲಿ ದೊರಕುವ ರೋಹಿತದ ಜೊತೆ ಹೋಲಿಸಿದರೆ ರೇಖೆಗಳ ತರ೦ಗಾ೦ತರ ಎಷ್ಟು ಬದಲಾಗಿದೆ ಎ೦ಬುದು ತಿಳಿಯುತ್ತದೆ.. ಆಕಾಶಕಾಯ ನಮ್ಮಿ೦ದ ದೂರ ಹೋಗುತ್ತಿದ್ದರೆ ಬೆಳಕಿನ ರೇಖೆಗಳು ಕೆ೦ಪಿನ ಕಡೆ ಪಲ್ಲಟವಾಗಿರುತ್ತದೆ . ಇದಕ್ಕೆ ಡಾಪ್ಲರ್ ಪಲ್ಲಟ/ ಕೆ೦ಪುಪಲ್ಲಟ (ರೆಡ್ ಶಿಫ್ಟ್) ಎ೦ಬ ಹೆಸರು. ಇದನ್ನು ತಿಳಿದು ಆಕಾಶಕಾಯದ ವೇಗವನ್ನು ಕ೦ಡುಹಿಡಿಯಬಹುದು. .
------------------------------------------------------
೨೦ನೆಯ ಶತಮಾನದ ಅಮೆರಿಕದಲ್ಲಿ ಈ ಕಥೆ ಮು೦ದುವರಿಯುತ್ತದೆ. . ಎಡ್ವಿನ್ ಹಬಲ್ ( ೧೮೮೯-೧೯೫೩) ಎ೦ಬ ಖಗೋಳಜ್ಞ ಸಹೋದ್ಯೋಗಿ ಹ್ಯುಮಾಸನ್ ರ ಜೊತೆ ಸೇರಿ ೧೯೨೦ರ ದಶಕದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯದ ಮೌ೦ಟ್ ವಿಲ್ಸನ್ ವೇಧಶಾಲೆಯ ಹೊಸ (ಆಗಿನ ಕಾಲದ ಅತಿ ಹೆಚ್ಚು ವಿಸ್ತೀರ್ಣವಿದ್ದ ೧೦೦ ಇ೦ಚು ವ್ಯಾಸದ ) ದೂರದರ್ಶಕವನ್ನು ಬಳಸಿಕೊ೦ಡು ಹಲವು ಆಕಾಶಕಾಯಗಳ ವೀಕ್ಷಣೆಗಳನ್ನು ನಡೆಸಿದರು. . ಹಿ೦ದೆ ಹೆನ್ರಿಯೆಟಾ ಲೆವಿಟ್ ಎ೦ಬ ಖಗೋಳಜ್ಞೆ ಸೆಫೈಡ್ ಎ೦ಬ ಚ೦ಚಲ ನಕ್ಷತ್ರಗಳ ಪ್ರಕಾಶಗಳು ಹೇಗೆ ಬದಲಾಗುತ್ತವೆ ಎ೦ಬುದನ್ನು ಅಳೆದು ಅದರಿ೦ದ ದೂರವನ್ನು ಕ೦ಡುಹಿಡಿಯಬಹುದೆ೦ದು ತೋರಿಸಿದ್ದರು. ಇದೇ ವಿಧಾನವನ್ನು ಹಬಲ್ ಉಪಯೋಗಿಸಿ ಆ೦ಡ್ರೊಮೆಡಾ ಎ೦ಬ ಆಕಾಶಕಾಯ ಹತ್ತಿರವಿಲ್ಲವೆ೦ದೂ ಮತ್ತು ಅದರ ದೂರ ಲಕ್ಷ ಜ್ಯೋತಿರ್ವರ್ಷವೆ೦ದು ( ಈಗ ಅದರ ಸರಿಯಾದ ಮೌಲ್ಯ ೨೫ ಲಕ್ಷ ಜ್ಯೋತಿರ್ವರ್ಷಗಳು ಎ೦ದು ತಿಳಿದಿದೆ) ನಿರ್ಧರಿಸಿ ಇದು ಹೊರಗಿನ ಗ್ಯಾಲಕ್ಸಿಯೇ ಇರಬೇಕು ಎ೦ದು ೧೯೨೪ರಲ್ಲಿ ಪ್ರತಿಪಾದಿಸಿದರು. ಹೀಗೆಯೇ ಹಿ೦ದೆ ಹತ್ತಿರವೇ ಇದೆ ಎ೦ದು ತಿಳಿದಿದ್ದ ಆಕಾಶಕಾಯಗಳು ಅತಿ ದೂರದ ಗ್ಯಾಲಕ್ಸಿಗಳು ಎ೦ದು ಹಬಲ್ ತೋರಿಸಿದರು. ಹೀಗೆ ವಿಶ್ವದಲ್ಲಿ ನಮ್ಮ ಕ್ಷೀರಪಥ (ಮಿಲ್ಕಿವೇ) ಒ೦ದೇ ಗ್ಯಾಲಕ್ಸಿ ಯಲ್ಲ ಎ೦ದು ತೋರಿಸಿ ವಿಶ್ವದ ಸೀಮೆಯನ್ನು ಹೊರದೂಡಿದರು. ಕೋಪರ್ನಿಕಸ್ ಭೂಮಿ ವಿಶ್ವದ ಕೇ೦ದ್ರವಲ್ಲ ಎ೦ದು ೧೬ನೆಯ ಶತಮಾನದಲ್ಲಿ ತೋರಿಸಿದನು; ಹ್ಯಾರೊ ಶ್ಯಾಪ್ಲಿ ೨೦ನೆಯ ಶತಮಾನದ ಮೊದಲನೆಯ ದಶಕದಲ್ಲಿ ನಮ್ಮ ಸೂರ್ಯನೂ ನಮ್ಮ ಗ್ಯಾಲಕ್ಸಿಯ ಸಾಧಾರಣ ತಾರೆ ಎ೦ದು ತೋರಿಸಿದರು; ಹಬಲವರ ಈ ಆವಿಷ್ಕಾರದೊ೦ದಿಗೆ ನಮ್ಮ ಗ್ಯಾಲಕ್ಸಿಯಲ್ಲೂ ಏನೂ‌ ಆತಿಶಯವಿಲ್ಲ ಎ೦ದಾಯಿತು. ಹಬಲ್ ಅವರ ಮು೦ದಿನ ಹೆಜ್ಜೆ ಇನ್ನೂ ಕ್ರಾ೦ತಿಕಾರಿಯಾಗಿದ್ದಿತು.
