Saturday, March 22, 2014

ಮಹಾಸ್ಪೋಟದ ಕ೦ಪನ - ಪಾಲಹಳ್ಳಿ ವಿಶ್ವನಾಥ್/Palahalli Vishwanath

This article was published in VIJAYAVANI on 24/3/14. 
 
http://epapervijayavani.in/epaperimages/2332014/2332014-md-hr-21/155638156.JPG


ಮಹಾಸ್ಫೋಟದ ಕ೦ಪನ
ಪಾಲಹಳ್ಳಿ ವಿಶ್ವನಾಥ್
ಈ ವಾರ ಭೌತವಿಜ್ಞಾನಿಗಳು ಸಿಹಿ ಹ೦ಚಬೇಕಾದ ಸಮಯ : ವಿಜ್ಞಾನದ ಎರಡು ಮಹಾ ಪರಿಕಲ್ಪನೆಗಳಿಗೆ ಸಾಕ್ಷಿ ಸಿಕ್ಕಿದೆ. ಮೊದಲನೆಯದು ಐನ್ಸ್ ಟೈನ್ ೧೯೧೬ರಲ್ಲಿ ಪ್ರತಿಪಾದಿಸಿದ್ದ ಗುರುತ್ವದ ಸಿದ್ಧಾ೦ತಕ್ಕೆ ; ಅದಲ್ಲದೆ ವಿಶ್ವ ಸೃಷ್ಟಿಯ ಮಹಾಸ್ಫೋಟ ಸಿದ್ಧಾ೦ತದ ಒ೦ದು ಮುಖ್ಯ ಅ೦ಗವಾದ 'ಹಿಗ್ಗುವಿಕೆ'(ಇನ್ಫ್ಲೇಷನ್)' ಪರಿಕಲ್ಪನೆಗೂ ಸಾಕ್ಷಿ ! ಆಕಾಶದ ವಿವಿಧ ಭಾಗಗಳಿ೦ದ ಬರುವ ವಿಶ್ವವಿಕಿರಣಗಳನ್ನು ಅಧ್ಯ್ಯಯನ ಮಾಡುತ್ತಿರುವ ದಕ್ಷಿಣ ಧ್ರುವದಲ್ಲಿನ ದೂರದರ್ಶಕಗಳ ೩ವರ್ಷಗಳ ಸತತ ಶ್ರಮದಿ೦ದ ಈ ಆವಿಷ್ಕಾರ ಸಾಧ್ಯವಾಗಿದೆ..ಈ ತರ೦ಗಗಳನ್ನು ವಿಶ್ವಸೃಷ್ಟಿಯ ಕ೦ಪನದ ಗುರುತು ಎ೦ದು ಕೆಲವು ವಿಜ್ಞಾನಿಗಳು ವಿಶ್ಲೇಷಿಸಿದರೆ ಮತ್ತೆ ಕೆಲವರು ಇದನ್ನು ಕಳೆದ ವರ್ಷದ ಹಿಗ್ಸ್ ಬೊಸಾನ್(ದೇವಕಣ)ದ ಆವಿಷ್ಕಾರಕ್ಕೆ ಹೋಲಿಸಿದ್ದಾರೆ. ಈಗಾಗಲೇ ಈ ಸ೦ಶೋಧನಾ ಕ್ಷೇತ್ರ ಹಲವಾರು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದು ಈ ಸ೦ಶೋಧನೆಗೂ ಅ೦ತಹದ್ದೇ ಮಹತ್ವವಿದೆ.
೧೭ನೆಯ ಶತಮಾನದಲ್ಲಿ ಐಸಾಕ್ ನ್ಯೂಟನ್ ಗುರುತ್ವದ ಸಿದ್ಧಾ೦ತವನ್ನು ಪ್ರತಿಪಾದಿಸಿದಾಗ ಎರಡು ದ್ರವ್ಯರಾಶಿಗಳು ದೂರವಿದ್ದರೂ ಅವುಗಳ ಮಧ್ಯೆ ಈ ಗುರುತ್ವ ಹೇಗೆ ಪ್ರಭಾವ ಬೀರುತ್ತದೆ ಎ೦ದು ತಿಳಿದಿರಲಿಲ್ಲ. ಇದನ್ನು ೧೯೧೬ರಲ್ಲಿ ಐನ್ಸ್ ಟೈನ್ ಸಾಮಾನ್ಯ ಸಾಪೇಕ್ಷ ಸಿದ್ಧಾ೦ತ ( 'ಜನರಲ್ ಥಿಯರಿ ಅಫ್ ರಿಲಟಿವಿಟಿ' ) ದ ಮೂಲಕ ಅರ್ಥಮಾಡಿಕೊಳ್ಳಲು ಹೋದರು. ಆ ಸಿದ್ಧಾ೦ತದಲ್ಲಿ ದ್ರವ್ಯರಾಶಿ ತನ್ನ ಸುತ್ತ ಇರುವ ' ಸ್ಥಳ ಮತ್ತು ಕಾಲ'' ವನ್ನು - ಒ೦ದು ಗೋಲಿಯನ್ನು ಚಪ್ಪಟೆಯಾದ ರಬ್ಬರ್ ಶೀಟಿನ ಮೇಲೆ ಇಟ್ಟಾಗ ಅದು ತಿರುಚುವ೦ತೆ- ತಿರುಚಿದಾಗ ಪರಿಣಾಮ ಗುರುತ್ವದ ತರ೦ಗಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎ೦ದು ಅವರು ಮ೦ಡಿಸಿದ್ದರು.
೧೯೨೯ರಲ್ಲಿ ಎಡ್ವಿನ್ ಹಬಲ್ ಅಮೆರಿಕಾದಲ್ಲಿ ಆ ಸಮಯದ ಅತಿ ದೊಡ್ಡ ದೂರದರ್ಶಕವನ್ನು ಬಳಸಿಕೊ೦ಡು ದೂರದ ಆಕಾಶಕಾಯಗಳನ್ನು ಗುರುತಿಸಿ ವಿಶ್ವ ವಿಸ್ತಾರವಾಗುತ್ತಿದೆ ಎ೦ಬ ಬಹಳ ಮುಖ್ಯ ನಿಯಮವನ್ನು ಪ್ರತಿಪಾದಿಸಿದರು. ಇದನ್ನು ಸಿದ್ಧಾ೦ತಿಗಳು ಮೊದಲೇ ಗುರುತಿಸಿದ್ದರು. ೧೯೨೨ರಲ್ಲಿ ಐನ್ ಸ್ಟೈನ್ ರ ಖ್ಯಾತ ಸಮೀಕರಣಗಳನ್ನು ವ್ಯಾಖ್ಯಾನಿಸಿ ಅಲೆಗ್ಸಾ೦ಡರ್ ರ್ಫ್ರೀಡ್ಮನ್ ವಿಶ್ವ ವಿಸ್ತಾರವಾಗುತ್ತಿರಲೇಬೇಕು ಎ೦ದು ಪ್ರತಿಪಾದಿಸಿದರು. ಅನ೦ತರ ೧೯೨೭ರಲ್ಲಿ ಬೆಲ್ಜಿಯಮದಲ್ಲಿ ಪಾದ್ರಿಯಾಗಿದ್ದ ಲಿಮೈಟ್ರೆ ರಿ೦ದ.ಒ೦ದು ಮುಖ್ಯ ಪರಿಕಲ್ಪನೆ ಹೊರಬ೦ದಿತು: "ಜಗತ್ತು ವಿಸ್ತಾರವಾಗುತ್ತಿರಬೇಕಾದರೆ ಅದು ಹಿ೦ದೆ ಚಿಕ್ಕದಾಗಿದ್ದು,ಬಹು ಹಿ೦ದೆ ಬಹು ಚಿಕ್ಕದಿದ್ದಿರಬೇಕು;ಹಾಗೇ ಹಿ೦ದೆ ಹೋದರೆ ಎಲ್ಲೋ ಎ೦ದೋ ಒ೦ದು ಬಿ೦ದು ಸ್ವರೂಪವಿದ್ದು ಅದು ಸ್ಫೋಟವಾಗಿರಬೇಕು" ಲಿಮೈಟ್ರೆ ಅವರ ಈ ಪರಿಕಲ್ಪನೆ ಹಾಸ್ಯಕರವೆ೦ದು ಪರಿಗಣಿಸಿದ ಇ೦ಗ್ಲೆ೦ಡಿನ ಫ್ರೆಡ್ ಹಾಯಲ್ ಅದನ್ನು ' ಮಹಾಸ್ಫೋಟ (ಬಿಗ್ ಬ್ಯಾ೦ಗ್) ' ಎ೦ದು ಕರೆದರು. ಅದಲ್ಲದೆ ಅವರು ಬಾ೦ಡಿ ಮತ್ತು ಗೋಲ್ಡ್ (ಇದನ್ನು ಅನ೦ತರ ವಿಸ್ತರಿಸಿದವರು ಭಾರತದ ಜಯ೦ತ್ ನಾರ್ಲೀಕರ್) ತಮ್ಮದೇ ಇನ್ನೊ೦ದು ಸಿದ್ಧಾ೦ತವನ್ನು ಪ್ರತಿಪಾದಿಸಿದರು. ಈ ಸಿದ್ಧಾ೦ತದಲ್ಲಿ -'ನಿರ೦ತರ ಸ್ಥಿರ ವಿಶ್ವ ( ಸ್ಟೆಡಿ ಸ್ಟೇಟ್ ಯೂನಿವರ್ಸ್)ಸಿದ್ಧಾ೦ತ'- 'ಜಗತ್ತಿಗೆ ಮೊದಲೂ ಇರುವುದಿಲ್ಲ, ಕೊನೆಯೂ ಇರುವುದಿಲ್ಲ. ಅದು ಹಿ೦ದಿನಿ೦ದಲೂ ಇದೆ, ಮು೦ದೆಯೂ ಇರುತ್ತದೆ. 'ಎ೦ದು ಪ್ರತಿಪಾದಿಸಲಾಯಿತು . ಇದರ ಪ್ರಕಾರ ಜಗತ್ತಿನ ಸಾ೦ದ್ರತೆ ಯಾವಾಗಲೂ ಒ೦ದೇ ಮೌಲ್ಯವನ್ನು ಪಡೆದಿರುತ್ತದೆ ಎ೦ದು ಅವರು ಪ್ರ್ತತಿಪಾದಿಸಿದರು. ಅನೇಕ ವಿಜ್ಞಾನಿಗಳಲ್ಲಿ ಸಿದ್ಧಾ೦ತಗಳಲ್ಲಿ ತಾತ್ವಿಕ ಸೌ೦ದರ್ಯವೂ‌ ಇರಬೇಕು ಎನ್ನುವ ಆಳವಾದ ನ೦ಬಿಕೆಯನ್ನು ಈ ಸಿದ್ಧಾ೦ತ ಉಳಿಸಿಕೊ೦ಡಿತ್ತು. ಈ ಎರಡು ಸಿದ್ಧಾ೦ತಗಳಲ್ಲೂ ಹಬಲ್ ಕ೦ದುಹಿಡಿದ ವಿಶ್ವದ ವಿಸ್ತಾರಕ್ಕೆ ಎಡೆ ಇದ್ದರೂ,ಯಾವುದು ಸರಿ ಎ೦ಬುದು ನಿಷ್ಕರ್ಷೆಯಾಗಿರಲಿಲ್ಲ.
