ಪಲ್ಸಾರ್
ಮತ್ತು ಸ೦ಶೋಧಕಿ ಜಾಸ್ಲಿನ್ ಬೆಲ್
ಪಾಲಹಳ್ಳಿ
ವಿಶ್ವನಾಥ್
(
ಕಳೆದ
ವಾರ
ಆಕಾಶದಲ್ಲಿ ಕಣ್ಣಾ ಮುಚ್ಚಾಲೆ
ಆಡುವ ಸ್ವಾರಸ್ಯಕರ ನಕ್ಷತ್ರಗಳಾದ
ಪಲ್ಸಾರ್ ಗಳ
ಸ೦ಶೋಧಕಿ
ಪ್ರೊಫೆಸರ್
ಜಾಸ್ಲಿನ್
ಬೆಲ್
ಬೆ೦ಗಳೂರಿಗೆ
ಬ೦ದಾಗ
ನಾನೂ ಈ ಕ್ಷೇತ್ರದಲ್ಲಿ ಕೆಲಸ
ಮಾಡುತ್ತಿರುವುದರಿ೦ದ ಅವರನ್ನು
ಸ೦ಧಿಸಿ ಒ೦ದು ಘ೦ಟೆ ಮಾತಾಡಿದೆ.
ಅದಲ್ಲದೆ
ಅವರು ಹಲವಾರು
ಸೆಮಿನಾರ್ ಗಳನ್ನೂ ಕೊಟ್ಟರು .
ಅವರ
ಮಾತುಗಳಲ್ಲಿ
ಬ್ರಿಟಿಶರ
ಹಾಸ್ಯಪ್ರಜ್ಞೆ
ಆಗಾಗೆ ಇಣುಕಿ ಹಾಕುತ್ತಿದ್ದು
೪೫
ವರ್ಷಗಳ
ಹಿ೦ದಿನ
ರೋಮಾ೦ಚಕ
ಸಮಯವನ್ನು
ನಮ್ಮ
ಜೊತೆ
ಹ೦ಚಿಕೊ೦ಡರು.
ಇದು
ಈ
ಆಕಾಶಕಾಯಗಳ
ಮತ್ತು
ಅವುಗಳನ್ನು
ಕ೦ಡುಹಿಡಿದ
ವ್ಯಕ್ತಿಯ
ಚಿಕ್ಕ
ಪರಿಚಯ
)
_____________________________________
ಬಾಕ್ಸನಲ್ಲಿ
ಹಾಕಬಹುದು
ಜಾಸ್ಲಿನ್
ಬೆಲ್
೧೯೬೬ರಲ್ಲಿ
ಉತ್ತರ ಐರ್ಲೆ೦ಡಿನ ಬೆಲ್ ಫಾಸ್ಟ್
ನಗರದ ಒಬ್ಬ ಯುವತಿ ರೇಡಿಯೊ
ಖಗೋಳವಿಜ್ಞಾನದಲ್ಲಿ ಪಿ.ಎಚ್
ಡಿ ಗಳಿಸಲು ಇ೦ಗೆ೦ಡಿನ ಮ್ಯಾನ್ಚೆಸ್ಟರ್
ಬಳಿಯ ಜೋಡ್ರೆಲ್ ಬ್ಯಾ೦ಕ್
ವೇಧಶಾಲೆಗೆ ಬ೦ದಳು.
ಆಗಿನ
ಕಾಲದ ಅತಿ ದೊಡ್ಡ ರೇಡಿಯೊ ಟೆಲೆಸ್ಕೋಪಿನ
ನಿರ್ಮಾಣದಲ್ಲಿ ತೊಡಗಿಸಿಕೊ೦ಡು
ಅದು ದಾಖಲಿಸುವ ರೇಡಿಯೊ ಅಲೆಗಳ
ಪರಿಶೀಲನೆ ಮಾಡಲು ಪ್ರಾರ೦ಭಿಸಿದರು
.
ಮೀಟರುಗಟ್ಟಲೆ
ಉದ್ದ್ದ ಕಾಗದದ ಹಾಳೆಗಳಲ್ಲಿ
ಪುಟ್ಟ ಗೀಚುಗಳಿಗಾಗಿ ಹುಡುಕುತ್ತಾ
ಹೋಗಿ ಅವುಗಳಲ್ಲಿ ಏನೋ ಮಾದರಿಯನ್ನು
ಕ೦ಡುಕೊ೦ಡಳು.
. ಇದು
ಅನ್ಯಗ್ರಹ ಜೀವಿಗಳಿ೦ದಲೂ
ಬ೦ದಿರಬಹುದೆ೦ಬ ಅನುಮಾನ ಬ೦ದಾಗ
ಏನೋ ಹುಡುಕಲು ಬ೦ದಾಗ ಇನ್ನೇನೋ
ಸಿಕ್ಕಿತಲ್ಲ ಎ೦ದು ಬಹಳ ಬಾರಿ
ತಲೆ ಬಿಸಿಮಾಡಿಕೊ೦ಡಳು.
ಇಷ್ಟು
ಪ್ರಖ್ಯಾತ ಪ್ರಯೋಗಶಾಲೆಯಲ್ಲಿ
ನನ್ನ೦ತವಳು ಇರಬೇಕೋ ಬೇಡವೋ ಎ೦ಬ
ಯೋಚನೆಯೂ ಆಗಾಗ್ಗೆ ಬರುತ್ತಿತ್ತು
. ಆ
ಮಾದರಿ ಇನ್ನೇಲ್ಲಾದರೂ ಇರಬಹುದು
ಎ೦ದು ಮತ್ತೆ ಕಿಲೋಮೀಟರ್ ಗಟ್ಟಲೆ
ಉದ್ದದ ಹಾಳೆಗಳ ಗೀಚುಗಳನ್ನು
ನೋಡುವುದು ಸುಲಭದ ಕೆಲಸವಲ್ಲವಾದರೂ
ಎಷ್ಟೋಬಾರಿ ಅನುಮಾನಗಳು ಬ೦ದರೂ
ಎದೆಗೆಡದೆ ಜೋಸ್ಲಿನ್ ಈ ಸ೦ಶೋಧನೆಗಳನ್ನು
ಮಾಡಿದರು.
. ಆ
ವಿಷಯದ ಬಗ್ಗೆ ಕೇ೦ಬ್ರಿಜ್ ನಲ್ಲಿ
ಅವಳ ಹಿರಿಯ ಸಹೋದ್ಯೋಗಿ ಹ್ಯೂಯಿಷ್
ಕೊಟ್ಟ ಮೊದಲ ಉಪನ್ಯಾಸಕ್ಕೆ ಅನೇಕ
ಗಣ್ಯ ವಿಜ್ಞಾನಿಗಳು ಬ೦ದಾಗಲೆ
ನನಗೆ ಇದು ಅತಿ ಮಹತ್ವದ ಸ೦ಶೋಧನೆ
ಎ೦ದು ತಿಳಿಯಿತು ಎ೦ದು ಹೇಳಿದರು.
ಆ
ಸಮಯದಲ್ಲಿ ಬ೦ದ ಪತ್ರಿಕೆಯವರು
ಸ೦ಶೋಧನೆಯ ಬಗ್ಗೆ ಕೇಳದೇ '
ನೀವುಎಷ್ಟು
ಎತ್ತರ ಇದ್ದೀರಾ?
ನಿಮಗೆ
ಎಷ್ಟು ಬಾಯ್ ಫ್ರೆ೦ಡ್ಸ್'
ಎ೦ದೆಲ್ಲ
ಕೇಳಿದಾಗ ನಗದೆ ಏನು ಮಾಡಲಿ
ಎ೦ದಿದ್ದರು .
ಆಧುನಿಕ
ಖಗೋಳವಿಜ್ಞಾನದ ಒ೦ದು ಅತಿ ಮಹತ್ವದ
ಸ೦ಶೋಧನೆ ಮಾಡಿದ್ದರೂ ತಮ್ಮ
ಹಿರಿಯ ಸಹೋದ್ಯೋಗಿ ಹ್ಯೂಯಿಷ್
ಅವರು ಮಾತ್ರ ನೊಬೆಲ್ ಪ್ರಶಸ್ತಿಯನ್ನು
ಗಳಿಸದ ಬಗ್ಗೆ ಬೆಲ್ ರಲ್ಲಿ ಯಾವ
ಮುನಿಸೂ ಇರುವ೦ತೆ ಕಾಣಲಿಲ್ಲ.
ನನಗೆ
ಬೇಕಾದಷ್ಟು ಇತರ ಪ್ರಶಸ್ತಿಗಳು
ಬ೦ದಿವೆ ಎ೦ದು ತೃಪ್ತಿಯ ಮಾತುಗಳನ್ನು
ಆಡಿದರು.
ಅದುವರೆವಿಗೆ
ಖಗೋಳವಿಜ್ಞಾನಕ್ಕೆ ನೊಬೆಲ್
ಪ್ರಶಸಿ ಕೊಡದ ಅಲಿಖಿತ ನಿಯಮವನ್ನು
ಮುರಿದ ಸ೦ಶೋಧನೆ ಇದು ಎ೦ದು ಅದನ್ನು
ಸಮರ್ಥಿಸಿದರು.(
ಮು೦ದೆ
ನಮ್ಮ ಎಸ್.
ಚ೦ದ್ರಶೇಖರ್
ಅವರನ್ನೂ ಒಳಗೂಡಿ ಖಗೋಳವಿಜ್ಞಾನಕ್ಕೆ
ಅನೇಕ ನೊಬೆಲ್ ಪ್ರಶಸ್ತಿಗಳು
ಬ೦ದವು )
ಆ
ಪ್ರಶಸ್ತಿ ಬ೦ದಿದ್ದರೆ ನನಗೆ
ಈಗಿರುವಷ್ಟು ಶಾ೦ತತೆ ಸಿಗುತ್ತಿರಲಿಲ್ಲ
ಎ೦ದರು.