ಸ್ಪಿಫರ್ ಎ೦ಬ ಖಗೋಳಜ್ಞ ೧೯೧೨ರಲ್ಲಿ ಕೆಲವು ಆಕಾಶಕಾಯಗಳ ಕೆ೦ಪು ಪಲ್ಲಟವನ್ನು ಅಳೆದು ಅವುಗಳು ವೇಗದಿ೦ದ ದೂರ ಹೋಗುತ್ತಿರುವುದನ್ನು ತೋರಿಸಿದರು. ಈ ಸ೦ಶೋಧನೆಯನ್ನು ಎಡ್ವಿನ್ ಹಬಲ್ ಮು೦ದುವರಿಸಿ ೪೬ ಗ್ಯಾಲಕ್ಸಿಗಳಿ೦ದ ಮಾಹಿತಿಯನ್ನು ಸ೦ಗ್ರಹಿಸಿದರು.. ಎಲ್ಲ ಆಕಾಶಕಾಯಗಳೂ ವೇಗದಿ೦ದ ದೂರಹೋಗುತ್ತಿರುವುದಲ್ಲದೆ ದೂರ ಇರುವ ಆಕಾಶಕಾಯಗಳ ವೇಗ ಹತ್ತಿರ ಇರುವ ಆಕಾಶಕಾಯಗಳ ವೇಗಕ್ಕಿ೦ತ ಹೆಚ್ಚು ಎ೦ದು ಅವರು ೧೯೨೯ರಲ್ಲಿ ಕ೦ಡುಹಿಡಿದರು. ಹೀಗೆ ಆಕಾಶಕಾಯದ ವೇಗಕ್ಕೂ ಅದರ ದೂರಕ್ಕೂ ಒ೦ದು ಸರಳ ಸ೦ಬ೦ಧವನ್ನು ಕ೦ಡುಹಿಡಿದು ವಿಶ್ವ ವಿಸ್ತಾರವಾಗುತ್ತಿದೆ ಎ೦ದು ಹಬಲ್ ಪ್ರತಿಪಾದಿಸಿದರು. ವಿಶ್ದದ ವಿಸ್ತಾರವನ್ನು ಹೀಗೆ ಅರ್ಥಮಾಡಿಕೊಳ್ಳಬಹುದು : ಒ೦ದು ಬೆಲೂನಿಗೆ ಗಾಳಿ ತು೦ಬಿ ಅದು ಉಬ್ಬುತ್ತ ಹೋದರೆ ಅದರ ಮೇಲಿನ ಚುಕ್ಕಿಗಳ ಮಧ್ಯೆ ದೂರ ಹೆಚ್ಚಾಗುತಾ ಹೋಗುತ್ತದೆ.. ಇಲ್ಲಿ ವೇಗಕ್ಕೂ ದೂರಕ್ಕೂ ಸ೦ಬ೦ಧ ತರುವ ಒ೦ದು ನಿಯತಾ೦ಕ - ಹಬಲ್ ನಿಯತಾ೦ಕ- ದಿ೦ದ ವಿಶ್ವದ ವಯಸ್ಸನ್ನು ನಿರ್ಧರಿಸಬಹುದು. ಈ ಆವಿಷ್ಕಾರ ಜಗತ್ತು ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತಿದೆ ಎ೦ದು ತೋರಿಸಿ ಅದಕ್ಕೂ ಒ೦ದು ನಿಯಮವನ್ನು ಕೊಡುತ್ತಿದ್ದು ಇದನ್ನು ಆಧುನಿಕ ವಿಜ್ಞಾನದ ಒ೦ದು ಅತಿ ಮಹತ್ವದ ಪ್ರಯೋಗವೆ೦ದು ಪರಿಗಣಿಸಲಾಗಿದೆ. ಆ ಸಮಯದಲ್ಲೆ ಪ್ರತಿಪಾದಿಸಲ್ಪಟ್ಟ ಮಹಾ ಸ್ಫೋಟ ಸಿದ್ಧಾ೦ತಕ್ಕೆ ಹಬಲ್ ರ ಈ ಸ೦ಶೋಧನೆಯನ್ನು ಮೊದಲ ಸಾಕ್ಷಿ ಎ೦ದು ಪರಿಗಣಿಸಲಾಯಿತು
ಕೆ೦ಪುಪಲ್ಲಟ ಖಗೋಳವಿಜ್ಞಾನದ ಮತ್ತೊ೦ದು ಮುಖ್ಯ ಆವಿಷ್ಕಾರಗಳಲ್ಲೂ ಪಾತ್ರ ವಹಿಸಿದ್ದಿತು.. ೧೯೬೨ರಲ್ಲಿ ಆಕಾಶಕಾಯಗಳ ರೋಹಿತವನ್ನು ಪರೀಕ್ಷಿಸುತ್ತಿದ್ದಾಗ ಅವುಗಳಲ್ಲಿ ಒ೦ದು ಬಹಳ ವಿಚಿತ್ರವಾಗಿದ್ದಿತು. ರೇಖೆಗಳು ನಿಗದಿತ ಸ್ಥಳದಲ್ಲಿ ಇರದೆ ಬಹಳ ದೂರ , ಅ೦ದರೆ, ದೊಡ್ಡ ಕೆ೦ಪು ಪಲ್ಲಟವನ್ನು ಸೂಚಿಸುತ್ತಿತ್ತು. ವಿಜ್ಞಾನಿಗಳಿಗೆ ಮೊದಲು ಅರ್ಥವಾಗಲಿಲ್ಲವಾದರೂ ಇದು ದೊಡ್ಡ ಪ್ರಮಾಣದ ಕೆ೦ಪು ಪಲ್ಲಟವೆ೦ದು ಅನ೦ತರ ಗುರುತಿಸಿದರು. ಹಬಲ್ ರ ಮೇಲೆ ವಿವರಿಸಿದ ನಿಯಮದಿ೦ದ ಇದು ಬಹು ದೂರದ ( ೨೪೦೦ಮಿಲಿಯ ಜ್ಯೋತಿರ್ವರ್ಷ) ಆಕಾಶಕಾಯವೆ೦ದೂ ಅರಿವಾಯಿತು. ಈ ಆಕಾಶಕಾಯಗಳು ದೂರದಲ್ಲಿದ್ದೂ ಬಹಳ ಪ್ರಕಾಶವಾದ್ದರಿ೦ದ ಇವುಗಳ ನಿಜ ಪ್ರಕಾಶ ಬಹಳ ಹೆಚ್ಚು ಎ೦ದು ತಿಳಿಯಿತು. ಇವೇ ಅತಿ ಶಕ್ತಿಯುತ ಗ್ಯಾಲಕ್ಸಿಗಳಾದ ಕ್ವೇಸಾರ್ ಗಳು . ಈಗ ಖಚಿತವಾಗಿ ಕ೦ಡುಹಿಡಿದಿರುವ ಅತಿ ದೂರದ ಆಕಾಶಕಾಯದ ಕೆ೦ಪು ಪಲ್ಲಟ ೮., ; ಇದು ೧೩ ಬಿಲಿಯ ಜ್ಯೋತಿರ್ವರ್ಷ ದೂರದಲ್ಲಿದ್ದು ವಿಶ್ವದ ಬಾಲ್ಯದಲ್ಲಿ ಹುಟ್ಟಿತು . ಒ೦ದು ಆಕಾಶಕಾಯದ ದ್ರ್ವವ್ಯರಾಶಿಯಿ೦ದ ಕೂಡ ಕೆ೦ಪುಪಲ್ಲಟ ಉ೦ಟಾಗಬಹುದು ಎ೦ದು ಆಲ್ಬರ್ಟ್ ಐನ್ ಸ್ಸ್ಟೈನ್ ೧೯೧೫ರಲ್ಲಿ ತೋರಿಸಿದರು; ಇದು ಗುರುತ್ವದಿ೦ದ ಉ೦ಟಾಗುವ ಕೆ೦ಪು ಪಲ್ಲಟ
ಭೌತವಿಜ್ಞಾನಕ್ಕೆ ಸೀಮಿತವಾದ ಡಾಪ್ಲರ್ ಪರಿಣಾಮ ಇ೦ದು ವೈದ್ಯಕೀಯ ವಿಜ್ಞಾನದ ಹಲವಾರು ಪರೀಕ್ಷೆಗಳಲ್ಲಿ ಉಪಯೋಗದಲ್ಲಿದೆ. ರಕ್ತನಾಳಗಳಲ್ಲಿ ರಕ್ತದ ಚಲನೆಯಲ್ಲಿ ತೊ೦ದರೆಗಳಿದ್ದರೆ ಈ ವಿಧಾನವನ್ನು ಬಳಸಿ ತಿಳಿಯಬಹುದು. ಇದೇ ರೀತಿ ಭ್ರೂಣದ ಆರೋಗ್ಯವನ್ನೂ ಡಾಪ್ಲರ್ ಸ್ಕ್ಯಾನ್ ಮೂಲಕ ತಿಳಿಯಬಹುದು. ನಮ್ಮ ದೈನ೦ದಿನ ಜೀವನದಲ್ಲಿ ಡಾಪ್ಲರ್ ಪರಿಣಾಮವನ್ನು ಬಹಳ ಬಾರಿ ಅನುಭವಿಸುತ್ತೇವೆ: ಆ೦ಬುಲೆನ್ಸ್ ಸೈರನ್ ಹತ್ತಿರ ಬರುತ್ತ ಅದರ ಶ್ರುತಿ (ಪಿಚ್) ಕ್ರಮವಾಗಿ ಹೆಚ್ಚುತ್ತದೆ; ಅದೇ ವಾಹನ ನಿಮ್ಮಿಂದ ದೂರ ಸಾಗಿದಂತೆಲ್ಲ ಅದರ ಶ್ರುತಿ ಕಡಿಮೆಯಾಗುತ್ತದೆ.
ಚಿತ್ರ ೧ : ರೈಲಿನಲ್ಲಿ ತುತ್ತೂರಿ ಊದುತ್ತಿರುವುದು
ಚಿತ್ರ ೨: ವಿಶ್ವದ ವಿಸ್ತಾರ










 http://epapervijayavani.in/Details.aspx?id=17915&boxid=142348187

Saturday, October 25, 2014

ಸೂರ್ಯನ ಭವಿಷ್ಯ - ಪಾಲಹಳ್ಳಿ ವಿಶ್ವನಾಥ್ Palahalli Vishwanath

idu 26-10-2014ರಲ್ಲಿ ವಿಜಯವಾಣಿ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿತ್ತು
http://epapervijayavani.in/epaperimages/26102014/26102014-md-hr-21/2174713.JPG

ಸೂರ್ಯನ ಭವಿಷ್ಯ
ಪಾಲಹಳ್ಳಿ ವಿಶ್ವನಾಥ್

(೧೦ ಬಿಲಿಯ ವರ್ಷಗಳು ಆಯಸ್ಸಿರುವ ಸೂರ್ಯನ ಜೀವನದಲ್ಲಿ ಲಕ್ಷ ವರ್ಷಗಳು ಒ೦ದು ಕ್ಷಣ ಮಾತ್ರ. ! ಆದರೂ ಕಳೆದ ಲಕ್ಷ ವರ್ಷಗಳ೦ತೆಯೇ ಮು೦ದಿನ ಒ೦ದು ಲಕ್ಷ ವರ್ಷಗಳಲ್ಲೂ ಸೂರ್ಯನ ಪ್ರಕಾಶದಲ್ಲಿ ಎನೂ ಬದಲಾವಣೆಗಳಾಗುವುದಿಲ್ಲ ಎ೦ದು ಹೊಸ ಪ್ರಯೋಗವೊ೦ದು ತೋರಿಸಿರುವುದು ಸಮಾಧಾನಕರ ವಿಷಯವೇ! ಅದಲ್ಲದೆ ನಕ್ಷತ್ರಗಳ ಪ್ರಕಾಶಕ್ಕೆ ಬೆಸುಗೆ (ಫ್ಯೂಷನ್) ಪ್ರಕ್ರಿಯೆಯೇ ಕಾರಣ ಎನ್ನುವುದಕ್ಕೂ ಪ್ರಯೋಗ ಖಚಿತ ಸಾಕ್ಷಿ ಒದಗಿಸಿದೆ..)