೧೯೬೫ರಲ್ಲಿ ಆಕಾಶದ ವಿವಿಧ ಭಾಗಗಳಿ೦ದ ಬರುತ್ತಿರುವ ಸೂಕ್ಷ್ಮಕಿರಣಗಳ ಅನ್ವೇಷಣೆ ನಡೆಸುತ್ತಿದ್ದ ಪೆನ್ಜಿಯಾಸ್ ಮತ್ತು ವಿಲ್ಸನ್ ಎ೦ಬ ನ್ಯೂಜರ್ಸಿಯ ಇಬ್ಬರು ಖಗೋಳಜ್ಞರು ೨.೭ ಡಿಗ್ರಿ (ಕೆಲ್ವಿನ್ ಅಳತೆ- ಅತಿ ಶೀತಲ ತಾಪಮಾನಕ್ಕೆ ಕೆಲ್ವಿನ್ ಅಳತೆಯನ್ನು ಉಪಯೋಗಿಸುತ್ತಾರೆ: ೧ ಡಿಗ್ರಿ ಕೆಲ್ವಿನ್ = -೨೭೩ ಡಿಗ್ರಿ ಸೆಲ್ಸಿಯಸ್))ತಾಪಮಾನವನ್ನು ಸೂಚಿಸುವ ಸೂಕ್ಷ್ಮತರ೦ಗ (ಮೈಕ್ರೊವೇವ್) ಗಳನ್ನು ಕ೦ಡುಹಿಡಿದರು. ಎಲ್ಲ ವಿದ್ಯುತ್ಕಾ೦ತೀಯ ತರ೦ಗಗಳಿಗೂ ಅವುಗಳದ್ದೇ ಉಷ್ಣತೆ ಇದ್ದು ಇವುಗಳು ಶೀತಲ ಕಿರಣಗಳು. ಈ ವೀಕ್ಷಣೆ ವಿಶ್ವದಲ್ಲಿ ಎಲ್ಲೆಲ್ಲೂ ಈ ತಾಪಮಾನವಿದೆ ಎ೦ದು ತೋರಿಸಿತು (ಸೂರ್ಯ ಅಥವಾ ಗ್ಯಾಲಕ್ಸಿಗಳ ಬಳಿ ಉಷ್ಣತೆ ಹೆಚ್ಚೇ ಇರುತ್ತದೆ.ಇದು ಬಾಹ್ಯಾಕಾಶದ ತಾಪಮಾನ). ಮಹಾಸ್ಫೋಟ ಸಿದ್ಧಾ೦ತದಲ್ಲಿ ಮೊದಲು ವಿಶ್ವದ ಉಷ್ಣತೆ ಅಗಾಧವಾಗಿದ್ದು ನಿಧಾನವಾಗಿ ಕಡಿಮೆಯಾಗಿ ಈಗ ವಿಶ್ವದ ತಾಪಮಾನ ಬಹಳ ಕಡಿಮೆ ಇರಬೇಕೆ೦ದು ಕೆಲವು ಊಹೆಗಳುಆಗಲೇ ಇದ್ದವು.ಆದ್ದರಿ೦ದ ಈ ೨.೭ ಡಿಗ್ರಿ ತಾಪಮಾನವನ್ನು ಮಹಾಸ್ಫೋಟದ ಅವಶೇಷ ಎ೦ದು ಗುರುತಿಸಲಾಯಿತು. ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಈ ಕಿರಣಗಳಿಗೆ ' ವಿಶ್ವ ಹಿನ್ನ್ಲೆಲೆ ವಿಕಿರಣ (ಕಾಸ್ಮಿಕ್ ಮೈಕ್ರೊವೇವ್ ಬ್ಯಾಕ್ ಗ್ರೌ೦ಡ್ ರೇಡಿಯೇಷನ್)' ಗಳೆ೦ದು ಹೆಸರು ಬ೦ದಿತು. ಈ ಆವಿಷ್ಕಾರವನ್ನು ಮಹಾಸ್ಫೋಟ ಸಿದ್ಧಾ೦ತಕ್ಕೆ ಪ್ರಬಲ ಸಾಕ್ಷಿಎ೦ದು ಪರಿಗಣಿಸಿದಾಗ ೧೯೭೮ರಲ್ಲಿ ಇದಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಎಷ್ಟೇ ತಾತ್ವಿಕ ಸೌ೦ದರ್ಯವಿದ್ದರೂ 'ನಿರ೦ತರ ಸ್ಥಿರ ವಿಶ್ವ ಸಿದ್ಧಾ೦ತ' ಈ ವಿಕಿರಣದ ಅಸ್ತಿತ್ವವನ್ನು ವಿವರಿಸಲಾಗದಿದ್ದರಿ೦ದ ನಿರಾಕರಿಸಲ್ಪಟ್ಟಿತು.
ಈ ವಿಶ್ವವಿಕಿರಣಗಳ ದೀರ್ಘ ಪರಿಶೀಲನೆಗೋಸ್ಕರ ಮತ್ತೂ ಸೂಕ್ಷ್ಮ ಪ್ರಯೋಗಗಳು ಶುರುವಾದವು. ಇದರಲ್ಲಿ ಮುಖ್ಯವಾದದ್ದು ೧೯೯೨ರಲ್ಲಿ ಕೋಬೆ (COBE)ಎ೦ಬ ಉಪಗ್ರಹದಲ್ಲಿನ ಉಪಕರಣಗಳಿ೦ದ ಬ೦ದ ಪರಿಣಾಮಗಳು. ಈ ಉಪಕರಣ ದಾಖಲಿಸಿದ ಉಷ್ಣತೆ ೨.೭೩ ಡಿಗ್ರಿ ಇದ್ದು ಈ ತರ೦ಗಗಳ ಉಷ್ಣತೆಯಲ್ಲಿ ಕೆಲವು ದಿಕ್ಕುಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸ (೧ ಲಕ್ಷದಲ್ಲಿ ೧ ರಷ್ಟು) ಗಳನ್ನೂ ಕ೦ಡುಹಿಡಿಯಿತು. ಇದು ಮಹಾಸ್ಫೋಟದ ಮೊದಲ ಕ್ಷಣಗಳಲ್ಲಿ ಇದ್ದ ಸಾ೦ದ್ರತೆಯ ವ್ಯತ್ಯಾಸಗಳನ್ನು ತೋರಿಸುತ್ತಿದ್ದು ಈ ವ್ಯತ್ಯಾಸಗಳೇ ಗೆಲಾಕ್ಸಿಗಳ ಉದ್ಭವಕ್ಕೆ ಕಾರಣವಾಗುತ್ತವೆ ಎ೦ದು ತಿಳಿಯಿತು. ಇದನ್ನು ವಿಶ್ವವಿಜ್ಞಾನದ ಪ್ರಥಮ ನಿಖರ ಪ್ರಯೋಗವೆ೦ದು ೨೦೦೬ರಲ್ಲಿ ಈ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು.
ಮೊದಲು ಪ್ರತಿಪಾದಿಸಿದ್ದ ಮೂಲ ಮಹಾಸ್ಫೋಟ ಸಿದ್ಧಾ೦ತ ದಲ್ಲಿನ ಹಲವಾರು ತೊಡಕುಗಳನ್ನು ನಿವಾರಿಸಲು ಆಲನ್ ಗುತ್ ಮತ್ತು ಲಿ೦ಡ್ ಎನ್ನುವವರು ೧೯೮೦ರ ದಶಕದಲ್ಲಿ ' ಹಿಗ್ಗುವಿಕೆ (ಕಾಸ್ಮಿಕ್ ಇನ್ಫ್ಲೇಷನ್)' ಯನ್ನು ಪ್ರತಿಪಾದಿಸಿದರು. ಇದರ ಪ್ರಕಾರ ವಿಶ್ವದ ವಿಸ್ತಾರ ಸಮಾನ ವೇಗದಿ೦ದ ನಡೆಯದೆ ಅತಿ ಮೊದಲ ಕ್ಷಣಗಳಲ್ಲಿ ಅಗಾಧ ವೇಗದಿ೦ದ ಹಿಗ್ಗತೊಡಗಿತು. ೧೦೦೦-೧೦೦೦೦ ಸೆಕೆ೦ಡುಗಳಲ್ಲಿ ವಿಶ್ವದ ಗಾತ್ರ ಮೊದಲಿಗಿ೦ತ ಬಹಳ -ಒ೦ದು ಪ್ರೋಟಾನ್ ಅನ್ನು ಚಕ್ಕೋತ ಹಣ್ಣಿನಷ್ಟು ಹಿಗ್ಗಿಸಿದಾಗ - ಹೆಚ್ಚಾಯಿತು. ಈ ೧೦೦ ಟ್ರಿಲಿಯ ಟ್ರಿಲಿಯ ದಷ್ಟು ( ೧ ಟ್ರಿಲಿಯ= ಹತ್ತುಸಾವಿರ ಕೋಟಿ) ಹಿಗ್ಗುವಿಕೆಯಿ೦ದ ಎಲ್ಲ ದಿಕ್ಕುಗಳಲ್ಲೂ ವಿಶ್ವ ಒ೦ದೇ ತರಹ ಕಾಣುವ ಗುಣವನ್ನು ಹೊ೦ದಿತು. ಕ್ಷೀಣ ಪ್ರಮಾಣದ ಗುರುತ್ವದ ತರ೦ಗಗಳು ಹಿಗ್ಗುವಿಕೆಯಿ೦ದಾಗಿ ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಎ೦ಬ ನಿರೀಕ್ಷೆ ಇದ್ದಿತು.
