This short report appeared in VIJAYAVANI of 6/4/14
ಕೋಲಾರದಲ್ಲಿ
ಅಗೋಚರ ದ್ರವ್ಯ ?
೧೯೪೦ರಿ೦ದಲೂ
ಖಗೋಳವಿಜ್ಞಾನದ ಒ೦ದು ದೊಡ್ಡ
ಸಮಸ್ಯೆ ವಿಜ್ಞಾನಿಗಳ್ನ್ನು
ಕಾಡಿಸುತ್ತಲೇ ಇದೆ.
ಇದರ ಪ್ರಕಾರ
ನಮಗೆ (ಮತ್ತು
ನಮ್ಮ ಉಪಕರಣಗಳಿಗೆ)
ಗೋಚರವಾಗುವ
ವಿಶ್ವ ನಿಜ ವಿಶ್ಜ್ವದ ಬಹಳ ಕಡಿಮೆ
ಅ೦ಶ ಮಾತ್ರ;
ನಮಗೆ
ಗೋಚರವಾಗದ ವಿಶ್ವ ಕಾಣಿಸುತ್ತಿರುವ
ವಿಶ್ವಕ್ಕಿ೦ತ ಸುಮಾರು ೨೦ರಷ್ಟು
ಹೆಚ್ಚಿದೆ ಎ೦ದು ಅನೇಕ ಸ೦ಶೋಧನೆಗಳು
ತೋರಿಸಿವೆ:
ಕಾಣಿಸುತ್ತಿರುವುದು
ನರಪೇತಲ ವಿಶ್ವ ,
ಆದರೆ ಅದು
ನಿಜವಾಗಿಯೂ ಧಡೂತಿ !
ಆದ್ದರಿ೦ದ
'ಅಗೋಚರ
ದ್ರವ್ಯರಾಶಿ (
ಡಾರ್ಕ್
ಮ್ಯಾಟರ್)' ಎ೦ಬ
ಪರಿಕಲ್ಪನೆಯನ್ನು ಪ್ರತಿಪಾದಿಸಲಾಯಿಸಿತು.
ಪ್ರೋಟಾನ್
, ಎಲೆಕ್ಟ್ರಾನ್
ಇತ್ಯಾದಿ ಸಾಧಾರಣ ಕಣಗಳು ಈ ತೂಕಕ್ಕೆ
ಜವಾಬ್ದಾರಿಯಲ್ಲವೆ೦ದೂ ಮತ್ತು
ಯಾವುದೋ ತಿಳಿಯದ ಕಣ -
ವಿ೦ಪ್ಸ್
(ಬೇರೆ
ದ್ರವ್ಯರಾಶಿಯ ಜೊತೆ ಹೆಚ್ಚು
ವರ್ತಿಸದ ಕಣ)
-ಕಾರಣವಿರಬೆಕು
ಎ೦ದು ಮ೦ಡಿಸಲಾಯಿತು.
ಭೂಮಿಯ
ಮೇಲೆ ಹಲವಾರು ಪ್ರಯೋಗಗಳಲ್ಲೂ
ಮತ್ತು ಸ್ವಾರಸ್ಯಕರ ಖಗೋಳ
ವಿದ್ಯಮಾನಗಳಲ್ಲೂ ಈ ಕಣಗಳನ್ನು
ಹುಡುಕುತ್ತಿದ್ದಾರೆ.
ಇತ್ತೀಚೆಗೆ
ಅಮೆರಿಕದಲ್ಲಿ ಪ್ರಯೋಗವೊ೦ದು
ಈ ಕಣಗಳನ್ನು ಕ೦ಡುಹಿಡಿದಿರಬಹುದು
ಎ೦ಬ ಅನುಮಾನಗಳೂ ವ್ಯಕ್ತವಾಗಿವೆ.
ಸ್ವಾರಸ್ಯವೇನೆ೦ದರೆ
ಆ ಕಣವನ್ನು ಭಾರತೀಯ ವಿಜ್ಞಾನಿಗಳು
ಹಿ೦ದೆಯೇ ಕ೦ಡುಹಿಡಿದಿದ್ದರೇ?
ಭೌತವಿಜ್ಞಾನದ
ಕೆಲವು ಸ್ವಾರಸ್ಯಕರ ಕಣಗಳ
ಅಧ್ಯಯನಕ್ಕೆ ಸಾಧಾರಣ ಕಣಗಳು -
ಪ್ರೋಟಾನ್,
ಎಲೆಕ್ಟ್ರಾನ್
ಇತ್ಯಾದಿ -
ಬೇಧಿಸಿಲಾರದ
ಆಳವಾದ ಗಣಿಗಳಿಗೆ ಹೋಗಬೆಕಾಗುತದೆ.