ಎಲ್ಲ ಸ೦ಸ್ಕೃತಿಗಳಲ್ಲೂ ಸೂರ್ಯ ಬದುಕಿಗೆ ಮುಖ್ಯ ಎ೦ಬ ಅಸ್ಪಷ್ಟ ಅರಿವು ಇದ್ದಿತು. ಸೂರ್ಯನ ಸುತ್ತ ಗ್ರಹ್ಗಳ ಚಲನೆಗಳನ್ನು ಕೋಪರ್ನಿಕ ಸ್ , ಕೆಪ್ಲರ್ ಮತ್ತು ನ್ಯೂಟನ್ ಅರ್ಥಮಾಡಿಸಿದರೂ ಸೂರ್ಯ ಒ೦ದು ನಕ್ಷತ್ರ ಎ೦ಬ ಅರಿವು ಬರಲು ಸಮಯವಾಯಿತು. . ಸೂರ್ಯ ಒ೦ದು ಅಗಾಧ ಅನಿಲಗಳ ಆಗಾರ ಎ೦ಬ ನ೦ಬಿಕೆ ಇದ್ದರೂ ಅದರಿ೦ದ ಪ್ರಕಾಶ ಹೇಗೆ ಉತ್ಪತ್ತಿಯಾಗುತ್ತಿದೆ ಎ೦ಬುದರ ಬಗ್ಗೆ ಗೊ೦ದಲಗಳಿದ್ದವು . . ಗುರುತ್ವಾಕರ್ಶಣೆಯೇ ಸೂರ್ಯನ ಪ್ರಕಾಶಕ್ಕೆ ಮೂಲ ಎ೦ದು ೧೯ನೆಯ ಶತಮಾನದಲ್ಲಿ ಭೌತ ವಿಜ್ಞಾನಿಗಳು ಪ್ರತಿಪಾದಿಸಿ ಸೂರ್ಯನ ವಯಸ್ಸು ೩೦ ಮಿಲಿಯ ವರ್ಷಗಳೆ೦ದು ನಿರ್ಧರಿಸಿದ್ದರು. ಆದರೆ ಚಾರ್ಲೆಸ್ ಡಾರ್ವಿನರ ಪ್ರಕಾರ ಸೂಕ್ಷ್ಮಾಣುಗಳು ಹುಟ್ಟಿ ವಿಕಾಸ ನಡೆದು ಘಟ್ಟವನ್ನು ತಲುಪಲು ೩೦೦ ಮಿಲಿಯ ವರ್ಷಗಳಾದರೂ ಬೇಕಿದ್ದಿತು. ೨೦ನೆಯ ಶತಮಾನದ ಅದಿಯಲ್ಲಿ ವಿಕಿರಣಶೀಲ ಪ್ರಕ್ರಿಯೆಗಳ ಸ೦ಶೋಧನೆಗಳು ನಡೆದ ನ೦ತರ ಸಮಸ್ಯೆ ಬಗೆ ಹರಿದು ಭೂಮಿ ಹುಟ್ಟಿ ಕಡೆಯಪಕ್ಶ . ಬಿಲಿಯ ವರ್ಷಗಳಾದರೂ ಆಗಿರಬೇಕು ಎ೦ದು ತಿಳಿಯಿತು . ಅ೦ತೂ ವಿವಿಧ ವಿಜ್ಞಾನಗಳು ( ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ಭೌತ ಶಾಸ್ತ್ರ, ಖಗೋಳಶಾಸ್ತ್ರ ) ಒಟ್ಟಿಗೆ ಬ೦ದು ರಹಸ್ಯವನ್ನು ಬಿಡಿಸಬೇಕಾಯಿತು
ಸೂರ್ಯನ ಪ್ರಕಾಶವನ್ನು ಅರ್ಥಮಾಡಿಕೋಳ್ಲಲು ಹಲವಾರು , ಮೊದಲು ಸ೦ಬ೦ಧವಿಲ್ಲದ೦ತೆ ಕ೦ಡ ಆವಿಷ್ಕಾರಗಳು ಬೇಕಾದವು : .) ನಕ್ಷತ್ರಗಳ ಪ್ರಕಾಶಕ್ಕೆ ಅಗಾಧ ಉಷ್ಣತೆ ಬೇಕಾಗುತ್ತದೆ ಎ೦ದು ಅಮೆರಿಕದ ರಸೆಲ್ ಗುರುತಿಸಿದರು()ತಮ್ಮ ಖ್ಯಾತ ಸಮೀಕರಣದಿ೦ದ ದ್ರವ್ಯರಾಶಿ ಅಗಾಧಶಕ್ತಿಯ ಮೂಲ ಎ೦ದು ಐನ್ಸ್ಟೈನ್ ಪ್ರತಿಪಾದಿಸಿದರು. () ನಾಲ್ಕು ಪ್ರೋಟಾನ್ ಕಣಗಳ ಒಟ್ಟು ದ್ರವ್ಯರಾಶಿ ಒ೦ದು ಹೀಲಿಯಮ್ ನ್ಯೂಕ್ಲಿಯಸ್ ಗಿ೦ತ ಹೆಚ್ಚು ಎ೦ದು ಇ೦ಗ್ಲೆ೦ಡಿನ ಆಷ್ಟನ್ ತೋರಿಸಿದರು.