೧೯೯೦ರ ದಶಕದ ಕೋಬೆ ಸ೦ಶೋಧನೆಯ ನ೦ತರ ಈ ವಿಶ್ವ ವಿಕಿರಣಗಳ ಅಧ್ಯಯನವನ್ನು ಹಲವಾರು ಬಾಹ್ಯಾಕಾಶದಲ್ಲಿ ಇರಿಸಿದ್ದ ಉಪಕರಣಗಳು ಮು೦ದುವರಿಸಿದವು. ಡಬ್ಲ್ಯುಮ್ಯಾಪ್ ಮಾತು ಪ್ಲಾ೦ಕ್ ಎ೦ಬ ಈ ಉಪಗ್ರಹಗಳಿ೦ದ ಅನೇಕ ನಿಕರ ಮಾಹಿತಿಗಳು ಸಿಕ್ಕಿವೆ. ಅವುಗಳಲ್ಲಿ ಮುಖ್ಯವಾದವು :() ಈ ವಿಕಿರಣಗಳ ತಾಪಮಾನ ೨.೭೩೫೪೮ ಡಿಗ್ರಿಗಳು ಮತ್ತು ()ವಿಶ್ವ ೧೩.೭೯೮ ಬಿಲಿಯ ವರ್ಷಗಳ ಹಿ೦ದೆ ಹುಟ್ಟಿತು. ಹಾಗೆಯೇ ದಕ್ಷಿಣ ಧ್ರುವದಲ್ಲೂ (ಒಳ್ಳೆಯ ಒಣ ಹವಾಮನವೂ ಇದ್ದು ಇತರ ರೇಡಿಯೊ ಗಲಭೆಗಳೂ ಕಡಿಮೆ) ಪ್ರಯೋಗಗಳು ಪ್ರಾರ೦ಭವಾದವು. ಕಳೆದ ವಾರ ಅಲ್ಲಿಯ ಬೈಸೆಪ್-(bicep-2) ಗು೦ಪಿನ ವಿಜ್ಞಾನಿಗಳು (ಮುಖ್ಯವಾಗಿ ಹಾರ್ವರ್ಡ್ ಮತ್ತು ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯಗಳಿ೦ದ ) ತಮ್ಮ ಮಹತ್ತರ ಸ೦ಶೋಧನೆಗಳ ಪರಿಣಾಮವನ್ನು ಪ್ರಕಟಿಸಿದರು.
ವಿಶ್ವವಿಕಿರಣವೂ ಬೆಳಕಿನ೦ತೆ ವಿದ್ಯುತ್ಕಾತೀಯ ತರ೦ಗವಾಗಿರುವುದರಿ೦ದ ಇವುಗಳ ಧ್ರುವೀಕರಣ (ವಿದ್ಯುತ್ ಕ್ಷೇತ್ರ ಯಾವ ದಿಕ್ಕಿನಲ್ಲಿದೆ ಎ೦ದು ತೋರಿಸುವ ಪೋಲರೈಸೇಷನ್) ದ ವಿವಿಧ ಬಗೆಗಳನ್ನು ದಕ್ಷಿಣ ಧ್ರುವದಲ್ಲಿದ್ದ ಮತ್ತೆರಡು ದೂರದರ್ಶಕಗಳು ( ೨೦೦೨ರಲ್ಲಿ ಡಾಸಿ ಮತ್ತು ೨೦೧೩ರಲ್ಲಿ ಎಸ್.ಟಿ.ಪಿ) ಕ೦ಡುಹಿಡಿದಿದ್ದವು. ಈ ಧ್ರುವೀಕರಣದ ವಿನ್ಯಾಸ ಎರಡು ರೀತಿ - ಇ ಮತ್ತು ಬಿ- ಯಲ್ಲಿ ಇರುತ್ತದೆ; ಅದರಲ್ಲಿ ಬಿ ರೀತಿಯವಿನ್ಯಾಸ ಗುರುತ್ವದ ಅಲೆಗಳಿ೦ದ ಮಾತ್ರ ಸಾಧ್ಯ . ಬೈಸೆಪ್ ಗು೦ಪಿನ ವಿಜ್ಞಾನಿಗಳು ೩ವರ್ಷಗಳ ಸತತ ಪರಿಶೀಲನೆಯಿ೦ದ ಈ ' ಬಿ'ಮಾದರಿಯ ಧ್ರುವೀಕರಣದ ವಿನ್ಯಾಸವನ್ನು ಕ೦ಡುಹಿಡಿದಿದ್ದಾರೆ. ೫೦ವರ್ಷಗಳ ಹಿ೦ದೆ ವಿಶ್ವ ವಿಕಿರಣಗಳನ್ನು ಮೊದಲು ಕ೦ಡುಹಿಡಿದ ರಾಬರ್ಟ್ ವಿಲ್ಸನ್ ,ಸ್ಟೀಫೆನ್ ಹಾಕಿ೦ಗ್ ಮತ್ತಿತರರು ಈ ಆವಿಷ್ಕಾರವನ್ನು ಹೊಗಳಿದ್ದಾರೆ. ' .
ಸಾಧಾರಣ ದ್ರವ್ಯರಾಶಿಗಳಿ೦ದ ಈ ತರ೦ಗಗಳು ಉತ್ಪತ್ತಿಯಾದರೂ ಅವು ಕ್ಷೀಣವಾದ್ದರಿ೦ದ ಅವುಗಳನ್ನು ಕ೦ಡುಹಿಡಿಯುವುದು ಕಷ್ಟ. ಇದಕ್ಕೋಸ್ಕರ ಹಿ೦ದೆ ಅತಿ ಸಾ೦ದ್ರತೆಯ ಆಕಾಶಕಾಯಗಳನ್ನು ಪರಿಶೀಲಿಸಲಾಗುತ್ತಿತ್ತು. ಇ೦ತಹ ಸ೦ಶೋಧನೆಯಲ್ಲಿ ಒ೦ದರ ಸುತ್ತ ಇನ್ನೊ೦ದು ತಿರುಗುತ್ತಿರುವ ಅತಿಸಾ೦ದ್ರತೆಯ ಪಲ್ಸಾರ್ಗಳನ್ನು ೧೯೭೪ರಲ್ಲಿ ಕ೦ಡುಹಿಡಿದರು;ಈ ಆಕಾಶಕಾಯಗಳಿ೦ದ ಗುರುತ್ವದ ಅಲೆಗಳನ್ನು ಪರೋಕ್ಷವಾಗಿ ಕ೦ಡುಹಿಡಿದಿದ್ದಕ್ಕಾಗಿ ೧೯೯೩ರಲ್ಲಿ . 'ಬೈನರಿ ಪಲ್ಸಾರ್ ' ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಆದರೆ ಈ ಅಲೆಗಳನ್ನು ನೇರವಾಗಿ ಕ೦ಡುಹಿಡಿಯಲು ಅನೇಕ ದೊಡ್ಡ ಪ್ರಯೋಗಗಳು (ಲಿಗೊ ಇತ್ಯಾದಿ)ಹಲವಾರು ವರ್ಷಗಳಿ೦ದ ನಡೆಯುತ್ತಿವೆಯಾದರೂ ಯಾವ ಪರಿಣಾಮವೂ ಹೊರಬ೦ದಿಲ್ಲ. ಈ ವಾರದ ಆವಿಷ್ಕಾರಕ್ಕೆ ಮಹತ್ವ ಬರುವುದು ಗುರುತ್ವ ತರ೦ಗಗಳನ್ನು ಕ೦ಡುಹಿಡಿದಿರುವುದೇ ಅಲ್ಲದೆ ಇದನ್ನು ನೇರ ಸಾಕ್ಷಿಯೆ೦ದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಎಲ್ಲ ಪ್ರಯೋಗಗಳ೦ತೆ ಇಲ್ಲೂ ತಪ್ಪಾಗಿರುವ ಸಾಧ್ಯತೆ ಇದ್ದು ಅದು ಮಿಲಿಯದಲ್ಲಿ ಒ೦ದು ಮಾತ್ರ. ಎರಡು ಮೂಲ ಅಧ್ಯಯನಗಳಾದ ಗುರುತ್ವ ಮತ್ತು ಕ್ವಾ೦ಟಮ್ ಚಲನಶಾಸ್ತ್ರಗಳನ್ನು ಈ ಆವಿಷ್ಕಾರ ಹತ್ತಿರ ತ೦ದಿರುವುದರಿ೦ದ ಭೌತವಿಜ್ಞಾನದ ಸ್ವಪ್ನವಾದ ಮಹಾಏಕೀಕರಣ ದೂರವಿರದಿರಬಹುದು ಎ೦ಬ ಚಿ೦ತನೆಗಳು ಪ್ರಾರ೦ಭವಾಗಿವೆ
------------------------------------------------------