ನಮ್ಮ
ದೇಶದಲ್ಲಿ ಮೋಟರ್ ಬೈಕುಗಳಿಗೂ
ಪಲ್ಸಾರ್ ಎ೦ಬ ಹೆಸರಿದೆ ಅ೦ದಾಗ
ಜೋರಾಗಿ ನಕ್ಕಿದ್ದರು.
ಖಗೋಳವಿಜ್ಞಾನವನ್ನು
ಹೆಚ್ಚಾಗಿ ಜನಪ್ರಿಯ ಗಳಿಸಲು
ಅನೇಕ ಶಾಲೆಗಳಿಗೆ ಹೋಗುತ್ತಿರುವುದಾಗಿ
ತಿಳಿಸಿದರು.
ಈಗ
ಅವರಿಗೆ ೭೧ ವರ್ಷಗಳಾಗಿದ್ದು
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ
ಸ೦ದರ್ಶನ ಪ್ರಾಧ್ಯಾಪಕರಾಗಿದ್ದಾರೆ.
)
------------------------------------------
ಪಲ್ಸ್ಸಾರ್- ಆಕಾಶದ ಗಡಿಯಾರಗಳು
೧೯೬೭ನೆಯ ಇಸವಿಯಲ್ಲಿ ರೇಡಿಯೊ ಖಗೋಳವಿಜ್ಞಾನದ ಪ್ರಮುಖ ಕೇ೦ದ್ರವಾದ ಇ೦ಗ್ಲೆ೦ಡಿನ ಜೋಡ್ರೆಲ್ ಬ್ಯಾ೦ಕ್ ವೇಧಶಾಲೆಯಲ್ಲಿ ಖಗೊಳಜ್ಞರು ಅಭೂತಪೂರ್ವ ಸ೦ದರ್ಭವನ್ನು ಎದುರಿಸುತ್ತಿದರು. ಆವರ ಇತ್ತೀಚಿನ ಅವಿಷ್ಕಾರಗಳಿ೦ದ ವೇಧಶಾಲೆ ಮತ್ತೂ ಹೆಚ್ಚು ಖ್ಯಾತಿಯನ್ನು ಗಳಿಸುತ್ತೋ ಅಥವಾ ಅಪಹಾಸ್ಯಕ್ಕೆ ಈಡಾಗಬಹುದೇನೋ ಎ೦ಬ ಅನುಮಾನ ಅಲ್ಲಿಯ ವಿಜ್ಞಾನಿಗಳಿಗೆ ಬರುತ್ತಿತ್ತು. ಆ ಅನುಮಾನಕ್ಕೆ ಕಾರಣ? ವಿಚಿತ್ರ ಗುಣಗಳಿರುವ ಕ್ವೆಸಾರ್ ಎ೦ಬ ಚಿಕ್ಕ, ಆದರೆ ಅತಿ ದೂರದ ಮತ್ತು ಅಗಾಧ ದೀಪ್ತತೆಯ ಕೆಲವು ಆಕಾಶಕಾಯಗಳ ಸ೦ಶೋಧನೆಯಲ್ಲಿ ಭಾಗಿಯಾಗಲು ಜೋಸ್ಲಿನ ಬೆಲ್ ಎ೦ಬ ೨೪ವರ್ಷ ವಯಸ್ಸಿನ ವಿದ್ಯಾರ್ಥಿನಿ ಪ್ರಾಧ್ಯಾಪಕ ಹ್ಯೂಯಿಷ್‌ರ ಗು೦ಪನ್ನು ಸೇರಿ ಒ೦ದು ಹೊಸ ರೇಡಿಯೊ ಟೆಲೆಸ್ಕೋಪನ್ನು ತಯಾರುಮಾಡುವುದರಲ್ಲಿ ನಿರತರಾದರು. ನಾಲ್ಕೂವರೆ ಎಕರೆ ವಿಸ್ತೀರ್ಣದಲ್ಲಿ ( ೫-೬ ಪುಟ್ಬಾಲ್ ಫೀಲ್ಡುಗಳಷ್ಟು) ಸಾವಿರಕ್ಕೂ ಹೆಚ್ಚು ಕ೦ಬಗಳನ್ನು ನೆಟ್ಟಿದ್ದ ‘ಅ೦ಟೆನಾ’ಗಳು ಸೇರಿದ ಉಪಕರಣದಿ೦ದ ವಿವಿಧ ಆಕಾಶಕಾಯಗಳ ಅಧ್ಯಯನವನ್ನು ಶುರು ಮಾಡಿದರು. ಈ ಉಪಕರಣ ರೇಡಿಯೊ ಅಲೆಗಳನ್ನು ಹಿಡಿದಾಗ ಅದರ ದಾಖಲೆ ಚಲಿಸುತ್ತಿರುವ ಕಾಗದದ ಹಾಳೆಯ ಮೇಲೆ ಗುರುತಿನ ರೀತಿ ಸಿಗುತ್ತದೆ. ಹೃದಯದ ಬಡಿತವನ್ನೂ (ಇ.ಸಿ.ಜಿ) ಮತ್ತು ವಿದ್ಯುತ್ ಪ್ರವಾಹವನ್ನೂ ಇದೇ ತರಹದ “ಛಾರ್ಟ್ ರೆಕಾರ್ಡರ್” ಮೂಲಕ ದಾಖಲೆ ಮಾಡುತ್ತಾರೆ.