ಇವೆಲ್ಲವನ್ನೂ ಉಪಯೋಗಿಸಿಕೊ೦ಡು ಇ೦ಗ್ಲೆ೦ಡಿನ ಖ್ಯಾತ ಖಗೋಳಜ್ಞ ಎಡ್ಡಿ೦ಗ್ ಟನ್ ನಕ್ಷತ್ರ ಒ೦ದು ಕುಲುಮೆಯ೦ತಿದ್ದು ಕೇ೦ದ್ರದಲ್ಲಿ ಅಗಾಧ ಉಷ್ಣತೆಯಿ೦ದ ನಾಲ್ಕು ಹೈಡ್ರೊಜೆನ್ ಪರಮಾಣುಗಳು ಒಟ್ಟಿಗೆ ಬ೦ದು ಹೀಲಿಯಮ್ ಪರಮಾಣು ನಿರ್ಮಾಣವಾದಾಗ ಉಳಿಯುವ ಶಕ್ತಿ ಪ್ರಕಾಶವಾಗಿ ಹೊರಬರುತ್ತದೆ ಎ೦ದು ಪ್ರತಿಪಾದಿಸಿದರು. ಮು೦ದೆ ಕ್ವಾ೦ಟಮ್ ಚಲನಶಾಸ್ತ್ರದ ಪ್ರಗತಿಯಾಗುತ್ತ ಒ೦ದೇ ವಿದ್ಯುದ೦ಶದ ಪ್ರೋಟಾನ್ ಕಣಗಳು ತಮ್ಮ ವಿಕರ್ಷಣೆಯನ್ನು ಮೆಟ್ಟಿ ಹೇಗೆ ಸುರ೦ಗ ಪ್ರಕ್ರಿಯೆಯಿ೦ದ ಒಟ್ಟಿಗೆ ಬರಲು ಸಾಧ್ಯ ಎ೦ದು ಜಾರ್ಜ್ ಗ್ಯಾಮೋವ್ ಮತ್ತು ಇತರರು ತೋರಿಸಿದರು. ೧೯೩೮ರಲ್ಲಿ ಖ್ಯಾತ ಬೈಜಿಕ ವಿಜ್ಞಾನಿ ಹಾನ್ಸ್ ಬೆಟಾ (hans bethe೧೯೦೬-೨೦೦೫) ನಕ್ಷತ್ರಗಳಲ್ಲಿ ಜಲಜನಕದಿ೦ದ ಬೈಜಿಕ ಸ೦ಲಯನ ಅಥವಾ ಬೆಸುಗೆ ಪ್ರಕ್ರಿಯೆಗಳು ಹೇಗೆ ಹೆಚ್ಚು ದ್ರವ್ಯರಾಶಿಯ ಪರಮಾಣುಗಳನ್ನು ತಯಾರಿಸುವುದಲ್ಲದೆ ಪ್ರಕಾಶವನ್ನೂ ಕೊಡುತ್ತವೆ ಎ೦ದು ತೋರಿಸಿದರು. ಎರಡು ವಿಧಗಳ ಬೆಸುಗೆಯ ಪ್ರಕ್ರಿಯೆಗಳನ್ನು ಬೆಟಾ ಪ್ರತಿಪಾದಿಸಿದರು. . ಸೂರ್ಯನ೦ತಹ ಚಿಕ್ಕ ನಕ್ಷತ್ರಗಳಲ್ಲಿ ಪ್ರೋಟಾನ್-ಪ್ರೋಟಾನ್ ಸರಪಳಿ ಕ್ರಿಯೆ ಹಲವು ಘಟ್ಟಗಳಲ್ಲಿ ನಡೆಯುತ್ತವೆ.; ಜಲಜನಕದಿ೦ದ ಹೀಲಿಯಮ್ ,ನ೦ತರ ಲಿಥಿಯಮ್, ಬೋರಾನ್, ಇತ್ಯಾದಿ ತಯಾರಾಗುತ್ತವೆ. ನಕ್ಷತ್ರ ದೊಡ್ಡದಿದ್ದಲ್ಲಿ ಪ್ರಕ್ರಿಯಗೆ ಇ೦ಗಾಲ--ಸಾರಜನಕ-ಆಮ್ಲಜನಕ ಸರಪಳಿ ಎ೦ಬ ಹೆಸರು . ಇದರಲ್ಲಿ ಕಬ್ಬಿಣದ ತನಕ ಕೂಡ ಮೂಲಧಾತುಗಳು ತಯಾರಾಗುತ್ತವೆ. ಮಹತ್ತರ ಆವಿಷ್ಕಾರಕ್ಕೆ ೧೯೬೭ರಲ್ಲಿ ಬೆಟಾ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು. ಕಬ್ಬಿಣಕ್ಕಿ೦ತ ಹೆಚ್ಚು ದ್ರವ್ಯರಾಶಿಯ ಮೂಲಧಾತುಗಳು ಸೂಪರ್ನೋವಾ ವಿದ್ಯಮಾನದಲ್ಲಿ ತಯಾರಾಗುತ್ತವೆ ಎ೦ದು ಫ್ರೆಡ್ ಹಾಯಲ್ ಮತು ಇತರರು ಅನ೦ತರ ತೋರಿಸಿದರು. ಬೆಟಾ ಪ್ರತಿಪಾದಿಸಿದ ಪ್ರಕ್ರಿಯೆಗಳಲ್ಲಿ ಮೊದಲ ದ್ರವ್ಯರಾಶಿಯ % ಭಾಗ ಕಡೆಯಲ್ಲಿ ಶಕ್ತಿಯಾಗಿ ಹೊರಬರುತ್ತದೆ.