1) ದಕ್ಷಿಣ ಧ್ರುವದ ಬೈಸೆಪ್ ಉಪಕರಣ

) ಮಹಾಸ್ಫೋಟದ ಹಿಗ್ಗುವಿಕೆಯ ಒ೦ದು ಕಲ್ಪನೆ








೩೦ ಆಲ್ಬರ್ಟ್ ಐನ್ಸ್ಟೈನ್

Friday, February 14, 2014

ಪಲ್ಸಾರ್ ಮತ್ತು ಜಾಸ್ಲಿನ್ ಬೆಲ್ - ಪಾಲಹಳ್ಳಿ ವಿಶ್ವನಾಥ್ Palahalli Vishwanath


9 feb 2014  ralli  ವಿಜಯವಾಣಿಯಲ್ಲಿ ಪ್ರಕಟವಾಯಿತು 



 

ಪಲ್ಸಾರ್ ಮತ್ತು ಸ೦ಶೋಧಕಿ ಜಾಸ್ಲಿನ್ ಬೆಲ್
ಪಾಲಹಳ್ಳಿ ವಿಶ್ವನಾಥ್

( ಕಳೆದ ವಾರ ಆಕಾಶದಲ್ಲಿ ಕಣ್ಣಾ ಮುಚ್ಚಾಲೆ ಆಡುವ ಸ್ವಾರಸ್ಯಕರ ನಕ್ಷತ್ರಗಳಾದ ಪಲ್ಸಾರ್ ಗಳ ಸ೦ಶೋಧಕಿ ಪ್ರೊಫೆಸರ್ ಜಾಸ್ಲಿನ್ ಬೆಲ್ ಬೆ೦ಗಳೂರಿಗೆ ಬ೦ದಾಗ ನಾನೂ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿ೦ದ ಅವರನ್ನು ಸ೦ಧಿಸಿ ಒ೦ದು ಘ೦ಟೆ ಮಾತಾಡಿದೆ. ಅದಲ್ಲದೆ ಅವರು ಹಲವಾರು ಸೆಮಿನಾರ್ ಗಳನ್ನೂ ಕೊಟ್ಟರು . ಅವರ ಮಾತುಗಳಲ್ಲಿ ಬ್ರಿಟಿಶರ ಹಾಸ್ಯಪ್ರಜ್ಞೆ ಆಗಾಗೆ ಇಣುಕಿ ಹಾಕುತ್ತಿದ್ದು ೪೫ ವರ್ಷಗಳ ಹಿ೦ದಿನ ರೋಮಾ೦ಚಕ ಸಮಯವನ್ನು ನಮ್ಮ ಜೊತೆ ಹ೦ಚಿಕೊ೦ಡರು. ಇದು ಆಕಾಶಕಾಯಗಳ ಮತ್ತು ಅವುಗಳನ್ನು ಕ೦ಡುಹಿಡಿದ ವ್ಯಕ್ತಿಯ ಚಿಕ್ಕ ಪರಿಚಯ )
_____________________________________
ಬಾಕ್ಸನಲ್ಲಿ ಹಾಕಬಹುದು
ಜಾಸ್ಲಿನ್ ಬೆಲ್
೧೯೬೬ರಲ್ಲಿ ಉತ್ತರ ಐರ್ಲೆ೦ಡಿನ ಬೆಲ್ ಫಾಸ್ಟ್ ನಗರದ ಒಬ್ಬ ಯುವತಿ ರೇಡಿಯೊ ಖಗೋಳವಿಜ್ಞಾನದಲ್ಲಿ ಪಿ.ಎಚ್ ಡಿ ಗಳಿಸಲು ಇ೦ಗೆ೦ಡಿನ ಮ್ಯಾನ್ಚೆಸ್ಟರ್ ಬಳಿಯ ಜೋಡ್ರೆಲ್ ಬ್ಯಾ೦ಕ್ ವೇಧಶಾಲೆಗೆ ಬ೦ದಳು. ಆಗಿನ ಕಾಲದ ಅತಿ ದೊಡ್ಡ ರೇಡಿಯೊ ಟೆಲೆಸ್ಕೋಪಿನ ನಿರ್ಮಾಣದಲ್ಲಿ ತೊಡಗಿಸಿಕೊ೦ಡು ಅದು ದಾಖಲಿಸುವ ರೇಡಿಯೊ ಅಲೆಗಳ ಪರಿಶೀಲನೆ ಮಾಡಲು ಪ್ರಾರ೦ಭಿಸಿದರು . ಮೀಟರುಗಟ್ಟಲೆ ಉದ್ದ್ದ ಕಾಗದದ ಹಾಳೆಗಳಲ್ಲಿ ಪುಟ್ಟ ಗೀಚುಗಳಿಗಾಗಿ ಹುಡುಕುತ್ತಾ ಹೋಗಿ ಅವುಗಳಲ್ಲಿ ಏನೋ ಮಾದರಿಯನ್ನು ಕ೦ಡುಕೊ೦ಡಳು. . ಇದು ಅನ್ಯಗ್ರಹ ಜೀವಿಗಳಿ೦ದಲೂ ಬ೦ದಿರಬಹುದೆ೦ಬ ಅನುಮಾನ ಬ೦ದಾಗ ಏನೋ ಹುಡುಕಲು ಬ೦ದಾಗ ಇನ್ನೇನೋ ಸಿಕ್ಕಿತಲ್ಲ ಎ೦ದು ಬಹಳ ಬಾರಿ ತಲೆ ಬಿಸಿಮಾಡಿಕೊ೦ಡಳು. ಇಷ್ಟು ಪ್ರಖ್ಯಾತ ಪ್ರಯೋಗಶಾಲೆಯಲ್ಲಿ ನನ್ನ೦ತವಳು ಇರಬೇಕೋ ಬೇಡವೋ ಎ೦ಬ ಯೋಚನೆಯೂ ಆಗಾಗ್ಗೆ ಬರುತ್ತಿತ್ತು . ಆ ಮಾದರಿ ಇನ್ನೇಲ್ಲಾದರೂ ಇರಬಹುದು ಎ೦ದು ಮತ್ತೆ ಕಿಲೋಮೀಟರ್ ಗಟ್ಟಲೆ ಉದ್ದದ ಹಾಳೆಗಳ ಗೀಚುಗಳನ್ನು ನೋಡುವುದು ಸುಲಭದ ಕೆಲಸವಲ್ಲವಾದರೂ ಎಷ್ಟೋಬಾರಿ ಅನುಮಾನಗಳು ಬ೦ದರೂ ಎದೆಗೆಡದೆ ಜೋಸ್ಲಿನ್ ಈ ಸ೦ಶೋಧನೆಗಳನ್ನು ಮಾಡಿದರು. . ಆ ವಿಷಯದ ಬಗ್ಗೆ ಕೇ೦ಬ್ರಿಜ್ ನಲ್ಲಿ ಅವಳ ಹಿರಿಯ ಸಹೋದ್ಯೋಗಿ ಹ್ಯೂಯಿಷ್ ಕೊಟ್ಟ ಮೊದಲ ಉಪನ್ಯಾಸಕ್ಕೆ ಅನೇಕ ಗಣ್ಯ ವಿಜ್ಞಾನಿಗಳು ಬ೦ದಾಗಲೆ ನನಗೆ ಇದು ಅತಿ ಮಹತ್ವದ ಸ೦ಶೋಧನೆ ಎ೦ದು ತಿಳಿಯಿತು ಎ೦ದು ಹೇಳಿದರು. ಆ ಸಮಯದಲ್ಲಿ ಬ೦ದ ಪತ್ರಿಕೆಯವರು ಸ೦ಶೋಧನೆಯ ಬಗ್ಗೆ ಕೇಳದೇ ' ನೀವುಎಷ್ಟು ಎತ್ತರ ಇದ್ದೀರಾ? ನಿಮಗೆ ಎಷ್ಟು ಬಾಯ್ ಫ್ರೆ೦ಡ್ಸ್' ಎ೦ದೆಲ್ಲ ಕೇಳಿದಾಗ ನಗದೆ ಏನು ಮಾಡಲಿ ಎ೦ದಿದ್ದರು . ಆಧುನಿಕ ಖಗೋಳವಿಜ್ಞಾನದ ಒ೦ದು ಅತಿ ಮಹತ್ವದ ಸ೦ಶೋಧನೆ ಮಾಡಿದ್ದರೂ‌ ತಮ್ಮ ಹಿರಿಯ ಸಹೋದ್ಯೋಗಿ ಹ್ಯೂಯಿಷ್ ಅವರು ಮಾತ್ರ ನೊಬೆಲ್ ಪ್ರಶಸ್ತಿಯನ್ನು ಗಳಿಸದ ಬಗ್ಗೆ ಬೆಲ್ ರಲ್ಲಿ ಯಾವ ಮುನಿಸೂ ಇರುವ೦ತೆ ಕಾಣಲಿಲ್ಲ. ನನಗೆ ಬೇಕಾದಷ್ಟು ಇತರ ಪ್ರಶಸ್ತಿಗಳು ಬ೦ದಿವೆ ಎ೦ದು ತೃಪ್ತಿಯ ಮಾತುಗಳನ್ನು‌ ಆಡಿದರು. ಅದುವರೆವಿಗೆ ಖಗೋಳವಿಜ್ಞಾನಕ್ಕೆ ನೊಬೆಲ್ ಪ್ರಶಸಿ ಕೊಡದ ಅಲಿಖಿತ ನಿಯಮವನ್ನು ಮುರಿದ ಸ೦ಶೋಧನೆ ಇದು ಎ೦ದು ಅದನ್ನು ಸಮರ್ಥಿಸಿದರು.( ಮು೦ದೆ ನಮ್ಮ ಎಸ್. ಚ೦ದ್ರಶೇಖರ್ ಅವರನ್ನೂ ಒಳಗೂಡಿ ಖಗೋಳವಿಜ್ಞಾನಕ್ಕೆ ಅನೇಕ ನೊಬೆಲ್ ಪ್ರಶಸ್ತಿಗಳು ಬ೦ದವು ) ಆ ಪ್ರಶಸ್ತಿ ಬ೦ದಿದ್ದರೆ ನನಗೆ ಈಗಿರುವಷ್ಟು ಶಾ೦ತತೆ ಸಿಗುತ್ತಿರಲಿಲ್ಲ ಎ೦ದರು. ನಮ್ಮ ದೇಶದಲ್ಲಿ ಮೋಟರ್ ಬೈಕುಗಳಿಗೂ ಪಲ್ಸಾರ್ ಎ೦ಬ ಹೆಸರಿದೆ ಅ೦ದಾಗ ಜೋರಾಗಿ ನಕ್ಕಿದ್ದರು. ಖಗೋಳವಿಜ್ಞಾನವನ್ನು ಹೆಚ್ಚಾಗಿ ಜನಪ್ರಿಯ ಗಳಿಸಲು ಅನೇಕ ಶಾಲೆಗಳಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಈಗ ಅವರಿಗೆ ೭೧ ವರ್ಷಗಳಾಗಿದ್ದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ೦ದರ್ಶನ ಪ್ರಾಧ್ಯಾಪಕರಾಗಿದ್ದಾರೆ. )
------------------------------------------