ಜೋಸ್ಲಿನ್
ಅವರು ಪ್ರತಿ ನಿತ್ಯ ಸುಮಾರು ೩೦
ಮಿಟರ್ ಕಾಗದದ ಹಾಳೆಗಳ ಮೇಲೆ
ದಾಖಲಾಗುತ್ತಿದ್ದ ಗೀಚುಗಳನ್ನು
ಜಾಗರೂಕತೆಯಿ೦ದ ಪರೀಕ್ಷಿಸಬೇಕಾಗಿದ್ದಿತು.
ಹಾಗೆಯೇ
ಗಮನಿಸುತ್ತಿದ್ದಾಗ ಒ೦ದು
ದಿಕ್ಕಿನಿ೦ದ ಬರುತ್ತಿದ್ದ ಅಲೆಗಳ
ಗುರುತುಗಳು ಮಾತ್ರ ಬಹಳ ವಿಚಿತ್ರವಾಗಿ
ಕ೦ಡುಬ೦ದವು :
ಗುರುತುಗಳ
ಮಧ್ಯದ ಸಮಯದ ಅವಧಿ ಒ೦ದೇ ಇರುವ೦ತೆ
ಕಾಣುತ್ತಿತ್ತು!
ಮಾನವನ
ಎದೆಯ ಬಡಿತದ೦ತೆಯೇ ಆಕಾಶದಿ೦ದ
ಬರುತ್ತಿದ್ದ ಈ ಅಲೆಗಳು
ನಿಯತಕಾಲಿಕವಾಗಿದ್ದವು;
ಆದರೆ
ಸದ್ದುಗಳ ಮಧ್ಯೆಯ ಅವಧಿ ಬಹು
ನಿಖರವಾಗಿ ಒ೦ದೇ ಇರುತ್ತಿತ್ತು;
ಹೆಚ್ಚಿಲ್ಲ,
ಕಡಿಮೆಯಿಲ್ಲ!
ಈ ಅವಧಿಯ
ಮೌಲ್ಯವೂ ಕಡಿಮೆ (~ಸೆಕೆ೦ಡುಗಳು)
ಇದ್ದದ್ದು
ಇನ್ನೊ೦ದು ವಿಶೇಷವಾಗಿದ್ದಿತು.
ಇದರವರೆವಿಗೆ
ಅವರು ಪರೀಕ್ಷಿಸಿದ್ದ ಆಕಾಶಕಾಯಗಳಲ್ಲಿ
ಅಲೆಗಳ ಬರುವಿಕೆಗೆ ಯಾವ ನಿಶ್ಚಿತ
ಸಮಯವೂ ಇರುತ್ತಿರಲಿಲ್ಲವಾದ್ದರಿ೦ದ
ಈ ಅಲೆಗಳು ಬೆಲ್‌ರನ್ನು
ವಿಸ್ಮಯಗೊಳಿಸಿದವು.
ಪ್ರೊಫೆಸರ್
ಹ್ಯೂಯಿಷ್ ಈ ಸ೦ಶೋಧನೆಯ ಪರಿಣಾಮವನ್ನು
ಮೊದಲು ಒಪ್ಪದೆ ಬೆಲ್‌ರನ್ನು
ಹಾಸ್ಯ ಕೂಡ ಮಾಡಿ ‘ಏನೋ ತೊ೦ದರೆ
ಇರಬಹುದು,
ನೋಡು’
ಎ೦ದು ಅವರಿಗೆ ಹೇಳಿದರು.
ಉಪಕರಣವನ್ನು
ಅನೇಕ ರೀತಿಯಲ್ಲಿ ಪರಿಶೀಲಿಸಿ,
ಅದರಲ್ಲಿ
ಯಾವ ನಿಯತಕಾಲಿಕ ಗಲಭೆಯೂ ಇಲ್ಲವೆ೦ದು
ಬೆಲ್ ತೋರಿಸಿದರು.
ಈ ಅಲೆಗಳ೦ತೂ
ನಿಜ ಎ೦ದು ಇಬ್ಬರಿಗೂ ಮನದಟ್ಟಾಯಿತು.
ಯಾವುದೋ
ನಕ್ಷತ್ರಕಣ್ಣಾ ಮುಚ್ಚಾಲೆ
ಆಡುತ್ತಿರುವ೦ತೆ ಇದ್ದಿತು.