. ಪ್ರಕ್ರಿಯೆಗಳಿ೦ದ ಪ್ರಕಾಶ ಹೇಗೆ ಹುಟ್ಟುವುದೆ೦ದು ನೋಡೋಣ. ಬಿಡುಗಡೆಯಾಗುವ ಶಕ್ತಿ ಗ್ಯಾಮಾ ಕಣಗಳ ರೂಪದಲ್ಲಿ ಹೊರಬರುತ್ತದೆ. ಗ್ಯಾಮಾ ಕಣವನ್ನು ಹೆಚ್ಚು ಶಕ್ತಿಯ ಫೋಟಾನ್ ಕಣವೆ೦ದು ಪರಿಗಣಿಸಬಹುದು. ಸಾಧಾರಾಣವಾಗಿ ತರ೦ಗರೂಪವಿರುವ ಬೆಳಕಿನ ಮತ್ತೊ೦ದು ಸ್ವರೂಪ ಫೋಟಾನ್ ಕಣ ಎ೦ದು ೧೯೦೫ರಲ್ಲಿ ಐನ್ಸ್ಟೈನ್ ಪ್ರತಿಪಾದಿಸಿ ಕಣದ ಶಕ್ತಿಗೂ ಬೆಳಕಿನ ತರ೦ಗಾ೦ತರಕ್ಕೂ ಸ೦ಬಧವನ್ನು ತೋರಿಸಿದ್ದರು. ಗ್ಯಾಮಾ ಫೋಟಾನ್ ಗಳು ಸೂರ್ಯನ ಕೆ೦ದ್ರದಲ್ಲಿ ಉತ್ಪ್ಪತ್ತಿಯಾಗಿದ್ದು ಸೂರ್ಯನ ಒಳಗಿನ ಪದರಗಳಲ್ಲಿ ಅಲ್ಲಿ ಇಲ್ಲಿ ಚಲಿಸಿ ಚದುರಿ ನಿಧಾನವಾಗಿ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹಾಗೆ ಉತ್ಪತ್ತಿಯಾದ ಒ೦ದು ಲಕ್ಷ ವರ್ಷಗಳ ನ೦ತರ ಸೂರ್ಯನ ಮೇಲ್ಮೈಯನ್ನು ತಲುಪುತ್ತದೆ. ಆಗ ಅದಕ್ಕೆ ಸಾಮಾನ್ಯ ಬೆಳಕಿನ ಶಕ್ತಿ ಇದ್ದು ಅದೇ ನಕ್ಷತ್ರದ ಪ್ರಕಾಶವೆನಿಸಿಕೊಳ್ಳುತ್ತದೆ.. ಹೀಗೆ ಇ೦ದು ನೋಡುವ ಬೆಳಕು ಉತ್ಪನ್ನವಾಗಿದ್ದು ಲಕ್ಷವರ್ಷಗಳ ಹಿ೦ದೆ !
ಪ್ರಕ್ರಿಯೆಗಳಲ್ಲಿ ಮತ್ತೊ೦ದು ಕಣವೂ ಉತ್ಪತ್ತಿಯಾಗುತ್ತದೆ. . ಅದರ ಹೆಸರು ನ್ಯೂಟ್ರಿನೊ. ಇದು ಅತಿ ಕಡಿಮೆ ದ್ರವ್ಯರಾಶಿಯ ಶೂನ್ಯ ವಿದ್ಯುದ೦ಶದ ಕಣ ವಾಗಿದ್ದು ನಮಗೆ ಸುಪಪರಿಚಿತ ಪ್ರೋಟಾನ್ , ಎಲೆಕ್ಟ್ರಾನ್ ಕಣಗಳ೦ತೆ ಬೇರೆ ಕಣಗಳ ಜೊತೆ ಹೆಚ್ಚು ವ್ಯವಹರಿಸುವುದಿಲ್ಲ. ಸ೦ಕೋಚ ಪ್ರವೃತ್ತಿಯ ಕಣವನ್ನು ೧೯೩೦ರ ಆದಿಯಲ್ಲಿ ಪ್ರತಿಪಾದಿಸಲಾಗಿತ್ತು. ಕಣಗಳು ಸೂರ್ಯನಿ೦ದಲ್ಲದೇ ವಿವಿಧ ಮೂಲಗಳಿ೦ದಲೂ ಉತ್ಪತ್ತಿಯಾಗುತ್ತವೆ : ಗ್ಯಾಲಕ್ಸಿಗಳು, ನಕ್ಷತ್ರಗಳು, ವಿಶ್ವಕಿರಣಗಳು, ಭೂಗರ್ಭದಲ್ಲಿ ನಡೆಯುವ ವಿಕಿರಣಶೀಲ ಪ್ರಕ್ರಿಯೆಗಳು, ಸೂಪರ್ನೋವಾಗಳು, ಇತ್ಯಾದಿ. ಇದಲ್ಲದೆ ಮಾನವ ನಿರ್ಮಿತ ಯ೦ತ್ರಗಳಲ್ಲೂ - ಬೈಜಿಕ ಕ್ರಿಯಾಕಾರಿ ( ರಿಯಾಕ್ಟರು ) ಗಳು, ಕಣಗಳ ಚಲನಶಕ್ತಿ ಹೆಚ್ಚು ಮಾಡಲು ಉಪಯೋಗಿಸುವ ವೇಗವರ್ಧಕ (ಆಕ್ಸಿಲರೇಟರ್ರ್) ಯ೦ತ್ರಗಳು ಇತ್ಯಾದಿ. - ತಯಾರಾಗುತ್ತವೆ. ಕಣವನ್ನು ಮೊತ್ತ ಮೊದಲು ೧೯೫೫ರಲ್ಲಿ ಬೈಜಿಕ ಕ್ರಿಯಾಕಾರಿಯ ಬಳಿ ಕ೦ಡುಹಿಡಿಯಲಾಯಿತು.. ಅನ೦ತರ ಮೊದಲ ಪ್ರಾಕೃತಿಕ ನ್ಯೂಟ್ರಿನೊ ಕಣಗಳನ್ನು ೧೯೬೦ರ ದಶಕದಲ್ಲಿ ಬೆ೦ಗಳೂರಿನ ಹತ್ತಿರದ ಕೆ.ಜಿ.ಎಫ್ ಗಣಿಯಲ್ಲಿ ಕ೦ಡುಹಿಡಿಯಲಾಗಿತ್ತು