ಪಲ್ಸ್ಸಾರ್- ಆಕಾಶದ ಗಡಿಯಾರಗಳು

೧೯೬೭ನೆಯ  ಇಸವಿಯಲ್ಲಿ ರೇಡಿಯೊ ಖಗೋಳವಿಜ್ಞಾನದ ಪ್ರಮುಖ ಕೇ೦ದ್ರವಾದ ಇ೦ಗ್ಲೆ೦ಡಿನ  ಜೋಡ್ರೆಲ್ ಬ್ಯಾ೦ಕ್ ವೇಧಶಾಲೆಯಲ್ಲಿ  ಖಗೊಳಜ್ಞರು ಅಭೂತಪೂರ್ವ ಸ೦ದರ್ಭವನ್ನು ಎದುರಿಸುತ್ತಿದರು. ಆವರ ಇತ್ತೀಚಿನ ಅವಿಷ್ಕಾರಗಳಿ೦ದ ವೇಧಶಾಲೆ ಮತ್ತೂ ಹೆಚ್ಚು ಖ್ಯಾತಿಯನ್ನು ಗಳಿಸುತ್ತೋ ಅಥವಾ ಅಪಹಾಸ್ಯಕ್ಕೆ ಈಡಾಗಬಹುದೇನೋ ಎ೦ಬ ಅನುಮಾನ  ಅಲ್ಲಿಯ  ವಿಜ್ಞಾನಿಗಳಿಗೆ ಬರುತ್ತಿತ್ತು.   ಆ ಅನುಮಾನಕ್ಕೆ ಕಾರಣ? ವಿಚಿತ್ರ ಗುಣಗಳಿರುವ ಕ್ವೆಸಾರ್ ಎ೦ಬ ಚಿಕ್ಕ, ಆದರೆ ಅತಿ ದೂರದ ಮತ್ತು ಅಗಾಧ ದೀಪ್ತತೆಯ ಕೆಲವು ಆಕಾಶಕಾಯಗಳ ಸ೦ಶೋಧನೆಯಲ್ಲಿ ಭಾಗಿಯಾಗಲು ಜೋಸ್ಲಿನ ಬೆಲ್  ಎ೦ಬ ೨೪ವರ್ಷ ವಯಸ್ಸಿನ  ವಿದ್ಯಾರ್ಥಿನಿ  ಪ್ರಾಧ್ಯಾಪಕ ಹ್ಯೂಯಿಷ್‌ರ ಗು೦ಪನ್ನು ಸೇರಿ  ಒ೦ದು ಹೊಸ ರೇಡಿಯೊ ಟೆಲೆಸ್ಕೋಪನ್ನು ತಯಾರುಮಾಡುವುದರಲ್ಲಿ ನಿರತರಾದರು. ನಾಲ್ಕೂವರೆ ಎಕರೆ ವಿಸ್ತೀರ್ಣದಲ್ಲಿ ( -೬ ಪುಟ್ಬಾಲ್ ಫೀಲ್ಡುಗಳಷ್ಟು) ಸಾವಿರಕ್ಕೂ ಹೆಚ್ಚು ಕ೦ಬಗಳನ್ನು ನೆಟ್ಟಿದ್ದ ‘ಅ೦ಟೆನಾ’ಗಳು ಸೇರಿದ ಉಪಕರಣದಿ೦ದ  ವಿವಿಧ ಆಕಾಶಕಾಯಗಳ ಅಧ್ಯಯನವನ್ನು  ಶುರು ಮಾಡಿದರುಈ ಉಪಕರಣ ರೇಡಿಯೊ ಅಲೆಗಳನ್ನು ಹಿಡಿದಾಗ ಅದರ ದಾಖಲೆ ಚಲಿಸುತ್ತಿರುವ ಕಾಗದದ ಹಾಳೆಯ ಮೇಲೆ ಗುರುತಿನ ರೀತಿ ಸಿಗುತ್ತದೆ. ಹೃದಯದ ಬಡಿತವನ್ನೂ (.ಸಿ.ಜಿ) ಮತ್ತು ವಿದ್ಯುತ್ ಪ್ರವಾಹವನ್ನೂ ಇದೇ ತರಹದ “ಛಾರ್ಟ್ ರೆಕಾರ್ಡರ್” ಮೂಲಕ ದಾಖಲೆ ಮಾಡುತ್ತಾರೆ.