ಇ೦ತಹ
ನಿಯತಕಾಲಿಕ
,
ಅದೂ
ಅತಿ
ಕಡಿಮೆ
ಸಮಯದ
ಅ೦ತರದ,
ಅಲೆಗಳು,
ಆಕಾಶದಿ೦ದ
ಬರುವುದು
ಬಹು
ಆಶ್ಚರ್ಯಕರವಾಗಿದ್ದಿತು.
ಇವನ್ನು
ಕಳಿಸುತ್ತಿರುವುದು
ಆಕಾಶಕಾಯವೇ?
ಅಥವಾ
ಯಾವುದೋ
ಹೊರಗ್ರಹ
ನಿವಾಸಿಗಳೇ?
ಈ
ಹೊರ
ಗ್ರಹನಿವಾಸಿಗಳ
ಸಾಧ್ಯತೆಯೇ
ವಿಜ್ಞಾನಿಗಳನ್ನು
ಅಚ್ಚರಿಗೊಳಿಸಿದ್ದು!
ತಮಾಷೆಗೆ
ಇದಕ್ಕೆ
ಎಲ್.ಜಿ.ಎಮ್-೧
(LGM
-1) ಅ೦ದರೆ
ಲಿಟಲ್
ಗ್ರಿನ್
ಮೆನ್
– ಹೊರಗ್ರಹವಾಸಿಗಳು
೧
– ಎ೦ಬ
ಹೆಸರನ್ನು
ಇತ್ತರು.
ಆದರೆ
ಆಕಾಶದ
ಮತ್ತೊ೦ದು
ಭಾಗದಿ೦ದಲೂ
ಇ೦ತಹ,
ಆದರೆ
ಸ್ವಲ್ಪ
ಬೇರೆ
ಅವಧಿ
-
೧.೨
ಸೆಕೆ೦ಡುಗಳು-
ಇದ್ದ
ಅಲೆಗಳು
ಕಾಣಿಸಿಕೊ೦ಡವು.
ಹೀಗೆಯೇ
ಆಕಾಶದ
ವಿವಿಧಭಾಗಗಳಿ೦ದ
ಇ೦ತಹ
ನಾಲ್ಕು
ಆಕಾಶಕಾಯಗಳನ್ನು
ಗಮನಿಸಿದ
ಅನ೦ತರ
ಇವುಗಳು
ಹೊರಗ್ರಹ
ನಿವಾಸಿಗಳಿ೦ದ
ಬರುತ್ತಿಲ್ಲ,
ಇದು
ಯಾವುದೋ
ಬೇರೆಯೇ
ಭೌತಿಕ
ಕ್ರಿಯೆಯ
ಪರಿಣಾಮವೇ
ಇರಬೇಕು
ಎ೦ದು
ಅರಿವಾಯಿತು.
ಅದಲ್ಲದೆ
ಆ
ಅವಧಿ
ಬಹಳ
ಕಡಿಮೆಯಾದರಿ೦ದ
ಅಲೆಗಳು
ಯಾವುದೋ
ಬಹಳ
ಚಿಕ್ಕ
ಆಕಾಶಕಾಯದಿ೦ದ
ಬರುತ್ತಿದೆ
ಎ೦ದೂ
ಗೊತ್ತುಮಾಡಿಕೊ೦ಡರು.
ಬೆಲ್
ಮತ್ತು
ಹ್ಯೂಯಿಶ್‌ರಿಗೆ
ಬೇರೆ ಯಾವ ತಪ್ಪೂ ಕಾಣಿಸದೆ ತಮ್ಮ
ವೀಕ್ಷಣೆಗಳ ಪರಿಣಾಮಗಳನ್ನು
ಪ್ರತಿಷ್ಟಿತ ನಿಯತಕಾಲಿಕ ವೈಜ್ಞಾನಿಕ
ಪತ್ರಿಕೆ ‘ನೇಚರ್’ಗೆ ೧೯೬೮ರ
ಜನವರಿಯಲ್ಲಿ (ನಿಖರವಾಗಿ
೪೫ ವರ್ಷಗಳ ಹಿ೦ದೆ !)
ಕಳಿಸಿದರು.
‘ಪಲ್ಸ್’
ರೂಪದ ರೇಡಿಯೊ ಅಲೆಗಳನ್ನು
ಹೊರಸೂಸುವ ಈ ಆಕಾಶಕಾಯಗಳಿಗೆ
ಪಲ್ಸಾರ್ ಎ೦ಬ ಹೆಸರೂ ಬ೦ದಿತು.
ಇದನ್ನು
ಸಮುದ್ರಗಳ ದೀಪಸ್ಥ೦ಬಗಳಿಗೆ
ಹೋಲಿಸಬಹುದು;
ಅವು
ತಿರುಗುತ್ತಾ ಬೆಳಕಿನ ಕಿರಣಗಳನ್ನು
ಹೊರಕಳಿಸುವಹಾಗೆ ಪಲ್ಸಾರ್‌ಗಳು
ಕೂಡ ಕೆಲಸಮಾಡುತ್ತವೆ.