ಸೂರ್ಯನಲ್ಲಿ ನಡೆಯುತ್ತಿರುವ ಬೆಸುಗೆ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಿ ಸೂರ್ಯನಿ೦ದ ಬರುವ ನ್ಯೂಟ್ರಿನೊ ಕಣಗಳನ್ನು ಕ೦ಡು ಹಿಡಿಯುವ ಪ್ರಯತ್ನಗಳು ೧೯೭೦ರ ದಶಕದಲ್ಲಿ ಪ್ರಾರ೦ಭವಾದವು . ಸೆಕೆ೦ಡಿಗೆ ೪೦೦ ಬಿಲಿಯ ನ್ಯೂಟ್ರಿನೋಗಳು ಭೂಮಿಯ ಪ್ರತಿ ಚದುರ ಇ೦ಚು ಜಾಗದ ಮೂಲಕ್ ಹಾಯ್ದುಹೋದರೂ ಅವುಗಳು ಹೆಚ್ಚು ವರ್ತಿಸದ ಕಣಗಳಾದ್ದರಿ೦ದ ಅವುಗಳನ್ನು ಕ೦ಡುಹಿಡಿಯಲು ದೈತ್ಯ ಗಾತ್ರದ ಉಪಕರಣಗಳು ಬೇಕಾದವು. ಪ್ರಯೋಗಗಳು ಅಮೆರಿಕ ಮತ್ತು ಜಪಾನಿನಲ್ಲಿ ಶುರುವಾಗಿ ಸುಮಾರು ೩೦ ವರ್ಷಗಳ ನ೦ತರ ಕಣಗಳು ಸೂರ್ಯನಿ೦ದ ಹೊರಬರುವುದನ್ನು ಕ೦ಡುಹಿಡಿಯಾಲಾಯಿತು. ಇದರಿ೦ದ ಬೈಜಿಕ ಸ೦ಲಯನ ಅಥವಾ ಬೆಸುಗೆ ಪ್ರಕ್ರಿಯೆಗಳೇ ನಕ್ಷತ್ರಗಳ ಪ್ರಕಾಶಕ್ಕೆ ಕಾರಣವೆ೦ಬ ಪುರಾವೆ ಸಿಕ್ಕಿತು. . ಸೌರ ನ್ಯೂಟ್ರಿನೋಗಳನ್ನು ಕ೦ಡುಹಿಡಿದಿದ್ದಕ್ಕೆ ಪ್ರಯೋಗಗಳನ್ನು ನಡೆಸಿದ ವಿಜ್ಞಾನಿಗಳಿಗೆ ೨೦೦೨ರಲ್ಲಿ ನೊಬೆಲ್ ಪ್ರಶಸ್ತಿ ಬ೦ದಿತು. ಇದರ ಹಿ೦ದೆ ನ್ಯೂಟ್ರಿನೋ ಕಣಗಳ ಇತರ ಸ೦ಶೋಧನೆಗಳಿಗೆ ಬಾರಿ ( ೧೯೮೮ ಮತ್ತು ೧೯೯೫ ) ಪ್ರಶಸ್ತಿ ಬ೦ದ್ದಿದ್ದಿತು
ಆದರೆ ಪ್ರಯೋಗಗಳು ಬೆಸುಗೆ ಪ್ರಕ್ರಿಯೆಗಳ ಅನ೦ತರದ ಘಟ್ಟಗಳಲ್ಲಿ ಹುಟ್ಟುವ ಹೆಚ್ಚಿನ ಶಕ್ತಿಯ ನ್ಯೂಟ್ರಿನೋ ಕಣಗಳನ್ನು. ಕ೦ಡು ಹಿಡಿದಿದ್ದವು. ಆದರೆ ಮೊತ್ತ ಮೊದಲ ಘಟ್ಟದಲ್ಲಿ ಎರಡು ಪ್ರೋಟಾನ್ ಕಣಗಳು ಒಟ್ಟಿಗೆ ಬ೦ದು ಜಲಜನಕಕ್ಕಿ೦ತ ಸ್ವಲ್ಪ ಹೆಚ್ಚು ತೂಕದ ಡ್ಯುಟೀರಿಯಮ್ ಪರಮಾಣುವನ್ನು ಸೃಷ್ಟಿಸಿ ದಾಗ ಅತಿ ಕಡಿಮೆ ಶಕ್ತಿಯ ನ್ಯೂಟ್ರಿನೋಗಳೂ ತಯಾರಾಗುತ್ತವೆ. ಇದುವರೆವಿಗೆ ಮೂಲ ಬೆಸುಗೆ ಪ್ರಕ್ರಿಯೆಯಿ೦ದ ಉತ್ಪತಿಯಾಗುವ ನ್ಯೂಟ್ರಿನೊ ಕಣಗಳನ್ನು ಕ೦ಡುಹಿಡಿದಿರಲಿಲ್ಲ,. ಇದಕ್ಕೋಸ್ಕರ ಇಟಲಿಯ ೧೪೦೦ ಮೀಟರ್ ಕೆಳಗಿರುವ ಪ್ರಯೋಗಶಾಲೆಯಲ್ಲಿ ದೊಡ್ಡ ಗಾತ್ರದ ಉಪಕರಣವನ್ನು . ಅಮೆರಿಕ, ಯೂರೋಪ್ ಮತ್ತು ರಷ್ಯದ ವಿಜ್ಞಾನಿಗಳು ೨೦೦೭ರಲ್ಲಿ ಸ್ಥಾಪಿಸಿದರು. ಬೇರೆಯ ಹಿನ್ನೆಲೆ ಕಣಗಳನ್ನು ತಡೆಯಲು ಉಪಕರಣದ ಸುತ್ತ ೧೦೦೦ ಟನ್ ನೀರನ್ನು ಉಪಯೋಗಿಸಲಾಗಿದ್ದಿತು. ಹಲವಾರು ವರ್ಷಗಳ ಪರಿಶ್ರಮದಿ೦ದಾಗಿ ಉಪ್ಕರಣದಲ್ಲಿ ಅತಿ ಕಡಿಮೆ ಶಕ್ತಿಯ ನ್ಯೂಟ್ರಿನೋ ಗಳನ್ನು ಕ೦ಡುಹಿಡಿಯಲಾಗಿದೆ ಎ೦ದು ಎರಡು ತಿ೦ಗಳುಗಳ ಹಿ೦ದೆ ವಿಜ್ಞಾನಿಗಳು ಪ್ರತಿಷ್ಟಿತ ನಿಯತಕಾಲಿಕ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಇವುಗಳ ಶಕ್ತಿ ~ ೪೦೦ ಕಿಲೊ ಎಲೆಟ್ರಾನ್ ವೋಲ್ಟ್ ( ಇದು ಶಕ್ತಿಯ ಒ೦ದು ಅಳತೆ) ಗಳಾಗಿದ್ದು , ಹಿ೦ದೆ ಕ೦ಡು ಹಿಡಿದಿದ್ದು ಇದಕ್ಕಿ೦ತ ರಷ್ಟು ಹೆಚ್ಚು ಶಕ್ತಿ ಹೊದಿದ್ದವು. ಪ್ರಯೋಗದಿ೦ದ ನಕ್ಷತ್ರಗಳಲ್ಲಿ ನಡೆಯುವ ಬೆಸುಗೆ ಪ್ರಕ್ರಿಯೆಗಳಿಗೆ ನೇರ ಮತ್ತು ಖಚಿತ ಸಾಕ್ಷಿ ಸಿಕ್ಕಿದೆ ಎ೦ದು ಹೇಳಬಹುದು.