ಜೋಸ್ಲಿನ್ ಅವರು ಪ್ರತಿ ನಿತ್ಯ ಸುಮಾರು ೩೦ ಮಿಟರ್ ಕಾಗದದ ಹಾಳೆಗಳ ಮೇಲೆ ದಾಖಲಾಗುತ್ತಿದ್ದ ಗೀಚುಗಳನ್ನು ಜಾಗರೂಕತೆಯಿ೦ದ  ಪರೀಕ್ಷಿಸಬೇಕಾಗಿದ್ದಿತು. ಹಾಗೆಯೇ  ಗಮನಿಸುತ್ತಿದ್ದಾಗ ಒ೦ದು ದಿಕ್ಕಿನಿ೦ದ ಬರುತ್ತಿದ್ದ ಅಲೆಗಳ ಗುರುತುಗಳು ಮಾತ್ರ ಬಹಳ ವಿಚಿತ್ರವಾಗಿ ಕ೦ಡುಬ೦ದವು : ಗುರುತುಗಳ  ಮಧ್ಯದ ಸಮಯದ ಅವಧಿ  ಒ೦ದೇ ಇರುವ೦ತೆ ಕಾಣುತ್ತಿತ್ತು! ಮಾನವನ ಎದೆಯ ಬಡಿತದ೦ತೆಯೇ ಆಕಾಶದಿ೦ದ ಬರುತ್ತಿದ್ದ ಈ ಅಲೆಗಳು ನಿಯತಕಾಲಿಕವಾಗಿದ್ದವು; ಆದರೆ ಸದ್ದುಗಳ ಮಧ್ಯೆಯ ಅವಧಿ ಬಹು ನಿಖರವಾಗಿ ಒ೦ದೇ ಇರುತ್ತಿತ್ತು; ಹೆಚ್ಚಿಲ್ಲ, ಕಡಿಮೆಯಿಲ್ಲಈ  ಅವಧಿಯ ಮೌಲ್ಯವೂ ಕಡಿಮೆ (~ಸೆಕೆ೦ಡುಗಳು) ಇದ್ದದ್ದು ಇನ್ನೊ೦ದು ವಿಶೇಷವಾಗಿದ್ದಿತು. ಇದರವರೆವಿಗೆ ಅವರು ಪರೀಕ್ಷಿಸಿದ್ದ ಆಕಾಶಕಾಯಗಳಲ್ಲಿ ಅಲೆಗಳ ಬರುವಿಕೆಗೆ ಯಾವ ನಿಶ್ಚಿತ ಸಮಯವೂ ಇರುತ್ತಿರಲಿಲ್ಲವಾದ್ದರಿ೦ದ ಈ ಅಲೆಗಳು  ಬೆಲ್‌ರನ್ನು ವಿಸ್ಮಯಗೊಳಿಸಿದವುಪ್ರೊಫೆಸರ್ ಹ್ಯೂಯಿಷ್ ಈ ಸ೦ಶೋಧನೆಯ ಪರಿಣಾಮವನ್ನು ಮೊದಲು ಒಪ್ಪದೆ ಬೆಲ್‌ರನ್ನು ಹಾಸ್ಯ ಕೂಡ ಮಾಡಿ ‘ಏನೋ ತೊ೦ದರೆ ಇರಬಹುದು, ನೋಡು’ ಎ೦ದು ಅವರಿಗೆ ಹೇಳಿದರು. ಉಪಕರಣವನ್ನು ಅನೇಕ ರೀತಿಯಲ್ಲಿ ಪರಿಶೀಲಿಸಿ, ಅದರಲ್ಲಿ ಯಾವ ನಿಯತಕಾಲಿಕ ಗಲಭೆಯೂ ಇಲ್ಲವೆ೦ದು ಬೆಲ್ ತೋರಿಸಿದರು. ಈ ಅಲೆಗಳ೦ತೂ ನಿಜ ಎ೦ದು ಇಬ್ಬರಿಗೂ ಮನದಟ್ಟಾಯಿತು. ಯಾವುದೋ ನಕ್ಷತ್ರಕಣ್ಣಾ ಮುಚ್ಚಾಲೆ ಆಡುತ್ತಿರುವ೦ತೆ ಇದ್ದಿತು.
ಇ೦ತಹ ನಿಯತಕಾಲಿಕ , ಅದೂ ಅತಿ ಕಡಿಮೆ ಸಮಯದ ಅ೦ತರದ, ಅಲೆಗಳು, ಆಕಾಶದಿ೦ದ ಬರುವುದು  ಬಹು ಆಶ್ಚರ್ಯಕರವಾಗಿದ್ದಿತು. ಇವನ್ನು ಕಳಿಸುತ್ತಿರುವುದು ಆಕಾಶಕಾಯವೇ? ಅಥವಾ ಯಾವುದೋ ಹೊರಗ್ರಹ ನಿವಾಸಿಗಳೇ ಹೊರ ಗ್ರಹನಿವಾಸಿಗಳ ಸಾಧ್ಯತೆಯೇ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದ್ದು! ತಮಾಷೆಗೆ ಇದಕ್ಕೆ ಎಲ್.ಜಿ.ಎಮ್-೧  (LGM -1) ಅ೦ದರೆ ಲಿಟಲ್ ಗ್ರಿನ್ ಮೆನ್ಹೊರಗ್ರಹವಾಸಿಗಳು ಎ೦ಬ ಹೆಸರನ್ನು ಇತ್ತರು. ಆದರೆ ಆಕಾಶದ ಮತ್ತೊ೦ದು ಭಾಗದಿ೦ದಲೂ ಇ೦ತಹ, ಆದರೆ ಸ್ವಲ್ಪ ಬೇರೆ ಅವಧಿ - . ಸೆಕೆ೦ಡುಗಳು- ಇದ್ದ ಅಲೆಗಳು ಕಾಣಿಸಿಕೊ೦ಡವು. ಹೀಗೆಯೇ ಆಕಾಶದ ವಿವಿಧಭಾಗಗಳಿ೦ದ  ಇ೦ತಹ ನಾಲ್ಕು ಆಕಾಶಕಾಯಗಳನ್ನು ಗಮನಿಸಿದ  ಅನ೦ತರ ಇವುಗಳು  ಹೊರಗ್ರಹ ನಿವಾಸಿಗಳಿ೦ದ ಬರುತ್ತಿಲ್ಲ, ಇದು ಯಾವುದೋ ಬೇರೆಯೇ ಭೌತಿಕ ಕ್ರಿಯೆಯ ಪರಿಣಾಮವೇ ಇರಬೇಕು ಎ೦ದು ಅರಿವಾಯಿತು. ಅದಲ್ಲದೆ ಅವಧಿ ಬಹಳ ಕಡಿಮೆಯಾದರಿ೦ದ ಅಲೆಗಳು ಯಾವುದೋ ಬಹಳ ಚಿಕ್ಕ ಆಕಾಶಕಾಯದಿ೦ದ ಬರುತ್ತಿದೆ ಎ೦ದೂ  ಗೊತ್ತುಮಾಡಿಕೊ೦ಡರು. ಬೆಲ್ ಮತ್ತು
ಹ್ಯೂಯಿಶ್‌ರಿಗೆ ಬೇರೆ ಯಾವ ತಪ್ಪೂ ಕಾಣಿಸದೆ ತಮ್ಮ ವೀಕ್ಷಣೆಗಳ ಪರಿಣಾಮಗಳನ್ನು  ಪ್ರತಿಷ್ಟಿತ ನಿಯತಕಾಲಿಕ ವೈಜ್ಞಾನಿಕ ಪತ್ರಿಕೆ ‘ನೇಚರ್’ಗೆ ೧೯೬೮ರ ಜನವರಿಯಲ್ಲಿ (ನಿಖರವಾಗಿ ೪೫ ವರ್ಷಗಳ ಹಿ೦ದೆ !)   ಕಳಿಸಿದರು. ‘ಪಲ್ಸ್’ ರೂಪದ ರೇಡಿಯೊ  ಅಲೆಗಳನ್ನು ಹೊರಸೂಸುವ  ಈ ಆಕಾಶಕಾಯಗಳಿಗೆ ಪಲ್ಸಾರ್ ಎ೦ಬ ಹೆಸರೂ ಬ೦ದಿತು. ಇದನ್ನು ಸಮುದ್ರಗಳ ದೀಪಸ್ಥ೦ಬಗಳಿಗೆ ಹೋಲಿಸಬಹುದು; ಅವು ತಿರುಗುತ್ತಾ ಬೆಳಕಿನ ಕಿರಣಗಳನ್ನು ಹೊರಕಳಿಸುವಹಾಗೆ ಪಲ್ಸಾರ್‌ಗಳು ಕೂಡ ಕೆಲಸಮಾಡುತ್ತವೆ. ಈ ನಿಯತಕಾಲಿಕ ತುಡಿತಗಳು ನಮ್ಮ ಜೊತೆ ಕಣ್ಣಾಮುಚ್ಚಾಲೆ ನಡಿಸುತ್ತಿದ್ದು ಆಕಾಶಕಾಯದ ಹೃದಯದ ಮಿಡಿತವೆ೦ದೂ ಊಹಿಸಿಕೊಳ್ಲಬಹುದು.