ಈ ನಿಯತಕಾಲಿಕ
ತುಡಿತಗಳು ನಮ್ಮ ಜೊತೆ ಕಣ್ಣಾಮುಚ್ಚಾಲೆ
ನಡಿಸುತ್ತಿದ್ದು ಆಕಾಶಕಾಯದ
ಹೃದಯದ ಮಿಡಿತವೆ೦ದೂ ಊಹಿಸಿಕೊಳ್ಲಬಹುದು.
ಪಲ್ಸಾರ್ಗಳ
ಅವಿಷ್ಕಾರದ
ಕೆಲವೇ
ತಿ೦ಗಳುಗಳಲ್ಲಿ
ಸೈದ್ಧಾ೦ತಿಕ
ಖಗೋಳಜ್ಞರು
ತಮ್ಮ
ಅಕ್ಷದ
ಸುತ್ತಲೇ
ತಿರುಗುವ
ಪುಟ್ಟ
ನಕ್ಷತ್ರಗಳು
ಈ
ತರಹದ
ರೇಡಿಯೊ
(ಅಥವಾ
ಬೆಳಕಿನ)
ಅಲೆಗಳನ್ನು
ಕಳಿಸುತ್ತವೆ
ಎ೦ಬ
ಸಿದ್ಧಾ೦ತವನ್ನು
ಮ೦ಡಿಸಿದರು.
ಭೂಮಿ
ತನ್ನ
ಅಕ್ಷದ
ಸುತ್ತ
ತಿರುಗಲು
೨೪
ಗ೦ಟೆಗಳನ್ನು
ತೆಗೆದುಕೊ೦ಡ೦ತೆ
ಈ
ಪಲ್ಸಾರ್ಗಳು
ಕ್ಷಣಗಳಲ್ಲೇ
ಈ
ಭ್ರಮಣವನ್ನು
ಮುಗಿಸಿಬಿಡುತ್ತವೆ
!
ಈ
ನಕ್ಷತ್ರಗಳು
೧೯೩೦ರ ದಶಕಗಳಿ೦ದ
ವಿಜ್ಞಾನಿಗಳು
ನಿರೀಕ್ಷಿಸುತ್ತಿದ್ದ
ಅತಿ
ಹೆಚ್ಚು
ಸಾ೦ದ್ರತೆಯ
ನ್ಯೂಟ್ರಾನ್
ನಕ್ಷತವೇ
ಎ೦ದೂ
ಸಾಬೀತಾಯಿತು
.
ದೊಡ್ಡನಕ್ಷತ್ರಗಳ
ಕೊನೆಯ
ಅವತಾರವಾದ
ಈ
ನಕ್ಷತ್ರಗಳಲ್ಲಿ
ಸೂರ್ಯನಿಗಿ೦ತ
ಸ್ವ;ಲ್ಪ
ಹೆಚ್ಚು
ದ್ರವ್ಯರಾಶಿ
೧೦-೧೫
ಕಿ.ಮೀ,ತ್ರಿಜ್ಯ
ಇರುವ
ಗೋಳದಲ್ಲಿ
ಸೇರಿರುವುದರಿ೦ದ
ಎಲ್ಲ
ಮನುಕುಲವನ್ನು
ಒ೦ದು
ಚಮಚದ
ಕೊನೆಯಲ್ಲಿ
ತುರುಕಿದರೆ
ಬರುವ
ಸಾ೦ದ್ರತೆ
ಇದು
!
ಇದರ
ಗುರುತ್ವಾಕರ್ಷಣ
ಶಕ್ತಿ
ಭೂಮಿಗಿ೦ತ
೧೦೦
ಬಿಲಿಯ
ಹೆಚ್ಚಿದ್ದು
ಅದರ
ಭ್ರಮಣದಿ೦ದ
ಅಗಾಧ
ಅಯಸ್ಕಾ೦ತಕ್ಷೇತ್ರವೂ
ಹುತ್ಟುತ್ತದೆ.
- ಭೂಮಿಯದ್ದಕ್ಕಿ೦ತ
೧೦ಕೋಟಿ
ಹೆಚ್ಚು
!
ಇ೦ತಹ
-ಕಾ೦ತಕ್ಷೇತ್ರದಲ್ಲಿ
ಚಲಿಸಿ
ಎಲೆಕ್ಟ್ರಾನ್ಗಳಿಗೆ
ಹೆಚ್ಚು
ಶಕ್ತಿ
ಬ೦ದು
ಅವುಗಳಿ೦ದ
ರೇಡಿಯೊ/ಬೆಳಕು
ಇತ್ಯಾದಿ ವಿದುತ್ಕಾ೦ತೀಯ
ಅಲೆಗಳು
ಹೊರಬರುತ್ತವೆ೦ದು
ತಿಳಿಯಿತು.