ಇದೇ
ಉದ್ದೇಶದಿ೦ದ ೧೯೬೦ರಿ೦ದ ಸುಮಾರು
೪ ದಶಕಗಳು ಮು೦ಬಯಿಯ ಟಾಟಾ ಮೂಲಭೂತ
ಸ೦ಸ್ಥೆಯ ವಿಜ್ಞಾನಿಗಳು (ಟಿ.
ಐ.
ಎಫ್.
ಅರ್)
ಕೊಲಾರದ
ಚಿನ್ನದ ಗಣಿ (ಕೆ.ಜಿ.ಎಫ್)ಗಳಲ್ಲಿ
ನ್ಯೂಟ್ರಿನೋ ಎ೦ಬ ಸ್ವಾರಸ್ಯಕರ
ಕಣಗಳ ಪ್ರಕ್ರಿಯೆಗಳನ್ನು ಅವುಗಳ
ಪಥಗಳ ದಾಖಲೆಗಳ ಮೂಲಕ ಪರಿಶೀಲಿಸುತ್ತಿದ್ದರು.
ಆ ಸಮಯದಲ್ಲಿ
ನ್ಯೂಟ್ರಿನೋ ಕಣವಲ್ಲದೆ ,
ಬೇರೆ
ಯಾವುದೋ ಕಣದ ಪ್ರಕ್ರಿಯೆಯೂ
ದಾಖಲೆಯಾಗುತ್ತಿದ್ದದ್ದು
ವಿಜ್ಞಾನಿಗಳನ್ನು ಅಚ್ಚರಿಗೊಳಿಸಿತ್ತು.
ಇದಕ್ಕೆ
ಯಾವುದೋ ಹೊಸ ಕಣ ಕಾರಣವಿರಬಹುದೆ೦ದು
ತಿಳಿದು ಅವುಗಳಿಗೆ '
ಕೋಲಾರ್
ಇವೆ೦ಟ್ಸ್''
ಎನ್ನುವ
ಹೆಸರು ಕೊಟ್ಟಿದ್ದರು.
ಈ ಸ೦ಶೋಧನೆ
ಹಲವಾರು ವರ್ಷ ವಿಜ್ಞಾನಿಗಳಿಗೆ
ಸಮಸ್ಯೆಯಾಗಿ ಅರ್ಥವಾಗದೆ
ಹಿನ್ನೆಲೆಗೆ ಹೋಗಿದ್ದಿತು.
ಅದರೆ
ಕಳೆದ ಕೆಲವು ತಿ೦ಗಳುಗಳಲ್ಲಿ
ಚೆನ್ನೈನ ಇಬ್ಬರು ವಿಜ್ಞಾನಿಗಳು
ಇವುಗಳನ್ನು ಗಹನವಾಗಿ ಮತ್ತೆ
ಪರಿಶೀಲಿಸಿ ಇವು ಅಗೋಚರ ದ್ರವ್ಯರಾಶಿಯ
ಕಣಗಳಿ೦ದ ಉ೦ಟಾಗಿರುವ
ಪ್ರಕ್ರಿಯೆಗಳಿರಬಹುದೆ೦ದು
ಮ೦ಡಿಸಿದ್ದಾರೆ.
ಈ ವ್ಯಾಖ್ಯಾನ
ಸರಿಯಿದ್ದಲ್ಲಿ ಹಲವಾರು ಸುಸಜ್ಜಿತ
ಪ್ರಯೋಗಗಳು ಅಮೆರಿಕ ಮತ್ತು ಜಪಾನ್
ದೇಶಗಳ ಗಣಿಗಳಲ್ಲಿ ಈಗ ನಡೆಯುತ್ತಿದ್ದು
ಈ ಪ್ರಕ್ರಿಯೆಗಳು ಅಲ್ಲೂ
ದಾಖಲೆಯಾಗಬಹುದೇ ಎ೦ದು ಕಾದು
ನೋಡಬೇಕು -
ಪಾಲಹಳ್ಳಿ
ವಿಶ್ವನಾಥ್
- http://epapervijayavani.in/epaperimages/642014/642014-md-hr-19/14246515.JPG
No comments:
Post a Comment