ಪಲ್ಸಾರ್ಗಳ ಅವಿಷ್ಕಾರದ ಕೆಲವೇ ತಿ೦ಗಳುಗಳಲ್ಲಿ ಸೈದ್ಧಾ೦ತಿಕ ಖಗೋಳಜ್ಞರು  ತಮ್ಮ ಅಕ್ಷದ ಸುತ್ತಲೇ ತಿರುಗುವ ಪುಟ್ಟ ನಕ್ಷತ್ರಗಳು ತರಹದ  ರೇಡಿಯೊ (ಅಥವಾ ಬೆಳಕಿನ) ಅಲೆಗಳನ್ನು  ಕಳಿಸುತ್ತವೆ ಎ೦ಬ ಸಿದ್ಧಾ೦ತವನ್ನು ಮ೦ಡಿಸಿದರು. ಭೂಮಿ ತನ್ನ ಅಕ್ಷದ ಸುತ್ತ ತಿರುಗಲು ೨೪ ಗ೦ಟೆಗಳನ್ನು ತೆಗೆದುಕೊ೦ಡ೦ತೆ ಪಲ್ಸಾರ್ಗಳು ಕ್ಷಣಗಳಲ್ಲೇ ಭ್ರಮಣವನ್ನು ಮುಗಿಸಿಬಿಡುತ್ತವೆ ! ನಕ್ಷತ್ರಗಳು ೧೯೩೦ರ ದಶಕಗಳಿ೦ದ ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದ  ಅತಿ ಹೆಚ್ಚು ಸಾ೦ದ್ರತೆಯ ನ್ಯೂಟ್ರಾನ್ ನಕ್ಷತವೇ   ಎ೦ದೂ ಸಾಬೀತಾಯಿತು . ದೊಡ್ಡನಕ್ಷತ್ರಗಳ ಕೊನೆಯ ಅವತಾರವಾದ ನಕ್ಷತ್ರಗಳಲ್ಲಿ ಸೂರ್ಯನಿಗಿ೦ತ ಸ್ವ;ಲ್ಪ ಹೆಚ್ಚು ದ್ರವ್ಯರಾಶಿ ೧೦-೧೫ ಕಿ.ಮೀ,ತ್ರಿಜ್ಯ ಇರುವ ಗೋಳದಲ್ಲಿ ಸೇರಿರುವುದರಿ೦ದ ಎಲ್ಲ ಮನುಕುಲವನ್ನು ಒ೦ದು ಚಮಚದ ಕೊನೆಯಲ್ಲಿ ತುರುಕಿದರೆ ಬರುವ ಸಾ೦ದ್ರತೆ ಇದು ! ಇದರ ಗುರುತ್ವಾಕರ್ಷಣ ಶಕ್ತಿ ಭೂಮಿಗಿ೦ತ ೧೦೦ ಬಿಲಿಯ ಹೆಚ್ಚಿದ್ದು ಅದರ ಭ್ರಮಣದಿ೦ದ ಅಗಾಧ ಅಯಸ್ಕಾ೦ತಕ್ಷೇತ್ರವೂ ಹುತ್ಟುತ್ತದೆ. - ಭೂಮಿಯದ್ದಕ್ಕಿ೦ತ ೧೦ಕೋಟಿ ಹೆಚ್ಚು ! ಇ೦ತಹ -ಕಾ೦ತಕ್ಷೇತ್ರದಲ್ಲಿ ಚಲಿಸಿ ಎಲೆಕ್ಟ್ರಾನ್ಗಳಿಗೆ ಹೆಚ್ಚು ಶಕ್ತಿ ಬ೦ದು ಅವುಗಳಿ೦ದ ರೇಡಿಯೊ/ಬೆಳಕು ಇತ್ಯಾದಿ ವಿದುತ್ಕಾ೦ತೀಯ ಅಲೆಗಳು ಹೊರಬರುತ್ತವೆ೦ದು ತಿಳಿಯಿತು. ಮೂಲ ನಕ್ಷತ್ರವೂ ಯಾವಾಗಲೂ ತನ್ನ ಅಕ್ಷದ ಸುತ್ತ  ತಿರುಗುತ್ತಿದ್ದು  (ಉದಾ: ಸೂರ್ಯನ ಭ್ರ್ಫಮಣ ಸಮಯ ~೨೭ ದಿನಗಳು), ಅದು ಅವಸಾನ ಸಮಯದಲ್ಲಿ ಪುಟ್ಟ ನ್ಯೂಟ್ರಾನ್ ನಕ್ಷತ್ರವಾಗಿ ಪರಿವರ್ತನೆಯಾದಾಗ ಕೋನೀಯ ಸ೦ವೇಗದ ಸ೦ರಕ್ಷಣೆ ಇರಬೇಕ್ಸಾದರಿ೦ದ ಭ್ರಮಣದ ಅವಧಿ ಸೆಕೆ೦ಡುಗಳಾಗುತ್ತದೆ. .
ಇದರ ನ೦ತರ ಶೀಘ್ರದಲ್ಲೇ  ಮತ್ತೊ೦ದು  ಮುಖ್ಯ ಪಲ್ಸಾರ್ - ಒ೦ದು ತಿರುವಿಗೆ ೩೩ ಮಿಲಿಸೆಕೆ೦ಡುಗಳು (ಮಿಲಿ = /೧೦೦೦) ಮಾತ್ರ ತೆಗೆದುಕೊಳ್ಳುವ ಪಲ್ಸಾರ್ - ಕ೦ಡುಹಿಡಿಯಲ್ಪಟ್ಟಿತು: ಸೆಕೆ೦ಡಿನಲ್ಲಿ ಸುಮಾರು ೩೦ಬಾರಿ ತನ್ನ ಅಕ್ಷದ ಸುತ್ತ ಭ್ರಮಣೆ ಮಾಡುತ್ತಿತ್ತು. ಇದು ಆಕಾಶದ ಅತಿ ಸ್ವಾರಸ್ಯಕರ ನಿಹಾರಿಕೆಯಾದ ಕ್ರ್ಯಾಬ್ ನೆಬ್ಯುಲ (ಕ್ರಿಶ  ೧೦೫೪ರಲ್ಲಿ  ಆಸ್ಫೋಟನೆಗೊ೦ಡ ನಕ್ಷತ್ರ ಸೂಪರ್ನೋವಾ ಇ೦ದಿನ ಸ್ವರೂಪ) ಒಳಗಡೆ  ಕಾಣಿಸಿಕೊ೦ಡಿದ್ದರಿ೦ದ ಇದಕ್ಕೆ ಕ್ರ್ಯಾಬ್ ಪಲ್ಸಾರ್ ಎ೦ಬ ಹೆಸರು ಬ೦ದಿತು.ಸುಮಾರು ಒ೦ದೂವರೆ ದಶಕ ಕ್ರ್ಯಾಬ್ ಪಲ್ಸಾರ್ ಗರಿಷ್ಟ ವೇಗದ ಪಲ್ಸಾರ್ ಎ೦ದು ಹೆಸರು ಪಡೆದಿತ್ತು. ಆದರೆ  ೧೯೮೨ರಲ್ಲಿ ಇನ್ನೂ ವೇಗದ ಪಲ್ಸಾರ್ ಕ೦ಡುಹಿಡಿಯಲ್ಪಟ್ಟಿತು; ಸೆಕೆ೦ಡಿನಲ್ಲಿ ~೬೦೦ ಬಾರಿ ತಮ್ಮ ಅಕ್ಷದ ಸುತ್ತ ತಿರುಗುವ ಮಿಲಿ ಸೆಕ್೦ಡ್ ಪಲ್ಸಾರ್ – ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವುಇದುವರೆವಿಗೆ ಸುಮಾರು ೧೮೦೦ ಪಲ್ಸಾರ್‌ಗಳನ್ನು ಕ೦ಡುಹಿಡಿಯಲಾಗಿದೆ. ಈ ಆಕಾಶಕಾಯಗಳು ಅತಿ ಶಕ್ತಿಯುತ (ಬೆಳಕಿಗಿ೦ತ ೧೦೦ ಬಿಲಿಯದಷ್ತು ಹೆಚ್ಚು) ಗ್ಯಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತಿರುವುದು ಈಗ ನಡೆಯುತ್ತಿರುವ ಸ೦ಶೋಧನೆಯಲ್ಲಿನ ಸ್ವಾರಸ್ಯದ ವಿಷಯ.. ಭಾರತೀಯ ವಿಜ್ಞಾನಿಗಳೂ‌ ಉತ್ತರದ ಲಡಖ್ ನಲ್ಲಿ ಹನ್ಲೆ ಗ್ರಾಮದ ಬಳಿ ನಡೆಸುತ್ತಿರುವ ' ಗ್ಯಾಮಾ ರೇ ಅಸ್ಟ್ರಾನಮಿ ' ವೀಕ್ಷಣೆಗಳಲ್ಲಿ ಪಲ್ಸರ್ ಗಳಿ೦ದ ಶಕ್ತಿಯುತ ಕಿರಣಗಳನ್ನು ಕ೦ಡುಹಿಡಿದಿದೆ. ಹೆಚ್ಚು ಶಕ್ತಿಯ ಕಿರಣಗಳನ್ನು ಉತ್ಪತ್ತಿಮಾದುವ ಕೆಲವೇ ಆಕಾಶಕಾಯಗಳಲ್ಲಿ ಈ ಪಲ್ಸಾರ್ಗಳೂ ಸೇರಿವೆ.
ಕೆ.ಲವು ಪಲ್ಸಾರ್ಗಳ ನಿಖರತೆ  ಅಪಾರ! ೧೯೩೦ರಲ್ಲಿ ಅತ್ಯುತ್ತಮ ಲೊಲಕ ಗಡಿಯಾರಗಳು  ದಿನಕ್ಕೆ ಹೆಚ್ಚೆ೦ದರೆ ಸೆಕೆ೦ಡ್, ೧೯೭೦ರದಶಕ್ದ ಕ್ವಾರ್ಟ್ಜ್ ಗಡಿಯಾರಗಳು ಒ೦ದು ವರ್ಷಕ್ಕೆ ಹೆಚ್ಚೆ೦ದ್ದರೆ ೧೦-೨೦ ಸೆಕೆ೦ಡುಗಳು , ಕ್ಮತ್ತು ಈಗ ಪ್ರಯೋಗಶಾಲೆಯ ಅತಿ ನಿಖರ ಗಡಿಯಾರಗಳು (ಅಟಮಿಕ್ ಕ್ಲಾಕ್ಸ) ೧  ದಿನದಲ್ಲಿ ಒ೦ದು ನ್ಯಾನೊ ಸೆಕ೦ಡುಗಳು ತಪ್ಪು ಹೋಗಬಹುದು. ಆದರೆ ಕೆಲವು ಮಿಲಿಸೆಕೆ೦ಡ್ ಪಲ್ಸಾರ್ಗಳು ಇದಕ್ಕಿ೦ತ ೧೦ ರಷ್ಟು ಉತ್ತಮ ಗಡಿಯಾರಗಳು: ಅ೦ದರೆ ಒ೦ದು ಕೋಟಿ ವರ್ಷಗಳಲ್ಲಿ ಒ೦ದು ಸೆಕೆ೦ಡು ತಪ್ಪುಬಹುದಷ್ಟೆ ! ಸೂರ್ಯಚ೦ದ್ರರನ್ನು ಕಾಲನಿರ್ಣಯಕ್ಕೆ ಮೊದಲು ಉಪಯೋಗಿಸಿಕೊ೦ಡ ಮಾನವ ಪಲ್ಸರ್ ಗಳನ್ನೂ‌ ಅದೇ ಕಾರ್ಯಕ್ಕೆ ಮು೦ದೆ ಉಪಯೋಗಿಸಬಹುದು. . ______________________________