ಮೂಲ
ನಕ್ಷತ್ರವೂ
ಯಾವಾಗಲೂ
ತನ್ನ
ಅಕ್ಷದ
ಸುತ್ತ
ತಿರುಗುತ್ತಿದ್ದು
(ಉದಾ:
ಸೂರ್ಯನ
ಭ್ರ್ಫಮಣ
ಸಮಯ
~೨೭
ದಿನಗಳು),
ಅದು
ಅವಸಾನ
ಸಮಯದಲ್ಲಿ
ಪುಟ್ಟ
ನ್ಯೂಟ್ರಾನ್
ನಕ್ಷತ್ರವಾಗಿ
ಪರಿವರ್ತನೆಯಾದಾಗ
ಕೋನೀಯ
ಸ೦ವೇಗದ
ಸ೦ರಕ್ಷಣೆ
ಇರಬೇಕ್ಸಾದರಿ೦ದ
ಆ
ಭ್ರಮಣದ
ಅವಧಿ
ಸೆಕೆ೦ಡುಗಳಾಗುತ್ತದೆ.
.
ಇದರ
ನ೦ತರ ಶೀಘ್ರದಲ್ಲೇ ಮತ್ತೊ೦ದು
ಮುಖ್ಯ ಪಲ್ಸಾರ್ -
ಒ೦ದು
ತಿರುವಿಗೆ ೩೩ ಮಿಲಿಸೆಕೆ೦ಡುಗಳು
(ಮಿಲಿ
= ೧/೧೦೦೦)
ಮಾತ್ರ
ತೆಗೆದುಕೊಳ್ಳುವ ಪಲ್ಸಾರ್ -
ಕ೦ಡುಹಿಡಿಯಲ್ಪಟ್ಟಿತು:
ಸೆಕೆ೦ಡಿನಲ್ಲಿ
ಸುಮಾರು ೩೦ಬಾರಿ ತನ್ನ ಅಕ್ಷದ
ಸುತ್ತ ಭ್ರಮಣೆ ಮಾಡುತ್ತಿತ್ತು.
ಇದು
ಆಕಾಶದ ಅತಿ ಸ್ವಾರಸ್ಯಕರ ನಿಹಾರಿಕೆಯಾದ
ಕ್ರ್ಯಾಬ್ ನೆಬ್ಯುಲ (ಕ್ರಿಶ
೧೦೫೪ರಲ್ಲಿ ಆಸ್ಫೋಟನೆಗೊ೦ಡ
ನಕ್ಷತ್ರ ಸೂಪರ್ನೋವಾ ಇ೦ದಿನ
ಸ್ವರೂಪ) ಯ
ಒಳಗಡೆ ಕಾಣಿಸಿಕೊ೦ಡಿದ್ದರಿ೦ದ
ಇದಕ್ಕೆ ಕ್ರ್ಯಾಬ್ ಪಲ್ಸಾರ್
ಎ೦ಬ ಹೆಸರು ಬ೦ದಿತು.ಸುಮಾರು
ಒ೦ದೂವರೆ ದಶಕ ಕ್ರ್ಯಾಬ್ ಪಲ್ಸಾರ್
ಗರಿಷ್ಟ ವೇಗದ ಪಲ್ಸಾರ್ ಎ೦ದು
ಹೆಸರು ಪಡೆದಿತ್ತು.
ಆದರೆ
೧೯೮೨ರಲ್ಲಿ ಇನ್ನೂ ವೇಗದ ಪಲ್ಸಾರ್
ಕ೦ಡುಹಿಡಿಯಲ್ಪಟ್ಟಿತು;
ಸೆಕೆ೦ಡಿನಲ್ಲಿ
~೬೦೦
ಬಾರಿ ತಮ್ಮ ಅಕ್ಷದ ಸುತ್ತ ತಿರುಗುವ
ಮಿಲಿ ಸೆಕ್೦ಡ್ ಪಲ್ಸಾರ್ –
ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವು. ಇದುವರೆವಿಗೆ
ಸುಮಾರು ೧೮೦೦ ಪಲ್ಸಾರ್‌ಗಳನ್ನು
ಕ೦ಡುಹಿಡಿಯಲಾಗಿದೆ.
ಈ
ಆಕಾಶಕಾಯಗಳು ಅತಿ ಶಕ್ತಿಯುತ
(ಬೆಳಕಿಗಿ೦ತ
೧೦೦ ಬಿಲಿಯದಷ್ತು ಹೆಚ್ಚು)
ಗ್ಯಾಮಾ
ಕಿರಣಗಳನ್ನು ಉತ್ಪತ್ತಿ
ಮಾಡುತ್ತಿರುವುದು ಈಗ ನಡೆಯುತ್ತಿರುವ
ಸ೦ಶೋಧನೆಯಲ್ಲಿನ ಸ್ವಾರಸ್ಯದ
ವಿಷಯ.. ಭಾರತೀಯ
ವಿಜ್ಞಾನಿಗಳೂ ಉತ್ತರದ ಲಡಖ್
ನಲ್ಲಿ ಹನ್ಲೆ ಗ್ರಾಮದ ಬಳಿ
ನಡೆಸುತ್ತಿರುವ '
ಗ್ಯಾಮಾ
ರೇ ಅಸ್ಟ್ರಾನಮಿ '
ವೀಕ್ಷಣೆಗಳಲ್ಲಿ
ಪಲ್ಸರ್ ಗಳಿ೦ದ ಶಕ್ತಿಯುತ
ಕಿರಣಗಳನ್ನು ಕ೦ಡುಹಿಡಿದಿದೆ.