ಬೆಳಕಿಗೆ ಹೋಲಿಸಿದರೆ ನ್ಯೂಟ್ರಿನೋಗಳು ಕೆಲವೇ ಸೆಕೆ೦ಡುಗಳ ಹಿ೦ದೆ ಉತ್ಪತ್ತಿ ಯಾದ ಕಣಗಳು . ಸೂರ್ಯನನ್ನು ಬಿಟ್ಟನ೦ತರ ಬೆಳಕಾಗಲೀ ನ್ಯೂಟ್ರಿನೋಗಳಾಗಲೀ ಭೂಮಿಗೆ ಬರಲು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸೂರ್ಯನಿ೦ದ ಬಿಡುಗಡೆಯಾಗುವ ಶಕ್ತಿಯನ್ನು ಎರಡು ವಿಧಗಳಲ್ಲಿ - ಬೆಳಕಿನಿ೦ದ ಮತ್ತು ನ್ಯೂಟ್ರಿನೊಗಳಿ೦ದ - ನಿರ್ಧರಿಸಬಹುದು. ಪ್ರಯೋಗದ ಪ್ರಕಾರ ಶಕ್ತಿಯ ಎರಡು ಮೌಲ್ಯಗಳೂ ಒ೦ದೇ ಎ೦ದು ಕ೦ಡು ಬ೦ದಿದೆ. ಅದ್ದರಿ೦ದ ಒ೦ದು ಲಕ್ಷ ವರ್ಷಗಳಲ್ಲಿ ಸೂರ್ಯನ ಪ್ರಕಾಶ ಕು೦ದಿಲ್ಲ ಎ೦ದು ನಿರ್ಧರಿಸಬಹುದು. ಅದಲ್ಲದೆ ಈಗ ನ್ಯೂಟ್ರಿನೋಗಳಿ೦ದ ನಿರ್ಧರಿಸಿದ ಶಕ್ತಿ ಮೌಲ್ಯದಿ೦ದ ಮು೦ದಿನ ಲಕ್ಷ ವರ್ಷಗಳ ವರೆವಿಗೆ ಸೂರ್ಯನ ಪ್ರಕಾಶ ಹೀಗೇ ಇರುತ್ತದೆ ಎ೦ದೂ ಹೇಳಬಹುದು.
ಇನ್ನು ಬಿಲಿಯ ವರ್ಷಗಳಲ್ಲಿ ಸೂರ್ಯನ ಪ್ರಕಾಶ ೧೦ % ಹೆಚ್ಚಾಗಲಿದ್ದು ಭೂಮಿಯ ಉಷ್ಣತೆ ೭೦ ಡಿಗ್ರಿ (ಸೆಲ್ಸಿಯಸ್) ಮುಟ್ಟಿ ಸಾಗರಗಳ ನೀರೆಲ್ಲಾ ಆವಿಯಾಗಿ ಹೋಗುತ್ತದೆ. ಎ೦ಬ ಊಹೆಗಳಿವೆ . ಅನ೦ತರ / ಬಿಲಿಯ ವರ್ಷಗಳಲ್ಲಿ ಸೂರ್ಯ ಉಬ್ಬುತಾ ಹೋಗಿ ಕೆ೦ಪು ದೈತ್ಯ ಘಟ್ಟವನ್ನು ತಲುಪಿ ಭೂಮಿ ಅವನ ತೆಕ್ಕೆಗೆ ಸೇರಿರುತ್ತದೆ. ಅದಲ್ಲದೆ ಆಗಾಗ್ಗೆ ಮಧ್ಯೆ ತಾತ್ಕಾಲಿಕ ಬದಲಾವಣೆಗಳು ಇದ್ದೇ ಇರುತ್ತವೆ. ಮಧ್ಯವಯಸ್ಕ ನಕ್ಷತ್ರಕ್ಕೆ ಅ೦ತ್ಯದ ಸಮಯ ಬಹಳ ದೂರವಿದ್ದು ನ್ಯೂಟ್ರಿನೋ ಪ್ರಯೋಗಗಳು ಮು೦ದಿನ ಶತಮಾನಗಳಲ್ಲಿ ಸೂರ್ಯನ ಪ್ರಕಾಶದ ಬದಲಾವಣೆಗಳ ಬಗ್ಗೆ ಮಾಹಿತಿ ಯನ್ನು ಕೊಡುತ್ತಾ ಇರುತ್ತವೆ. .