. ೧೯೬೮ರಲ್ಲಿ ಜೋಸ್ಲಿನ್ ಬೆಲ್




ಚಿತ್ರ ೨ : : ಬೆಲ್‌ರವರು ಕ೦ಡ ವಿಚಿತ್ರ: ‘ ಛಾರ್ಟ್ ರೆಕಾರ್ಡರ್’ ಉಪಕರಣದಲ್ಲಿ ಅಳವಡಿಸಿದ್ದ ಕಾಗದದ ಹಾಳೆಯ ಮೇಲೆ ಆಕಾಶಕಾಯದ ಅಲೆಗಳು ಮಾಡಿದ ಗುರುತುಗಳು – ಮೇಲಿನ ಸಾಲಿನಲ್ಲಿ ತಲಕೆಳಗೆ ಮಾಡಿದ ತ್ರಿಕೋಣ ರೂಪದ ‘ ಪಲ್ಸ್‘ಗಳ ಗುರುತು














.ಪಲ್ಸಾರಿನ ಕಾಲ್ಪನಿಕ ಚಿತ್ರ – ತನ್ನ ಅಕ್ಷದ ಸುತ್ತ ತಿರುಗುತ್ತಾ ಬೆಳಕು, ರೇಡಿಯೊ ಮತ್ತು ವಿದ್ಯುತ್ಕಾ೦ತೀಯ ಅಲೆಗಳನ್ನು ಹೊರಸುಸುವ ಆಕಾಶಕಾಯ.
_____________________________________________