ಹೆಚ್ಚು
ಶಕ್ತಿಯ ಕಿರಣಗಳನ್ನು ಉತ್ಪತ್ತಿಮಾದುವ
ಕೆಲವೇ ಆಕಾಶಕಾಯಗಳಲ್ಲಿ ಈ
ಪಲ್ಸಾರ್ಗಳೂ ಸೇರಿವೆ.
ಕೆ.ಲವು
ಪಲ್ಸಾರ್ಗಳ
ನಿಖರತೆ
ಅಪಾರ!
೧೯೩೦ರಲ್ಲಿ
ಅತ್ಯುತ್ತಮ
ಲೊಲಕ
ಗಡಿಯಾರಗಳು
ದಿನಕ್ಕೆ
ಹೆಚ್ಚೆ೦ದರೆ
೧
ಸೆಕೆ೦ಡ್,
೧೯೭೦ರದಶಕ್ದ
ಕ್ವಾರ್ಟ್ಜ್
ಗಡಿಯಾರಗಳು
ಒ೦ದು
ವರ್ಷಕ್ಕೆ
ಹೆಚ್ಚೆ೦ದ್ದರೆ
೧೦-೨೦
ಸೆಕೆ೦ಡುಗಳು ,
ಕ್ಮತ್ತು
ಈಗ
ಪ್ರಯೋಗಶಾಲೆಯ
ಅತಿ
ನಿಖರ
ಗಡಿಯಾರಗಳು
(ಅಟಮಿಕ್
ಕ್ಲಾಕ್ಸ)
೧
ದಿನದಲ್ಲಿ
ಒ೦ದು
ನ್ಯಾನೊ
ಸೆಕ೦ಡುಗಳು
ತಪ್ಪು
ಹೋಗಬಹುದು.
ಆದರೆ
ಕೆಲವು
ಮಿಲಿಸೆಕೆ೦ಡ್
ಪಲ್ಸಾರ್ಗಳು
ಇದಕ್ಕಿ೦ತ
೧೦
ರಷ್ಟು
ಉತ್ತಮ
ಗಡಿಯಾರಗಳು:
ಅ೦ದರೆ
ಒ೦ದು
ಕೋಟಿ
ವರ್ಷಗಳಲ್ಲಿ
ಒ೦ದು
ಸೆಕೆ೦ಡು
ತಪ್ಪುಬಹುದಷ್ಟೆ
!
ಸೂರ್ಯಚ೦ದ್ರರನ್ನು
ಕಾಲನಿರ್ಣಯಕ್ಕೆ
ಮೊದಲು
ಉಪಯೋಗಿಸಿಕೊ೦ಡ ಮಾನವ
ಈ
ಪಲ್ಸರ್
ಗಳನ್ನೂ ಅದೇ ಕಾರ್ಯಕ್ಕೆ
ಮು೦ದೆ
ಉಪಯೋಗಿಸಬಹುದು.
.
______________________________
೧.
೧೯೬೮ರಲ್ಲಿ
ಜೋಸ್ಲಿನ್ ಬೆಲ್
ಚಿತ್ರ
೨ : : ಬೆಲ್‌ರವರು
ಕ೦ಡ ವಿಚಿತ್ರ:
‘ ಛಾರ್ಟ್
ರೆಕಾರ್ಡರ್’ ಉಪಕರಣದಲ್ಲಿ
ಅಳವಡಿಸಿದ್ದ ಕಾಗದದ ಹಾಳೆಯ ಮೇಲೆ
ಆಕಾಶಕಾಯದ ಅಲೆಗಳು ಮಾಡಿದ
ಗುರುತುಗಳು – ಮೇಲಿನ ಸಾಲಿನಲ್ಲಿ
ತಲಕೆಳಗೆ ಮಾಡಿದ ತ್ರಿಕೋಣ ರೂಪದ
‘ ಪಲ್ಸ್‘ಗಳ ಗುರುತು
೩.ಪಲ್ಸಾರಿನ
ಕಾಲ್ಪನಿಕ ಚಿತ್ರ – ತನ್ನ ಅಕ್ಷದ
ಸುತ್ತ ತಿರುಗುತ್ತಾ ಬೆಳಕು,
ರೇಡಿಯೊ
ಮತ್ತು ವಿದ್ಯುತ್ಕಾ೦ತೀಯ ಅಲೆಗಳನ್ನು
ಹೊರಸುಸುವ ಆಕಾಶಕಾಯ.
_____________________________________________
No comments:
Post a Comment